For Quick Alerts
ALLOW NOTIFICATIONS  
For Daily Alerts

ಭಾರತದಿಂದ ಗೂಗಲ್, ಫೇಸ್‌ಬುಕ್‌, ಅಮೆಜಾನ್ ಕಂಪನಿಯ ಷೇರು ಖರೀದಿಸುವುದು ಹೇಗೆ?

|

ಅಮೆರಿಕಾದಲ್ಲಿ ದೈತ್ಯ ಕಂಪನಿಗಳಾದ ಗೂಗಲ್, ಫೇಸ್‌ಬುಕ್, ಟೆಸ್ಲಾ, ಮೈಕ್ರೋಸಾಫ್ಟ್‌ ಹಾಗೂ ಅಮೆಜಾನ್ ಆಪಲ್‌ನಂತಹ ಕಂಪನಿಗಳ ಷೇರುಗಳು ವಾಲ್‌ಸ್ಟ್ರೀಟ್‌ನಲ್ಲಿ ಸಖತ್‌ ಆಗಿ ವಹಿವಾಟು ಆಗುವ ಷೇರುಗಳಾಗಿವೆ. ಅಮೆರಿಕಾದ ಈ ಖ್ಯಾತ ಷೇರುಗಳನ್ನು ಭಾರತೀಯರು ಹೂಡಿಕೆದಾರರು ಕೂಡ ಖರೀದಿಸಲು, ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಲಿಬರಲೈಸ್ಡ್ ರೆಮಿಟನ್ಸ್ ಸ್ಕೀಮ್ (ಎಲ್ಆರ್ಎಸ್) ನಲ್ಲಿನ ಆರ್‌ಬಿಐನ ಅಧಿಸೂಚನೆಯ ಪ್ರಕಾರ ಯಾವುದೇ ವಿಶೇಷ ಅನುಮತಿಗಳಿಲ್ಲದೆ ಭಾರತೀಯ ನಿವಾಸಿಗಳಿಗೆ ವರ್ಷಕ್ಕೆ 250,000 ಡಾಲರ್‌ (ಸರಿಸುಮಾರು 2 ಕೋಟಿ ರೂ.) ವರೆಗೆ ವಿದೇಶಿ ನಿಧಿಯಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.

ಅತ್ಯುತ್ತಮ ಪ್ರದರ್ಶನ ನೀಡುವ ಅಮೆರಿಕಾದ ಷೇರುಗಳು (FAANG)

ಅತ್ಯುತ್ತಮ ಪ್ರದರ್ಶನ ನೀಡುವ ಅಮೆರಿಕಾದ ಷೇರುಗಳು (FAANG)

ಮ್ಯೂಚುಯಲ್ ಫಂಡ್‌ಗಳ ಮೂಲಕ ಜಾಗತಿಕ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಭಾರತೀಯರು, ಅಮೆರಿಕಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

"FAANG" ಎಂಬ ಅಮೆರಿಕದ ಐದು ಪ್ರಮುಖ ತಂತ್ರಜ್ಞಾನ ಕಂಪನಿಗಳ ಷೇರುಗಳು ಹೆಚ್ಚು ಬೇಡಿಕೆಯನ್ನು ಸೂಚಿಸುತ್ತದೆ. ಫೇಸ್‌ಬುಕ್, ಅಮೆಜಾನ್, ಆಪಲ್, ನೆಟ್‌ಫ್ಲಿಕ್ಸ್ ಮತ್ತು ಆಲ್ಫಾಬೆಟ್ ಇನ್ ಫೈನಾನ್ಸ್ ಪ್ರಮುಖವಾದ ಷೇರುಗಳಾಗಿವೆ. ಹೂಡಿಕೆಯ ದೃಷ್ಟಿಕೋನದಿಂದ ಈ ಐದು ಷೇರುಗಳು ತಮ್ಮ ಪ್ರಬಲ ಐತಿಹಾಸಿಕ ದಾಖಲೆಗಳು ಮತ್ತು ಸ್ಥಿರವಾದ ನಾಯಕತ್ವದ ಪಾತ್ರಗಳಿಗಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿವೆ.

 

ಅಮೆರಿಕಾದ ಷೇರುಗಳನ್ನು ಖರೀದಿಸುವುದು ಹೇಗೆ?

ಅಮೆರಿಕಾದ ಷೇರುಗಳನ್ನು ಖರೀದಿಸುವುದು ಹೇಗೆ?

ಓವರ್‌ಸೀಸ್ ಟ್ರೇಡಿಂಗ್ ಅಕೌಂಟ್ ತೆರೆಯುವುದು ಭಾರತೀಯ ಚಿಲ್ಲರೆ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಅನೇಕ ಪೂರ್ಣ ಪ್ರಮಾಣದ ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ಬ್ರೋಕರೇಜ್ ಟ್ರೇಡಿಂಗ್ ಅಕೌಂಟ್‌ಗೆ ವಿಭಿನ್ನವಾಗಿರುತ್ತದೆ. ಈ ಸೇವೆಯು ಕೆಲವು ಮಿತಿಗಳನ್ನು ಒಳಗೊಂಡಿರಬಹುದು.

ಅನೇಕ ದೇಶೀಯ ಬ್ರೋಕರ್ಸ್ ಅಮೆರಿಕಾದ ಸ್ಟಾಕ್ ಬ್ರೋಕರ್‌ಗಳೊಂದಿಗೆ ಕೆಲಸ ಮಾಡುತ್ತಾರೆ. ಅವರು ಮಧ್ಯವರ್ತಿಗಳಾಗಿ ಸೇವೆ ಸಲ್ಲಿಸುತ್ತಾರೆ ಮತ್ತು ನಿಮ್ಮ ವಹಿವಾಟುಗಳನ್ನು ನಡೆಸುತ್ತಾರೆ. ಅಮೆರಿಕಾದ ಷೇರು ಹೂಡಿಕೆ ನೀಡುವ ಭಾರತೀಯ ಬ್ರೋಕರ್‌ಗಳಲ್ಲಿ 5 ಪೈಸಾ, ವೆಸ್ಟೆಡ್ ಫೈನಾನ್ಸ್, ಐಸಿಐಸಿಐ ಡೈರೆಕ್ಟ್, ರಿಲಯನ್ಸ್ ಮನಿ, ಕೊಟಾಕ್ ಸೆಕ್ಯುರಿಟೀಸ್ ಸೇರಿವೆ.

 

ಓವರ್‌ಸೀಸ್ ಟ್ರೇಡಿಂಗ್ ಅಕೌಂಟ್ ತೆರೆಯುವುದು ಹೇಗೆ?

ಓವರ್‌ಸೀಸ್ ಟ್ರೇಡಿಂಗ್ ಅಕೌಂಟ್ ತೆರೆಯುವುದು ಹೇಗೆ?

ಭಾರತದಲ್ಲಿ ಇರುವ ವಿದೇಶಿ ಬ್ರೋಕರ್‌ನೊಂದಿಗೆ ನೀವು ಓವರ್‌ಸೀಸ್ ಟ್ರೇಡಿಂಗ್ ಅಕೌಂಟ್ ಸಹ ತೆರೆಯಬಹುದು. ಭಾರತೀಯ ಹೂಡಿಕೆದಾರರು ಬ್ರೋಕರ್ಸ್ ಚಾರ್ಲ್ಸ್ ಶ್ವಾಬ್ ಇಂಟರ್‌ನ್ಯಾಷ್‌ನಲ್ ಅಕೌಂಟ್, ಇಂಟರ್‌ ಆ್ಯಕ್ಟೀವ್ ಬ್ರೋಕರ್ಸ್, ಟಿಡಿ ಅಮೆರಿಟ್ರೇಡ್ ಮತ್ತು ಇತರರೊಂದಿಗೆ ಖಾತೆಗಳನ್ನು ತೆರೆಯಬಹುದು. ಈ ಮೂಲಕ ಯುಎಸ್ ಸೆಕ್ಯುರಿಟೀಸ್ ಮತ್ತು ಮ್ಯೂಚುಯಲ್ ಫಂಡ್‌ಗಳಲ್ಲಿ ವ್ಯಾಪಾರ ಮಾಡಬಹುದು.

ನೀವು ಖಾತೆಯನ್ನು ತೆರೆಯುವ ಮೊದಲು, ನೀವು ಎಲ್ಲಾ ವೆಚ್ಚಗಳನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಹೂಡಿಕೆಯ ವೆಚ್ಚ ಹೆಚ್ಚಾಗಬಹುದು.

 

ಪರೋಕ್ಷವಾಗಿಯು ಹೂಡಿಕೆ ಮಾಡಲು ಸಾಧ್ಯ!

ಪರೋಕ್ಷವಾಗಿಯು ಹೂಡಿಕೆ ಮಾಡಲು ಸಾಧ್ಯ!

ಹಲವಾರು ಮ್ಯೂಚುಯಲ್ ಫಂಡ್‌ಗಳು ನೇರವಾಗಿ ಅಂತರರಾಷ್ಟ್ರೀಯ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಜಾಗತಿಕ ಷೇರುಗಳಲ್ಲಿ ಹೂಡಿಕೆ ಮಾಡಲು ಇದು ಕೂಡ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಏಕೆಂದರೆ ಇದರಲ್ಲಿ ಹೂಡಿಕೆದಾರರು ಖಾತೆ ತೆರೆಯುವ ಅಥವಾ ಕನಿಷ್ಠ ಠೇವಣಿ ಮಾಡುವ ಅಗತ್ಯವಿಲ್ಲ. ನೀವು ಯುಎಸ್ ಇಟಿಎಫ್‌ಗಳನ್ನು ದೇಶೀಯ ಅಥವಾ ವಿದೇಶಿ ಬ್ರೋಕರ್‌ನಿಂದ ಖರೀದಿಸಬಹುದು.

English summary

How To Buy US Stocks In India: Here's The Details

Here the details of how to buy US Stocks like Google, Microsoft and amazon etc
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X