For Quick Alerts
ALLOW NOTIFICATIONS  
For Daily Alerts

ಭಾರತ ಸ್ವಾತಂತ್ರೋತ್ಸವ: ಡಾಲರ್ ಎದುರು ರೂಪಾಯಿ ಮೌಲ್ಯ ಹೇಗಿತ್ತು, ಹೇಗಿದೆ?

|

ಭಾರತವು 75ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಇನ್ನು 25 ವರ್ಷದಲ್ಲೇ ಭಾರತ ಶತಮಾನೋತ್ಸವ ಆಚರಣೆ ಮಾಡಲಿದೆ. ಈ 25 ವರ್ಷದಲ್ಲಿ ದೇಶದಲ್ಲಿ ಹಲವಾರು ಅಭಿವೃದ್ಧಿ ಕಾರ್ಯವನ್ನು ನಡೆಸುವ ಚಿತ್ತವನ್ನು ಸರ್ಕಾರ ಹೊಂದಿದೆ. ಈ ಕಾಲವನ್ನು ಅಮೃತ ಕಾಲ ಎಂದು ಕರೆಯಲಾಗುತ್ತಿದೆ. ಆದರೆ ಈ 75 ವರ್ಷಗಳಲ್ಲಿ ಭಾರತದ ರೂಪಾಯಿ ಡಾಲರ್ ಅಥವಾ ಬೇರೆ ದೇಶದ ಕರೆನ್ಸಿಗಳ ಎದುರು ಎಷ್ಟು ಕುಸಿತ ಕಂಡಿದೆ, ಏರಿಕೆ ಕಂಡಿದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ?

ನಾವು ಭಾರತದಲ್ಲಿನ ಇತರೆ ಆರ್ಥಿಕ ಸ್ಥಿತಿಯನ್ನು ಪಕ್ಕಕ್ಕೆ ಇಟ್ಟು ಕೊಂಚ ರೂಪಾಯಿಯ ಏರಿಳಿತದ ಬಗ್ಗೆ ತಿಳಿಯೋಣ ಬನ್ನಿ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತಿದೆ. ಅಂದಿನಿಂದ ಇಂದಿನವರೆಗೆ ಭಾರತದ ರೂಪಾಯಿ ಭಾರಿ ಕುಸಿತವನ್ನು ದಾಖಲಿಸಿದೆ. ಇತ್ತೀಚಿನ ಬೆಳವಣಿಗೆಯನ್ನು ನಾವು ಗಮನಿಸಿದಾಗ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಎಷ್ಟು ಕುಸಿಯುತ್ತಿದೆ ಎಂಬುವುದು ತಿಳಿಯುತ್ತದೆ.

ರೂಪಾಯಿ ಮೌಲ್ಯ ನಿರಂತರ ಕುಸಿತ: ಆರ್‌ಬಿಐ ಗವರ್ನರ್ ಹೇಳುವುದೇನು?ರೂಪಾಯಿ ಮೌಲ್ಯ ನಿರಂತರ ಕುಸಿತ: ಆರ್‌ಬಿಐ ಗವರ್ನರ್ ಹೇಳುವುದೇನು?

1960ರಲ್ಲಿ ಆಹಾರ ಉತ್ಪನ್ನ ಹಾಗೂ ಇತರೆ ಉತ್ಪನ್ನಗಳ ಕೊರತೆ ಸೇರಿದಂತೆ ಆರ್ಥಿಕವಾಗಿ 1947ರಿಂದ ಈವರೆಗೆ ಹಲವಾರು ಬೆಳವಣಿಗೆಗಳು, ಏರಿಳಿತಗಳು ಕಂಡು ಬಂದಿದೆ. ಭಾರತ-ಚೀನಾ, ಭಾರತ-ಪಾಕಿಸ್ತಾನ ಬಿಕ್ಕಟ್ಟುಗಳು ಕೂಡಾ ಇದಕ್ಕೆ ಪ್ರಭಾವವನ್ನು ಉಂಟು ಮಾಡಿದೆ. 1947ರಿಂದ ಈವರೆಗೆ ರೂಪಾಯಿ ಸ್ಥಿತಿ ಹೇಗಿದೆ ಎಂಬ ಬಗ್ಗೆ ನಾವು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ....

 ಇಂದಿರಾ ಗಾಂಧಿ ಕಾಲದಲ್ಲಿ ಹೇಗಿತ್ತು ರೂಪಾಯಿ ಮೌಲ್ಯ

ಇಂದಿರಾ ಗಾಂಧಿ ಕಾಲದಲ್ಲಿ ಹೇಗಿತ್ತು ರೂಪಾಯಿ ಮೌಲ್ಯ

ಇಂದಿರಾ ಗಾಂಧಿ ಆಡಳಿತದ ಸಂದರ್ಭದಲ್ಲಿ ಭಾರತೀಯ ರೂಪಾಯಿ ಭಾರಿ ಕುಸಿತ ಕಂಡಿದೆ. ಯುಎಸ್ ಡಾಲರ್ ಎದುರು ರೂಪಾಯಿ 4.76ರಿಂದ ರೂಪಾಯಿ 7.5ಕ್ಕೆ ಕುಸಿತವಾಗಿದೆ. ಆ ಬಳಿಕ 1991ರಲ್ಲಿ ಭಾರತದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಕಂಡು ಬಂದಿದೆ. ಭಾರತವು ಆಮದು ಹಾಗೂ ಸೇವೆಯ ಸಾಲವನ್ನು ಕೂಡಾ ನೀಡಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಇತ್ತು. ಈ ಬಿಕ್ಕಟ್ಟನ್ನು ನಿಯಂತ್ರಣ ಮಾಡು ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂಪಾಯಿಯ ಅಪಮೌಲೀಕರಣ ಮಾಡಿತು. ಒಂದು ಬಾರಿ ಶೇಕಡ 9ಕ್ಕೆ ಇನ್ನೊಂದು ಬಾರಿ ಶೇಕಡ 11ರಂತೆ ಅಪಮೌಲೀಕರಣ ಮಾಡಿತ್ತು. ಇದಾದ ಬಳಿಕ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 26 ಆಗಿತ್ತು.

ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ: ನಿಮ್ಮ ಹಣಕಾಸಿನ ಮೇಲೆ ಏನು ಪರಿಣಾಮ?ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ: ನಿಮ್ಮ ಹಣಕಾಸಿನ ಮೇಲೆ ಏನು ಪರಿಣಾಮ?

 4ರಿಂದ 80ಕ್ಕೆ ಇಳಿದ ರೂಪಾಯಿ ಮೌಲ್ಯ

4ರಿಂದ 80ಕ್ಕೆ ಇಳಿದ ರೂಪಾಯಿ ಮೌಲ್ಯ

ಯುಎಸ್ ಡಾಲರ್ ಎದುರು ನಾಲ್ಕು ರೂಪಾಯಿಯಷ್ಟಿದ್ದ ಭಾರತೀಯ ಕರೆನ್ಸಿ ಮೌಲ್ಯ ಪ್ರಸ್ತುತ 79-80 ರೂಪಾಯಿಯಷ್ಟು ಕುಸಿದಿದೆ. ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾದ ಈ 75 ವರ್ಷದಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ಕರೆನ್ಸಿ ಮೌಲ್ಯ 75 ರೂಪಾಯಿಯಷ್ಟು ಇಳಿದಿದೆ. ಕಳೆದ ಮೂರು ವರ್ಷದಲ್ಲಿ ರೂಪಾಯಿ ಮೌಲ್ಯವು ಭಾರಿ ಕುಸಿತ ಕಂಡಿದೆ. ಪ್ರಮುಖವಾಗಿ ಜಾಗತಿಕ ಬೆಳವಣಿಗೆಯು ರೂಪಾಯಿ ಮೇಲೆ ಪ್ರಭಾವ ಉಂಟು ಮಾಡಿದೆ. ಕಚ್ಚಾ ತೈಲ ದರ ಏರಿಕೆಯಾದಂತೆ ರೂಪಾಯಿ ಮೌಲ್ಯವು ಇಳಿಕೆಯಾಗುತ್ತಿದೆ.

 ಮುಂದೇನು ರೂಪಾಯಿ ಮೌಲ್ಯದ ಸ್ಥಿತಿ?

ಮುಂದೇನು ರೂಪಾಯಿ ಮೌಲ್ಯದ ಸ್ಥಿತಿ?

ನಾವು ಪ್ರಸ್ತುತ ಬೆಳವಣಿಗೆಯನ್ನು ನೋಡಿದಾಗ ರೂಪಾಯಿ ಮೌಲ್ಯವು ಯುಎಸ್ ಡಾಲರ್ ಎದುರು ಇನ್ನಷ್ಟು ಕುಸಿತ ಕಾಣುತ್ತಲೇ ಹೋಗಲಿದೆ. ಈ ಬಗ್ಗೆ ತಜ್ಞರು ಕೂಡಾ ಪ್ರತಿಕ್ರಿಯೆ ನೀಡುತ್ತಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ಇನ್ನಷ್ಟು ಕುಸಿತ ಕಾಣುತ್ತಲೇ ಹೋಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ತಜ್ಞರಾದ ಗೌರಂಗ್ ಸೋಮಯ್ಯ ಹೇಳಿದ್ದಾರೆ.

 2000-07ರಲ್ಲಿ ಸ್ಥಿರವಾಗಿದ್ದ ರೂಪಾಯಿ ಮೌಲ್ಯ

2000-07ರಲ್ಲಿ ಸ್ಥಿರವಾಗಿದ್ದ ರೂಪಾಯಿ ಮೌಲ್ಯ

2000-07ರಲ್ಲಿ ರೂಪಾಯಿ ಮೌಲ್ಯವು ಸ್ಥಿರವಾಗಿತ್ತು. ಆದರೆ 2008ರಲ್ಲಿ ಕಾಣಿಸಿಕೊಂಡ ಜಾಗತಿಕ ಹಣಕಾಸು ಬಿಕ್ಕಟ್ಟಿನ ಬಳಿಕ ರೂಪಾಯಿಯ ಮೌಲ್ಯವು ಭಾರೀ ಕುಸಿತ ಕಂಡಿದೆ. ಪ್ರಮುಖವಾಗಿ 2009ರಿಂದ ರೂಪಾಯಿ ಮೌಲ್ಯವು ಭಾರಿ ಕುಸಿತವಾಗಿದೆ. ರೂಪಾಯಿ 46.5ರಿಂದ ರೂಪಾಯಿ 79.5ಕ್ಕೆ ಕುಸಿತವಾಗಿದೆ. 2000ರಿಂದ 2009ರವರೆಗೆ ರೂಪಾಯಿ ಸರಿಸುಮಾರು ಸ್ಥಿರವಾಗಿಯೇ ಇತ್ತು. ರೂಪಾಯಿ ಮೌಲ್ಯ 46.7ರಿಂದ 46.5ಕ್ಕೆ ತಲುಪಿತ್ತು. ಆಮದು ದರವು ಹೆಚ್ಚಾದಾಗ, ಸ್ಥಳೀಯ ಹಣದುಬ್ಬರವು ದೇಶದಲ್ಲಿ ಜನರ ಮೇಲೆ ಪ್ರಭಾವ ಉಂಟು ಮಾಡಿದೆ. ಜನರಲ್ಲಿರುವ ಖರೀದಿ ಮಾಡುವ ಆರ್ಥಿಕ ಸಾಮರ್ಥ್ಯವನ್ನೇ ತಗ್ಗಿಸಿದೆ. ಆಮದು ದರ ಹೆಚ್ಚಾದಾಗ ಕರೆಂಟ್ ಅಕೌಂಟ್ ಡೆಫಿಸಿಟ್ (ಸಿಎಡಿ) ಕೂಡಾ ಹೆಚ್ಚಾಗಲಿದೆ. ಎಪ್ರಿಲ್-ಜುಲೈ 2022ರ ಅವಧಿಯಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 100.01 ಯುಎಸ್ ಡಾಲರ್‌ನಷ್ಟಿತ್ತು.

English summary

Independence day: How Indian currency declined against US dollar since 1947, Explained

India is celebrating its 75th year of Independence. Here How Indian currency Fared against other global benchmark peers since 1947, Explained in kannada. read on.
Story first published: Monday, August 15, 2022, 15:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X