For Quick Alerts
ALLOW NOTIFICATIONS  
For Daily Alerts

ನಾವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಬಹುದು, ಇಲ್ಲಿದೆ ಟಿಪ್ಸ್

|

ಬಹುತೇಕ ಜನರು ಒಂದಕ್ಕಿಂತ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಒಂದು ನಾವು ಮೊದಲಿನಿಂದಲೇ ತೆರೆದಿರುವ ಬ್ಯಾಂಕ್ ಖಾತೆಯಾಗಿದ್ದರೆ ಉಳಿದವು ನಾವು ಕಾರ್ಯನಿರ್ವಹಣೆ ಮಾಡುವ ಸಂಸ್ಥೆಯು ಸಂಬಳವನ್ನು ಜಮೆ ಮಾಡಲು ತೆರೆದಿರುವ ಬ್ಯಾಂಕ್ ಖಾತೆ ಆಗಿರಬಹುದು. ಹೆಚ್ಚಾಗಿ ನಾವು ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗ ಸ್ಥಳಕ್ಕೆ ವರ್ಗಾವಣೆ ಆಗುತ್ತಿದ್ದಂತೆ ಬ್ಯಾಂಕ್ ಖಾತೆಗಳ ಸಂಖ್ಯೆಯು ಕೂಡಾ ಹೆಚ್ಚಾಗುತ್ತಾ ಹೋಗುವುದು ಸಹಜ.

ಹೆಚ್ಚಾಗಿ ಒಂದು ಸಂಸ್ಥೆಯು ತಮ್ಮ ಉದ್ಯೋಗಸ್ಥರ ವೇತನ ಖಾತೆಯನ್ನು ಒಂದೇ ಬ್ಯಾಂಕ್‌ನಲ್ಲಿ ತೆರೆಯುತ್ತಾರೆ. ನೀವು ಆ ಬ್ಯಾಂಕ್‌ನಲ್ಲೇ ನಿಮ್ಮ ಕುಟುಂಬಸ್ಥರ ಖಾತೆ, ಹೂಡಿಕೆಗಾಗಿ ಖಾತೆ ಮೊದಲಾದವುಗಳನ್ನು ತೆರೆಯಬಹುದು. ಒಟ್ಟಾರೆಯಾಗಿ ಒಂದಕ್ಕಿಂತ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿರುವುದಕ್ಕೆ ಹಲವಾರು ಕಾರಣಗಳು ಇದೆ.

PMJDY:1,73,954 ಕೋಟಿಗೂ ಅಧಿಕ ಬ್ಯಾಂಕ್ ವ್ಯವಹಾರ ದಾಖಲೆPMJDY:1,73,954 ಕೋಟಿಗೂ ಅಧಿಕ ಬ್ಯಾಂಕ್ ವ್ಯವಹಾರ ದಾಖಲೆ

ನಾವು ಉದ್ಯೋಗದ ಕಾರಣ ಹೊರತಾಗಿ ಕ್ರೆಡಿಟ್ ಕಾರ್ಡ್‌ಗಾಗಿ, ಸಾಲಕ್ಕಾಗಿ, ಫಿಕ್ಸಿಡ್ ಡೆಪಾಸಿಟ್‌ಗಾಗಿ, ಲಾಕರ್‌ಗಳಿಗಾಗಿ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಬಹುದು. ಆದರೆ ನಾವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದುವುದು ಉತ್ತಮ? ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದುವುದು ಉತ್ತಮ ಎಂಬ ಬಗ್ಗೆ ತಿಳಿಯಲು ನಿಮಗೆ ಇಲ್ಲಿದೆ ಕೆಲವು ಟಿಪ್ಸ್ ಮುಂದೆ ಓದಿ...

 ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮಾಸಿಕ ಮೊತ್ತ

ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮಾಸಿಕ ಮೊತ್ತ

ಬಹುತೇಕ ಎಲ್ಲ ಬ್ಯಾಂಕ್‌ಗಳಲ್ಲಿ ಖಾತೆಯಲ್ಲಿ ಕನಿಷ್ಠ ನಿರ್ದಿಷ್ಠ ಮೊತ್ತ ಇರಬೇಕು ಎಂಬ ನಿಯಮವಿದೆ. ನೀವು ಕನಿಷ್ಠ ಮೊತ್ತವನ್ನು ಹೊಂದದಿದ್ದರೆ ನಿಮಗೆ ಬ್ಯಾಂಕ್ ದಂಡವನ್ನು ವಿಧಿಸಬಹುದು. ನೀವು ಒಂದು ಅಥವಾ ಎರಡು ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ನೀವು ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ. ಎಷ್ಟು ಕನಿಷ್ಠ ಮೊತ್ತ ಇರಬೇಕು ಎಂದು ನೋಡಿಕೊಂಡು ಅದನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗಲಿದೆ. ಆದರೆ ಎರಡಕ್ಕಿಂತ ಅಧಿಕ ಬ್ಯಾಂಕ್ ಖಾತೆ ಇದ್ದರೆ ನೀವು ಕನಿಷ್ಠ ಮೊತ್ತವನ್ನು ನಿರ್ವಹಣೆ ಮಾಡಲು ಕಷ್ಟವಾಗಬಹುದು. ಎಲ್ಲ ಬ್ಯಾಂಕ್‌ಗಳಲ್ಲಿ ಕನಿಷ್ಠ ಮೊತ್ತ ಒಂದೇ ಆಗಿರುವುದಿಲ್ಲ. ಜಿರೋದಿಂದ ಹಿಡಿದು ಹತ್ತು ಸಾವಿರಕ್ಕಿಂತಲೂ ಅಧಿಕ ಮೊತ್ತದವರೆಗೂ ಕನಿಷ್ಠ ಬ್ಯಾಲೆನ್ಸ್ ಆಗಿರುತ್ತದೆ.

 ನಿಮಗೆ ಲಭ್ಯವಾಗುವ ಸೌಲಭ್ಯಗಳು

ನಿಮಗೆ ಲಭ್ಯವಾಗುವ ಸೌಲಭ್ಯಗಳು

ಬ್ಯಾಂಕ್ ಖಾತೆಯನ್ನು ನೀವು ತೆರೆಯುವ ಮುನ್ನ ಈ ಖಾತೆಯಿಂದ ನಿಮಗೆ ಲಭ್ಯವಾಗುವ ಸೌಲಭ್ಯಗಳನ್ನು ಪಟ್ಟಿಮಾಡಿಕೊಳ್ಳಿ. ನಿಮಗೆ ಪ್ರಿಮೀಯಂ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬೇಕಾಗಬಹುದು, ಲಾಕರ್ ಸೌಲಭ್ಯ ಬೇಕಾಗಬಹುದು, ನಗದು ಡೆಪಾಸಿಟ್ ಮೇಲೆ ಶೂನ್ಯ ಶುಲ್ಕ, ಎಟಿಎಂನಲ್ಲಿ ಅಧಿಕ ಹಣ ವಿತ್‌ಡ್ರಾ ಆಯ್ಕೆಯಂತಹ ಸೌಲಭ್ಯ ಅಥವಾ ಆಫರ್ ಬೇಕಾಗಬಹುದು. ನಿಮಗೆ ಈ ಪೈಕಿ ಯಾವ ಸೌಲಭ್ಯ ಅಗತ್ಯವಿದೆಯೋ ಆ ಸೌಲಭ್ಯ ಲಭ್ಯವಾಗುವ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಿರಿ.

 ಹಣಕಾಸು ನಿರ್ವಹಣೆ ಹೇಗೆ ಸಾಧ್ಯ?

ಹಣಕಾಸು ನಿರ್ವಹಣೆ ಹೇಗೆ ಸಾಧ್ಯ?

ಜನರು ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಹಣಕಾಸು ಗುರಿಯನ್ನು ಹೊಂದಿರುತ್ತಾರೆ. ನಮ್ಮ ಎಲ್ಲ ಗುರಿಗಳಿಗಾಗಿ ನಾವು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗದು. ನಾವು ನಿರ್ದಿಷ್ಟ ಒಂದು ಗುರಿಗಾಗಿ ಬೇರೆಯೇ ಬ್ಯಾಂಕ್ ಖಾತೆಯನ್ನು ಹೊಂದುವುದರಿಂದಾಗಿ ನಿಮಗೆ ಅದನ್ನು ನಿರ್ವಹಣೆ ಮಾಡಲು ಕಷ್ಟವಾಗಬಹುದು. ಆದ್ದರಿಂದಾಗಿ ನೀವು ನಿಮ್ಮ ನಿರ್ದಿಷ್ಟ ಪ್ಲ್ಯಾನ್ ಬಗ್ಗೆ ಸರಿಯಾದ ಯೋಜನೆಯನ್ನು ಮಾಡಿಕೊಂಡು ಬೇರೆಯೇ ಖಾತೆಯನ್ನು ಮಾಡಿ, ಆದರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡಿ. ನೀವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸಂಗ್ರಹ ಮಾಡುವ ಹಣವನ್ನು ಬೇರೆ ಯಾವುದಕ್ಕೂ ಖರ್ಚು ಮಾಡದೆ ಇರಲು ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದುವುದು ಸಹಕಾರಿಯಾಗಲಿದೆ.

 ಅಧಿಕ ಮೊತ್ತದ ಸಾಲವನ್ನು ಪಡೆಯಲು ಸಹಕಾರಿ

ಅಧಿಕ ಮೊತ್ತದ ಸಾಲವನ್ನು ಪಡೆಯಲು ಸಹಕಾರಿ

ನಾವು ಜೀವನದಲ್ಲಿ ಒಮ್ಮೆಯಾದರೂ ದೊಡ್ಡ ಮೊತ್ತದ ಸಾಲವನ್ನು ಪಡೆಯುತ್ತೇವೆ. ಇದು ಗೃಹ ಸಾಲವಾಗಿರಬಹುದು ಅಥವಾ ವೈಯಕ್ತಿಕ ಸಾಲವಾಗಿರಬಹುದು. ನಾವು ಬ್ಯಾಂಕ್‌ನಿಂದ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರಕ್ಕೆ ಸಾಲ ಲಭ್ಯವಾಗಲಿದೆ ಹಾಗೂ ಎಷ್ಟು ಶುಲ್ಕವಿದೆ ಎಂದು ನೋಡಿಕೊಳ್ಳುತ್ತೇವೆ. ನಾವು ಒಂದಕ್ಕಿಂತ ಅಧಿಕ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಎಲ್ಲಿ ಸಾಲ ಪಡೆಯುವುದು ಉತ್ತಮ ಎಂದು ನಿರ್ಧಾರ ಮಾಡಲು ಸಹಕಾರಿಯಾಗಲಿದೆ. ಹಾಗೆಯೇ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಕೂಡಾ ಸಾಧ್ಯವಾಗಲಿದೆ. ನೀವು ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲವನ್ನು ಪಡೆಯುವ ಉದ್ದೇಶವನ್ನು ಹೊಂದಿದ್ದರೆ, ಈಗಲೇ ಸರಿಯಾಗಿ ನೋಡಿಕೊಂಡು ಕಡಿಮೆ ಬಡ್ಡಿದರ ಯಾವ ಬ್ಯಾಂಕ್‌ನಲ್ಲಿ ಇದೆ, ಅಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಿರಿ. ನೀವು ಆ ಬ್ಯಾಂಕ್‌ನಲ್ಲೇ ಖಾತೆಯನ್ನು ಹೊಂದಿದ್ದರೆ ಸಾಲ ಪಡೆಯುವಾಗ ಇನ್ನೂ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗಬಹುದು. ಆದರೆ ನೀವು ಆ ಖಾತೆಯಲ್ಲಿ ಉತ್ತಮ ವಹಿವಾಟು ನಡೆಸಿರಬೇಕಾಗುತ್ತದೆ. ಸಾಮಾನ್ಯವಾಗಿ ನೀವು ಎರಡು ಮೂರು ಖಾತೆಯನ್ನು ಹೊಂದಿದ್ದರೆ ಅದನ್ನು ನಿರ್ವಹಣೆ ಮಾಡಲು ಸುಲಭವಾಗಲಿದೆ. ಆದರೆ ಅದಕ್ಕಿಂತ ಅಧಿಕ ಖಾತೆ ಹೊಂದಿದ್ದರೆ ನಿರ್ವಹಣೆ ಮಾಡಲು ಕಷ್ಟವಾಗಬಹುದು.

English summary

How Many Bank Accounts We Should Have, Explained in Kannada

Should you have one or multiple bank accounts? Here are some tips to help you decide how many bank accounts you should have. Explained in Kannada, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X