For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ತೆರಿಗೆ ಪಾವತಿಸುವುದು ಹೇಗೆ?

|

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದನ್ನು ಸರಳಗೊಳಿಸಲು, ಸುಗಮಗೊಳಿಸಲು ಆದಾಯ ತೆರಿಗೆ ಇಲಾಖೆಯು ಕಳೆದ ಎರಡು ವರ್ಷಗಳಿಂದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಾಗೆಯೇ ಹೊಸ ಪೋರ್ಟಲ್ ಅನ್ನು ಕೂಡಾ ಆದಾಯ ತೆರಿಗೆ ಇಲಾಖೆಯು ತೆರೆದಿದೆ. ಇದೀಗ ತೆರಿಗೆ ಪಾವತಿಗೂ ಸರಳ ಹಾಗೂ ಸುಲಭ ವಿಧಾನವನ್ನು ಆದಾಯ ತೆರಿಗೆ ಇಲಾಖೆಯು ಆರಂಭ ಮಾಡಿದೆ.

 

ನೀವೀಗ ಯುಪಿಐ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕವೂ ತೆರಿಗೆಯನ್ನು ಪಾವತಿ ಮಾಡಲು ಸಾಧ್ಯವಾಗುತ್ತದೆ. ಎನ್‌ಎಸ್‌ಡಿಎಲ್‌ ವೆಬ್‌ಸೈಟ್ ಮೂಲಕ ತಮ್ಮ ಎಟಿಎಂ ಕಾರ್ಡ್ ಬಳಸಿ, ನೆಟ್ ಬ್ಯಾಂಕಿಂಗ್ ಬಳಸಿಕೊಂಡು ನೀವು ಆದಾಯ ತೆರಿಗೆಯನ್ನು ಪಾವತಿ ಮಾಡಬಹುದು. ಆದರೆ ಅದಕ್ಕಾಗಿ 16 ಬ್ಯಾಂಕ್‌ಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.

ಆದರೆ ನೀವು ಈ 16 ಬ್ಯಾಂಕ್‌ಗಳನ್ನು ಹೊರತುಪಡಿಸಿ ಬೇರೆ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ತೆರಿಗೆ ಪಾವತಿ ಮಾಡುವುದು ಕೊಂಚ ಕಷ್ಟವಾಗಬಹುದು. ಆದರೆ ನೀವು ಅದಕ್ಕೆ ಚಿಂತೆ ಮಾಡಬೇಕಾಗಿಲ್ಲ. ನೀವು ಡೆಬಿಟ್ ಕಾರ್ಡ್ ಮಾತ್ರವಲ್ಲದೆ ಕ್ರೆಡಿಟ್ ಕಾರ್ಡ್, ನೆಟ್‌ ಬ್ಯಾಂಕಿಂಗ್, ಆನ್‌ಲೈನ್ ಬ್ಯಾಂಕಿಂಗ್, ಯುಪಿಐ, ಆರ್‌ಟಿಜಿಎಸ್, ನೆಫ್ಟ್ ಅನ್ನು ಬಳಸಿಕೊಂಡು ತೆರಿಗೆಯನ್ನು ಪಾವತಿ ಮಾಡಬಹುದು. ಅದು ಹೇಗೆ ಎಂದು ಈ ಕೆಳಗೆ ವಿವರಿಸಿದ್ದೇವೆ. ಮುಂದೆ ಓದಿ....

 ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ತೆರಿಗೆ ಪಾವತಿಸುವುದು ಹೇಗೆ?

ಯುಪಿಐ, ಕ್ರೆಡಿಟ್ ಕಾರ್ಡ್ ಮೂಲಕ ತೆರಿಗೆ ಪಾವತಿಸುವುದು ಹೇಗೆ?

ಹಂತ 1: ಇ-ಫೈಲಿಂಗ್ ಪೋರ್ಟ್‌ಲ್‌ಗೆ ನಿಮ್ಮ ಯೂಸರ್‌ನೇಮ್, ಪಾಸ್‌ವರ್ಡ್ ಬಳಸಿಕೊಂಡು ಲಾಗಿನ್ ಆಗಿ
ಹಂತ 2: ಇ ಪೇ ಟ್ಯಾಕ್ಸ್ ಆಯ್ಕೆಯಲ್ಲಿ ಹೊಸ ಪಾವತಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ
ಹಂತ 3: ನೀವು ಎಷ್ಟು ತೆರಿಗೆಯನ್ನು ಪಾವತಿಸಬೇಕು ಎಂದು ಆಯ್ಕೆಮಾಡಿಕೊಳ್ಳಿ, continue ಕ್ಲಿಕ್ ಮಾಡಿ
ಹಂತ 4: ಯಾವ ವರ್ಷದ ತೆರಿಗೆ ಪಾವತಿ ಮಾಡುತ್ತೀರಿ, ಯಾವ ವರ್ಷ ಪಾವತಿ ಮಾಡುತ್ತಿದ್ದೀರಿ ಎಂದು ಆಯ್ಕೆಮಾಡಿಕೊಳ್ಳಿ
ಹಂತ 5: ತೆರಿಗೆ ಬಗ್ಗೆ ಮಾಹಿತಿ, ಇತರೆ ಶುಲ್ಕ, ಸೆಸ್ ಮೊದಲಾದ ಮಾಹಿತಿಯನ್ನು ಉಲ್ಲೇಖಿಸಿ
ಹಂತ 6: ನೀವೀಗ ಕ್ರೆಡಿಟ್ ಕಾರ್ಡ್, ನೆಟ್‌ ಬ್ಯಾಂಕಿಂಗ್, ಯುಪಿಐ ಮೊದಲಾದವುಗಳ ಮೂಲಕ ತೆರಿಗೆಯನ್ನು ಪಾವತಿ ಮಾಡಬಹುದು.
ಹಂತ 7: ಪಾವತಿಯಾದ ಬಳಿಕ ಇ-ಚಲನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಆದಾಯ ತೆರಿಗೆ ಇಲಾಖೆಯು ನಿಮಗೆ ಅಂಚೆ ಮೂಲಕ ಹಾಗೂ ಎಸ್‌ಎಂಎಸ್ ಮೂಲಕವೂ ತೆರಿಗೆ ಪಾವತಿ ಚಲನ್ ನೋಟಿಫಿಕೇಷನ್ ಕಳುಹಿಸುತ್ತದೆ.

 

ತೆರಿಗೆ ಪಾವತಿ ಶುಲ್ಕ ಎಷ್ಟಿದೆ?

ನೀವು ಎನ್‌ಎಸ್‌ಡಿಎಲ್ ಹಾಗೂ ಆದಾಯ ತೆರಿಗೆ ವೆಬ್‌ಸೈಟ್‌ ಮೂಲಕ ತೆರಿಗೆ ಪಾವತಿ ಮಾಡಿದರೆ ಯಾವುದೇ ಶುಲ್ಕವನ್ನು ನಿಮಗೆ ವಿಧಿಸಲಾಗುವುದಿಲ್ಲ. ಆದರೆ ನೀವು ನೆಟ್‌ಬ್ಯಾಂಕಿಂಗ್ ಮೂಲಕ ತೆರಿಗೆ ಪಾವತಿ ಮಾಡಿದರೆ 5 ರೂಪಾಯಿಯಿಂದ 12 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತದೆ.

English summary

Income Tax: Pay Tax Through UPI or Credit Card, Follow this Steps

Any taxpayer can pay their taxes on the NSDL website using the facility provided by the Income Tax Department with the aid of a debit card issued by an authorised bank and net banking from 16 banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X