For Quick Alerts
ALLOW NOTIFICATIONS  
For Daily Alerts

ಗ್ರಾಹಕರ ಸಮಸ್ಯೆಗಳಿಗೆ ಆನ್ ಲೈನ್ ನಲ್ಲಿ ದೂರು ಸಲ್ಲಿಸುವುದು ಹೇಗೆ?

|

ತೂಕದಲ್ಲಿ ಮೋಸ, ಎಂಆರ್ ಪಿಗಿಂತ ಹೆಚ್ಚಿನ ಬೆಲೆ ವಸೂಲಿ, ಕಳಪೆ ಗುಣಮಟ್ಟದ ವಸ್ತುವಿಗೆ ಹೆಚ್ಚಿನ ಬೆಲೆ ವಸೂಲಿ ಹೀಗೆ ಗ್ರಾಹಕರಿಗೆ ಸಂಬಂಧಿಸಿದಂತೆ ನಾನಾ ದೂರುಗಳು ಇರುತ್ತವೆ.

ಭಾರತದ ಗ್ರಾಹಕರು ಉತ್ಪನ್ನಗಳು ಅಥವಾ ಸೇವೆಗಳು ಅಥವಾ ಬ್ರ್ಯಾಂಡ್ ಗುಣಮಟ್ಟದ ಬಗ್ಗೆ ಅಹವಾಲುಗಳಿದ್ದಲ್ಲಿ ದೂರು ಸಲ್ಲಿಸಬಹುದು ಮತ್ತು ಅದಕ್ಕೆ ಪರಿಹಾರವನ್ನು ಪಡೆಯಬಹುದು. ಗ್ರಾಹಕ ನ್ಯಾಯಾಲಯಗಳಿಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ಅದಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

2021 ಜನವರಿ 1ರಿಂದ FASTag ಕಡ್ಡಾಯ; ನಿಮಗೆ ಗೊತ್ತಿರಬೇಕಾದ ಸಂಗತಿಗಳು2021 ಜನವರಿ 1ರಿಂದ FASTag ಕಡ್ಡಾಯ; ನಿಮಗೆ ಗೊತ್ತಿರಬೇಕಾದ ಸಂಗತಿಗಳು

ಮತ್ತೊಂದು ಕಡೆ, ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ, ಆನ್ ಲೈನ್ ದೂರುಗಳನ್ನು ಸಲ್ಲಿಸಬಹುದು.

ಯಾರು ದೂರು ಸಲ್ಲಿಸಬಹುದು?

ಯಾರು ದೂರು ಸಲ್ಲಿಸಬಹುದು?

ಈಚೆಗಿನ ವರ್ಷಗಳಲ್ಲಿ ಸರ್ಕಾರದಿಂದ ಜಾಗೃತಿ ಕಾರ್ಯಕ್ರಮ ಆರಂಭಿಸಲಾಗಿದೆ. ಗ್ರಾಹಕರು ಶೋಷಣೆ ಅಥವಾ ವಂಚನೆ ಎದುರಿಸಿದ್ದಲ್ಲಿ ಅದರ ವಿರುದ್ಧ ಧ್ವನಿ ಎತ್ತಬಹುದು. ಉತ್ಪನ್ನ ಅಥವಾ ಸೇವೆ ಅಥವಾ ಅದರ ಗುಣಮಟ್ಟ ಅಥವಾ ಹೆಚ್ಚಿನ ಮೊತ್ತ ಪಾವತಿಸುವಂತೆ ಮಾಡಿದಲ್ಲಿ ಅಥವಾ ದೋಷಪೂರಿತ ವಸ್ತುಗಳನ್ನು ಸ್ವೀಕರಿಸಿದಲ್ಲಿ ಹೀಗೆ ಇಂಥ ಸಂದರ್ಭಗಳಲ್ಲಿ ದೂರು ದಾಖಲಿಸಬಹುದು ಮತ್ತು ರಕ್ಷಣೆ ಕೋರಬಹುದು.

ಗ್ರಾಹಕ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ಗ್ರಾಹಕರಿಗೆ ರಕ್ಷಣೆ ಮತ್ತು ಹಕ್ಕುಗಳ ಸಂರಕ್ಷಣೆ ಮಾಡಲಾಗುತ್ತದೆ.

ಈ ಮೇಲ್ಕಂಡ ಕಾಯ್ದೆಯಲ್ಲಿ ಕೆಳಕಂಡವರ ಹಕ್ಕು ರಕ್ಷಣೆಗೆ ದೂರು ದಾಖಲಿಸಬಹುದು:
* ಗ್ರಾಹಕರು

* ಸಮಾನ ಹಿತಾಸಕ್ತಿ ಇರುವ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಗ್ರಾಹಕರು

* ಯಾವುದೇ ನೋಂದಾಯಿತ ಸ್ವಯಂಪ್ರೇರಿತ ಒಕ್ಕೂಟಗಳು.

ನೆನಪಿರಲಿ, ಸಮಸ್ಯೆ ಆದ ಎರಡು ವರ್ಷದೊಳಗೆ ಗ್ರಾಹಕರು ದೂರು ನೀಡಬೇಕು. ಎರಡು ವರ್ಷದ ನಂತರ ದೂರು ದಾಖಲಿಸಿದಲ್ಲಿ ಕೋರ್ಟ್ ಅದನ್ನು ಮಾನ್ಯ ಮಾಡುವುದಿಲ್ಲ. ಆದರೆ ದೂರು ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಸರಿಯಾದ ಕಾರಣ ಇಲ್ಲದಿದ್ದಲ್ಲಿ ದೂರನ್ನು ಪರಿಗಣಿಸಲಾಗುತ್ತದೆ.

ಆನ್ ಲೈನ್ ಮೂಲಕ ದೂರು ದಾಖಲಿಸಬೇಕು ಎಂದಿದ್ದಲ್ಲಿ ಮೊದಲಿಗೆ ಗ್ರಾಹಕರ ಆನ್ ಲೈನ್ ಸಂಪನ್ಮೂಲ ಮತ್ತು ಸಬಲೀಕರಣ ಕೇಂದ್ರದಿಂದ ನಡೆಸುವ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಇದು ಗ್ರಾಹಕರು ದೂರು ನೀಡುವುದಕ್ಕೆ ಮತ್ತು ಅವುಗಳ ಪರಿಹಾರಕ್ಕಾಗಿ ಇರುವ ವ್ಯವಸ್ಥೆ. ಇದನ್ನು ಕನ್ಸೂಮರ್ ಕೋ ಆರ್ಡಿನೇಷನ್ ಸಮಿತಿ ನಿರ್ವಹಿಸುತ್ತದೆ ಹಾಗೂ ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಂಬಲ ಅದಕ್ಕಿದೆ.

ದೂರು ದಾಖಲಿಸುವುದು ಹೇಗೆ?

ದೂರು ದಾಖಲಿಸುವುದು ಹೇಗೆ?

ಮೊದಲಿಗೆ ಗ್ರಾಹಕರು ವೆಬ್ ಪೋರ್ಟಲ್ ನಲ್ಲಿ ದೂರು ದಾಖಲಿಸಬೇಕು. ಇದಕ್ಕಾಗಿ ಆನ್ ಲೈನ್ ನೋಂದಣಿ ಅರ್ಜಿಯನ್ನು ಭರ್ತಿ ಮಾಡಬೇಕು. ಅಗತ್ಯ ಮಾಹಿತಿಗಳಾದ ಹೆಸರು, ಫೋನ್ ನಂಬರ್, ಮನೆ ವಿಳಾಸ ಇತ್ಯಾದಿ ವಿವರ ನೀಡಬೇಕು. ದೂರುದಾರರು ಈ ಪೋರ್ಟಲ್ ಗಾಗಿ ಐಡಿ ಹಾಗೂ ಪಾಸ್ ವರ್ಡ್ ಮಾಡಿಕೊಳ್ಳಬೇಕು.

ದೂರು ದಾಖಲಿಸಿ

ದೂರು ದಾಖಲಿಸಿ

ಯಾವುದೇ ಸೇವೆ ಒದಗಿಸುವವರು ಅಥವಾ ಬ್ರ್ಯಾಂಡ್ ವಿರುದ್ಧ ದೂರು ಸಲ್ಲಿಸಬಹುದು. ವೆಬ್ ಪೋರ್ಟಲ್ ಮೆನು ಸೆಕ್ಷನ್ ನಲ್ಲಿ ಎಲ್ಲ ಬ್ರ್ಯಾಂಡ್ ಗಳು, ವಲಯಗಳು, ಸೆಗ್ಮೆಂಟ್ ಇತ್ಯಾದಿಗಳ ವಿವರ ಇವೆ. ದೂರುದಾರರು ತಮ್ಮ ಬಳಿ ಇರುವ ಅಗತ್ಯ ದಾಖಲಾತಿಗಳನ್ನು ಲಗತ್ತಿಸಬೇಕು. ದೂರು ಕೈಗೆತ್ತಿಕೊಳ್ಳುವಾಗ ಪರಿಣಾಮಗಳು ಮತ್ತು ಪರಿಹಾರಗಳ ಬಗ್ಗೆ ಕೂಡ ಸೂಚಿಸಲಾಗುತ್ತದೆ.

ಸ್ಥಿತಿ ಪರಿಶೀಲನೆ ನಡೆಸಿ

ಸ್ಥಿತಿ ಪರಿಶೀಲನೆ ನಡೆಸಿ

ದೂರನ್ನು ಯಶಸ್ವಿಯಾಗಿ ಸಲ್ಲಿಸಿದ ಮೇಲೆ ದೂರುದಾರರಿಗೆ ಎಲೆಕ್ಟ್ರಾನಿಕಲಿ ಜನರೇಟ್ ಆಗಿರುವಂಥ ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಸಮಸ್ಯೆ ಪರಿಹಾರ ಕಾಣುವ ತನಕ ದೂರಿನ ಸ್ಥಿತಿಗತಿ ಏನಾಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಅದೇ ಲಾಗ್ ಇನ್ ಬಳಸಿಕೊಂಡು ಒಬ್ಬರೇ ಹಲವು ದೂರುಗಳನ್ನು ನೀಡಬಹುದು. ದೂರುದಾರರು ಆನ್ ಲೈನ್ ಮೋಡ್ ನಲ್ಲಿ ಸ್ಥಿತಿಗತಿ ಅರಿಯಬಹುದು. ದೂರಿನ ಪ್ರಗತಿ ಪರಿಶೀಲನೆ ಹಾಗೂ ಪರಿಹಾರದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬ್ರ್ಯಾಂಡ್ ಮತ್ತು ಗ್ರಾಹಕರಿಗೆ ಇಬ್ಬರಿಗೂ ಅವಕಾಶ ಇದೆ.

English summary

How To File Consumer Complaint Online?

How to file consumer complaint online in India? Here is the step by step procedure to follow.
Story first published: Thursday, December 31, 2020, 11:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X