For Quick Alerts
ALLOW NOTIFICATIONS  
For Daily Alerts

SBI Positive Pay: ಎಸ್‌ಬಿಐ ನೆಟ್‌ ಬ್ಯಾಂಕಿಂಗ್‌ನಲ್ಲಿ ಅಧಿಕ ಮೊತ್ತದ ಚೆಕ್ ಸಲ್ಲಿಸುವುದು ಹೇಗೆ?

|

ಐದು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಅಧಿಕ ಮೌಲ್ಯದ ಚೆಕ್ ವಹಿವಾಟಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪಾಸಿಟಿವ್ ಪೇ ಸಿಸ್ಟಮ್ ಅನ್ನು ಜಾರಿಗೆ ತಂದಿದೆ. ಆಗಸ್ಟ್ 1ರಿಂದ ಚೆಕ್ ಕ್ಲಿಯರೆನ್ಸ್ ಸಿಸ್ಟಮ್ ಆರಂಭವಾಗಿದೆ.

ಚೆಕ್‌ನಲ್ಲಿ ಅಕ್ರಮ ಅಥವಾ ವಂಚನೆ ನಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ಈ ಪಾಸಿಟಿವ್‌ ಪೇ ಸಿಸ್ಟಮ್ ಅನ್ನು ಹಲವಾರು ಬ್ಯಾಂಕುಗಳು ಅಳವಡಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೂಡಾ ಈ ಪಾಸಿಟಿವ್ ಪೇ ಸಿಸ್ಟಮ್ ಅನ್ನು ಅಳವಡಿಸಿಕೊಂಡಿದೆ. ಐದು ಲಕ್ಷ ಅಥವಾ ಅದಕ್ಕಿಂತ ಅಧಿಕ ಮೊತ್ತದ ಚೆಕ್ ಅನ್ನು ನಗದು ರೂಪದಲ್ಲಿ ಪಡೆಯುವ ಸಂದರ್ಭದಲ್ಲಿ ಗ್ರಾಹಕರು ಈ ಪಾಸಿಟಿವ್ ಪೇ ಸಿಸ್ಟಮ್ ಅನ್ನು ಪಾಲಿಸಬೇಕಾಗಿದೆ.

ಎಸ್‌ಬಿಐ ಪ್ರೊಫೈಲ್ ಪಾಸ್‌ವರ್ಡ್ ಮರೆತಿದ್ದೀರಾ, ಹೀಗೆ ರಿಸೆಟ್ ಮಾಡಿಎಸ್‌ಬಿಐ ಪ್ರೊಫೈಲ್ ಪಾಸ್‌ವರ್ಡ್ ಮರೆತಿದ್ದೀರಾ, ಹೀಗೆ ರಿಸೆಟ್ ಮಾಡಿ

ಹೊಸ ನಿಯಮದ ಪ್ರಕಾರ ಹಣವನ್ನು ಚೆಕ್ ಮೂಲಕ ವಿತ್‌ಡ್ರಾ ಮಾಡಲಾಗುವ ಬ್ಯಾಂಕ್‌ನ ಮಾಹಿತಿಯನ್ನು ನೀಡಬೇಕಾಗುತ್ತದೆ. ಈ ಮಾಹಿತಿಯನ್ನು ಎಸ್‌ಎಂಎಸ್, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಮೊದಲಾದವುಗಳ ಮೂಲಕ ನೀಡಬೇಕಾಗಿದೆ. ಹಣವನ್ನು ಪಡೆಯುವ ವ್ಯಕ್ತಿಯ ಹೆಸರು, ದಿನಾಂಕವು ಕೂಡಾ ಉಲ್ಲೇಖ ಮಾಡಬೇಕಾಗುತ್ತದೆ. ಈ ವಹಿವಾಟನ್ನು ಪ್ರೋಸೆಸಿಂಗ್ ಮಾಡುವ ಸಂದರ್ಭದಲ್ಲಿ ಮಾಹಿತಿಯನ್ನು ಮತ್ತೆ ಪರಿಶೀಲನೆ ಮಾಡಲಾಗುತ್ತದೆ. ಎಸ್‌ಬಿಐನ ಅಧಿಕ ಮೊತ್ತದ ಚೆಕ್ ಅನ್ನು ನಾವು ಹೇಗೆ ಸಲ್ಲಿಕೆ ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಮೊದಲು ರಿಜಿಸ್ಟ್ರೇಷನ್ ಮಾಡಿಕೊಳ್ಳಿ

ಮೊದಲು ರಿಜಿಸ್ಟ್ರೇಷನ್ ಮಾಡಿಕೊಳ್ಳಿ

ನೀವು ಅಧಿಕ ಮೊತ್ತದ ಚೆಕ್‌ನ ವಹಿವಾಟು ನಡೆಸುವ ಸಂದರ್ಭದಲ್ಲಿ ಪಾಸಿಟಿವ್ ಪೇ ಸಿಸ್ಟಮ್ ಮೂಲಕ ವಹಿವಾಟು ನಡೆಸಲು ಮೊದಲು ಬ್ಯಾಂಕ್‌ನಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ರಿಜಿಸ್ಟ್ರೇಷನ್‌ಗೆ ಹಲವಾರು ವಿಧಾನಗಳು ಲಭ್ಯವಿದೆ. ಮೊಬೈಲ್ ಬ್ಯಾಂಕಿಂಗ್ (ಯೋನೋ ಲೈಟ್), ರಿಟೇಲ್ ಇಂಟರ್‌ನೆಟ್ ಬ್ಯಾಂಕಿಂಗ್ (ಆರ್‌ಐಎನ್‌ಬಿ), ಕಾರ್ಪೋರೇಟ್ ಇಂಟರ್‌ನೆಟ್ ಬ್ಯಾಂಕಿಂಗ್ (ಸಿಐಎನ್‌ಬಿ), ಯೋನೋ (ಮೊಬೈಲ್ ಆಪ್) ಮೂಲಕ ನೀವು ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.

ಆನ್‌ಲೈನ್‌ನಲ್ಲಿ ಎಸ್‌ಬಿಐ ಉಳಿತಾಯ ಖಾತೆ ತೆರೆಯುವುದು ಹೇಗೆ?ಆನ್‌ಲೈನ್‌ನಲ್ಲಿ ಎಸ್‌ಬಿಐ ಉಳಿತಾಯ ಖಾತೆ ತೆರೆಯುವುದು ಹೇಗೆ?

 ಎಸ್‌ಬಿಐ ಪಾಸಿಟಿವ್ ಪೇ ಅನ್ನು ಯೋನೋ ಆಪ್‌ನಲ್ಲಿ ಮಾಡಿ

ಎಸ್‌ಬಿಐ ಪಾಸಿಟಿವ್ ಪೇ ಅನ್ನು ಯೋನೋ ಆಪ್‌ನಲ್ಲಿ ಮಾಡಿ

ಹಂತ 1: ಯೋನೋ ಎಸ್‌ಬಿಐ ಲೈಟ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ ಲಾಗಿನ್ ಆಗಿ
ಹಂತ 2: ಮೆನುವಿನಲ್ಲಿ ಕಾಣುವ Service ಮೇಲೆ ಕ್ಲಿಕ್ ಮಾಡಿ
ಹಂತ 3: ಬಳಿಕ Positive Pay System ಮೇಲೆ ಕ್ಲಿಕ್ ಮಾಡಿ
ಹಂತ 4: ಅದಾದ ನಂತರ Cheque Lodgement Details ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ಖಾತೆಯ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ
ಹಂತ 6: ಚೆಕ್‌, ಚೆಕ್ ನೀಡಿದ ದಿನಾಂಕ, ಮೊತ್ತದಂತಹ ಅಗತ್ಯ ಮಾಹಿತಿಯನ್ನು ಉಲ್ಲೇಖ ಮಾಡಿ
ಹಂತ 7: ಎಲ್ಲ ಮಾಹಿತಿ ಉಲ್ಲೇಖ submit ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ

 ಮೊಬೈಲ್ ಬ್ಯಾಂಕಿಂಗ್ ಮೂಲಕ ಎಸ್‌ಬಿಐ ಪಾಸಿಟಿವ್‌ ಪೇ

ಮೊಬೈಲ್ ಬ್ಯಾಂಕಿಂಗ್ ಮೂಲಕ ಎಸ್‌ಬಿಐ ಪಾಸಿಟಿವ್‌ ಪೇ

ಮೊಬೈಲ್ ಬ್ಯಾಂಕಿಂಗ್ ಮೂಲಕ ಎಸ್‌ಬಿಐ ಪಾಸಿಟಿವ್‌ ಪೇ ಮಾಡಬೇಕಾದರೆ ಪ್ರಮುಖವಾಗಿ ಎರಡು ಅಂಶಗಳನ್ನು ಪಾಲನೆ ಮಾಡಬೇಕಾಗುತ್ತದೆ. ಚೆಕ್‌ ಸಂಖ್ಯೆ, ಎಷ್ಟು ಮೊತ್ತ ಎಂಬ ಮಾಹಿತಿ ಬೇಕಾಗುತ್ತದೆ. ಫಲಾನುಭವಿಗಳ ಹೆಸರು ಇಮೇಲ್ ಐಡಿ ಕೂಡಾ ಬೇಕಾಗುತ್ತದೆ. ಫಲಾನುಭವಿಗಳ ಹೆಸರು ಇಮೇಲ್ ಐಡಿಯನ್ನು +917208933145 ಕ್ಕೆ ಮೆಸೇಜ್ ಮಾಡಿ. ಈ ಮೆಸೇಜ್ DDMMYYYYY/N ಮಾದರಿಯಲ್ಲಿ ಇರಬೇಕಾಗುತ್ತದೆ. ಎಸ್‌ಬಿಐ ಕ್ವಿಕ್ ಸೇವೆಗೆ ರಿಜಿಸ್ಟರ್ ಆಗುವವರು ಮಾತ್ರ ಈ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ.

 ಎಸ್‌ಬಿಐ ನೆಟ್‌ ಬ್ಯಾಂಕಿಂಗ್ ಮೂಲಕ ಪಾಸಿಟಿವ್ ಪೇ ಸಲ್ಲಿಕೆ

ಎಸ್‌ಬಿಐ ನೆಟ್‌ ಬ್ಯಾಂಕಿಂಗ್ ಮೂಲಕ ಪಾಸಿಟಿವ್ ಪೇ ಸಲ್ಲಿಕೆ

ಹಂತ 1: ನೆಟ್ ಬ್ಯಾಂಕಿಂಗ್‌ನಲ್ಲಿ ಸೈನ್‌ ಅಪ್ ಆಗಿ
ಹಂತ 2: Cheque Book Servicesನಲ್ಲಿ Positive Pay Services ಆಯ್ಕೆ ಮಾಡಿಕೊಳ್ಳಿ
ಹಂತ 3: ಚೆಕ್‌, ಚೆಕ್ ನೀಡಿದ ದಿನಾಂಕ, ಮೊತ್ತದಂತಹ ಅಗತ್ಯ ಮಾಹಿತಿಯನ್ನು ಉಲ್ಲೇಖ ಮಾಡಿ
ಹಂತ 4: ಕೊನೆಯಲ್ಲಿ ಇದನ್ನು ಸಲ್ಲಿಕೆ ಮಾಡಿ

ನಿಮ್ಮ ಮಾಹಿತಿಯನ್ನು ಪಾಸಿಟಿವ್ ಪೇ ಸೈಟ್‌ನಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಬಳಿಕ ಪ್ರಕ್ರಿಯೆ ಪೂರ್ಣವಾಗಲಿದೆ.

 

English summary

How to Submit a High-value Cheque at a SBI Branch or via net banking, Details in Kannada

For cheques worth Rs. 5 lakh or above, the RBI previously implemented a Positive Pay System. How to Submit a High-value Cheque at a SBI Branch or via net banking, Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X