For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

|

ಅಂತಾರಾಷ್ಟ್ರೀಯ ಪ್ರಯಾಣ ಮಾಡಬೇಕಾದರೆ ನಮಗೆ ಪಾಸ್‌ಪೋರ್ಟ್ ಅತೀ ಅಗತ್ಯವಾಗಿದೆ. ನಾವು ವಿದೇಶಕ್ಕೆ ಪ್ರಯಾಣ ಮಾಡುವುದಾದರೆ ಸರ್ಕಾರ ಅಧಿಕೃತವಾಗಿ ನೀಡುವ ದಾಖಲೆಯಾದ ಪಾಸ್‌ಪೋರ್ಟ್ ಅತೀ ಮುಖ್ಯವಾಗಿದೆ. ನಾವು ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ, ವ್ಯಾಪಾರಕ್ಕಾಗಿ, ಆರೋಗ್ಯ ಚಿಕಿತ್ಸೆಗಾಗಿ ಯಾವುದೇ ಕಾರ್ಯಕ್ಕಾದರೂ ಕೂಡಾ ಪಾಸ್‌ಪೋರ್ಟ್ ನಮ್ಮ ಬಳಿ ಇರಲೇಬೇಕಾದ ಅಗತ್ಯ ದಾಖಲೆಯಾಗಿದೆ.

 

ಕಳೆದ ಕೆಲವು ವರ್ಷಗಳಿಂದ ವಿದೇಶಕ್ಕೆ ಪ್ರಯಾಣ ಮಾಡುವ ಭಾರತೀಯರ ಸಂಖ್ಯೆ ಅಧಿಕವಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ಪಾಸ್‌ಪೋರ್ಟ್ ಸಂಬಂಧಿತ ಸೇವೆಗೆ ಬೇಡಿಕೆ ಅಧಿಕವಾಗಿದೆ. ಈ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಮೇ 2010 ರಲ್ಲಿ ಪಾಸ್‌ಪೋರ್ಟ್ ಸೇವಾ ಯೋಜನೆ (PSP) ಆರಂಭ ಮಾಡಿದೆ.

ಪಾಸ್‌ಪೋರ್ಟ್ ಅರ್ಜಿ ಮತ್ತು ವಿತರಣಾ ಪ್ರಕ್ರಿಯೆಗಳು ಮತ್ತು ಇತರ ಸಂಬಂಧಿತ ಸೇವೆಗಳನ್ನು ಪಾಸ್‌ಪೋರ್ಟ್ ಸೇವಾ ಮೂಲಕ ಸರಳೀಕರಣ ಮಾಡಲಾಗಿದೆ. ನಾವು ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಅರ್ಜಿ ಸಲ್ಲಿಕೆ ಮಾಡಿದ್ದರೂ ಕೂಡಾ ರಾಜ್ಯ ಪೊಲೀಸರು ನಮ್ಮ ವಿಳಾಸಕ್ಕೆ ಬಂದು ಪರಿಶೀಲನೆ ಮಾಡುತ್ತಾರೆ. ಹೆಚ್ಚುವರಿಯಾಗಿ, ಪಾಸ್‌ಪೋರ್ಟ್ ಅನ್ನು ಅರ್ಜಿದಾರರ ನೋಂದಾಯಿತ ವಿಳಾಸಕ್ಕೆ ನೇರವಾಗಿ ತಲುಪಿಸಲಾಗುತ್ತದೆ.

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ ಮತ್ತು ವಿದೇಶಕ್ಕೆ ಪ್ರಯಾಣಿಸುತ್ತಿದ್ದರೆ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ಗೆ ಭೇಟಿ ನೀಡಿ. ನಿಮ್ಮ ಪಾಸ್‌ಪೋರ್ಟ್ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಕುರಿತು ಹಂತ-ಹಂತದ ವಿವರ ಇಲ್ಲಿದೆ. ಮುಂದೆ ಓದಿ...

ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ passportindia.gov.in ಗೆ ಭೇಟಿ ನೀಡಿ
ಹಂತ 2: "Register Now" ಮೇಲೆ ಕ್ಲಿಕ್ ಮಾಡಿ
ಹಂತ 3: ರಿಜಿಸ್ಟರ್ ಮಾಡಿದ ನಂತರ ಲಾಗಿನ್ ಐಡಿ ಬಳಸಿ ಪೋರ್ಟಲ್‌ಗೆ ಲಾಗಿನ್ ಆಗಿ
ಹಂತ 4: ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಅಥವಾ ಈ ಹಿಂದೆ ನೀವು ಮಾಡಿಸಿರುವ ಪಾಸ್‌ಪೋರ್ಟ್ ಮತ್ತೆ ಪಡೆಯಲು "Apply" ಮೇಲೆ ಕ್ಲಿಕ್ ಮಾಡಿ
ಹಂತ 5: ಅಗತ್ಯ ಮಾಹಿತಿ ನಮೂದಿಸಿ ಫಾರ್ಮ್ ಭರ್ತಿ ಮಾಡಿ submit ಕ್ಲಿಕ್ ಮಾಡಿ
ಹಂತ 6: View Saved/Submitted Applications ಆಯ್ಕೆ ಕ್ಲಿಕ್ ಮಾಡಿ
ಹಂತ 7: ಸೇವೆಗೆ ಕನಿಷ್ಠ ಶುಲ್ಕವನ್ನು ಪಾವತಿಸಲು Pay and Schedule Appointment" ಮೇಲೆ ಕ್ಲಿಕ್ ಮಾಡಿ

 

ಗಮನಿಸಿ: ಎಲ್ಲಾ PSK/POPSK/PO ಗಳು ನೇಮಕಾತಿಗಳನ್ನು ನಿಗದಿಪಡಿಸಲು ಅಗತ್ಯವಾದ ಆನ್‌ಲೈನ್ ಪಾವತಿಗಳನ್ನು ಮಾಡಿದೆ. ನಿಯಮಿತ ಅರ್ಜಿಗಳಿಗೆ ರೂ. 1,500, ತತ್ಕಾಲ್ ಪಾಸ್‌ಪೋರ್ಟ್‌ ಗಳಿಗೆ ರೂ. 2,000 ಪಾವತಿ ಮಾಡಲಾಗುತ್ತದೆ.

ಹಂತ 8: ನೆಟ್ ಬ್ಯಾಂಕಿಂಗ್ ಅಥವಾ ಲಭ್ಯವಿರುವ ಇನ್ನೊಂದು ವಿಧಾನದ ಮೂಲಕ ವೆಚ್ಚವನ್ನು ಪಾವತಿಸಿದ ನಂತರ ನಿಮ್ಮ ವಹಿವಾಟಿನ ರಸೀದಿಯನ್ನು ಪಡೆಯಲು "Print Application Receipt" ಮೇಲೆ ಕ್ಲಿಕ್ ಮಾಡಿ
ಹಂತ 9: ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ನಿಮಗೆ ಎಸ್‌ಎಂಎಸ್ ಬರಲಿದೆ. ಪಾಸ್‌ಪೋರ್ಟ್ ಕಚೇರಿಗೆ ಈ ಸಂದೇಶವು ಪುರಾವೆಯಾಗಿ ಅಗತ್ಯವಾಗಿದೆ.

ಹಂತ 10: ನಿಗದಿತ ಅಪಾಯಿಂಟ್‌ಮೆಂಟ್ ದಿನದಂದು ನಿಮ್ಮ ಅರ್ಜಿಯೊಂದಿಗೆ ನೀವು ಸಲ್ಲಿಸಿದ ಎಲ್ಲಾ ಮೂಲ ದಾಖಲೆಗಳನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರ (PSK)/ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (RPO) ಗೆ ಸಲ್ಲಿಕೆ ಮಾಡಿ. ಎಲ್ಲಾ ದಾಖಲೆಗಳ ಪರಿಶೀಲನೆ ಬಳಿಕ ನಿಮ್ಮ ವಿಳಾಸಕ್ಕೆ ಪಾಸ್‌ಪೋರ್ಟ್ ಬರಲಿದೆ.

English summary

How to Apply for a Passport Online, Follow This Steps, Details Here

For international travel, a passport is a must. Here's explained steps to apply passport online. here's details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X