For Quick Alerts
ALLOW NOTIFICATIONS  
For Daily Alerts

ಇಪಿಎಫ್‌ಒ ಪೋರ್ಟಲ್‌ನಲ್ಲಿ ಪಿಂಚಣಿ ಸ್ಟೇಟಸ್ ನೋಡುವುದು ಹೇಗೆ?

|

ಪಿಂಚಣಿ ಎಂಬುವುದು ನಮ್ಮ ನಿವೃತ್ತಿ ಜೀವನಕ್ಕೆ ಪ್ರಮುಖವಾದ ಹಣಕಾಸು ಸುರಕ್ಷತೆಯಾಗಿದೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಚಂದಾದಾರಿಕೆ ಕೊನೆಯಾದ ಬಳಿಕ ನಮಗೆ ಪಿಂಚಣಿ ಪೇಮೆಂಟ್ ಆರ್ಡರ್ (ಪಿಪಿಒ) ಲಭ್ಯವಾಗಲಿದೆ. ಇದನ್ನು ನಾವು ನೆನಪಿನಲ್ಲಿಡುವುದು ಅಥವಾ ಸುರಕ್ಷಿತವಾಗಿ ಇರಿಸುವುದು ಬಹಳ ಮುಖ್ಯವಾಗಿದೆ. ಯಾಕೆಂದರೆ ಇದೇ ಮುಂದಿನ ದಿನಗಳಲ್ಲಿ ನಮ್ಮ ಪಿಂಚಣಿ ಸ್ಟೇಟಸ್ ತಿಳಿಯಲು ಮುಖ್ಯವಾಗುತ್ತದೆ.

ಪಿಂಚಣಿದಾರರು ಇಪಿಎಫ್‌ಒದ ಪಿಂಚಣಿ ಫೋರ್ಟಲ್‌ನಲ್ಲಿ ನಮ್ಮ ಪಿಂಚಣಿಯ ಸ್ಟೇಟಸ್ ಅನ್ನು ನೋಡಿಕೊಳ್ಳಬಹುದು. 12 ಡಿಜಿಟ್‌ನ ಪಿಪಿಒ ಸಂಖ್ಯೆಯು ಪ್ರತಿ ಪಿಂಚಣಿದಾರರಿಗೆ ಬೇರೆ ಬೇರೆಯೇ ಆಗಿದೆ. ಇದು ಪಿಂಚಣಿ ಸಂಬಂಧಿತ ಎಲ್ಲಾ ಮಾಹಿತಿಗೆ ಪ್ರಮುಖ ಸಂಖ್ಯೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ.

ಕಾಣೆಯಾದ ಸರ್ಕಾರಿ ನೌಕರರ ಕುಟುಂಬ ಪಿಂಚಣಿ ನಿಯಮ ಸಡಿಲಿಸಿದ ಕೇಂದ್ರ: ಏನಿದು?ಕಾಣೆಯಾದ ಸರ್ಕಾರಿ ನೌಕರರ ಕುಟುಂಬ ಪಿಂಚಣಿ ನಿಯಮ ಸಡಿಲಿಸಿದ ಕೇಂದ್ರ: ಏನಿದು?

ಪಿಂಚಣಿದಾರರು ತಮ್ಮ ಈ 12 ಡಿಜಿಟ್‌ನ ಪಿಪಿಒ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ತಮ್ಮ ಪಿಂಚಣಿ ಸ್ಟೇಟಸ್ ಅನ್ನು ಚೆಕ್ ಮಾಡುವುದು ಮಾತ್ರವಲ್ಲದೆ ಪಿಂಚಣಿ ಸಂಬಂಧಿತ ಯಾವುದೇ ಸಮಸ್ಯೆಯ ಬಗ್ಗೆ ದೂರು ದಾಖಲು ಮಾಡಬಹುದಾಗಿದೆ. ಇವೆಲ್ಲದಕ್ಕೂ 12 ಡಿಜಿಟ್‌ನ ಪಿಪಿಒ ಸಂಖ್ಯೆ ಪ್ರಮುಖವಾಗಿದೆ. ನಿಮಗೆ ಪಿಪಿಒ ಸಂಖ್ಯೆಯೇ ಗೊತ್ತಿಲ್ಲದಿದ್ದರೆ ನೀವು ಅದನ್ನು ಆನ್‌ಲೈನ್ ಮೂಲಕ ತಿಳಿಯಬಹುದು. ಹಾಗೆಯೇ ಅದನ್ನು ಬಳಸಿಕೊಂಡು ನಿಮ್ಮ ಪಿಂಚಣಿ ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಪಿಪಿಒ ಸಂಖ್ಯೆಯನ್ನು ಪತ್ತೆ ಮಾಡುವುದು ಹೇಗೆ?

ಪಿಪಿಒ ಸಂಖ್ಯೆಯನ್ನು ಪತ್ತೆ ಮಾಡುವುದು ಹೇಗೆ?

ಹಂತ ಒಂದು: www.epfindia.gov.in ಗೆ ಲಾಗಿನ್ ಆಗಿ
ಹಂತ ಎರಡು: Online service ಕೆಳಗೆ Pensioner's portal ಮೇಲೆ ಕ್ಲಿಕ್ ಮಾಡಿ
ಹಂತ ಮೂರು: Welcome to Pensioners Portal ಗೆ ನೀವು ರೀಡೈರೆಕ್ಟ್ ಆಗಲಿದ್ದೀರಿ
ಹಂತ ನಾಲ್ಕು: ಬಲ ಭಾಗದಲ್ಲಿ ಇರುವ Know your PPO number ಮೇಲೆ ಕ್ಲಿಕ್ ಮಾಡಿ
ಹಂತ ಐದು: ಇಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಪಿಎಫ್ ಸಂಖ್ಯೆಯನ್ನು ಹಾಕಬೇಕಾಗುತ್ತದೆ
ಹಂತ ಆರು: ಪ್ರಮುಖ ಡೇಟಾ ಭರ್ತಿ ಮಾಡಿದ ಬಳಿಕ ನಿಮಗೆ ಪಿಪಿಎಫ್ ಸಂಖ್ಯೆ ಲಭ್ಯವಾಗಲಿದೆ
ಹಂತ ಏಳು: ಮೆಂಬರ್ ಐಡಿ, ಪಿಂಚಣಿ ವಿಧಾನ ಕೂಡಾ ಲಭ್ಯವಾಗಲಿದೆ.

ನಿವೃತ್ತಿ ಬಳಿಕ 50,000 ರೂ ಪಿಂಚಣಿ ಗಳಿಸುವುದು ಹೇಗೆ?ನಿವೃತ್ತಿ ಬಳಿಕ 50,000 ರೂ ಪಿಂಚಣಿ ಗಳಿಸುವುದು ಹೇಗೆ?

 

 ಪಿಂಚಣಿ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?

ಪಿಂಚಣಿ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?

ಹಂತ ಒಂದು: ww.epfindia.gov.in ಗೆ ಲಾಗಿನ್ ಆಗಿ
ಹಂತ ಎರಡು: Online service ನ ಕೆಳಗೆ Pensioner's portal ಮೇಲೆ ಕ್ಲಿಕ್ ಮಾಡಿ
ಹಂತ ಮೂರು:Welcome to Pensioners Portal ಗೆ ರಿಡೈರೆಕ್ಟ್ ಆಗಲಿದೆ
ಹಂತ ನಾಲ್ಕು: ಬಲಭಾಗದಲ್ಲಿರುವ Know Your Pension Status ಮೇಲೆ ಕ್ಲಿಕ್ ಮಾಡಿ
ಹಂತ ಐದು: ಆಫೀಸ್, ಆಫೀಸ್ ಐಡಿ, ಪಿಪಿಒ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ
ಹಂತ ಆರು: Get Status ಮೇಲೆ ಕ್ಲಿಕ್ ಮಾಡಿ
ಹಂತ ಏಳು: ನಿಮ್ಮ ಪಿಂಚಣಿ ಸ್ಟೇಟಸ್ ನಿಮಗೆ ಲಭ್ಯವಾಗಲಿದೆ

 ಪಿಪಿಒ ವೇರಿಫಿಕೇಶನ್

ಪಿಪಿಒ ವೇರಿಫಿಕೇಶನ್

ಪಿಪಿಒ ಸಂಖ್ಯೆಯ ಮೂಲಕ ನೀವು ಪಿಂಚಣಿ ಅವಾರ್ಡ್‌ಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ನಿಮ್ಮ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಕೂಡಾ ನೀವು ಚೆಕ್ ಮಾಡಿಕೊಳ್ಳಿ. ಪಿಂಚಣಿ ಪೋರ್ಟಲ್ ಪ್ರಕಾರ ಪಿಪಿಒ ಸಂಬಂಧಿಸಿ ಯಾವುದೇ ತಿದ್ದುಪಡಿ ಇದ್ದರೂ ಪಿಂಚಣಿ ನೀಡುವ ಸಂಸ್ಥೆ, ಆಫೀಸ್‌ನ ಹೆಡ್ ಅನ್ನು ನೀವು ಭೇಟಿಯಾಗಬಹುದು. ಈ ಮೂಲಕ ಪಿಪಿಒ ವೇರಿಫಿಕೇಶನ್ ಮಾಡಿಕೊಳ್ಳಬಹುದು.

 ಪಿಪಿಒ ಸಂಖ್ಯೆ ಹಂಚಿಕೆ ಪ್ರಕ್ರಿಯೆ ಹೇಗೆ?

ಪಿಪಿಒ ಸಂಖ್ಯೆ ಹಂಚಿಕೆ ಪ್ರಕ್ರಿಯೆ ಹೇಗೆ?

ಸೆಂಟ್ರಲ್ ಪೆನ್ಶನ್ ಅಕೌಂಟಿಂಗ್ ಆಫೀಸ್ (ಸಿಪಿಎಒ) ಪ್ರಕಾರ ಪಿಪಿಒ ಹಂಚಿಕೆ ಮಾಡಲು ಅದರದ್ದೆ ಆದ ಪದ್ಧತಿಯನ್ನು ಪಾಲನೆ ಮಾಡಲಾಗುತ್ತದೆ. ಪಿಪಿಒದಲ್ಲಿ ಮೊದಲ ಐದು ಸಂಖ್ಯೆಯು ಪಿಪಿಒ ಹಂಚಿಕೆ ಮಾಡುವ ಸಂಸ್ಥೆಯ ಕೋಡ್ ಸಂಖ್ಯೆಯಾಗಿದೆ. ನಂತರದ ಎರಡು ಸಂಖ್ಯೆಯು ಪಿಪಿಒ ಸಂಖ್ಯೆ ನೀಡುವ ವರ್ಷವನ್ನು ಪ್ರತಿನಿಧಿಸಲಿದೆ. ಅದರ ಬಳಿಕ ಉಳಿದ ನಾಲ್ಕು ಸಂಖ್ಯೆಯು ಪಿಪಿಒದ ಸೀಕ್ವೆನ್ಸ ಸಂಖ್ಯೆಯಾಗಲಿದೆ. ಕೊನೆಯ ಸಂಖ್ಯೆಯು ಕಂಪ್ಯೂಟರ್‌ನಲ್ಲಿ ಚೆಕ್ ಮಾಡಲು ಸುಲಭವಾಗುವ ನಿಟ್ಟಿನಲ್ಲಿ ನೀಡಲಾಗಿರುತ್ತದೆ.

English summary

How to Check Pension Status on EPFO Portal, Steps Explained Here

How to Check Pension Status on EPFO Portal, Steps Explained Here, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X