For Quick Alerts
ALLOW NOTIFICATIONS  
For Daily Alerts

ಅಗ್ಗ ದರದಲ್ಲಿ ಫ್ಲೈಟ್ ಟಿಕೆಟ್ ಪಡೆಯುವುದು ಹೇಗೆ?, ಇಲ್ಲಿದೆ ಟಿಪ್ಸ್

|

ಭಾರತದಲ್ಲಿ ಪ್ರಸ್ತುತ ಮುಂಗಾರು ಆರ್ಭಟ ಅಧಿಕವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜನರು ಪ್ರವಾಸಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಆದರೆ ಪ್ರಸ್ತುತ ಇಂಧನ ದರವು ಹೆಚ್ಚಳವಾಗಿರುವ ಕಾರಣದಿಂದಾಗಿ ಫ್ಲೈಟ್ ಟಿಕೆಟ್ ದರವು ಕೂಡಾ ಭಾರೀ ಅಧಿಕವಾಗಿದೆ.

 

ವಿಮಾನಯಾನದ ಟಿಕೆಟ್ ದರವು ಅಧಿಕವಾಗಿರುವ ಕಾರಣದಿಂದಾಗಿ ನಮ್ಮ ಪ್ರವಾಸದ ವೆಚ್ಚವೂ ಕೂಡಾ ಅಧಿಕವಾಗುತ್ತಿದೆ. ನೀವು ಪ್ರವಾಸದ ವೇಳೆಯಲ್ಲಿ ಎಷ್ಟು ಖರ್ಚು ಕಡಿಮೆ ಮಾಡುತ್ತೀರೋ ಅಷ್ಟು ಒಳ್ಳೆಯದು. ಕಡಿಮೆ ಖರ್ಚು ಮಾಡಿದಷ್ಟು ಆ ಪ್ರವಾಸವು ನಿಮಗೆ ಹಲವಾರು ತಿಂಗಳ ಕಾಲ ಹೊರೆಯಾಗಲಾರದು.

ಆದರೆ ಈ ಇಂಧನ ದರ ಏರಿಕೆಯು ಎಲ್ಲಾ ವಲಯದ ಮೇಲೆ ಪ್ರಭಾವವನ್ನು ಉಂಟು ಮಾಡಿದೆ. ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರದಲ್ಲಿ ಜಾಗತಿಕ ಕಚ್ಚಾ ತೈಲ ದರವು ಭಾರೀ ಏರಿಕೆಯಾಗಿದ್ದು, ಹಲವಾರು ದೇಶದಲ್ಲಿ ಇಂಧನ ದರದ ಮೇಲೆ ಪ್ರಭಾವ ಉಂಟು ಮಾಡಿದೆ. ಭಾರತದಲ್ಲೂ ಇಂಧನ ದರವು ಭಾರೀ ಹೆಚ್ಚಳವಾಗಿದೆ. ಈ ದುಬಾರಿ ದುನಿಯಾದ ನಡುವೆಯೂ ನಾವು ಫ್ಲೈಟ್ ಟಿಕೆಟ್ ಅನ್ನು ಅಗ್ಗ ದರದಲ್ಲಿ ಪಡೆಯವುದು ಹೇಗೆ ಎಂಬ ಬಗ್ಗೆ ಐದು ಟಿಪ್ಸ್ ಇಲ್ಲಿದೆ, ಮುಂದೆ ಓದಿ...

 ಕುಕ್ಕೀಸ್ ಡಿಲೀಟ್/ಖಾಸಗಿ ಬ್ರೌಸಿಂಗ್ ಆಯ್ಕೆ

ಕುಕ್ಕೀಸ್ ಡಿಲೀಟ್/ಖಾಸಗಿ ಬ್ರೌಸಿಂಗ್ ಆಯ್ಕೆ

ನಿಮ್ಮ ಬ್ರೌಸರ್ ಮೂಲಕ ನೀವು ಫ್ಲೈಟ್‌ಗಳು ಅಥವಾ ಏರ್ ಟಿಕೆಟ್‌ಗಳನ್ನು ಹುಡುಕಿದಾಗಲೆಲ್ಲಾ, ಕುಕೀಗಳು ಎಂದು ಕರೆಯಲ್ಪಡುವ ಡಿಜಿಟಲ್ ಟ್ರ್ಯಾಕರ್‌ಗಳು ಆ ಮಾಹಿತಿಯನ್ನು ಸಂಗ್ರಹಿಸುತ್ತವೆ. ನೀವು ಮತ್ತೆ ಎಂದಾದರೂ ಅದೇ ಫ್ಲೈಟ್‌ನ ಬಗ್ಗೆ ಮಾಹಿತಿಯನ್ನು ಹುಡುಕಿದಾಗ, ಟಿಕೆಟ್ ಬೆಲೆ ಅಧಿಕವಾಗುತ್ತದೆ. ಟಿಕೆಟ್ ದರದಲ್ಲಿ ಈ ಏರಿಕೆಯನ್ನು ತಡೆಯಬೇಕಾದರೆ ನೀವು ಖಾಸಗಿ ಬ್ರೌಸಿಂಗ್ ಸೆಷನ್‌ಗಳನ್ನು ಬಳಸಿ (ಉದಾ. Chrome ನಲ್ಲಿ incognito browsing) ಅಥವಾ ಪ್ರತಿ ಬ್ರೌಸಿಂಗ್ ಬಳಿಕ ಕುಕ್ಕೀಸ್ (cookies) ಡಿಲೀಟ್ ಮಾಡಿ.

 ಸಮಯ, ದಿನಾಂಕ ವಿಚಾರದಲ್ಲಿ ಫ್ಲೆಕ್ಸಿಬಾಲಿಟಿ

ಸಮಯ, ದಿನಾಂಕ ವಿಚಾರದಲ್ಲಿ ಫ್ಲೆಕ್ಸಿಬಾಲಿಟಿ

ನಾವು ಕಡಿಮೆ ಅಥವಾ ಅಗ್ಗ ದರದಲ್ಲಿ ವಿಮಾನ ಟಿಕೆಟ್ ಪಡೆಯಬೇಕಾದರೆ ನೀವು ದಿನಾಂಕ ಅಥವಾ ಸಮಯವನ್ನು ಬದಲಾವಣೆ ಮಾಡಿಕೊಳ್ಳಬಹುದು. ಇದರಿಂದಾಗಿ ನಿಮಗೆ ಡಿಸ್ಕೌಂಟ್ ಪಡೆಯಲು ಸಾಧ್ಯವಾಗಲಿದೆ. ನೀವು ಫ್ಲೈಟ್ ಟಿಕೆಟ್ ಅನ್ನು ಬುಕ್ ಮಾಡುವ ಸಂದರ್ಭದಲ್ಲಿ ಫ್ಲೈಟ್ ಟಿಕೆಟ್‌ನ ದರವನ್ನು ಎರಡು ಮೂರು ದಿನಗಳ ಕಾಲ ಪರಿಶೀಲನೆ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ನಿಮಗೆ ಅಗ್ಗ ದರದಲ್ಲಿ ವಿಮಾನ ಟಿಕೆಟ್ ಲಭ್ಯವಾಗಲಿದೆ. ನೀವು ಯಾವ ದಿನ ಹೋಗಬೇಕು ಎಂಬುವುದು ಮೊದಲೇ ಫಿಕ್ಸ್ ಆಗಿದ್ದರೆ, ಸಮಯದಲ್ಲಾದರೂ ಫ್ಲೆಕ್ಸಿಬಾಲಿಟಿ ಕಾಪಾಡಿಕೊಳ್ಳಿ. ಆಗ ನಿಮಗೆ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಾಗುವ ಸಾಧ್ಯತೆ ಇರುತ್ತದೆ.

 ರಿಯಾಯಿತಿ ಬಳಕೆ ಮಾಡಿಕೊಳ್ಳಿ
 

ರಿಯಾಯಿತಿ ಬಳಕೆ ಮಾಡಿಕೊಳ್ಳಿ

ನೀವು ಪ್ರೀಮಿಯ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದರೂ ಕೂಡಾ ಅಗ್ಗಕ್ಕೆ ಟಿಕೆಟ್ ಅನ್ನು ಪಡೆಯಬಹುದು. ಹಲವಾರು ಮಂದಿ ಪ್ರೀಮಿಯ ಕ್ರೆಡಿಟ್ ಕಾರ್ಡ್ ಹೊಂದಲು ಪ್ರಮುಖ ಕಾರಣ ಏರ್‌ಲೈನ್‌ಗಳು ಅಥವಾ ಸಂಸ್ಥೆಗಳು ಪ್ರಮುಖ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ ದೊಡ್ಡ ರಿಯಾಯಿತಿಗಳನ್ನು ನೀಡುತ್ತವೆ. ಇನ್ನು ಕೆಲವು ಕ್ರೆಡಿಟ್ ಕಾರ್ಡ್‌ ಅನ್ನು ಟಿಕೆಟ್ ವೆಚ್ಚ ಪಾವತಿ ಮಾಡಲು ಬಳಕೆ ಮಾಡಿದರೆ ನಿಮಗೆ ಬಹುಮಾನ ಕೂಡಾ ಲಭ್ಯವಾಗಬಹುದು. ನೀವು ಈ ಬಹುಮಾನವನ್ನು ಕ್ರೆಡಿಟ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದು. ನೀವು ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿರುವ ಆಫರ್‌ಗಳನ್ನು ಪರಿಶೀಲನೆ ಮಾಡುವುದು ಉತ್ತಮ.

 ಫ್ಲೈಟ್ ಟಿಕೆಟ್ ಟ್ರ್ಯಾಕರ್ ಬಳಕೆಯೂ ಉತ್ತಮ

ಫ್ಲೈಟ್ ಟಿಕೆಟ್ ಟ್ರ್ಯಾಕರ್ ಬಳಕೆಯೂ ಉತ್ತಮ

ನೀವು ಫ್ಲೈಟ್ ಟಿಕೆಟ್ ಟ್ರ್ಯಾಕರ್ ಅನ್ನು ಕೂಡಾ ಬಳಕೆ ಮಾಡಿ ಅಗ್ಗ ದರದಲ್ಲಿ ಟಿಕೆಟ್ ಅನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಈ ಟ್ರ್ಯಾಕರ್ ಬಳಕೆ ಮಾಡಿದರೆ, ನಿಮ್ಮ ಏರ್ ಟಿಕೆಟ್ ಬೆಲೆಯು ತೀವ್ರ ಇಳಿಕೆಯಾದ ಸಂದರ್ಭದಲ್ಲಿ ನಿಮಗೆ ಅಲರ್ಟ್ ಬರಲಿದೆ. ನೀವು ಈ ಟ್ರ್ಯಾಕರ್‌ನಲ್ಲಿ ಫ್ಲೈಟ್ ದಿನಾಂಕ, ಸ್ಥಳ ಎಲ್ಲಾ ವಿವರವನ್ನು ಕೂಡಾ ಪಡೆಯಲು ಸಾಧ್ಯವಾಗಲಿದೆ.

 ಪ್ರಚಾರ ವ್ಯವಹಾರದ ಬಗ್ಗೆ ಇರಲಿ ಮಾಹಿತಿ

ಪ್ರಚಾರ ವ್ಯವಹಾರದ ಬಗ್ಗೆ ಇರಲಿ ಮಾಹಿತಿ

ಏರ್‌ಲೈನ್‌ಗಳು ಸಾಮಾನ್ಯವಾಗಿ ವರ್ಷವಿಡೀ ಪ್ರಚಾರದ ವ್ಯವಹಾರಗಳು ನಡೆಸುತ್ತದೆ ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಏರ್‌ಲೈನ್‌ಗಳನ್ನು ಫಾಲೋ ಮಾಡುವ ಮೂಲಕ ಅಥವಾ ಆ ಸಂಸ್ಥೆಯ ಸುದ್ದಿಯನ್ನು ಓದುವ ಮೂಲಕ ನಾವು ಈ ಪ್ರಚಾರದ ವ್ಯವಹಾರಗಳು ಯಾವಾಗ ಪ್ರಾರಂಭವಾಗುತ್ತವೆ, ಅಗ್ಗದ ದರದಲ್ಲಿ ಟಿಕೆಟ್ ಯಾವಾಗ ಲಭ್ಯವಾಗಲಿದೆ ಎಂದು ನೋಡಿಕೊಳ್ಳಬಹುದು.

English summary

How To Get Cheaper Flight Tickets, Here are the Tips in Kannada

Here are the tips and tricks to Get Cheaper Flight Tickets in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X