For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಟ್ವಿಟ್ಟರ್ ಬ್ಲ್ಯೂ ಟಿಕ್ ಪಡೆಯುವುದು ಹೇಗೆ, ದರ, ಪ್ರಕ್ರಿಯೆ ಮೊದಲಾದ ಮಾಹಿತಿ

|

ಟ್ವಿಟ್ಟರ್‌ನ ಮಾಲೀಕತ್ವವನ್ನು ಎಲಾನ್ ಮಸ್ಕ್ ವಹಿಸಿಕೊಂಡಿದ್ದಾರೆ. ಅದಾದ ಬಳಿಕ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳು ಆಗಿದೆ. ಎಲಾನ್‌ ಮಸ್ಕ್ ಮಾಲೀಕತ್ವದ ಟ್ವಿಟ್ಟರ್ ಯುಎಸ್, ಕೆನಾಡ, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ನಲ್ಲಿ iOS ಬಳಕೆದಾರರಿಗೆ ನವೆಂಬರ್ 5ರಿಂದ ಬ್ಲ್ಯೂ ಟಿಕ್ ಅನ್ನು ಆರಂಭ ಮಾಡಿದೆ. ಸಂಸ್ಥೆಯು ಶೀಘ್ರದಲ್ಲೇ ಭಾರತದಲ್ಲಿಯೂ ಬ್ಲ್ಯೂ ಟಿಕ್ ಆರಂಭ ಮಾಡುವ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಭಾರತೀಯರು ಟ್ವಿಟ್ಟರ್‌ನ ಬ್ಲ್ಯೂ ಟಿಕ್ ವೆರಿಫಿಕೇಷನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.

ಆದರೆ ಸಂಸ್ಥೆ ಬೇರೆ ಬೇರೆ ಬಣ್ಣದ ಟಿಕ್ ಮಾರ್ಕ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಯಾವ ಸಂಸ್ಥೆಯ ಖಾತೆಯನ್ನು ಅಧಿಕೃತ ಅಥವಾ ಟ್ವಿಟ್ಟರ್ ವೆರಿಫೈಡ್ ಖಾತೆಯನ್ನಾಗಿಸಲಾಗುತ್ತದೆಯೋ ಆ ಖಾತೆಯಲ್ಲಿ ಗೋಲ್ಡ್ ಟಿಕ್, ಯಾರು ತಮ್ಮ ಖಾತೆಯನ್ನು ವೆರಿಫೈ ಆಗಿರಿಸಲು ಬಯಸುತ್ತಾರೋ ಅವರ ಖಾತೆಯಲ್ಲಿ ಬ್ಲ್ಯೂ ಟಿಕ್ ಕಾಣಬಹುದು. ಸೆಲೆಬ್ರಿಟಿಗಳ ಖಾತೆಯು ಬ್ಲ್ಯೂ ಟಿಕ್‌ ಆಗಿರುತ್ತದೆ. ಇನ್ನುಳಿದಂತೆ ಗ್ರೇ ಟಿಕ್ ಇರಲಿದೆ. ಇದು ಸರ್ಕಾರದ ಖಾತೆಯನ್ನು ಪ್ರತಿನಿಧಿಸುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಟ್ವಿಟ್ಟರ್ ಖಾತೆಗಳಲ್ಲಿ ನಾವು ಇನ್ಮುಂದೆ ಗ್ರೇ ಟಿಕ್ ಕಾಣಬಹುದು. ಆದರೆ ಸಚಿವರುಗಳು ಕೂಡಾ ಸರ್ಕಾರದ ಭಾಗವಾಗಿರುವುದರಿಂದ ಅವರ ಟ್ವಿಟ್ಟರ್ ಖಾತೆಯಲ್ಲೂ ಗ್ರೇ ಟಿಕ್ ಇರುತ್ತದೆಯೇ ಎಂಬ ಬಗ್ಗೆ ಸ್ಪಷ್ಟಣೆ ದೊರೆತಿಲ್ಲ.

ಐಫೋನ್ ಬಳಕೆದಾರರಿಗೆ ಟ್ವಿಟ್ಟರ್‌ ಬ್ಲ್ಯೂ ಟಿಕ್ ವೆಚ್ಚ ದುಬಾರಿ!ಐಫೋನ್ ಬಳಕೆದಾರರಿಗೆ ಟ್ವಿಟ್ಟರ್‌ ಬ್ಲ್ಯೂ ಟಿಕ್ ವೆಚ್ಚ ದುಬಾರಿ!

ಪ್ರಸ್ತುತ ಟ್ವಿಟ್ಟರ್ ಬ್ಲ್ಯೂ ಟಿಕ್‌ಗೆ ವೆಬ್‌ಗೆ 8 ಡಾಲರ್‌, iOSಗೆ 11 ಡಾಲರ್ ಪಾವತಿ ಮಾಡಬೇಕಾಗುತ್ತದೆ. ಆದರೆ ಭಾರತದಲ್ಲಿ ಈ ಬ್ಲ್ಯೂ ಟಿಕ್ ಅನ್ನು ನಾವು ಪಡೆಯುವುದು ಹೇಗೆ, ಪ್ರಕ್ರಿಯೆ ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ, ಮುಂದೆ ಓದಿ....

 ಬ್ಲ್ಯೂ ಟಿಕ್ ಅರ್ಥವೇನು?

ಬ್ಲ್ಯೂ ಟಿಕ್ ಅರ್ಥವೇನು?

ಸೆಲೆಬ್ರೆಟಿಗಳು, ರಾಜಕಾರಣಿಗಳು, ಪ್ರಮುಖ ವ್ಯಕ್ತಿಗಳಿಗೆ ಟ್ವಿಟ್ಟರ್ ನೀಡುವ ಅಥಂಟಿಫಿಕೇಷನ್ ಬ್ಲ್ಯೂ ಟಿಕ್ ಆಗಿದೆ. ಹಾಗೆಯೇ ಈ ಖಾತೆಯನ್ನು ಟ್ವಿಟ್ಟರ್ ವೆರಿಫೈ ಮಾಡಿದೆ ಎಂಬುವುದಕ್ಕೆ ಈ ಬ್ಲ್ಯೂ ಟಿಕ್ ಸಾಕ್ಷಿಯಾಗಿದೆ. ಈ ಖಾತೆ ಸ್ಪಾಮ್ ಅಲ್ಲ, ನಕಲಿ ಅಲ್ಲ ಎಂಬುವುದಕ್ಕೂ ಇದು ಸಾಕ್ಷಿಯಾಗಿದೆ.

 ವೆರಿಫಿಕೇಷನ್‌ಗೆ ಬೇಕಾದ ದಾಖಲೆ, ಮಾಹಿತಿ

ವೆರಿಫಿಕೇಷನ್‌ಗೆ ಬೇಕಾದ ದಾಖಲೆ, ಮಾಹಿತಿ

ಖಾತೆಯ ಐಡಿ ವೆರಿಫಿಕೇಷನ್‌ಗೆ ಸರ್ಕಾರ ಪ್ರಮಾಣಿತ ದಾಖಲೆಯಾಗಿದೆ. ಅದಕ್ಕೆ ಕೆಲವು ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ. ಒಂದು ಸಂಸ್ಥೆಯ ಖಾತೆಯಾದರೆ ಸಂಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕಾಗುತ್ತದೆ. ಗೂಗಲ್‌ನಲ್ಲಿರುವ, ವಿಕಿಪೀಡಿಯದಲ್ಲಿ ಸಂಸ್ಥೆಯ ಬಗ್ಗೆ ಮಾಹಿತಿ ಇರುವ ಲಿಂಕ್ ಅನ್ನು ನೀಡಬೇಕಾಗುತ್ತದೆ. ಬಳಕೆದಾರರು ಪಬ್ಲಿಕ್ ಅಕೌಂಟ್ ಅನ್ನು ಹೊಂದಿರಬೇಕು. ಹಾಗೆಯೇ ಈ ವೆರಿಫಿಕೇಷನ್‌ಗೂ ಆರು ತಿಂಗಳ ಮುಂದಾದರೂ ಲಾಗಿನ್ ಆಗಿರಬೇಕು. ಹಾಗೆಯೇ ಟ್ವಿಟ್ಟರ್ ನಿಯಮ ಉಲ್ಲಂಘನೆ ಮಾಡಿದ ಕಾರಣ ಖಾತೆ ಲಾಕ್‌ ಆಗಿರಬಾರದು.

 ಬ್ಲ್ಯೂ ಟಿಕ್ ಪಡೆಯುವುದು ಹೇಗೆ?

ಬ್ಲ್ಯೂ ಟಿಕ್ ಪಡೆಯುವುದು ಹೇಗೆ?

* ಖಾತೆಯ ಸೆಟ್ಟಿಂಗ್‌ಗೆ ಹೋಗಿ, Verified ಸೆಕ್ಷನ್‌, request verification ಮೇಲೆ ಕ್ಲಿಕ್ ಮಾಡಿ
* ಪಾಪ್‌ಅಪ್ ವಿಂಡೋ ಮೇಲೆ Start Now ಮೇಲೆ ಕ್ಲಿಕ್ ಮಾಡಿ
* ಖಾತೆಗೆ ಕ್ಯಾಟಗರಿಯನ್ನು ಆಯ್ಕೆ ಮಾಡಿ, ಉದಾಹರಣೆಗೆ ಸಂಸ್ಥೆ, ಬ್ರಾಂಡ್, ಸರ್ಕಾರ, ಮಾಧ್ಯಮ ಸಂಸ್ಥೆ, ಇತರೆ
* ಅಧಿಕೃತ ಇಮೇಲ್ ಐಡಿಯನ್ನು ನಮೂದಿಸಿ, ವೆಬ್‌ಸೈಟ್ ಅನ್ನು ನಮೂದಿಸಿ, ಸರ್ಕಾರ ನೀಡಿರುವ ದಾಖಲೆ ನಮೂದಿಸಿ
* Submit ಮೇಲೆ ಕ್ಲಿಕ್ ಮಾಡಿ

English summary

How to get blue tick verification on Twitter in India, Price, Feature, Process Other Details in Kannada

How to get 'blue tick' verification on Twitter in India, What does ‘blue tick’ means?, price, Feature, Process Other Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X