For Quick Alerts
ALLOW NOTIFICATIONS  
For Daily Alerts

ದೇಶಾದ್ಯಂತ 5ಜಿ ನೆಟ್‌ವರ್ಕ್‌ ಆರಂಭಕ್ಕೆ ಸಿದ್ಧ ಎಂದ ಜಿಯೋ

|

ಮುಂಬೈ, ಆಗಸ್ಟ್ 02: ಭಾರಿ ಕುತೂಹಲ ಕೆರಳಿಸಿದ್ದ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ರಿಲಯನ್ಸ್‌ ಜಿಯೋ ಅತಿ ಹೆಚ್ಚಿನ ತರಂಗಾಂತರಗಳನ್ನು ಖರೀದಿಸಿದೆ. ಒಟ್ಟು 88078 ಕೋಟಿ ರೂ. ಮೌಲ್ಯದ 5ಜಿ ತರಂಗಾಂತರಗಳನ್ನು ರಿಲಯನ್ಸ್‌ ಜಿಯೋ ಖರೀದಿ ಮಾಡಿದೆ. 700 ಮೆಗಾಹರ್ಟ್ಸ್‌, 800 ಮೆಗಾಹರ್ಟ್ಸ್‌, 1800 ಮೆಗಾಹರ್ಟ್ಸ್‌, 3300 ಮೆಗಾಹರ್ಟ್ಸ್‌ ಮತ್ತು 26 ಗಿಗಾಹರ್ಟ್ಸ್‌ ಬ್ಯಾಂಡ್‌ಗಳನ್ನು ರಿಲಾಯನ್ಸ್‌ ಜಿಯೋ ಖರೀದಿ ಮಾಡಿದೆ.

ರಿಲಯನ್ಸ್‌ ಜಿಯೋ ಇನ್‌ಫೋಕಾಮ್‌ ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ, ''ಭಾರತವು ತಂತ್ರಜ್ಞಾನ ಶಕ್ತಿ ಅಳವಡಿಸಿಕೊಂಡು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದರಲ್ಲಿ ನಮಗೆ ವಿಶ್ವಾಸವಿದೆ. ಈ ಧ್ಯೇಯವನ್ನು ಇಟ್ಟುಕೊಂಡೇ ನಾವು ಜಿಯೋ ಸ್ಥಾಪಿಸಿದ್ದೇವೆ. ಜಿಯೋ 4ಜಿ ಮೂಲಕ ಹೊರಹೊಮ್ಮಿಸಿದ ವೇಗ, ತೀವ್ರತೆ ಮತ್ತು ಸಾಮಾಜಿಕ ಬದಲಾವಣೆ ಅತ್ಯಂತ ಮಹತ್ವದ್ದು. ಈಗ ಇನ್ನೊಂದು ಮಹತ್ವಾಕಾಂಕ್ಷೆ ಮತ್ತು ಸಂಕಲ್ಪದಿಂದ 5ಜಿ ಯುಗವನ್ನು ಮುನ್ನಡೆಸಲು ಜಿಯೋ ಸಿದ್ಧವಾಗಿದೆ'' ಎಂದರು.

4ಜಿಗಿಂತ 5ಜಿ ಹೇಗೆ ಭಿನ್ನ, ಉದ್ಯಮಕ್ಕೆ ಏನು ಪ್ರಭಾವ?, ಇಲ್ಲಿದೆ ಮಾಹಿತಿ4ಜಿಗಿಂತ 5ಜಿ ಹೇಗೆ ಭಿನ್ನ, ಉದ್ಯಮಕ್ಕೆ ಏನು ಪ್ರಭಾವ?, ಇಲ್ಲಿದೆ ಮಾಹಿತಿ

''ನಾವು ಇಡೀ ಭಾರತದಲ್ಲಿ 5ಜಿ ಪರಿಚಯಿಸುವುದರೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ್ ಅನ್ನು ಆಚರಿಸುತ್ತೇವೆ. ವಿಶ್ವದರ್ಜೆಯ 5ಜಿ ನೆಟ್‌ವರ್ಕ್‌ ಅನ್ನು ಕೈಗೆಟಕುವ ದರದಲ್ಲಿ ಒದಗಿಸಲು ನಾವು ಸಿದ್ಧವಾಗಿದ್ದೇವೆ. ನಾವು ಭಾರತದ ಡಿಜಿಟಲ್ ಕ್ರಾಂತಿಯನ್ನು ವೇಗಗೊಳಿಸುವ ಸೇವೆಗಳು, ವೇದಿಕೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತೇವೆ, ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಉತ್ಪಾದನೆ ಮತ್ತು ಇ-ಆಡಳಿತದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಮಿಷನ್‌ಗೆ ಮತ್ತೊಂದು ಹೆಮ್ಮೆಯ ಕೊಡುಗೆಯನ್ನು ನೀಡುತ್ತೇವೆ" ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.

ವಾಣಿಜ್ಯ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ

ವಾಣಿಜ್ಯ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ

ವಾಣಿಜ್ಯ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ''ಅಕ್ಟೋಬರ್ ತಿಂಗಳಲ್ಲಿ ಟೆಲಿಕಾಂ ಕಂಪನಿಗಳು 5ಜಿ ಸೇವೆ ಆರಂಭಿಸಬಹುದು. 2-3 ವರ್ಷಗಳಲ್ಲಿ ದೇಶಾದ್ಯಂತ ಸಂಪೂರ್ಣವಾಗಿ 5ಜಿ ಅಳವಡಿಕೆ ಆಗುವ ಸಾಧ್ಯತೆ ಇದೆ. ಮುಂದಿನ ಕೆಲ ವರ್ಷಗಳಲ್ಲಿ 5ಜಿ ನೆಟ್ವರ್ಕ್ ಅಭಿವೃದ್ಧಿಗೆ ಟೆಲಿಕಾಂ ಕಂಪನಿಗಳಿಂದ 3 ಲಕ್ಷ ಕೋಟಿ ರೂ ಹೂಡಿಕೆಯಾಗುವ ನಿರೀಕ್ಷೆಯೂ ಇದೆ'' ಎಂದಿದ್ದಾರೆ.

ಮುಂಬೈನಲ್ಲಿ ಪಿಇ ಫಂಡ್‌ಗಳು, ವಿಸಿಗಳು, ಹೂಡಿಕೆದಾರರು ಮತ್ತು ಬ್ಯಾಂಕ್‌ಗಳೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯಗಳು ಮತ್ತು ಟೆಲಿಕಾಂ ಕ್ಷೇತ್ರದ ಬೆಳವಣಿಗೆಯ ಹಾದಿ ಬಗ್ಗೆ ಚರ್ಚಿಸಲಿದ್ದಾರೆ. ಸರ್ಕಾರವು ಕ್ಷೇತ್ರಕ್ಕೆ ಹೊಸ ಕಾನೂನು ಚೌಕಟ್ಟನ್ನು ರೂಪಿಸುತ್ತಿರುವ ಸಮಯದಲ್ಲಿ ಈ ಕ್ರಮವು ಬಂದಿದೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲೇ ಅತಿ ಹೆಚ್ಚು ತರಂಗಾಂತರಗಳನ್ನು ಹೊಂದಿರುವ ಸಂಸ್ಥೆ

ದೇಶದಲ್ಲೇ ಅತಿ ಹೆಚ್ಚು ತರಂಗಾಂತರಗಳನ್ನು ಹೊಂದಿರುವ ಸಂಸ್ಥೆ

700 ಮೆಗಾಹರ್ಟ್ಸ್‌ ತರಂಗಾಂತರಗಳನ್ನು ಈ ಹರಾಜಿನಲ್ಲಿ ಜಿಯೋ ಪಡೆದಿದ್ದು, ದೇಶದಲ್ಲಿ ನಿಜವಾದ 5ಜಿ ಸೇವೆಗಳನ್ನು ಜಿಯೋ ಮಾತ್ರ ಒದಗಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೆ, ಈ ಹರಾಜಿನಲ್ಲಿ ಪಡೆದ ತರಂಗಾಂತರಗಳೂ ಸೇರಿದಂತೆ ಜಿಯೋ ಒಟ್ಟು 26,772 ಮೆಗಾಹರ್ಟ್ಸ್‌ (ಡೌನ್‌ಲಿಂಕ್‌ ಹಾಗೂ ಅಪ್‌ಲಿಂಕ್‌) ತರಂಗಾಂತರಗಳನ್ನು ಜಿಯೋ ಪಡೆದುಕೊಂಡಿರಲಿದೆ. ಇದು ದೇಶದಲ್ಲೇ ಅತಿ ಹೆಚ್ಚು ತರಂಗಾಂತರಗಳನ್ನು ಹೊಂದಿರುವ ಸಂಸ್ಥೆಯಾಗಿರಲಿದೆ.

4.3 ಲಕ್ಷ ಕೋಟಿ ಮೌಲ್ಯದ ತರಂಗಾಂತರ ತರಂಗಾಂತರ

4.3 ಲಕ್ಷ ಕೋಟಿ ಮೌಲ್ಯದ ತರಂಗಾಂತರ ತರಂಗಾಂತರ

5G ಸ್ಪೆಕ್ಟ್ರಮ್ ಹರಾಜಿನಲ್ಲಿ 4.3 ಲಕ್ಷ ಕೋಟಿ ಮೌಲ್ಯದ 72 GHz ರೇಡಿಯೊವೇವ್‌ಗಳಿಗೆ ಬಿಡ್ಡಿಂಗ್ ನಡೆಸಲಾಗಿತ್ತು. 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿ ನಡೆಯುವ ಹರಾಜು ಇದಾಗಿತ್ತು. ಹರಾಜಿನಲ್ಲಿ ಗೆಲುವು ಸಾಧಿಸಿದ ಸಂಸ್ಥೆಯು 20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆಯ ಹಕ್ಕು ಹೊಂದಲಿದ್ದಾರೆ.

 5G ಪ್ರಯೋಜನಗಳು

5G ಪ್ರಯೋಜನಗಳು

ಪೂರ್ಣ-ಪ್ರಮಾಣದ ಉನ್ನತ-ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನಕ್ಕೆ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು ಅನುಮತಿಸುವ ಅತಿ-ಕಡಿಮೆ ಲೇಟೆನ್ಸಿ ಸಂಪರ್ಕಗಳನ್ನು ಶಕ್ತಿಯುತಗೊಳಿಸುವುದರ ಜೊತೆಗೆ (ಜನನಿಬಿಡ ಪ್ರದೇಶಗಳಲ್ಲಿಯೂ ಸಹ), ಐದನೇ ತಲೆಮಾರಿನ ಅಥವಾ 5G ಇ-ಆರೋಗ್ಯದಂತಹ ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ. ಸಂಪರ್ಕಿತ ವಾಹನಗಳು, ಹೆಚ್ಚು ತಲ್ಲೀನಗೊಳಿಸುವ ವರ್ಧಿತ ರಿಯಾಲಿಟಿ ಮತ್ತು ಮೆಟಾವರ್ಸ್ ಅನುಭವಗಳು, ಜೀವ ಉಳಿಸುವ ಬಳಕೆಯ ಪ್ರಕರಣಗಳು ಮತ್ತು ಇತರವುಗಳಲ್ಲಿ ಮುಂದುವರಿದ ಮೊಬೈಲ್ ಕ್ಲೌಡ್ ಗೇಮಿಂಗ್ ಕೂಡಾ 5ಜಿಯಿಂದ ಸಾಧ್ಯವಿದೆ.

English summary

Jio gets ready to roll-out the World’s Most Advanced 5G Network across India

Jio, India’s largest digital services provider, acquired spectrum in the 700MHz, 800MHz, 1800MHz, 3300MHz and 26GHz bands in the auctions conducted by the Department of Telecommunications, Government of India.
Story first published: Tuesday, August 2, 2022, 17:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X