For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ಖಾತೆ 15 ವರ್ಷ ಬಳಿಕ ಏನಾಗುತ್ತೆ? ಬ್ಯಾಂಕ್‌ನವರಿಗೂ ಗೊತ್ತಿಲ್ಲದ ಸಂಗತಿಗಳು

|

ಭಾರತದಲ್ಲಿ ಜನಪ್ರಿಯವೆನಿಸಿರುವ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಂದು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೂ ಈ ಯೋಜನೆಗೆ ಹಣ ಹೂಡಬಹುದು. 15 ವರ್ಷದವರೆಗೆ ಪಿಪಿಎಫ್ ಯೋಜನೆ ಇರುತ್ತದೆ. ಅದಾದ ಬಳಿಕ ನೀವು ಇಚ್ಛಿಸಿದರೆ ಪ್ರತೀ 5 ವರ್ಷಕ್ಕೊಮ್ಮೆ ಅವಧಿ ವಿಸ್ತರಿಸುತ್ತಾ ಹೋಗಬಹುದು. ಆದರೆ, 15 ವರ್ಷದ ಬಳಿಕ ನಿಮ್ಮ ಪಿಪಿಎಫ್ ಖಾತೆ ಏನಾಗುತ್ತೆ? ತತ್‌ಕ್ಷಣವೇ ವಿತ್‌ಡ್ರಾ ಮಾಡಿಕೊಳ್ಳಬೇಕಾ? ವಿತ್‌ಡ್ರಾ ಮಾಡಿಕೊಳ್ಳದೇ ಹಾಗೇ ಬಿಟ್ಟರೆ ಏನಾಗುತ್ತೆ? ಯೋಜನೆ ಮೆಚ್ಯೂರ್ ಅದ ಬಳಿಕ ಏನೇನು ಆಯ್ಕೆಗಳಿರುತ್ತವೆ?

 

ಈ ಎಲ್ಲಾ ಪ್ರಶ್ನೆಗಳಿಗೂ ಸೆಬಿ ನೊಂದಾಯಿತ ಇನ್ವೆಸ್ಟ್‌ಮೆಂಟ್ ಅಡ್ವೈಸರ್, ಬೆಂಗಳೂರಿನ ಬಸವರಾಜ್ ತೋಣಗಟ್ಟಿ ಉತ್ತರ ನೀಡಿದ್ದಾರೆ. ಬ್ಯಾಂಕ್‌ನವರಿಗೂ ಸರಿಯಾಗಿ ಗೊತ್ತಿಲ್ಲದ ಕೆಲ ಮಾಹಿತಿಯನ್ನು ಅವರು ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.

ಬಿರಿಯಾನಿ ಹೋಟೆಲ್, ಡಿಟಿಡಿಸಿ ಕೊರಿಯರ್, ಲೆನ್ಸ್‌ಕಾರ್ಟ್- ಲಾಭ ಕೊಡುವ ಬ್ಯುಸಿನೆಸ್ ಆರಂಭಿಸಿಬಿರಿಯಾನಿ ಹೋಟೆಲ್, ಡಿಟಿಡಿಸಿ ಕೊರಿಯರ್, ಲೆನ್ಸ್‌ಕಾರ್ಟ್- ಲಾಭ ಕೊಡುವ ಬ್ಯುಸಿನೆಸ್ ಆರಂಭಿಸಿ

ಪಿಪಿಎಫ್ ಮೆಚ್ಯೂರಿಟಿ ದಿನಾಂಕ ಬೇರೆ

ಸಾಮಾನ್ಯವಾಗಿ ಯಾವುದೇ ಪಾಲಿಸಿ ಅಥವಾ ಯೋಜನೆಯಾದರೆ ನಿರ್ದಿಷ್ಟ ಅವಧಿಯ ಬಳಿಕ ಪರಿಸಮಾಪ್ತಿ ಆಗುತ್ತದೆ. ಉದಾಹರಣೆಗೆ ನೀವು 15 ವರ್ಷದ ವಿಮೆ ಪಾಲಿಸಿಯನ್ನು 2004 ನವೆಂಬರ್ 24ರಂದು ಮಾಡಿಸಿದ್ದರೆ ಪಾಲಿಸಿ 2019 ನವೆಂಬರ್ 24ರಂದು ಮೆಚ್ಯೂರ್ ಆಗುತ್ತದೆ. ಆದರೆ, ಪಿಪಿಎಫ್ ಸ್ವಲ್ಪ ಭಿನ್ನ. ಪಿಪಿಎಫ್ ಖಾತೆಯ ನಿಗದಿತ ಅವಧಿ ಮುಗಿದ ಬಳಿಕ ಮುಂದಿನ ಏಪ್ರಿಲ್ 1ರಂದು ಅದು ಮೆಚ್ಯೂರ್ ಆಗುತ್ತದೆ.

ಮೇಲಿನ ಉದಾಹರಣೆಯನ್ನೇ ತೆಗೆದುಕೊಂಡರೆ 2019, ನವೆಂಬರ್ 24ರಂದು ನಿಮ್ಮ ಪಿಪಿಎಫ್ ಅವಧಿ ಮುಗಿಯುತ್ತದೆ ಎಂದಿಟ್ಟುಕೊಳ್ಳಿ. ಆದರೆ ಅದು ಮೆಚ್ಯೂರ್ ಆಗುವುದು 2020, ಏಪ್ರಿಲ್ 1ರಂದೆಯೇ.

15 ವರ್ಷದ ಅವಧಿ ಮುಗಿದ ಬಳಿಕ?

15 ವರ್ಷದ ಅವಧಿ ಮುಗಿದ ಬಳಿಕ?

ಪಿಪಿಎಫ್ ಖಾತೆ 15 ವರ್ಷದ ಬಳಿಕ ಮೆಚ್ಯೂರ್ ಆದಾಗ ಮೂರು ಆಯ್ಕೆಗಳು ನಮಗಿರುತ್ತವೆ.
1) ಖಾತೆ ಮುಚ್ಚುವುದು
2) ಯಾವ ಹೊಸ ಹೂಡಿಕೆ ಇಲ್ಲದೇ ಐದು ವರ್ಷಕ್ಕೆ ಅದನ್ನು ವಿಸ್ತರಿಸುವುದು
3) ಹೂಡಿಕೆ ಸಮೇತ 5 ವರ್ಷಕ್ಕೆ ಅದನ್ನು ವಿಸ್ತರಿಸುವುದು.

ಅಂದರೆ ನೀವು ಪಿಪಿಎಫ್ ಖಾತೆ ಮೆಚ್ಯೂರ್ ಆದಾದ ಅದನ್ನು ಮುಚ್ಚಬಹುದು. ಪ್ರತೀ ಐದು ವರ್ಷ ಅದನ್ನು ವಿಸ್ತರಿಸುತ್ತಾ ಹೋಗಬಹುದು. ಎರಡನೇ ಆಯ್ಕೆ ಆದರೆ ನೀವು ಮತ್ತೆ ಹಣವನ್ನು ಖಾತೆಗೆ ಜಮೆ ಮಾಡುವ ಅವಕಾಶ ಇರುವುದಿಲ್ಲ.

ಖಾತೆ ಮುಚ್ಚುವ ಕ್ರಮ
 

ಖಾತೆ ಮುಚ್ಚುವ ಕ್ರಮ

ನಿಮ್ಮ ಪಿಪಿಎಫ್ ಖಾತೆ 15 ವರ್ಷಕ್ಕೆ ಮುಗಿದ ಬಳಿಕ ಅದನ್ನು ಮುಚ್ಚಿ ಹಣ ವಿತ್‌ಡ್ರಾ ಮಾಡಬೇಕೆಂದಿದ್ದಲ್ಲಿ, ಖಾತೆ ಮುಗಿದ ದಿನದಿಂದ ಒಂದು ವರ್ಷದೊಳಗೆ ನಿರ್ಧರಿಸಿ ಖಾತೆ ಮುಚ್ಚಬೇಕು. ನೀವು ಖಾತೆ ಮುಚ್ಚಿದ ತಿಂಗಳ ಹಿಂದಿನ ತಿಂಗಳ ಅಂತ್ಯದವರೆಗೆ ಪಿಪಿಎಫ್ ಖಾತೆಯ ಎಲ್ಲಾ ಹಣ (ಬಡ್ಡಿ ಸಹಿತ) ನಿಮ್ಮ ಕೈ ಸೇರುತ್ತದೆ.

ಅಂದರೆ, ನವೆಂಬರ್ 24ರಂದು ನಿಮ್ಮ ಪಿಪಿಎಫ್ ಖಾತೆಯ ಅವಧಿ ಮುಗಿಯುತ್ತದೆ. ನೀವು ಡಿಸೆಂಬರ್ 15ರಂದು ಖಾತೆ ಮುಚ್ಚುತ್ತೀರಿ ಎಂದಿಟ್ಟುಕೊಳ್ಳಿ. ಆಗ ನಿಮಗೆ ನವೆಂಬರ್ 30ರವರೆಗಿನ ನಿಮ್ಮ ಪಿಪಿಎಫ್ ಯೋಜನೆಯ ಲಾಭ ಸಿಗುತ್ತದೆ.

ನೀವು ಖಾತೆ ಮುಚ್ಚಿದಾಗ ಎಲ್ಲಾ ಹಣವನ್ನೂ ಒಮ್ಮೆಲೇ ವಿತ್‌ಡ್ರಾ ಮಾಡಬಹುದು. ಅಥವಾ ಒಂದು ವರ್ಷದೊಳಗೆ ವಿವಿಧ ಕಂತುಗಳ ರೂಪದಲ್ಲಿಯೂ ಹಣವನ್ನು ಪಡೆಯಬಹುದು.

 

 

ಅಕೌಂಟ್ ಮುಚ್ಚದಿದ್ದರೆ ಏನಾಗುತ್ತೆ?

ಅಕೌಂಟ್ ಮುಚ್ಚದಿದ್ದರೆ ಏನಾಗುತ್ತೆ?

ನಾವು ಕೆಲವೊಮ್ಮೆ ಯೋಜನೆ ಮೆಚ್ಯೂರ್ ಆದರೂ ತನ್ನ ಪಾಡಿಗೆ ಬಡ್ಡಿ ಸಿಗುತ್ತಿರುತ್ತದೆಯೆಂದು ಭಾವಿಸಿ ಅದನ್ನು ಹಾಗೇ ಬಿಟ್ಟುಬಿಡುತ್ತೇವೆ. ಆದರೆ ಪಿಪಿಎಫ್ ವಿಚಾರದಲ್ಲಿ ಹಾಗೆ ಮಾಡಬೇಡಿ. ಪಾಲಿಸಿ ಅವಧಿ ಬಳಿಕ ಒಂದು ವರ್ಷದವರೆಗೆ ನಿಮಗೆ ಮುಂದಿನ ಕ್ರಮ ಕೈಗೊಳ್ಳಲು ಕಾಲಾವಕಾಶ ಇರುತ್ತದೆ. ಒಂದು ವರ್ಷವಾದರೂ ನೀವು ಏನೂ ನಿರ್ಧಾರ ಮಾಡದಿದ್ದರೆ ಆಗ ನಿಮ್ಮ ಪಿಪಿಎಫ್ ಖಾತೆ ಕೊಡುಗೆ ರಹಿತ 5 ವರ್ಷದ ಅವಧಿಗೆ ವಿಸ್ತರಣೆ ಆಗುತ್ತದೆ. ಆ ಐದು ವರ್ಷದ ಬಳಿಕ ಬೇಕೆಂದಲ್ಲಿ ಮತ್ತೆ ಮತ್ತೆ ಪ್ರತೀ ಐದು ವರ್ಷ ಅವಧಿ ವಿಸ್ತರಿಸುತ್ತಾ ಹೋಗಬಹುದು.

ಈ ವಿಸ್ತರಣಾ ಅವಧಿಯಲ್ಲಿ ನೀವು ನಿಮ್ಮ ಖಾತೆಗೆ ಹಣ ಜಮೆ ಮಾಡುವಂತಿಲ್ಲ. ಆದರೆ ನಿಮ್ಮ ಖಾತೆಯಿಂದ ಎಷ್ಟು ಬೇಕಾದರೂ ಹಣ ವಿತ್‌ಡ್ರಾ ಮಾಡಬಹುದು. ಆದರೆ, ಒಂದು ವರ್ಷದಲ್ಲಿ ಒಮ್ಮೆ ಮಾತ್ರ ವಿತ್‌ಡ್ರಾ ಮಾಡಲು ಸಾಧ್ಯ.

ಖಾತೆಯ ಅವಧಿ ವಿಸ್ತರಿಸಿದರೆ?

ಖಾತೆಯ ಅವಧಿ ವಿಸ್ತರಿಸಿದರೆ?

ನೀವು ಕೊಡುಗೆ ಸಹಿತ ಖಾತೆಯ ಅವಧಿಯನ್ನು 5 ವರ್ಷ ವಿಸ್ತರಣೆ ಮಾಡಬೇಕೆಂದಿದ್ದಲ್ಲಿ ಪಾಲಿಸಿ ಅವಧಿ ಮುಗಿದು ಒಂದು ವರ್ಷದೊಳಗೆ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಪಾಲಿಸಿ ಯೋಜನೆ ಮುಂದುವರಿಸುವ ಆಯ್ಕೆ ಆರಿಸಿಕೊಳ್ಳದೇ ನೀವು ಖಾತೆಗೆ ಹಣ ಜಮೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆ ಹೆಚ್ಚುವರಿ ಹಣಕ್ಕೆ ಯಾವ ಬಡ್ಡಿ ಸಿಗುವುದಿಲ್ಲ, ತೆರಿಗೆ ರಿಯಾಯಿತಿಯೂ ಸಿಗುವುದಿಲ್ಲ. ಆದರೆ, ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು ಬೇಕಾದರೆ ಖಾತೆಯನ್ನು ರೆಗ್ಯುಲರೈಸ್ ಮಾಡಬಹುದು.

ಇಲ್ಲಿ ನೀವು ಐದು ವರ್ಷದ ಅವಧಿಯಲ್ಲಿ ಸಂಪೂರ್ಣ ಹಣವನ್ನು ವಿತ್‌ಡ್ರಾ ಮಾಡಲು ಆಗುವುದಿಲ್ಲ. ಶೇ. 60ರಷ್ಟು ಹಣ ಪಡೆಯಬಹುದು. ಅಂದರೆ ಖಾತೆಯ ಅವಧಿ ಮುಗಿದಾಗ ಎಷ್ಟು ಹಣ ಇರುತ್ತದೋ ಅದರ ಶೇ. 60ರಷ್ಟು ಹಣವನ್ನು ಐದು ವರ್ಷದ ಅವಧಿಯಲ್ಲಿ ಹಿಂಪಡೆಯಬಹುದು. ಉಳಿಕೆ ಹಣ ಹಾಗೇ ಮುಂದುವರಿಯುತ್ತದೆ. ಆದರೆ ವರ್ಷಕ್ಕೆ ಒಮ್ಮೆ ಮಾತ್ರ ಹಣ ಹಿಂಪಡೆಯಬಹುದು.

ಇಲ್ಲಿ ಇನ್ನೂ ಒಂದು ಅಂಶ ತಿಳಿಸುವುದಾದರೆ ನಿಮ್ಮ ಪಿಪಿಎಫ್ ಖಾತೆ ಮೆಚ್ಯೂರ್ ಆದ ಬಳಿಕ ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬಹುದು. ಪಿಪಿಎಫ್ ಹಣವು ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

English summary

Important, PPF Alert- Know What Happens To Your Account After 15 Years, Lesser Know Facts in Kannada

Less Known Facts about PPF- Your PPF account ends in 15 years. But happens to your account after that is important to learn. Know the details in Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X