For Quick Alerts
ALLOW NOTIFICATIONS  
For Daily Alerts

ಮಾನಸಿಕ ಆರೋಗ್ಯ ರಕ್ಷಣೆಗೂ ವಿಮೆ, ಇಲ್ಲಿದೆ ವಿವರ

|

ಕೊರೊನಾ ವೈರಸ್ ಸೋಂಕು ಇಡೀ ವಿಶ್ವವನ್ನೇ ಆವರಿಸಿಕೊಂಡ ಬಳಿಕ ಜನರಿಗೆ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಉಂಟಾಗಿದೆ. ಮನೆಯಲ್ಲಿಯೂ ಕೂತು, ಕೆಲಸ ಕಳೆದುಕೊಂಡು, ಕೈಯಲ್ಲಿ ಹಣವಿಲ್ಲದೆ ಹೀಗೆ ಹಲವಾರು ವಿಚಾರಗಳಿಂದಾಗಿ ಜನರ ಮಾನಸಿಕ ಸ್ಥಿತಿಯ ಮೇಲೆ ಕೋವಿಡ್ ಕೆಟ್ಟ ಪರಿಣಾಮ ಬೀರಿದೆ.

ಕೋವಿಡ್ ಸಾಂಕ್ರಾಮಿಕ ಹರಡುತ್ತಿದ್ದಂತೆ ದೇಶದಲ್ಲಿ ಲಾಕ್‌ಡೌನ್ ಮಾಡಲಾಯಿತು. ಕ್ವಾರಂಟೈನ್, ಸೀಲ್‌ಡೌನ್‌ಗಳನ್ನು ಮಾಡಲಾಯಿತು, ಅನೇಕ ಜನರು ತಮ್ಮ ಮನೆಗಳಿಂದ ದೂರವಿರುವ ಕಷ್ಟಕರ ಸಂದರ್ಭಗಳಲ್ಲೂ ಸಿಕ್ಕಿಬಿದ್ದಿದ್ದಾರೆ. ಇದು ಅನೇಕ ಜನರ ಮಾನಸಿಕ ಆರೋಗ್ಯವನ್ನು ಹೆಚ್ಚು ಅಪಾಯಕ್ಕೆ ಸಿಲುಕಿಸಿದೆ. ಈ ನಡುವೆ ಮಾನಸಿಕ ಆರೋಗ್ಯ ರಕ್ಷಣೆಗೂ ಆರೋಗ್ಯ ವಿಮೆ ಬೇಕಾಗಿದೆ.

ನಿಮ್ಮ ಸಾಕು ಪ್ರಾಣಿಗೆ ವಿಮೆ ಇದೆಯೇ, ಯಾವಾಗ ಖರೀದಿಸಬೇಕು?, ಇಲ್ಲಿದೆ ವಿವರನಿಮ್ಮ ಸಾಕು ಪ್ರಾಣಿಗೆ ವಿಮೆ ಇದೆಯೇ, ಯಾವಾಗ ಖರೀದಿಸಬೇಕು?, ಇಲ್ಲಿದೆ ವಿವರ

ಹೌದು, ಅಕ್ಟೋಬರ್ 31, 2022 ರ ಮೊದಲು, ಎಲ್ಲ ವಿಮಾ ಕಂಪನಿಗಳು ಆರೋಗ್ಯ ವಿಮಾ ರಕ್ಷಣೆಯಡಿಯಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಆದೇಶ ಹೊರಡಿಸಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 2017ರ ಮಾನಸಿಕ ಆರೋಗ್ಯ ಕಾಯಿದೆ

2017ರ ಮಾನಸಿಕ ಆರೋಗ್ಯ ಕಾಯಿದೆ

2017 ರ ಮಾನಸಿಕ ಆರೋಗ್ಯ ಕಾಯಿದೆಯ ಪ್ರಕಾರ, ಪ್ರತಿ ವಿಮಾದಾರರು ದೈಹಿಕ ಕಾಯಿಲೆಗಳಿಗೆ ಅದೇ ನಿಯಮಗಳ ಮೇಲೆ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ವೈದ್ಯಕೀಯ ವಿಮೆಯನ್ನು ನೀಡಬೇಕು. "ಎಲ್ಲಾ ವಿಮೆಗಳು ಮಾನಸಿಕ ಅಸ್ವಸ್ಥತೆಯನ್ನು ಒಳಗೊಂಡಿರುತ್ತವೆ. ಯಾವುದೇ ತೊಂದರೆ ಇಲ್ಲದೆ MHC ಕಾಯಿದೆ, 2017 ರ ನಿಬಂಧನೆಗಳನ್ನು ಅನುಸರಿಸುತ್ತವೆ. ಅಕ್ಟೋಬರ್ 31, 2022 ರ ಮೊದಲು ಇದನ್ನು ಎಲ್ಲ ವಿಮಾದಾರರು ಪಾಲನೆ ಮಾಡಬೇಕು," ಎಂದು ತಿಳಿಸಿದೆ.

 ಯಾರಿಗೆ ಇದು ಸಹಾಯಕ?

ಯಾರಿಗೆ ಇದು ಸಹಾಯಕ?

ಮಾನಸಿಕ ತೊಂದರೆಯಿಂದ, ಡಿಪ್ರೇಷನ್‌ನಿಂದಾಗಿ ಇಕ್ಕಟ್ಟಿನಲ್ಲಿ ಇರುವವರು ಈಗಾಗಲೇ ಹಲವಾರು ಮಂದಿ ಇದ್ದಾರೆ. ಇಂತಹ ಜನರಿಗೆ ಈ ವಿಮೆಯು ಸಹಾಯಕವಾಗಲಿದೆ. ಮಾನಸಿಕ ಆರೋಗ್ಯಕ್ಕಾಗಿ ವೈದ್ಯರ ಸಮಾಲೋಚನೆ ಪಡೆಯಲು ಬೇರೆಯೇ ಖರ್ಚು ಮಾಡಲು ಸಾಧ್ಯವಿಲ್ಲದವರಿಗೆ ಈ ಆರೋಗ್ಯ ವಿಮೆ ಸಹಕಾರಿಯಾಗಲಿದೆ. ಇದರರ್ಥ, ಕಾನೂನಿಗೆ ಅನುಸಾರವಾಗಿ, ನೀವು ಒಳರೋಗಿಗಳ ಆರೈಕೆಗಾಗಿ ಆಸ್ಪತ್ರೆಗೆ ಸೇರಿಸಬೇಕಾದರೆ ಚಿಕಿತ್ಸೆಯ ವೆಚ್ಚವನ್ನು ನಿಮ್ಮ ಮಾನಸಿಕ ಆರೋಗ್ಯ ವಿಮಾ ಯೋಜನೆಯು ಪಾವತಿಸುತ್ತದೆ.

 ಯಾವುದೆಲ್ಲ ಕವರ್ ಆಗುತ್ತದೆ?

ಯಾವುದೆಲ್ಲ ಕವರ್ ಆಗುತ್ತದೆ?

ಇದು ಪ್ರಿಸ್ಕ್ರಿಪ್ಷನ್ ಔಷಧಿಗಳ ಬೆಲೆ, ವೈದ್ಯಕೀಯ ಪರೀಕ್ಷೆಗಳು, ಚಿಕಿತ್ಸೆಗಳು, ಆಂಬ್ಯುಲೆನ್ಸ್ ಶುಲ್ಕಗಳು ಮತ್ತು ವಸತಿ ವೆಚ್ಚಗಳನ್ನು ಒಳಗೊಂಡಿದೆ. ವಿವಿಧ ವಿಮಾ ಕಂಪನಿಗಳು ಒದಗಿಸುವ ಕವರೇಜ್ ಬದಲಾಗಬಹುದು. ಖಿನ್ನತೆ, ಬೈಪೋಲಾರ್ ಕಾಯಿಲೆ, ಈಟಿಂಗ್ ಡಿಸಾರ್ಡರ್ (ತಿನ್ನದೆ ಇರುವುದು ಅಥವಾ ಅತೀಯಾಗಿ ಆಹಾರ ಸೇವಿಸುವುದು), ಮಾನಸಿಕ ಒತ್ತಡ (PTSD), ಹೆರಿಗೆ ಬಳಿಕ ಬರುವ ಮಾನಸಿಕ ಸಮಸ್ಯೆ, ಸ್ಕಿಜೋಫ್ರೇನಿಯಾ ಹೀಗೆ ಕೆಲವು ಮಾನಸಿಕ ಸಮಸ್ಯೆಗಳ ಚಿಕಿತ್ಸೆಯನ್ನು ಈ ಆರೋಗ್ಯ ವಿಮೆ ಕವರ್ ಮಾಡುತ್ತದೆ.

 ಮಾನಸಿಕ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಮುಂದಾಗಿದ್ದೀರಾ?

ಮಾನಸಿಕ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಮುಂದಾಗಿದ್ದೀರಾ?

ವಿಮಾದಾರರು ಮಾರಾಟ ಮಾಡುವ ಹೆಚ್ಚಿನ ಸಂಖ್ಯೆಯ ಆರೋಗ್ಯ ವಿಮಾ ಯೋಜನೆಗಳು ನವಜಾತ ಶಿಶುಗಳು ಅಥವಾ ಶಿಶುಗಳಿಗೆ ಜನನದ ವೇಳೆಯೇ ಉಂಟಾಗಿರುವ ಸಮಸ್ಯೆಗಳಿಗೆ ಆರೋಗ್ಯ ರಕ್ಷಣೆಯನ್ನು ನೀಡುವುದಿಲ್ಲ. ಹಾಗಾಗಿ ಒಂದು ಮಗುವಿನ ಜನನಕ್ಕೂ ಮುನ್ನವೇ ಈ ಎಲ್ಲ ಅಂಶಗಳು ಒಳಗೊಂಡಿರುವ ಆರೋಗ್ಯ ವಿಮೆಯನ್ನು ನಾವು ಮಾಡಿಸಿಕೊಳ್ಳಬೇಕಾಗುತ್ತದೆ. ಇದು ಮಗುವಿನ ಜನನದ ಬಳಿಕ ಆರೋಗ್ಯ ರಕ್ಷಣೆ ನೀಡುತ್ತದೆ. ಯಾವುದೇ ತೊಂದರೆ ಇದ್ದರೂ ಚಿಕಿತ್ಸೆಗೆ ಸಹಕಾರಿಯಾಗಲಿದೆ.

 ಷರತ್ತು ಅನ್ವಯ!

ಷರತ್ತು ಅನ್ವಯ!

ಪ್ರಸ್ತುತ ಈ ಆರೋಗ್ಯ ವಿಮೆಯಲ್ಲಿ ವಿಶೇಷಚೇತನ ಮತ್ತು ಬೌದ್ಧಿಕ ಅಸಾಮರ್ಥ್ಯತೆ ಹೊಂದಿರುವವರನ್ನು ಒಳಗೊಳ್ಳಿಸಿಲ್ಲ. ಇನ್ನು ಡ್ರಗ್ ಅಥವಾ ಮದ್ಯಪಾನದಿಂದಾಗಿ ಉಂಟಾದ ಮಾನಸಿಕ ಅಸ್ವಸ್ಥತೆಗೆ ಅಥವಾ ಆ ಚಟದಿಂದ ಹೊರಬರಲು ಪಡೆಯುವ ಚಿಕಿತ್ಸೆಗೆ ಆರೋಗ್ಯ ವಿಮೆ ಮೂಲಕ ವೆಚ್ಚ ಭರಿಸಲು ಅವಕಾಶವಿಲ್ಲ. ಮಾನಸಿಕ ಆರೋಗ್ಯ ವಿಮೆಯ ವೆಚ್ಚವು ಬದಲಾಗಬಹುದು.

English summary

Insurance to Cover Mental Health, Explained in Kannada

IRDAI has ordered insurance companies to cover mental illness under health insurance coverage before October 31, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X