For Quick Alerts
ALLOW NOTIFICATIONS  
For Daily Alerts

ಉದ್ಯಮಿ ರಾಕೇಶ್ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ? ಮೌಲ್ಯ ಎಷ್ಟು?

|

ಭಾರತದ ವಾರೆನ್ ಬಫೆಟ್ ಎಂದೇ ಕರೆಯಲ್ಪಡುತ್ತಿದ್ದ ಹೂಡಿಕೆದಾರ ರಾಕೇಶ್ ಜುಂಜುನ್ ವಾಲ ಸುಮಾರು 5.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಎಂದು ಫೋರ್ಬ್ಸ್ ವರದಿ ನೀಡಿದೆ. ಫೋರ್ಬ್ಸ್‌ನ 2022 ರ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅವರು 438 ನೇ ಸ್ಥಾನದಲ್ಲಿದ್ದರು. ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದ್ದರು. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಕೇವಲ 150 ರಲ್ಲಿದ್ದಾಗ ಜುಂಜುನ್‌ವಾಲಾ ಅವರು ತಮ್ಮ ಕಾಲೇಜು ದಿನಗಳಲ್ಲಿ 5000 ರು ನೊಂದಿಗೆ ಷೇರು ಮಾರುಕಟ್ಟೆ ಭಾರತದ ಷೇರು ಮಾರುಕಟ್ಟೆಯ ಬೆಳವಣಿಗೆ, ಆರ್ಥಿಕ ಪ್ರಗತಿ, ವಹಿವಾಟು ವಿಷಯ ಬಂದರೆ ರಾಕೇಶ್ ಹೆಸರು ಉಲ್ಲೇಖಿಸದೆ ಇರಲು ಸಾಧ್ಯವಿಲ್ಲ.

ಟೈಟನ್‌ನಂತಹ ಸ್ಟಾಕ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಮತ್ತು ಮೆಟ್ರೋ ಬ್ರಾಂಡ್‌ಗಳ ಮೇಲಿನ ಅವರ ನಂಬಿಕೆ ಕೈ ಕೊಡಲಿಲ್ಲ ಬದಲಿಗೆ ಎರಡು ಕಂಪನಿಗಳು 2021ರಲ್ಲಿ ಎರಡೂ ಕಂಪನಿಗಳು ಷೇರುಪೇಟೆಯಲ್ಲಿ ಲಿಸ್ಟಿಂಗ್ ಪಡೆದುಕೊಂಡಿತು.

ಸಕ್ರಿಯ ಹೂಡಿಕೆದಾರರಾಗಿರುವ ಜುಂಜುನ್‌ವಾಲಾ ಅವರು ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ನ ಅಧ್ಯಕ್ಷರಾಗಿದ್ದರು. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೊಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ (I) ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಕಂಪನಿ ಲಿಮಿಟೆಡ್, ನಾಗಾರ್ಜುನಾ ಕಂಪನಿ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ. ವೈಸರಾಯ್ ಹೋಟೆಲ್ಸ್ ಲಿಮಿಟೆಡ್, ಮತ್ತು ಟಾಪ್ಸ್ ಸೆಕ್ಯುರಿಟಿ ಲಿಮಿಟೆಡ್.

ಉದ್ಯಮಿ ರಾಕೇಶ್ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ? ಮೌಲ್ಯ ಎಷ್ಟು?

2013 ರಲ್ಲಿ, ಜುಂಜುನ್‌ವಾಲಾ ಅವರು ಮಲಬಾರ್ ಹಿಲ್‌ನಲ್ಲಿರುವ ರಿಡ್ಜ್‌ವೇ ಅಪಾರ್ಟ್‌ಮೆಂಟ್‌ಗಳ 12 ಘಟಕಗಳಲ್ಲಿ 6 ಅನ್ನು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಿಂದ 176 ಕೋಟಿ ರೂ.ಗೆ ಖರೀದಿಸಿದರು. ನಂತರ 2017ರಲ್ಲಿ ಕಟ್ಟಡದಲ್ಲಿರುವ ಇತರ 6 ಅಪಾರ್ಟ್‌ಮೆಂಟ್‌ಗಳನ್ನು ಎಚ್‌ಎಸ್‌ಬಿಸಿ ಬ್ಯಾಂಕ್‌ನಿಂದ 195 ಕೋಟಿ ರೂ.ಗೆ ಖರೀದಿಸಿದ್ದರು.

ರಾಕೇಶ್ ಜುಂಜುನ್ ವಾಲ ಮತ್ತು ಸಹವರ್ತಿಗಳ ಪ್ರಮುಖ ಷೇರುಗಳ ವಿವರ

  • ಆಪ್ಟೆಕ್ ಲಿಮಿಟೆಡ್‌ನಲ್ಲಿ ಶೇ. 23.37
  • ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನಲ್ಲಿ ಶೇ. 17.49
  • ಮೆಟ್ರೋ ಬ್ರಾಂಡ್ಸ್ ಲಿಮಿಟೆಡ್‌ನಲ್ಲಿ ಶೇ. 14.43
  • NCC Ltd ನಲ್ಲಿ ಶೇ. 12.62
  • ನಜಾರಾ ಟೆಕ್ನಾಲಜೀಸ್ ಲಿಮಿಟೆಡ್‌ನಲ್ಲಿ ಶೇ. 10.03
  • ರಲಿಸ್ ಇಂಡಿಯಾ ಲಿಮಿಟೆಡ್‌ನಲ್ಲಿ ಶೇ. 9.81
  • ಬಿಲ್ಕೇರ್ ಲಿಮಿಟೆಡ್‌ನಲ್ಲಿ ಶೇ. 8.48
  • ಆಗ್ರೋ ಟೆಕ್ ಫುಡ್ಸ್ ಲಿಮಿಟೆಡ್‌ನಲ್ಲಿ ಶೇ. 8.22
  • ವ್ಯಾ ಟೆಕ್ ವಾಬಾಗ್ ಲಿಮಿಟೆಡ್‌ನಲ್ಲಿ ಶೇ. 8.04
  • ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್‌ನಲ್ಲಿ ಶೇ. 7.54
  • ಜುಬಿಲೆಂಟ್ ಫಾರ್ಮೋವಾ ಲಿಮಿಟೆಡ್‌ನಲ್ಲಿ ಶೇ. 6.76
  • ಕ್ರಿಸಿಲ್ ಲಿಮಿಟೆಡ್‌ನಲ್ಲಿ ಶೇ. 5.48
  • ಟೈಟಾನ್ ಕಂಪನಿ ಲಿಮಿಟೆಡ್‌ನಲ್ಲಿ ಶೇ. 5.05
  • ಜುಬಿಲೆಂಟ್ ಇಂಗ್ರೆವಿಯಾ ಲಿಮಿಟೆಡ್‌ನಲ್ಲಿ ಶೇ. 4.72
  • ಆಟೋಲೈನ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಶೇ. 4.50
  • ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್‌ನಲ್ಲಿ ಶೇ. 4.50
  • ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನಲ್ಲಿ ಶೇ. 4.23
  • ಫೆಡರಲ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಶೇ. 3.64
  • ಅನಂತ್ ರಾಜ್ ಲಿಮಿಟೆಡ್ ನಲ್ಲಿ ಶೇ. 3.39
  • ಡಿಶ್‌ಮನ್ ಕಾರ್ಬೋಜೆನ್ ಅಮ್ಸಿಸ್ ಲಿಮಿಟೆಡ್‌ನಲ್ಲಿ ಶೇ. 3.18

ಹೊಂದಿದ್ದರೆ ಎಂದು ಮನಿ ಕಂಟ್ರೋಲ್ ಅಂಕಿ ಅಂಶ ಸಮೇತ ವರದಿ ಮಾಡಿದೆ. ಇವುಗಳ ಹೊರತಾಗಿ, ಜುಂಜುನ್‌ವಾಲಾ ಅವರು ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್, ವೊಕಾರ್ಡ್ ಲಿಮಿಟೆಡ್, ಕೆನರಾ ಬ್ಯಾಂಕ್, ಮುಂತಾದ ಹಲವಾರು ಕಂಪನಿಗಳಲ್ಲಿ 2.5 ಶೇಕಡಾ ಪಾಲನ್ನು ಹೊಂದಿದ್ದಾರೆ. ಇತ್ತೀಚೆಗೆ ಇತ್ತೀಚೆಗೆ ಹೊಸ ಬಜೆಟ್ ವಿಮಾನಯಾನ ಸಂಸ್ಥೆ ಆಕಾಶ ಏರ್ ಸ್ಥಾಪನೆ ಮಾಡಿದ್ದರು. ಆಗಸ್ಟ್ ತಿಂಗಳ ಆರಂಭದಲ್ಲೇ ವಿಮಾನಯಾನ ಕಂಡಿದ್ದ ಆಕಾಶ ಏರ್ ಬಗ್ಗೆ ರಾಕೇಶ್ ದೊಡ್ಡ ಮಟ್ಟದ ಕನಸು ಕಂಡಿದ್ದರು.

ಆಕಾಶ ಏರ್ ಮೊದಲ ವಿಮಾನ ಆರ್ಥಿಕ ರಾಜಧಾನಿ ಮುಂಬೈನಿಂದ ಅಹಮದಾಬಾದ್ ನಗರಕ್ಕೆ ಮೊದಲ ವಿಮಾನದೊಂದಿಗೆ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಜುಂಜುನ್‌ವಾಲಾ ಅವರ ಆಲೋಚನೆ, ಹೂದಿಕೆಗೆ ಮಾಜಿ ಜೆಟ್ ಏರ್‌ವೇಸ್ ಸಿಇಒ ದುಬೆ ಮತ್ತು ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಕೂಡಾ ಸಾಥ್ ನೀಡಿ ಆಕಾಶ ಏರ್ ಚಾಲನೆಗೆ ಕಾರಣರಾದರು.

English summary

Indian business magnate Rakesh Jhunjhunwala career, companies and net worth

Indian business magnate Rakesh Jhunjhunwala career, companies and net worth details in Kannada.
Story first published: Sunday, August 14, 2022, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X