For Quick Alerts
ALLOW NOTIFICATIONS  
For Daily Alerts

ವಿದೇಶದಿಂದ ಗಳಿಸಿದ ಆದಾಯದ ಮೇಲಿನ ತೆರಿಗೆ ಲೆಕ್ಕಾಚಾರ ಹೇಗೆ?

|

ಭಾರತದಲ್ಲಿ ಸಾಮಾನ್ಯವಾಗಿ ನಾವು ಗಳಿಸುವ ಯಾವುದೇ ಆದಾಯದ ಮೇಲೆಯೂ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಅದಕ್ಕಾಗಿ ದೇಶದಲ್ಲಿ ಪ್ರತ್ಯೇಕ ಕಾಯ್ದೆಯೂ ಕೂಡಾ ಇದೆ. ಆದರೆ ನಾವು ವಿದೇಶದಿಂದ ಪಡೆದ ಆದಾಯದ ಮೇಲೆ ತೆರಿಗೆ ಇದೆಯೇ?

ಹೌದು, ನಾವು ಯಾವುದೇ ಮೂಲದಿಂದ ಪಡೆದ ಆದಾಯದ ಮೇಲೆ ತೆರಿಗೆ ಇದೆ. ಅದಕ್ಕೆ ಕೆಲವೊಂದು ಮಿತಿ, ವಿನಾಯಿತಿಗಳು ಕೂಡಾ ಇದೆ. ಭಾರತದಲ್ಲಿ ಒಂದು ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿ ಗಳಿಸುವ ನಿವ್ವಳ ಆದಾಯವು 2,50,000 ರೂಪಾಯಿಗಿಂತ ಅಧಿಕವಾಗಿದ್ದರೆ, ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

ವಿದೇಶದಿಂದ ಪ್ರಯಾಣಿಸುವಾಗ ಎಷ್ಟು ಚಿನ್ನವನ್ನು ಭಾರತಕ್ಕೆ ತರಬಹುದು?ವಿದೇಶದಿಂದ ಪ್ರಯಾಣಿಸುವಾಗ ಎಷ್ಟು ಚಿನ್ನವನ್ನು ಭಾರತಕ್ಕೆ ತರಬಹುದು?

ಹಿರಿಯ ನಾಗರಿಕರಾದರೆ 3,00,000 ರೂಪಾಯಿಗಿಂತ ಅಧಿಕ ಆದಾಯದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 80 ವರ್ಷಕ್ಕಿಂತ ಮೇಲಿನವರಾದರೆ 5,00,000 ರೂಪಾಯಿಗಿಂತ ಅಧಿಕ ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.

ವಿದೇಶದಿಂದ ಗಳಿಸಿದ ಆದಾಯದ ಮೇಲಿನ ತೆರಿಗೆ ಲೆಕ್ಕಾಚಾರ ಹೇಗೆ?

ಕೊರೊನಾ ಸಾಂಕ್ರಾಮಿಕದ ಬಳಿಕ ಪ್ರಸ್ತುತ ಹಲವಾರು ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡಿದೆ. ಈ ಹಿಂದೆ ವಿದೇಶದಲ್ಲಿ ದುಡಿಯುತ್ತಿದ್ದ ಅದೆಷ್ಟೋ ಮಂದಿ ಈಗ ಭಾರತದಲ್ಲಿಯೇ ಇದ್ದು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಆದರೆ ನಾವು ವಿದೇಶದಿಂದ ಗಳಿಸುವ ಆದಾಯದ ಮೇಲಿನ ತೆರಿಗೆಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ? ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ವಿದೇಶದಿಂದ ವಿತ್‌ಹೋಲ್ಡ್‌ ಮಾಡಲಾಗಿರುವ ತೆರಿಗೆ

ನಮ್ಮ ದೇಶದಲ್ಲಿರುವ ಟಿಡಿಎಸ್‌ನಂತೆಯೇ ವಿದೇಶಗಳು ಭಾರತದಲ್ಲಿರುವಸ ಒಬ್ಬ ಉದ್ಯೋಗಿಯ ವೇತನವನ್ನು ವರ್ಗಾವಣೆ ಮಾಡುವಾಗ ತೆರಿಗೆಯನ್ನು ವಿತ್‌ಹೋಲ್ಡ್ ಮಾಡಬಹುದು. ಉದಾಹರಣೆಗೆ ಯುಎಸ್ ಸಂಸ್ಥೆಗಳು ತಮ್ಮ ಸ್ಥಳೀಯ ಕಾನೂನು ಪ್ರಕಾರವಾಗಿ ತೆರಿಗೆಯನ್ನು ಕಡಿತ ಮಾಡುತ್ತದೆ. ಉದ್ಯೋಗವನ್ನು ಆಧಾರಿಸಿ ಸುಮಾರು ಶೇಕಡ 10-12ರವರೆಗೆ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ. ಆದ್ದರಿಂದಾಗಿ ಭಾರತದಲ್ಲಿದ್ದು ವಿದೇಶದ ಸಂಸ್ಥೆಯಲ್ಲಿ ದುಡಿಯುವವರು ತಮ್ಮ ವೇತನದಲ್ಲಿ ಎಷ್ಟು ಮೊತ್ತವನ್ನು ತೆರಿಗೆಯಾಗಿ ವಿತ್‌ಹೋಲ್ಡ್ ಮಾಡಲಾಗುತ್ತದೆ ಎಂದು ತಿಳಿದಿರಬೇಕು.

ವಿದೇಶಕ್ಕೆ ಹೋಗಲಿದ್ದಿರಿಯೇ?, ಈ ಆದಾಯ ತೆರಿಗೆ ನಿಯಮಗಳನ್ನು ಗಮನಿಸಿವಿದೇಶಕ್ಕೆ ಹೋಗಲಿದ್ದಿರಿಯೇ?, ಈ ಆದಾಯ ತೆರಿಗೆ ನಿಯಮಗಳನ್ನು ಗಮನಿಸಿ

ರೂಪಾಯಿಗೆ ವರ್ಗಾಯಿಸುವುದಕ್ಕೆ ತೆರಿಗೆ

ವಿದೇಶದ ಕರೆನ್ಸಿಯನ್ನು ಭಾರತದ ರೂಪಾಯಿಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿಯೂ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ. ಇದು ಕೂಡಾ ಯಾವ ಮೂಲದಿಂದ ಆದಾಯ ಲಭ್ಯವಾಗುತ್ತಿದೆ ಎಂಬ ಮೇಲೆ ನಿರ್ಧರಿತವಾಗುತ್ತದೆ. ಇನ್ನು ಇಂತಹ ಆದಾಯವನ್ನು ನಿಗದಿತ ಅವಧಿಯಲ್ಲೇ ವರ್ಗಾವಣೆ ಮಾಡಬೇಕು ಎಂಬುವುದು ಆರ್‌ಬಿಐ ನಿಯಮವಾಗಿದೆ.

English summary

How To Calculate Tax on Income Earned Abroad, Explained in Kannada

Income tax Calculation: How To Calculate Tax on Income Earned Abroad, Explained in Kannada. Read on.
Story first published: Thursday, November 17, 2022, 8:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X