For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಬಡ್ಡಿದರ ಶೇ.7.25ಕ್ಕೆ ಏರಿಸಿದೆ ಈ ಬ್ಯಾಂಕ್!

|

ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ನೂತನ ಬಡ್ಡಿದರವು ಅಕ್ಟೋಬರ್ 10, 2022ರಿಂದಲೇ ಜಾರಿಗೆ ಬಂದಿದೆ.

 

ದೇಶದಲ್ಲಿ ಹಾಗೂ ಜಾಗತಿಕವಾಗಿ ಹಣದುಬ್ಬರ ದರವು ಏರಿಕೆಯಾಗುತ್ತಿದೆ. ಈ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಹೆಚ್ಚಳ ಮಾಡಿದೆ. ಸಾಮಾನ್ಯವಾಗಿ ಆರ್‌ಬಿಐ ದರ ಬದಲಾವಣೆ ಮಾಡಿದರೆ ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡುತ್ತದೆ. ಅದರಂತೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಫ್‌ಡಿ ಬಡ್ಡಿದರವನ್ನು ಹೆಚ್ಚಿಸಿದೆ.

ಸೆಪ್ಟೆಂಬರ್ 30ರಂದು ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದೆ. ಇದರಿಂದಾಗಿ ರೆಪೋ ದರವು ಶೇಕಡ 5.90ಕ್ಕೆ ತಲುಪಿದೆ. ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದಾಗಿನಿಂದ ಅನೇಕ ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಫ್‌ಡಿ ಬಡ್ಡಿದರ ಹೆಚ್ಚಿಸುತ್ತಿದೆ. ನೂತನ ಬಡ್ಡಿದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಎಫ್‌ಡಿ ಬಡ್ಡಿದರ ಶೇ.7.25ಕ್ಕೆ ಏರಿಸಿದೆ ಈ ಬ್ಯಾಂಕ್!

2 ಕೋಟಿಗಿಂತ ಕಡಿಮೆ ಎಫ್‌ಡಿ ಬಡ್ಡಿದರ

* 7-29 ದಿನಗಳ ಎಫ್‌ಡಿ, ಶೇಕಡ 3.50 ಬಡ್ಡಿದರ
* 30-90 ದಿನಗಳ ಎಫ್‌ಡಿ, ಶೇಕಡ 4.00 ಬಡ್ಡಿದರ
* 91-180 ದಿನಗಳ ಎಫ್‌ಡಿ, ಶೇಕಡ 4.50 ಬಡ್ಡಿದರ
* 181 ದಿನಗಳ ಎಫ್‌ಡಿ, ಶೇಕಡ 5.75 ಬಡ್ಡಿದರ
* 365-500 ದಿನಗಳ ಎಫ್‌ಡಿ, ಶೇಕಡ 6.25 ಬಡ್ಡಿದರ
* 501-749 ದಿನಗಳ ಎಫ್‌ಡಿ, ಶೇಕಡ 6.75 ಬಡ್ಡಿದರ
* 750 ದಿನಗಳ ಎಫ್‌ಡಿ, ಶೇಕಡ 7.25 ಬಡ್ಡಿದರ
* 751 ದಿನ-3 ವರ್ಷಗಳ ಎಫ್‌ಡಿ, ಶೇಕಡ 6.50 ಬಡ್ಡಿದರ
* 3 ವರ್ಷ 1 ದಿನ-5 ವರ್ಷ, ಶೇಕಡ 6.50 ಬಡ್ಡಿದರ
* 5 ವರ್ಷ 1 ದಿನ-10 ವರ್ಷ, ಶೇಕಡ 6.00 ಬಡ್ಡಿದರ
* 5 ವರ್ಷದ ತೆರಿಗೆ ಉಳಿತಾಯ ಎಫ್‌ಡಿ, ಶೇಕಡ 6.50 ಬಡ್ಡಿದರ

 

ಇನ್ನು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, "ಹಿರಿಯ ನಾಗರಿಕರಿಗೆ ಹೆಚ್ಚುವರಿ ಶೇಕಡ 0.50ರಷ್ಟು ಬಡ್ಡಿದರ ನೀಡಲಾಗುತ್ತದೆ. ಆದರೆ ಎನ್‌ಆರ್‌ಒಗಳಿಗೆ ಈ ಬಡ್ಡಿದರ ಲಭ್ಯವಾಗುವುದಿಲ್ಲ. ಇನ್ನು ಫಿಕ್ಸಿಡ್ ಡೆಪಾಸಿಟ್ ಅನ್ನು ಅವಧಿಗೂ ಮುನ್ನ ಮುಚ್ಚಿದರೆ ಎಫ್‌ಡಿ ಮಾಡಿದ ಸಂದರ್ಭದಲ್ಲಿದ್ದ ಬಡ್ಡಿದರವನ್ನು ಮಾತ್ರ ಪಾವತಿ ಮಾಡಲಾಗುತ್ತದೆ. ಹಾಗೆಯೇ ಹೆಚ್ಚಿನ ಶುಲ್ಕವನ್ನು ಕೂಡಾ ವಿಧಿಸಲಾಗುತ್ತದೆ.

English summary

IDFC First Bank Hikes FD Interest Rates To 7.25 Percent For Regular Citizens

IDFC First Bank has increased its fixed deposit interest rates and the new rates have already become effective beginning from October 10, 2022.
Story first published: Tuesday, October 11, 2022, 14:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X