For Quick Alerts
ALLOW NOTIFICATIONS  
For Daily Alerts

PAN ದುರುಪಯೋಗ; ಬೇನಾಮಿ ಸಾಲ ಗಳಿಕೆ ಪತ್ತೆ ಹಚ್ಚುವುದು ಹೇಗೆ?

|

ನೀವು ಪ್ಯಾನ್ ಕಾರ್ಡ್ ಅನ್ನು ಹೊಂದಿದ್ದರೆ, ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಕೊಳ್ಳಿ. ಪ್ಯಾನ್‌ ಕಾರ್ಡ್ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 272N ಅಡಿಯಲ್ಲಿ ಮಾನ್ಯವಾಗಿಲ್ಲದಿದ್ದರೆ, ಆ ಪ್ಯಾನ್‌ ಕಾರ್ಡ್ ಹೊಂದಿರುವ ವ್ಯಕ್ತಿಯ ಮೇಲೆ ಅಂದರೆ ನಿಮ್ಮ ಮೇಲೆ ರೂ 10,000 ದಂಡವನ್ನು ವಿಧಿಸುವ ಸಾಧ್ಯತೆಗಳು ಇದೆ. ಇದಲ್ಲದೆ, ಪ್ಯಾನ್ ಬಳಸಿ ಸಾಲ ಪಡೆಯುವವರ ಪೈಕಿ ಕೆಲವರು ಬೇನಾಮಿಯಾಗಿ ಪ್ಯಾನ್ ದುರುಪಯೋಗ ಮಾಡಿಕೊಂಡರೆ ಪತ್ತೆ ಹಚ್ಚುವುದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ.

ಸೆಲೆಬ್ರಿಟಿಗಳು ಸೇರಿದಂತೆ ಹಲವಾರು ಮಂದಿ ಫಿನ್‌ಟೆಕ್ ಅಪ್ಲಿಕೇಶನ್‌ಗಳ ಮೂಲಕ ವೈಯಕ್ತಿಕ ಸಾಲಗಳನ್ನು ಪಡೆಯಲು ತಮ್ಮ ಪ್ಯಾನ್ ಕಾರ್ಡ್‌ನ ದುರ್ಬಳಕೆ ಮಾಡುವ ಪ್ರಸಂಗಗಳು ಬೆಳಕಿಗೆ ಬಂದಿವೆ. ಹಿಂದಿ ಚಿತ್ರರಂಗದ ನಟ ರಾಜ್‌ಕುಮಾರ್ ರಾವ್ ಇತ್ತೀಚೆಗೆ ಟ್ವೀಟ್ ಮಾಡಿ, ಯಾರೋ ಒಬ್ಬರು ತಮ್ಮ ಪ್ಯಾನ್ ವಿವರಗಳನ್ನು ಬಳಸಿ 2500 ರೂಪಾಯಿ ಸಾಲ ಪಡೆದಿದ್ದರಿಂದ ಬಗ್ಗೆ ಹೇಳಿದ್ದರು. ಇದರಿಂದ ಅವರ CIBIL ಸ್ಕೋರ್ ಮೇಲೆ ಪರಿಣಾಮ ಬೀರಿತ್ತು. ಈ ಹಿಂದೆ ಜನಪ್ರಿಯ ನಟಿ ಸನ್ನಿ ಲಿಯೋನ್ ಕೂಡ ಇದೇ ರೀತಿ ವಂಚನೆಗೊಳಗಾಗಿರುವ ಬಗ್ಗೆ ಹೇಳಿದ್ದರು.

ಪ್ಯಾನ್, ಟ್ಯಾನ್ ಮತ್ತು ಟಿನ್ ನಡುವಿನ ಮೂಲ ವ್ಯತ್ಯಾಸವೇನು? ನಮಗೇಕೆ ಅಗತ್ಯ? ಪ್ಯಾನ್, ಟ್ಯಾನ್ ಮತ್ತು ಟಿನ್ ನಡುವಿನ ಮೂಲ ವ್ಯತ್ಯಾಸವೇನು? ನಮಗೇಕೆ ಅಗತ್ಯ?

ಸಾಲ ಪಡೆಯಲು ನಿಮ್ಮ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ:
CIBIL ಸ್ಕೋರ್ ಅನ್ನು ಪರಿಶೀಲಿಸುವ ಮೂಲಕ: CIBIL, Equifax, Experian ಅಥವಾ CRIF ಹೈ ಮಾರ್ಕ್ ಮೂಲಕ, ಅವರ ಹೆಸರಿನಲ್ಲಿ ಯಾವುದೇ ಸಾಲವನ್ನು ವಿತರಿಸಲಾಗಿದೆಯೇ ಎಂದು ಕಂಡುಹಿಡಿಯಬಹುದು.
Paytm ಅಥವಾ ಬ್ಯಾಂಕ್ ಬಜಾರ್‌ನಂತಹ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಹಣಕಾಸಿನ ವರದಿಗಳನ್ನು ಪರಿಶೀಲಿಸಲು ಆಯ್ಕೆಗಳನ್ನು ಸಹ ಒದಗಿಸುತ್ತವೆ. ಅಂತಹ ಫಿನ್‌ಟೆಕ್ ಅಪ್ಲಿಕೇಶನ್‌ಗಳು ಬಳಕೆದಾರರ CIBIL ಸ್ಕೋರ್ ಅನ್ನು ಸಾಲದ ವಿವರಗಳು ಮತ್ತು ಹಣಕಾಸು ವರದಿಗಳೊಂದಿಗೆ ತಕ್ಷಣವೇ ನೀಡುತ್ತವೆ.

PAN ದುರುಪಯೋಗ; ಬೇನಾಮಿ ಸಾಲ ಗಳಿಕೆ ಪತ್ತೆ ಹಚ್ಚುವುದು ಹೇಗೆ?

ನಮೂನೆ 26A ಅನ್ನು ಬಳಸಿ: ಫಾರ್ಮ್ 26A ಆದಾಯ ತೆರಿಗೆ ಇಲಾಖೆಯು ನೀಡುವ ವಾರ್ಷಿಕ ತೆರಿಗೆ ಹೇಳಿಕೆಯಾಗಿದೆ. ಇದು ಪ್ಯಾನ್ ಕಾರ್ಡ್‌ನೊಂದಿಗೆ ಮಾಡಿದ ಎಲ್ಲಾ ತೆರಿಗೆ ಪಾವತಿಗಳು ಮತ್ತು ಹಣಕಾಸಿನ ವಹಿವಾಟುಗಳ ಆದಾಯ ತೆರಿಗೆ ರಿಟರ್ನ್ ದಾಖಲೆಗಳನ್ನು ಒಳಗೊಂಡಿದೆ. ಫಾರ್ಮ್ 26A ಅನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ, ಬಳಕೆದಾರರು ಮೋಸದ ಚಟುವಟಿಕೆಯನ್ನು ಮೊದಲೇ ಗುರುತಿಸಬಹುದು ಮತ್ತು ದೂರು ದಾಖಲಿಸಬಹುದು.

ಇ-ಫೈಲಿಂಗ್ ಪೋರ್ಟಲ್‌ನಿಂದ ಫಾರ್ಮ್-26AS ಅನ್ನು ವೀಕ್ಷಿಸಲು ಅಥವಾ ಡೌನ್‌ಲೋಡ್ ಮಾಡಲು ಹಂತಗಳು ಇಲ್ಲಿವೆ:
ಹಂತ 1. 'ಇ-ಫೈಲಿಂಗ್' ಪೋರ್ಟಲ್‌ಗೆ ಲಾಗಿನ್ ಮಾಡಿ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2. 'ನನ್ನ ಖಾತೆ' ಮೆನುವಿನಲ್ಲಿ, 'ಫಾರ್ಮ್ 26AS (ತೆರಿಗೆ ಕ್ರೆಡಿಟ್) ವೀಕ್ಷಿಸಿ' ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3. ಹಕ್ಕು ನಿರಾಕರಣೆ(disclaimer) ಓದಿದ ನಂತರ 'ದೃಢೀಕರಿಸಿ' ಕ್ಲಿಕ್ ಮಾಡಿ ಮತ್ತು ನಿಮ್ಮನ್ನು TDS-CPC ಪೋರ್ಟಲ್‌ಗೆ ಮರುನಿರ್ದೇಶಿಸಲಾಗುತ್ತದೆ
ಹಂತ 4. ಟಿಡಿಎಸ್-ಸಿಪಿಸಿ ಪೋರ್ಟಲ್‌ನಲ್ಲಿ, ಬಳಕೆಯ ಸ್ವೀಕಾರ ಬಟನ್‌ಗೆ 'ಸಮ್ಮತಿಸಿ' ಕ್ಲಿಕ್ ಮಾಡಿ
ಹಂತ 5. 'ಮುಂದುವರೆಯಿರಿ' ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ 6. 'ಟ್ಯಾಕ್ಸ್ ಕ್ರೆಡಿಟ್ ವೀಕ್ಷಿಸಿ (ಫಾರ್ಮ್ 26AS)' ಬಟನ್ ಕ್ಲಿಕ್ ಮಾಡಿ
ಹಂತ 7. 'ಮೌಲ್ಯಮಾಪನ ವರ್ಷ' ಆಯ್ಕೆಮಾಡಿ ಮತ್ತು ನಂತರ 'ವೀಕ್ಷಣೆ ಪ್ರಕಾರ' ಆಯ್ಕೆಮಾಡಿ (HTML, ಪಠ್ಯ ಅಥವಾ PDF)
ಹಂತ 8. 'ವೀಕ್ಷಿಸಿ / ಡೌನ್‌ಲೋಡ್' ಬಟನ್ ಮೇಲೆ ಕ್ಲಿಕ್ ಮಾಡಿ

English summary

How to check if your PAN has been misused to take unauthorized loans

Several people, including celebrities have reported misuse of their PAN card to get personal loans through fintech apps. Actor Rajkumar Rao recently tweeted that his CIBIL score had been affected because someone had taken out a loan of Rs 2500 using his PAN details, without his knowledge. Earlier, another actor Sunny Leone complained of similar fraud.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X