For Quick Alerts
ALLOW NOTIFICATIONS  
For Daily Alerts

ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್; ತಿಳಿದಿರಲೇಬೇಕಾದ 5 ಸಂಗತಿಗಳು

|

ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಯಲು ಕಳೆದ 75 ದಿನಗಳಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವಾಲಯವು ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್‌ನ್ನು ಲಿಂಕ್ ಮಾಡಲು ಹತ್ತನೇ ಬಾರಿಗೆ ಗಡುವನ್ನು ವಿಸ್ತರಿಸಿದೆ.

ಪ್ಯಾನ್ ಕಾರ್ಡ್‌ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕವಾಗಿದೆ. ಹೊಸ ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ ಮಾತ್ರವಲ್ಲದೆ ಆದಾಯ ತೆರಿಗೆ ರಿಟರ್ನ್ಸ (ITR) ಸಲ್ಲಿಸಲೂ ಕಡ್ಡಾಯವಾಗಿದೆ.

ತಮಿಳುನಾಡಿನ ಸಲೂನ್‌ಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ!ತಮಿಳುನಾಡಿನ ಸಲೂನ್‌ಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ!

ಪ್ಯಾನ್‌ ಕಾರ್ಡ್‌ನೊಂದಿಗೆ ಆಧಾರ್‌ ಕಾರ್ಡ್‌ನ್ನು ಲಿಂಕ್ ಮಾಡಲು ಬಹುಮುಖ್ಯವಾಗಿ ತಿಳಿದಿರಲೇಬೇಕಾದ ಐದು ಸಂಗತಿಗಳು ಇಲ್ಲಿವೆ.....

567678 ಅಥವಾ 56161 ಸಂದೇಶ ಕಳಿಸಬೇಕು

567678 ಅಥವಾ 56161 ಸಂದೇಶ ಕಳಿಸಬೇಕು

ಆದಾಯ ತೆರಿಗೆ ಇಲಾಖೆ ನೀಡುವ ಶಾಶ್ವತ ಖಾತೆ ಸಂಖ್ಯೆಯನ್ನು ಇ-ಫೈಲಿಂಗ್ ಪೋರ್ಟಲ್ ಮೂಲಕ 12-ಅಂಕಿಯ ಆಧಾರ್ ನಂಬರ್‌ನೊಂದಗೆ ಲಿಂಕ್ ಮಾಡುವುದು ಈಗ ಸುಲಭ. ಎರಡೂ ಗುರುತಿನ ದಾಖಲೆಗಳನ್ನು ಲಿಂಕ್ ಮಾಡಲು SMS to 567678 ಅಥವಾ 56161 ಸಂದೇಶ ಕಳಿಸಬೇಕು; ಉದಾಹರಣೆಗೆ UIDPAN12digit Aadhaar>10digitPAN>

ಆಫ್‌ಲೈನ್‌ನಲ್ಲಿ ಹೇಗೆ

ಆಫ್‌ಲೈನ್‌ನಲ್ಲಿ ಹೇಗೆ

ಪ್ಯಾನ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲು ಅನುಕೂಲ ಇಲ್ಲದವರು ಅದನ್ನು ಆಫ್‌ಲೈನ್‌ನಲ್ಲಿ ಹಾಗೂ ಎನ್‌ಎಸ್‌ಡಿಎಲ್ ಮತ್ತು ಯುಟಿಐಟಿಎಸ್‌ಎಲ್‌ನ ಪ್ಯಾನ್ ಸೇವಾ ಕೇಂದ್ರಗಳ ಮೂಲಕವೂ ಮಾಡಬಹುದು.

ಲಿಂಕ್ ಮಾಡದಿದ್ದರೆ ನಿಷ್ಕ್ರಿಯ
 

ಲಿಂಕ್ ಮಾಡದಿದ್ದರೆ ನಿಷ್ಕ್ರಿಯ

ಜೂನ್ 30 ರ ಗಡುವಿನೊಳಗೆ ಆಧಾರ್‌ಗೆ ಪ್ಯಾನ್ ಕಾರ್ಡ್ ಸಂಪರ್ಕ ಹೊಂದಿರದಿದ್ದರೆ, ನಿಮ್ಮ ಪ್ಯಾನ್ ಅನ್ನು ಆದಾಯ ತೆರಿಗೆ ಇಲಾಖೆಯು ನಿಷ್ಕ್ರಿಯ ಎಂದು ಘೋಷಿಸುವ ಸಾಧ್ಯತೆಯಿದೆ. ಇದರರ್ಥ ನೀವು ಇನ್ನು ಮುಂದೆ ಐಟಿಆರ್ ಅಥವಾ ಬ್ಯಾಂಕ್ ಖಾತೆಗಳನ್ನು ತೆರೆಯಲು ಪ್ಯಾನ್ನ್ನು ಬಳಸಲು ಸಾಧ್ಯವಾಗುವುದಿಲ್ಲ.

10,000 ರುಪಾಯಿ ದಂಡ ವಿಧಿಸಬಹುದು

10,000 ರುಪಾಯಿ ದಂಡ ವಿಧಿಸಬಹುದು

ನಿಷ್ಕ್ರಿಯ ಪ್ಯಾನ್ ನಂಬರ್‌ನ್ನು ಬಳಸುವುದರಿಂದ ತೆರಿಗೆ ಇಲಾಖೆ 10,000 ರುಪಾಯಿ ದಂಡ ವಿಧಿಸಬಹುದು. ಏಕೆಂದರೆ ಇದು ಪ್ಯಾನ್ ಆದಾಯ ತೆರಿಗೆ ರಿಟರ್ನ್‌ಗೆ ಪ್ಯಾನ್‌ ನಂಬರ್‌ನ್ನು ಒದಗಿಸದಿದ್ದಕ್ಕೆ ಸಮನಾಗಿರುತ್ತದೆ. ಪ್ಯಾನ್ ನಂಬರ್ ಸಲ್ಲಿಸುವುದು ಐಟಿ ಕಾಯಿದೆಯ ಸೆಕ್ಷನ್ 139 ಎ ಪ್ರಕಾರ ಕಡ್ಡಾಯವಾಗಿದೆ.

ಅನಿವಾಸಿ ಭಾರತೀಯರಿಗೆ ಅನ್ವಯಿಸುವುದಿಲ್ಲ

ಅನಿವಾಸಿ ಭಾರತೀಯರಿಗೆ ಅನ್ವಯಿಸುವುದಿಲ್ಲ

ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಅವಶ್ಯಕತೆ ಅನಿವಾಸಿ ಭಾರತೀಯರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ, ಒಂದು ಎನ್ಆರ್ಐಗೆ ಕೆಲವು ಹಣಕಾಸಿನ ವಹಿವಾಟುಗಳನ್ನು ನಡೆಸಲು ಆಧಾರ್ ಅಗತ್ಯವಿರುತ್ತದೆ ಮತ್ತು ಅವರು ಅದಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.ಅನಿವಾಸಿ ಭಾರತೀಯರಿಗೆ ಅನ್ವಯಿಸುವುದಿಲ್ಲ

English summary

How To Link Aadhaar To PAN Card: Here The 5 Things To Know

How To Link Aadhaar To PAN Card: Here The Things To Know. June 30th is last date for Linking the Aadhaar.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X