For Quick Alerts
ALLOW NOTIFICATIONS  
For Daily Alerts

ವಿದೇಶದಿಂದ ಪ್ರಯಾಣಿಸುವಾಗ ಎಷ್ಟು ಚಿನ್ನವನ್ನು ಭಾರತಕ್ಕೆ ತರಬಹುದು?

|

ಭಾರತೀಯರ ಚಿನ್ನದ ವಿಚಾರದಲ್ಲಿ ಅಧಿಕ ಮೋಹ. ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಇಷ್ಟ ಪಡುತ್ತಾರೆ. ಅದರಲ್ಲೂ ಮುಖ್ಯವಾಗಿ ಯಾವುದಾದರೂ ಸಮಾರಂಭವಿದ್ದ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡುವುದು ವಾಡಿಕೆಯಾಗಿದೆ. ವಿವಾಹ ಹಾಗೂ ಹಬ್ಬದ ಸೀಸನ್‌ನಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆಯು ಹೆಚ್ಚಳವಾಗುತ್ತದೆ. ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುವ ಕಾರಣದಿಂದಾಗಿ ಭಾರತವು ಚೀನಾದ ಬಳಿಕ ಹೆಚ್ಚು ಚಿನ್ನ ಬಳಕೆ ಮಾಡುವ ರಾಷ್ಟ್ರವಾಗಿದೆ. ಭಾರತದಲ್ಲಿ ಚಿನ್ನವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತದೆ.

 

ಚಿನ್ನ ಹಾಗೂ ರತ್ನದ ರಫ್ತುದಾರರ ಮಾಹಿತಿ ಪ್ರಕಾರ 2021-22ರ ಅವಧಿಯಲ್ಲಿ ಚಿನ್ನದ ಆಮದು ಸುಮಾರು ಶೇಕಡ 50ರಷ್ಟು ಅಧಿಕವಾಗಿದೆ. ಅಂದರೆ ಭಾರತದಲ್ಲಿ 39 ಬಿಲಿಯನ್ ಯುಎಸ್‌ಡಿ ಚಿನ್ನ ಆಮದು ಮಾಡಲಾಗಿದೆ. ಇನ್ನು 2023ರಲ್ಲಿ ಚಿನ್ನದ ಬೇಡಿಕೆಯು ಸುಮಾರು ಶೇಕಡ 11ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. 2020ರಲ್ಲಿಯೂ ಚಿನ್ನದ ಬೇಡಿಕೆಯು ಭಾರತದಲ್ಲಿ ಅಧಿಕವಾಗಿದೆ.

'ಒಂದು ರಾಷ್ಟ್ರ ಒಂದು ಚಿನ್ನ ದರ' ಸಾಧಿಸುವತ್ತ ಭಾರತದ ದಾಪುಗಾಲು

ಹಲವಾರು ಮಂದಿ ಭಾರತೀಯರು ವಿದೇಶದಲ್ಲಿರುವ ತಮ್ಮ ಸಂಬಂಧಿಕರಿಂದ ಚಿನ್ನದ ಆಭರಣವನ್ನು ತರಿಸಿಕೊಳ್ಳುತ್ತಾರೆ. ಹಾಗಾದರೆ ನಾವು ವಿದೇಶದಿಂದ ಬರುವಾಗ ಎಷ್ಟು ಚಿನ್ನವನ್ನು ತರಬಹುದು, ಚಿನ್ನದ ನಾಣ್ಯವನ್ನು ತರಲು ಅವಕಾಶವಿದೆಯೇ, ಅದಕ್ಕೆ ಎಷ್ಟು ಸುಂಕವನ್ನು ವಿಧಿಸಲಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.

 ಭಾರತಕ್ಕೆ ಚಿನ್ನ ತರುವುದು ಕಾನೂನುಬದ್ಧವೇ?

ಭಾರತಕ್ಕೆ ಚಿನ್ನ ತರುವುದು ಕಾನೂನುಬದ್ಧವೇ?

ಭಾರತಕ್ಕೆ ವಿದೇಶದಿಂದ ಚಿನ್ನವನ್ನು ತರುವುದು ಕಾನೂನುಬದ್ಧವಾಗಿದೆ. ಆದರೆ ಎಷ್ಟು ಚಿನ್ನವನ್ನು ತರಬಹುದು ಎಂಬ ವಿಚಾರದಲ್ಲಿ ಕೆಲವು ಷರತ್ತುಗಳು ಇದೆ. ನಾವು ಎಷ್ಟು ಚಿನ್ನವನ್ನು ವಿದೇಶದಿಂದ ತರಬಹುದು ಹಾಗೂ ಅದಕ್ಕೆ ಎಷ್ಟು ಕಸ್ಟಮ್ ಸುಂಕವನ್ನು ವಿಧಿಸಬೇಕು ಎಂಬುವುದನ್ನು ನಾವು ಎಷ್ಟು ಸಮಯಗಳಿಂದ ವಿದೇಶದಲ್ಲಿ ಇದ್ದೇವೆ ಎಂಬುವುದರ ಮೇಲೆ ನಿರ್ಧಾರ ಮಾಡಲಾಗುತ್ತದೆ. ಕೊನೆಯ ಕೆಲವು ವರ್ಷಗಳಿಂದ ಕೆಲವೊಂದು ಬದಲಾವಣೆಗಳು ಆಗಿದೆ.

2022ರ 2ನೇ ತ್ರೈಮಾಸಿಕದ ಕುಸಿತ ಬೆನ್ನಲ್ಲೂ ವರ್ಷದ ಮೊದಲಾರ್ಧದ ಚಿನ್ನದ ಬೇಡಿಕೆ ಹೆಚ್ಚಳ

 ವಿದೇಶದಿಂದ ಎಷ್ಟು ಚಿನ್ನವನ್ನು ತರಬಹುದು, ಸುಂಕವೆಷ್ಟು?

ವಿದೇಶದಿಂದ ಎಷ್ಟು ಚಿನ್ನವನ್ನು ತರಬಹುದು, ಸುಂಕವೆಷ್ಟು?

nriguides.com ಪ್ರಕಾರ ನೀವು ಭಾರತದ ಪ್ರಯಾಣಿಕರಾಗಿದ್ದು ಮತ್ತು ವಿದೇಶದಲ್ಲಿ ಒಂದು ವರ್ಷಕ್ಕಿಂತ ಅಧಿಕ ಕಾಲ ವಾಸವಾಗಿದ್ದರೆ, ನೀವು ಯಾವುದೇ ಸುಂಕವನ್ನು ಪಾವತಿ ಮಾಡದೆಯೇ ಭಾರತಕ್ಕೆ ವಿದೇಶದಿಂದ ಚಿನ್ನವನ್ನು ತರಬಹುದು. ಆದರೆ ಚಿನ್ನವನ್ನು ಎಷ್ಟು ತರಬಹುದು ಎಂಬುವುದಕ್ಕೆ ಮಿತಿ ಇದೆ. ಪ್ರಯಾಣಿಕರು ಪುರುಷರು ಆಗಿದ್ದಲ್ಲಿ ಗರಿಷ್ಠ 50,000 ರೂಪಾಯಿ ಮೌಲ್ಯದ 20 ಗ್ರಾಮ್ ಚಿನ್ನವನ್ನು ತರಬಹುದು. ಮಹಿಳಾ ಪ್ರಯಾಣಿಕರಾಗಿದ್ದರೆ ಗರಿಷ್ಠ 100,000 ರೂಪಾಯಿ ಮೌಲ್ಯದ 40 ಗ್ರಾಮ್ ಚಿನ್ನವನ್ನು ತರಬಹುದು. ಆದರೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ವಿದೇಶದಲ್ಲಿ ವಾಸವಿದ್ದರೆ ತರುವ ಚಿನ್ನದ ಮೇಲೆ ಸುಂಕ ಇರಲಿದೆ. ನೀವು ವಿದೇಶದಲ್ಲಿ ಒಂದು ವರ್ಷಕ್ಕಿಂತ ಅಧಿಕ ಅವಧಿ ವಾಸವಿದ್ದು, ನೀವು ಮಿತಿಗಿಂತ ಅಧಿಕ ಚಿನ್ನವನ್ನು ತರಲು ಬಯಸಿದರೆ ನೀವು ರಿಯಾಯಿತಿ ಬಳಿಕ ಸುಮಾರು ಶೇಕಡ 13.75ರಷ್ಟು ಸುಂಕ ಪಾವತಿ ಮಾಡಬೇಕಾಗುತ್ತದೆ.

 ಮಕ್ಕಳು ಚಿನ್ನವನ್ನು ತರಬಹುದೇ?, ನಾಣ್ಯ, ಬಿಸ್ಕೆಟ್‌ಗೆ ಅನುಮತಿ ಇದೆಯೇ?
 

ಮಕ್ಕಳು ಚಿನ್ನವನ್ನು ತರಬಹುದೇ?, ನಾಣ್ಯ, ಬಿಸ್ಕೆಟ್‌ಗೆ ಅನುಮತಿ ಇದೆಯೇ?

ಒಂದು ವೇಳೆ ಮಕ್ಕಳು ಒಂದು ವರ್ಷಕ್ಕಿಂತ ಅಧಿಕ ಕಾಲ ವಿದೇಶದಲ್ಲಿ ವಾಸವಿದ್ದರೆ ಸುಂಕವಿಲ್ಲದೆ ಚಿನ್ನವನ್ನು ತರುವ ಅರ್ಹತೆ ಮಕ್ಕಳಿಗೂ ಇದೆ. ಆದರೆ ಈ ನಡುವೆ ನಾವು ಚಿನ್ನದ ನಾಣ್ಯ, ಬಿಸ್ಕೆಟ್ ಅನ್ನು ವಿದೇಶದಿಂದ ತರಬಹುದೇ ಎಂಬ ಪ್ರಶ್ನೆ ನಮಗೆ ಮೂಡುತ್ತದೆ. ಆದರೆ ನಾವು ಪ್ರಮುಖವಾಗಿ ಚಿನ್ನದ ನಾಣ್ಯ ಅಥವಾ ಬಿಸ್ಕೆಟ್ ಅನ್ನು ವಿದೇಶದಿಂದ ತರುವಂತಿಲ್ಲ ಎಂಬುವುದನ್ನು ತಿಳಿದಿರಬೇಕು. ನಾವು ಚಿನ್ನವನ್ನು ಆಭರಣವಾಗಿ ಮಾತ್ರ ತರಲು ಅವಕಾಶವಿದೆ.

 ಭಾರತದಲ್ಲಿ ಚಿನ್ನದ ಬೆಲೆ ಹೇಗೆ ನಿರ್ಧರಿಸಲಾಗುತ್ತದೆ?

ಭಾರತದಲ್ಲಿ ಚಿನ್ನದ ಬೆಲೆ ಹೇಗೆ ನಿರ್ಧರಿಸಲಾಗುತ್ತದೆ?

ಭಾರತದಲ್ಲಿ ಚಿನ್ನದ ಬೆಲೆಯ ಮೇಲೆ ಹಲವಾರು ಅಂಶಗಳು ಪರಿಣಾಮ ಉಂಟು ಮಾಡುತ್ತದೆ. ಮದುವೆ ಸಮಾರಂಭ, ಹಬ್ಬದ ಸಂದರ್ಭ, ಹಣದುಬ್ಬರ, ಬಡ್ಡಿದರ, ಸರ್ಕಾರದ ನೀತಿ, ಜಾಗತಿಕ ವಿದ್ಯಮಾನಗಳು ಭಾರತದಲ್ಲಿ ಚಿನ್ನದ ಬೆಲೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಅದರಲ್ಲೂ ಚಿನ್ನ ಬೆಲೆಯು ಚಿನ್ನದ ಬೇಡಿಕೆಯ ಮೇಲೆ ಅವಲಂಭಿತವಾಗಿದೆ. ಚಿನ್ನದ ಮೇಲಿನ ಬೇಡಿಕೆಯು ಇಳಿಕೆಯಾದರೆ, ಚಿನ್ನದ ಬೆಲೆಯು ಕೂಡಾ ಇಳಿಕೆಯಾಗುತ್ತದೆ. ಒಂದು ವೇಳೆ ಚಿನ್ನದ ಬೇಡಿಕೆಯು ಅಧಿಕವಾದರೆ ಚಿನ್ನದ ಬೆಲೆಯೂ ಕೂಡಾ ಅಧಿಕವಾಗುತ್ತದೆ. ಆದ್ದರಿಂದಾಗಿ ಚಿನ್ನದ ಬೆಲೆ ಹಾಗೂ ಚಿನ್ನದ ಬೇಡಿಕೆಯ ನಡುವೆ ನೇರಾನೇರ ಸಂಬಂಧವಿದೆ.

English summary

How Much of Gold Can You Bring to India When Traveling from Abroad, Explained Here

Indians have a strong obsession for gold. How Much of Gold Can You Bring to India When Traveling from Abroad, Explained Here in kannada, read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X