ಆನ್‌ಲೈನ್‌ನಲ್ಲಿ ಎಸ್‌ಬಿಐ ಉಳಿತಾಯ ಖಾತೆ ತೆರೆಯುವುದು ಹೇಗೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿದೆ. ಪ್ರಸ್ತುತ ಈ ಡಿಜಿಟಲ್ ಯುಗದ ತಂತ್ರಜ್ಞಾನವನ್ನು ಎಸ್‌ಬಿಐ ಕೂಡಾ ಅಳವಡಿಸಿಕೊಂಡಿದೆ. ಈ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಯ ಬಳಿಕ ನಾವು ಸ್ಥಳೀಯ ಬ್ರಾಂಚ್‌ಗಳಿಗೆ ಭೇಟಿ ನೀಡದೆಯೇ ಖಾತೆಯನ್ನು ತೆರೆಯಲು ಸಾಧ್ಯವಾಗಲಿದೆ.
ನಾವು ಪ್ರಸ್ತುತ ಯಾವುದೇ ಎಸ್‌ಬಿಐ ಬ್ರಾಂಚ್‌ಗಳಿಗೆ ಭೇಟಿ ನೀಡದೆ, ಯಾವುದೇ ದಾಖಲೆ ನೀಡದೆಯೇ, ದಾಖಲೆಗಳನ್ನು ಭರ್ತಿ ಮಾಡದೆಯೇ ಆನ್‌ಲೈನ್‌ನಲ್ಲಿ ಎಸ್‌ಬಿಐ ಡಿಜಿಟಲ್ ಸೇವಿಂಗ್ಸ್ ಅಕೌಂಟ್ ಅನ್ನು ತೆರೆಯಲು ಸಾಧ್ಯವಾಗಲಿದೆ. ಈಗ ಯೋನೋ ಆಪ್ ಬಳಕೆ ಮಾಡಿಕೊಂಡು ಎಸ್‌ಬಿಐ ಡಿಜಿಟಲ್ ಸೇವಿಂಗ್ಸ್ ಖಾತೆಯನ್ನು ತೆರೆಯಲು ಸಾಧ್ಯವಾಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್‌ಬಿಐ, "ನೀವು ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಸಾಧ್ಯವಾಗಲಿದೆ. ಯೋನೋ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ, ಖಾತೆ ತೆರೆಯುವ ಪ್ರಕ್ರಿಯೆ ಆರಂಭ ಮಾಡಿ," ಎಂದು ತಿಳಿಸಿದೆ.

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಾವು ಡಿಜಿಟಲ್ ಉಳಿತಾಯ ಖಾತೆಯನ್ನು ತೆರೆಯುವುದರಿಂದ ಹಲವಾರು ಪ್ರಯೋಜನಗಳು ಇದೆ. ಪ್ರಮುಖವಾಗಿ ಈ ಎಲ್ಲ ಪ್ರಕ್ರಿಯೆ ಕಾಗದರಹಿತವಾಗಿರುವುದರಿಂದಾಗಿ ದೂರದಲ್ಲಿದ್ದು ತಮ್ಮ ಊರಿನಲ್ಲಿನ ಬ್ರಾಂಚ್‌ನಲ್ಲಿ ಖಾತೆ ತೆರೆಯುವವರಿಗೆ ಸಹಕಾರಿಯಾಗಲಿದೆ. ಒಟಿಪಿ ಮೂಲಕ ದೃಢೀಕರಣ ಮಾಡುವುದರಿಂದಾಗಿ ಸುರಕ್ಷಿತವಾಗಿದೆ. ಖಾತೆ ತೆರೆಯಲು ವಿಡಿಯೋ ಕೆವೈಸಿ ಮಾಡಲಾಗುತ್ತದೆ.
ಎಸ್‌ಬಿಐ ಡಿಜಿಟಲ್ ಉಳಿತಾಯ ಖಾತೆ ತೆರೆಯುವುದು ಹೇಗೆ?
ಹಂತ 1: ಎಸ್‌ಬಿಐ ಯೋನೋ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಖಾತೆ ತೆರೆಯುವ ಸೆಕ್ಷನ್ ಆಯ್ಕೆ ಮಾಡಿ
ಹಂತ 2: Digital Savings Account ಆಯ್ಕೆ ಮಾಡಿಕೊಳ್ಳಿ, Apply Now ಕ್ಲಿಕ್ ಮಾಡಿ
ಹಂತ 3: Open with Aadhaar using e-KYC (Biometric Authentication) ಆಯ್ಕೆ ಮಾಡಿಕೊಳ್ಳಿ
ಹಂತ 4: ಇಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಹಾಕಿ
ಹಂತ 5: ಪ್ಯಾನ್ ನಂಬರ್ ಹಾಕಿ, ಒಟಿಪಿ ಪ್ರಕ್ರಿಯೆ ಪೂರ್ಣಗೊಳಿಸಿ, ಡಿಕ್ಲೆರೇಷನ್ ಸಮ್ಮತಿಸಿ
ಹಂತ 6: ಮಾಹಿತಿಯನ್ನು ಹಾಕಿ ನಿಮ್ಮ ಸೆಲ್ಫಿಯನ್ನು ತೆಗೆದುಕೊಳ್ಳಿ
ಹಂತ 7: ವಾರ್ಷಿಕ ಆದಾಯ, ಶೈಕ್ಷಣಿಕ ಮಾಹಿತಿ, ಧರ್ಮ, ತಂದೆ-ತಾಯಿ ಮಾಹಿತಿ, ಉದ್ಯೋಗ, ನಾಮಿನಿ ಮಾಹಿತಿ ಉಲ್ಲೇಖ ಮಾಡಿ
ಹಂತ 8: ಕಾರ್ಡ್ ವಿಧ, ಡಿಜಿಟಲ್ ಉಳಿತಾಯ ಖಾತೆಯಲ್ಲಿ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ
ಹಂತ 9: ಷರತ್ತು, ನಿಯಮವನ್ನು ಒಪ್ಪಿಕೊಂಡ ಬಳಿಕ, ಒಟಿಪಿ ವೆರಿಫಿಕೇಷನ್ ಆದರೆ ಎಲ್ಲ ಪ್ರಕ್ರಿಯೆ ಪೂರ್ಣವಾಗಲಿದೆ