For Quick Alerts
ALLOW NOTIFICATIONS  
For Daily Alerts

ಹೆಚ್ಚುತ್ತಿರುವ ಆಹಾರ ಹಣದುಬ್ಬರ; ಗ್ರಾಹಕರು, ಆರ್ ಬಿಐ ಪಾಲಿನ ಚಿಂತೆ ದಿನಗಳು

|

ಚಿಲ್ಲರೆ ಹಣದುಬ್ಬರ ದರವು ಮತ್ತೊಮ್ಮೆ ಮೇಲ್ಮುಖವಾಗಿ ಚಲನೆ ಆರಂಭಿಸಿದೆ. ನೆನಪಿಟ್ಟುಕೊಳ್ಳಿ, ಇದರಲ್ಲಿ ಆಹಾರ ಪದಾರ್ಥ ದರ ಏರಿಕೆ ಪ್ರಮಾಣವೇ ಹೆಚ್ಚು. ಕೊರೊನಾ ಲಾಕ್ ಡೌನ್ ಇದ್ದುದರಿಂದ ಏಪ್ರಿಲ್ ನಲ್ಲಿ ಪೂರೈಕೆಗೆ ಅಡೆತಡೆ ಆಯಿತು. ಆ ನಂತರ ಆಹಾರ ಹಣದುಬ್ಬರ ಏರಿಕೆ ಶುರುವಾಯಿತು.

ಮಾರ್ಚ್ 2020ರಲ್ಲಿ 7.8 ಪರ್ಸೆಂಟ್ ಇದ್ದ ಹಣದುಬ್ಬರವು 8.6 ಪರ್ಸೆಂಟ್ ಗೆ ಜಿಗಿಯಿತು. ತರಕಾರಿಗಳು, ಬೇಳೆ ಕಾಳುಗಳು, ಹಾಲು, ದ್ವಿದಳ ಧಾನ್ಯಗಳು, ಖಾದ್ಯ ತೈಲ, ಸಕ್ಕರೆ ಇವುಗಳೆಲ್ಲದರ ದರಗಳ ಒತ್ತಡ ಹೆಚ್ಚಾಯಿತು. ಕಳೆದ ವರ್ಷ ಕೊನೆ ಭಾಗದಲ್ಲಿ ತರಕಾರಿ ಮತ್ತು ಈರುಳ್ಳಿ ಬೆಲೆಗಳ ಏರಿಕೆಯಿಂದಾಗಿ ಆಹಾರ ಹಣದುಬ್ಬರ ಹೆಚ್ಚಳವಾಗಿತ್ತು. ಆಹಾರ ಹಣದುಬ್ಬರವಂತೂ 10.1 ಪರ್ಸೆಂಟ್ ತಲುಪಿತ್ತು. 2013ರ ಡಿಸೆಂಬರ್ ನಂತರ ಮೊದಲ ಬಾರಿಗೆ ಎರಡಂಕಿಯನ್ನು ತಲುಪಿತ್ತು.

 

ಆಹಾರ ಹಣದುಬ್ಬರ ಹೆಚ್ಚಾಗುತ್ತಿದೆ: ಏಪ್ರಿಲ್‌ನಲ್ಲಿ 8.6 ಪರ್ಸೆಂಟ್ ದಾಖಲು

ಒಟ್ಟಾರೆ ಗ್ರಾಹಕ ದರ ಸೂಚ್ಯಂಕದಲ್ಲಿ ಶೇಕಡಾ ನಲವತ್ತರಷ್ಟು ಪಾಲು ಆಹಾರ ಪದಾರ್ಥಗಳದು. ಅದರರ್ಥ, ಆಹಾರ ಪದಾರ್ಥಗಳ ಬೆಲೆ ಜಾಸ್ತಿಯಾದರೆ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಕೂಡ ಮೇಲಕ್ಕೆ ಏರುತ್ತದೆ. ಸಿಪಿಐ ಅಳೆಯುವ ಸಲುವಾಗಿ ಯಾವ ವಸ್ತುವಿಗೆ ಎಷ್ಟು ಮೌಲ್ಯ ನೀಡಲಾಗಿದೆ ಎಂಬ ವಿವರ ಹೀಗಿದೆ.

ವಸ್ತುಗಳು ಪ್ರಮಾಣ

ಬೇಳೆಕಾಳು ಮತ್ತು ಉತ್ಪನ್ನಗಳು 24.8%

ಮೊಟ್ಟೆ, ಮೀನು ಹಾಗೂ ಮಾಂಸ 10.3%

ಹಾಲು ಹಾಗೂ ಹಾಲಿನ ಉತ್ಪನ್ನಗಳು 16.9%

ತೈಲ ಮತ್ತು ಫ್ಯಾಟ್ಸ್ 9.1%

ಹಣ್ಣು 7.4%

ತರಕಾರಿಗಳು 15.5%

ದ್ವಿದಳ ಧಾನ್ಯ ಮತ್ತು ಉತ್ಪನ್ನಗಳು 6.1%

ಸಕ್ಕರೆ ಮತ್ತು ಕಾಂಡಿಮೆಂಟ್ಸ್ 3.5%

ಸಂಬಾರ ಪದಾರ್ಥಗಳು 6.4%

ಹೆಚ್ಚುತ್ತಿರುವ ಆಹಾರ ಹಣದುಬ್ಬರ; ಗ್ರಾಹಕರು, ಆರ್ ಬಿಐ ಪಾಲಿನ ಚಿಂತೆ

ಸಮಸ್ಯೆ ಏನೆಂದರೆ, ಮುಂದಿನ ಕೆಲವು ತಿಂಗಳಲ್ಲಿ ಮತ್ತೆ ಎಲ್ಲ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ಕಾಣಲಿದ್ದೇವೆ. ಮೀನು, ಮಾಂಸ ಇವೆರಡೂ ಸೇರಿ ಸಿಪಿಐನಲ್ಲಿ 10.3 ಪರ್ಸೆಂಟ್ ಆಗುತ್ತವೆ. ಅವುಗಳು ಈಗಾಗಲೇ ಏರಿಕೆ ಕಂಡಿವೆ. ಇನ್ನು ಲಾಕ್ ಡೌನ್ ನಿಂದಾಗಿ ಬಿತ್ತನೆ ಮೇಲೆ ಪ್ರತಿಕೂಲ ಪರಿಣಾಮ ಆಗಬಹುದು. ಈ ಕಾರಣಕ್ಕೆ ಮುಂದಿನ ಕೆಲವು ತಿಂಗಳಲ್ಲಿ ಆಹಾರ ಉತ್ಪಾದನೆ ಹಾಗೂ ಬೆಲೆ ಎರಡರ ಮೇಲೂ ಪ್ರಭಾವ ಬೀರುತ್ತದೆ. ಇದರಿಂದಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.

ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕಾದ ಆದೇಶ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಇದೆ. ಇದರರ್ಥ ಆರ್ ಬಿಐನಿಂದ ದರಗಳನ್ನು ನಿಯಂತ್ರಿಸಬೇಕು. ಅದು ಕೂಡ ಕ್ಯಾಶ್ ರಿಸರ್ವ್ ರೇಶಿಯೋ ಹಾಗೂ ರೆಪೋ ದರದಂಥ ಲಭ್ಯ ಇರುವ ಸಲಕರಣೆಗಳು ಮೂಲಕ.

ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಚಿಲ್ಲರೆ ಹಣದುಬ್ಬರ ಅಥವಾ ಗ್ರಾಹಕ ದರ ಸೂಚ್ಯಂಕವನ್ನು 4 ಪರ್ಸೆಂಟ್ ನೊಳಗೆ ನಿಯಂತ್ರಿಸುವ ಗುರಿ ಇರಿಸಿಕೊಂಡಿದೆ. ಮಾರ್ಚ್ ತಿಂಗಳ ಗ್ರಾಹಕ ದರ ಸೂಚ್ಯಂಕವು (ಸಿಪಿಐ) ಆ ಗುರಿಗಿಂತ ಎತ್ತರಕ್ಕೆ, ಅಂದರೆ 5.84 ಪರ್ಸೆಂಟ್ ಹೋಗಿತ್ತು.

ರೆಪೋ ದರ ಹೆಚ್ಚಿಸಲಾಗುತ್ತದೆ

ಯಾವಾಗೆಲ್ಲ ಹಣದುಬ್ಬರವು ಅಳತೆ ಮೀರುತ್ತದೋ ಆಗ ರಿಸರ್ವ್ ಬ್ಯಾಂಕ್ ನಿಂದ ರೆಪೋ ದರ ಏರಿಸಲಾಗುತ್ತದೆ. ಅಂದರೆ ಇದೇ ದರದ ಆಧಾರದಲ್ಲೇ ವಾಣಿಜ್ಯ ಬ್ಯಾಂಕ್ ಗಳಿಗೆ ರಿಸರ್ವ್ ಬ್ಯಾಂಕ್ ನಿಂದ ಸಾಲವನ್ನು ವಿತರಣೆ ಮಾಡಲಾಗುತ್ತದೆ. ಬಡ್ಡಿ ದರ ಹೆಚ್ಚಾಗುತ್ತದೆ. ಯಾವಾಗ ರಿಸರ್ವ್ ಬ್ಯಾಂಕ್ ನಿಂದ ರೆಪೋ ದರ ಏರಿಕೆ ಆಗುತ್ತದೋ ಆಗ ಸಾಲಕ್ಕೆ ಬೇಡಿಕೆ ಕಡಿಮೆ ಆಗುತ್ತದೆ.

 

ಹಣದುಬ್ಬರ ನಿಯಂತ್ರಿಸುವ ಪ್ರಯತ್ನದಲ್ಲಿ ಬೆಳವಣಿಗೆ ಮೇಲೆ ಪರಿಣಾಮ ಆಗುತ್ತದೆ. ಆದ್ದರಿಂದ ಆರ್ ಬಿಐ ಬೆಳವಣಿಗೆ ಮತ್ತು ಹಣದುಬ್ಬರ ಎರಡರ ಸಮತೋಲನ ಕಾಯ್ದುಕೊಳ್ಳಬೇಕು. ಇನ್ನು ಆಹಾರ ಹಣದುಬ್ಬರ ಏರಿಕೆ ಆಗುವ ಸಾಧ್ಯತೆ ಇರುವುದರಿಂದ ಅದರ ಬೆನ್ನಿಗೇ ಸಿಪಿಐ ಅಥವಾ ಚಿಲ್ಲರೆ ಹಣದುಬ್ಬರದ ಮೇಲೆ ಆಗುತ್ತದೆ. ಬೆಳವಣಿಗೆ- ಹಣದುಬ್ಬರ ಎರಡನ್ನೂ ಸಂಭಾಳಿಸಬೇಕಾದ ಕಠಿಣ ಸವಾಲು ಆರ್ ಬಿಐಗೆ ಇದೆ.

ಹಣದುಬ್ಬರ ಎಷ್ಟು ವೇಗವಾಗಿ ಏರುತ್ತದೋ ಬೆಳವಣಿಗೆ ಇಷ್ಟೇ ವೇಗವಾಗಿ ಇಳಿಮುಖವಾಗುತ್ತದೆ. ಇನ್ನು ಈ ವರ್ಷ ಜಿಡಿಪಿ ಬೆಳವಣಿಗೆ ನೆಗೆಟಿವ್ ಆಗಬಹುದು. ಇದು ಸಂತೋಷ ಪಡುವಂಥ ಸನ್ನಿವೇಶ ಅಲ್ಲ. ಅದರಲ್ಲೂ ಬೆಳವಣಿಗೆಯೂ ಸಾಧಿಸಿ, ಹಣದುಬ್ಬರವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಲೀಸಲ್ಲ.

English summary

How Rise In Food Inflation Worry For RBI And Also For Consumers

Here is an explainer, how rise in food inflation affect on RBI and consumer.
Story first published: Friday, May 22, 2020, 16:40 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more