For Quick Alerts
ALLOW NOTIFICATIONS  
For Daily Alerts

ಸಂಸ್ಥೆಗಳ ಐಟಿಆರ್ ಫೈಲಿಂಗ್ ಗಡುವು ವಿಸ್ತರಣೆ, ನೂತನ ಗಡುವು ತಿಳಿಯಿರಿ

|

ಕೇಂದ್ರ ಹಣಕಾಸು ಸಚಿವಾಲಯವು ಸಂಸ್ಥೆಗಳಿಗೆ ಐಟಿಆರ್ ಫೈಲಿಂಗ್ ವಿಚಾರದಲ್ಲಿ ಕೊಂಚ ರಿಲೀಫ್ ನೀಡಿದೆ. ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಕೊನೆಯ ದಿನಾಂಕ ಸಮೀಪಿಸಿದೆ ಎಂದು ಗಡಿಬಿಡಿಯಲ್ಲಿದ್ದ ಸಂಸ್ಥೆಗಳಿಗೆ ಸಿಹಿಸುದ್ದಿ ಒಂದಿದೆ. ಹೌದು, ಕೇಂದ್ರ ಸಚಿವಾಲಯ ಸಂಸ್ಥೆಗಳ ಐಟಿಆರ್ ಫೈಲಿಂಗ್ ಗಡುವು ವಿಸ್ತರಣೆ ಮಾಡಿದೆ.

ಸಂಸ್ಥೆಗಳ 2022-23 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಗಡುವನ್ನು ನವೆಂಬರ್ 7ರವರೆಗೆ ವಿಸ್ತರಣೆ ಮಾಡಲಾಗಿದೆ. ಸಂಸ್ಥೆಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 31 ಆಗಿತ್ತು. ಆ ದಿನಾಂಕ ಸಮೀಪಿಸುತ್ತಿರುವಾಗಲೇ ಕೇಂದ್ರ ಸರ್ಕಾರವು ಗಡುವನ್ನು ವಿಸ್ತರಣೆ ಮಾಡಿದೆ.

ಕೊನೆಯ ದಿನಕ್ಕೂ ಮುನ್ನ ಐಟಿಆರ್ ಸಲ್ಲಿಕೆ ಮಾಡಿದ್ರೆ ಲಾಭ, ಏನದು?ಕೊನೆಯ ದಿನಕ್ಕೂ ಮುನ್ನ ಐಟಿಆರ್ ಸಲ್ಲಿಕೆ ಮಾಡಿದ್ರೆ ಲಾಭ, ಏನದು?

ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಆಡಿಟ್ ವರದಿಯನ್ನು ಸಲ್ಲಿಕೆ ಮಾಡುವ ಗಡುವನ್ನು ಕಳೆದ ತಿಂಗಳು ವಿಸ್ತರಣೆ ಮಾಡಿದೆ. ಅದರಿಂದಾಗಿ ಈಗ ಐಟಿಆರ್ ಫೈಲಿಂಗ್ ಗಡುವನ್ನು ಕೂಡಾ ವಿಸ್ತರಣೆ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಧಿಸೂಚನೆ ಏನು ಹೇಳುತ್ತದೆ?

"ಸಿಬಿಡಿಟಿ 2022-23 ರ ಮೌಲ್ಯಮಾಪನ ವರ್ಷಕ್ಕಾಗಿ ಕಾಯಿದೆಯ ಸೆಕ್ಷನ್ 139 ರ ಉಪ-ವಿಭಾಗ (1) ರ ಅಡಿಯಲ್ಲಿ ಆದಾಯ ರಿಟರ್ನ್ ಸಲ್ಲಿಕೆ ದಿನಾಂಕವನ್ನು ಅಕ್ಟೋಬರ್ 31, 2022ರಿಂದ ನವೆಂಬರ್ 7, 2022 ರವರೆಗೆ ವಿಸ್ತರಿಸುತ್ತದೆ," ಎಂದು ಅಧಿಸೂಚನೆಯಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಕಳೆದ ತಿಂಗಳು ಸಿಬಿಡಿಟಿ ಆಡಿಟ್ ವರದಿಗಳನ್ನು ಸಲ್ಲಿಸುವ ಗಡುವನ್ನು ಅಕ್ಟೋಬರ್ 7 ರವರೆಗೆ 7 ದಿನಗಳವರೆಗೆ ವಿಸ್ತರಿಸಿತು.

ದೇಶೀಯ ಕಂಪನಿಗಳು 2021-2022 ರ ಹಣಕಾಸು ವರ್ಷಕ್ಕೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಅಕ್ಟೋಬರ್ 31, 2022 ರೊಳಗೆ ಸಲ್ಲಿಸಬೇಕಾಗುತ್ತದೆ. ವರ್ಗಾವಣೆ ದರದ ಮಾನದಂಡಗಳಿಗೆ ಒಳಪಟ್ಟಿರುವ ಕಂಪನಿಗಳಿಗೆ ಐಟಿಆರ್ ಸಲ್ಲಿಕೆ ಮಾಡುವ ಕೊನೆಯ ದಿನಾಂಕ ನವೆಂಬರ್ 30, 2022 ಆಗಿರುತ್ತದೆ.

2022-23ರ ಐಟಿಆರ್ ಈಗಲೇ ಫೈಲ್ ಮಾಡಿ ಎಂದ ಆದಾಯ ತೆರಿಗೆ ಇಲಾಖೆ2022-23ರ ಐಟಿಆರ್ ಈಗಲೇ ಫೈಲ್ ಮಾಡಿ ಎಂದ ಆದಾಯ ತೆರಿಗೆ ಇಲಾಖೆ

ಕೊನೆ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲ್ ಮಾಡಿ ಲಾಭ ಪಡೆಯಿರಿ

ನಾವು ಕೊನೆಯ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲಿಂಗ್ ಮಾಡಿದರೆ ನಮಗೆ ಲಾಭವಿದೆ. ಒಂದು ವೇಳೆ ಗಡುವು ಕಳೆದ ಬಳಿಕ ಐಟಿಆರ್ ಫೈಲ್ ಮಾಡಿದರೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಅದಕ್ಕಾಗಿ ನಾವು ಸರಿಯಾದ ಸಮಯದಲ್ಲೇ ಫೈಲ್ ಮಾಡಿದರೆ ಉತ್ತಮ. ನಾವು ಕೊನೆಯ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲ್ ಮಾಡಿದರೆ ನಮಗೆ ಹಲವು ಪ್ರಯೋಜನವಾಗಲಿದೆ. ಅವಧಿಗೂ ಮುನ್ನ ಫೈಲ್ ಮಾಡದಿದ್ದರೆ, ಕೆಲವು ತೊಂದರೆಗಳು ಕೂಡಾ ಉಂಟಾಗುತ್ತದೆ.

 ಸಂಸ್ಥೆಗಳ ಐಟಿಆರ್ ಫೈಲಿಂಗ್ ಗಡುವು ವಿಸ್ತರಣೆ, ನೂತನ ಗಡುವು ತಿಳಿಯಿರಿ

ನಾವು ದಂಡವನ್ನು ತಪ್ಪಿಸಿಕೊಳ್ಳುವುದು ಮಾತ್ರವಲ್ಲದೆ ಕಾನೂನು ಕ್ರಮದಿಂದಲೂ ತಪ್ಪಿಸಿಕೊಳ್ಳಬಹುದು. ಹಾಗೆಯೇ ಇದು ನಾವು ಸುಲಭವಾಗಿ ಸಾಲವನ್ನು ಪಡೆಯಲು ಕೂಡಾ ಸಹಕಾರಿಯಾಗಲಿದೆ. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡುವಾಗ ನೀವು ಬ್ಯಾಂಕಿಗೆ ಐಟಿಆರ್ ಸ್ಟೇಟ್‌ಮೆಂಟ್ ಅನ್ನು ಕೂಡಾ ನೀಡಬೇಕಾಗುತ್ತದೆ. ನೀವು ಐಟಿಆರ್ ಫೈಲ್ ಮಾಡಿದ್ದರೆ ಸಾಲ ಪಡೆಯುವುದು ಸುಲಭವಾಗಲಿದೆ.

ಬಹುತೇಕ ರಾಯಭಾರ ಕಚೇರಿಗಳಲ್ಲಿ ನೀವು ವೀಸಾಕ್ಕಾಗಿ ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಐಟಿಆರ್ ಸ್ಟೇಟ್‌ಮೆಂಟ್ ಅನ್ನು ಕೂಡಾ ಸಲ್ಲಿಕೆ ಮಾಡಬೇಕಾಗುತ್ತದೆ. ನಿಮ್ಮ ತೆರಿಗೆ ಪಾವತಿಯಲ್ಲಿ ಯಾವುದೇ ತೊಂದರೆ ಇಲ್ಲವಾದರೆ ನಿಮಗೆ ವೀಸಾ ಸುಲಭವಾಗಿ ಲಭ್ಯವಾಗಬಹುದು.

English summary

ITR: Income Tax Returns Filing Deadline Extended Till November 7 For Companies

Income Tax Returns: ITR Filing Deadline For Companies Extended Till November 7. Here's details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X