ಬ್ಯಾಂಕ್ ಆಧಾರಿತ ವಿವಿಧ ವ್ಯವಹಾರಗಳಿಗೆ ಬಳಕೆ ಮಾಡುವ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಈಗ ಇ ಪ್ಯಾನ್ ಕಾರ್ಡ್ ಆಗಿ ಬದಲಾಗಿದೆ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆಯಂತೆ ಹಲವಾರು ಮಂದಿ ಹೊಸ ಕಾರ್ಡ್ ಪಡೆದುಕೊಂಡಿದ್ದಾರೆ. ಆದರೆ, ಆನ್ಲೈನಲ್ಲಿ ಪ್ಯಾನ್ ಕಾರ್ಡ್ ವಿವರ ಬದಲಾಯಿಸೋದು ಹೇಗೆ? ಎಂಬುದರ ವಿವರ ಇಲ್ಲಿದೆ
ಏನಿದು ಇ ಪ್ಯಾನ್: ಎಲೆಕ್ಟ್ರಾನಿಕ್-ಪ್ಯಾನ್ ಕಾರ್ಡ್ ಇದರ ವಿಸ್ತೃತ ರೂಪ. ಇ ಪ್ಯಾನ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್ ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು.

ಪ್ಯಾನ್ ಕಾರ್ಡ್ ವಿವರ ಬದಲಾಯಿಸೋದು ಹೇಗೆ?
* Tin-NSDL ಹಾಗೂ UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ.
* ಮುಖ್ಯಪುಟದ ಸರ್ವೀಸ್ ಆಯ್ಕೆಯಲ್ಲಿ 'PAN' ಆರಿಸಿಕೊಳ್ಳಿ
* ಹೊಸ ಪುಟದಲ್ಲಿ ಡೇಟಾ ಆಯ್ಕೆಯಲ್ಲಿ ಬದಲಾವಣೆ/ತಿದ್ದುಪಡಿ ಆಯ್ಕೆ ಮೇಲೆ apply ಮಾಡಿ
* PAN ಸಂಖ್ಯೆ, ಮತ್ತೆ ಪ್ರಿಂಟ್ ಮಾಡುವ ಪ್ಯಾನ್ ಕಾರ್ಡ್ ಆಯ್ಕೆ ಮಾಡಿಕೊಳ್ಳಿ.
* Correct ಕೆಟಗೆರಿಯಲ್ಲಿ ಬೇರೆ ಆಯ್ಕೆ ಮಾಡಿಕೊಳ್ಳಿ.
* ಹೆಸರು, ಹುಟ್ಟಿದ ದಿನಾಂಕ, ಇಮೇಲ್ ಐಡಿ ಬದಲಾವಣೆ ಮಾಡಿ ಸಬ್ಮಿಟ್ ಮಾಡಿ.
* PAN ಅಪ್ಲಿಕೇಷನ್ ಅರ್ಜಿ ಮೇಲೆ ಕ್ಲಿಕ್ ಮಾಡಿ
* ಇ ಕೆವೈಸಿ ಸ್ಕ್ಯಾನ್ ಕಾಪಿ ಸಲ್ಲಿಸಬೇಕಾಗುತ್ತದೆ
* ಹೆಸರು, ವಿಳಾಸ, ವಯಸ್ಸು ದೃಢೀಕರಣ ಪತ್ರ, ಐಡಿ ದಾಖಲೆ, ಇತ್ಯಾದಿ ದಾಖಲೆ ಸಲ್ಲಿಸಬೇಕಾಗುತ್ತದೆ.
* NSDL ಆನ್ ಲೈನ್ ಕಚೇರಿ ಮೂಲಕವೇ ದಾಖಲೆ ಸಲ್ಲಿಸಿ, ಇ ಪೇಮೆಂಟ್ ಮಾಡಿ ರಸಿತಿ ಪಡೆಯಬಹುದು. ಇದಾದ ಬಳಿಕ ತಿದ್ದುಪಡಿಯನ್ನು ಮಾಡಲಾಗುತ್ತದೆ.
ಸಾಮಾನ್ಯ ಪ್ಯಾನ್ ಕಾರ್ಡ್ ಅಲ್ಲದೆ ಇ ಪ್ಯಾನ್ ಸುಲಭವಾಗಿ 10 ನಿಮಿಷದಲ್ಲಿ ಪಡೆಯಬಹುದು ಹಾಗೂ ತಿದ್ದುಪಡಿ ಕೂಡಾ ಸರಳವಾಗಿದೆ

ಇ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
* UTI-ITSL ಮೂಲಕ ಹೊಸ ಪ್ಯಾನ್ ಪಡೆಯಲು ಬಯಸುವವರು ಹಾಗೂ ಪ್ಯಾನ್ ಕಾರ್ಡಿನಲ್ಲಿ ಬದಲಾವಣೆ ಬಯಸುವವರು ಆನ್ ಲೈನ್ ನಲ್ಲಿ ಇ-ಪ್ಯಾನ್ ಕಾರ್ಡ್ NSDL ಹಾಗೂ UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ
* ಡೌನ್ ಲೋಡ್ ಇ ಪ್ಯಾನ್ ಕಾರ್ಡ್ ಕ್ಲಿಕ್ ಮಾಡಿ
* ಚಾಲ್ತಿ ಪ್ಯಾನ್ ಬದಲಾವಣೆ ಬಯಸುವವರು PAN, ಆಧಾರ್, ಹುಟ್ಟಿದ ದಿನಾಂಕ. ಇತ್ಯಾದಿ ಪ್ರಮುಖ ಮಾಹಿತಿ ನೀಡಿ.
* ನಿಗದಿತ ಶುಲ್ಕವನ್ನು ಡೆಬಿಟ್/ ಕ್ರೆಡಿಟ್, ಡಿಡಿ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಿ.
* 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಳಿಸಲಾಗುತ್ತದೆ.
* ಪರಿಶೀಲನೆ ನಂತರ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಅಧಿಕೃತ ವಿಳಾಸವನ್ನು ತಲುಪಲಿದೆ. ಆದರೆ,ಇ ಪ್ಯಾನ್ ತಕ್ಷಣವೇ ಸಿಗುವುದರಿಂದ ಆದಾಯ ತೆರಿಗೆ ಇಲಾಖೆಯು ಕಾರ್ಡ್ ಗಳನ್ನು ಮನೆ ವಿಳಾಸಕ್ಕೆ ಕಳಿಸುವ ಅಗತ್ಯವಿಲ್ಲ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications