For Quick Alerts
ALLOW NOTIFICATIONS  
For Daily Alerts

Ladli Laxmi Yojana : ಈ ಯೋಜನೆಯಡಿಯಲ್ಲಿ 1 ಲಕ್ಷ ಪಡೆಯಿರಿ, ಅರ್ಹತೆ, ಹೇಗೆ, ಇತರೆ ಮಾಹಿತಿ

|

ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳ ಫಲಾನುಭವವನ್ನು ಪಡೆದುಕೊಳ್ಳಲು ಹಲವಾರು ಮಂದಿಗೆ ತಿಳಿದಿಲ್ಲ. ಇಂತಹ ಒಂದು ಯೋಜನೆಗಳು ಇದೆ ಎಂಬುವುದೇ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಅಂತಹ ಯೋಜನೆಗಳ ಪೈಕಿ ಒಂದು ಲಾಡ್ಲಿ ಲಕ್ಮ್ಮೀ ಯೋಜನೆಯಾಗಿದೆ. ಈ ಯೋಜನೆ ಮೂಲಕ ನಾವು ಒಂದು ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ.

 

ಲಾಡ್ಲಿ ಲಕ್ಮ್ಮೀ ಯೋಜನೆಯನ್ನು ಭಾರತ ಸರ್ಕಾರವು ಜಾರಿ ಮಾಡಿದೆ. ಪ್ರಮುಖವಾಗಿ ದೇಶದಲ್ಲಿರುವ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸುರಕ್ಷತೆಗಾಗಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬಕ್ಕಾಗಿ ಸರ್ಕಾರವು ಜಾರಿಗೆ ತಂದಿದೆ. ಫಿಕ್ಸಿಡ್ ಡೆಪಾಸಿಟ್ ಯೋಜನೆ ಇದಾಗಿದ್ದು, ಹೂಡಿಕೆಯನ್ನು ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಇತರೆ ಖರ್ಚಿಗಾಗಿ ಆಕೆಗೆ 18 ವರ್ಷವಾದಾಗ ಬಳಕೆ ಮಾಡಲು ಅವಕಾಶ ನೀಡುವ ಯೋಜನೆ ಇದಾಗಿದೆ.

ಲಾಡ್ಲಿ ಲಕ್ಮ್ಮೀ ಯೋಜನೆಯನ್ನು ಸರ್ಕಾರವು 2006ರಲ್ಲಿ ಜಾರಿಗೆ ತಂದಿದೆ. ಮೊದಲು ಮಧ್ಯ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ. ಅದಾದ ಬಳಿಕ ಈ ಯೋಜನೆಯನ್ನು ಹರಿಯಾಣ, ರಾಜಸ್ಥಾನ, ಬಿಹಾರ ಮೊದಲಾದ ರಾಜ್ಯಗಳಿಗೆ ವಿಸ್ತರಿಸಲಾಗಿದೆ. ಈ ಯೋಜನೆಯಡಿಯಲ್ಲಿ ಹೆಣ್ಣು ಮಗುವನ್ನು ಹೊಂದಿರುವ ಕುಟುಂಬವು ಹೆಣ್ಣಿಗೆ 18 ವರ್ಷ ವಯಸ್ಸಾದಾಗ ಸುಮಾರು 100,000 ರೂಪಾಯಿವರೆಗೆ ಹಣವನ್ನು ಪಡೆಯಲು ಸಾಧ್ಯವಾಗಲಿದೆ. ಬಡ್ಡಿದರವು ಕೂಡಾ ಈ ಯೋಜನೆಯಡಿಯಲ್ಲಿ ಲಭ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಈ ಯೋಜನೆಗೆ ಯಾರು ಅರ್ಹರು?

ಈ ಯೋಜನೆಗೆ ಯಾರು ಅರ್ಹರು?

ಹೆಣ್ಣು ಮಗು ಜನಿಸಿದಾಗಲೇ ಲಾಡ್ಲಿ ಲಕ್ಷ್ಮೀ ಯೋಜನೆಯಲ್ಲಿ ರಿಜಿಸ್ಟಾರ್ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಪೋಷಕರು ಈ ಯೋಜನೆಯನ್ನು ಯಾವೆಲ್ಲ ರಾಜ್ಯದಲ್ಲಿ ಜಾರಿಗೆ ತರಲಾಗಿದೆ, ಆ ರಾಜ್ಯದಲ್ಲೇ ವಾಸಿಸುತ್ತಿರುವ ನಿವಾಸಿಗಳು ಆಗಿರಬೇಕು. ಪ್ರಸ್ತುತ ಈ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಇದಕ್ಕೆ ಸಮನಾಗಿ ಹಲವಾರು ಮಹಿಳಾ ಕಲ್ಯಾಣ ಯೋಜನೆಗಳು ಕರ್ನಾಟಕದಲ್ಲಿದೆ. ಇನ್ನು ಈ ಯೋಜನೆಯ ಫಲಾನುಭವಿಗಳ ವಾರ್ಷಿಕ ಆದಾಯವು 400,000 ರೂಪಾಯಿಗಿಂತ ಕಡಿಮೆ ಇರಬೇಕು. ಹಾಗೆಯೇ ಮಗುವಿಗೆ ಅಗತ್ಯವಾಗಿರುವ ಎಲ್ಲ ಲಸಿಕೆಗಳನ್ನು ಹಾಕಿಸಿಕೊಂಡಿರಬೇಕು. ಮಗುವನ್ನು ಶಾಲೆಗೆ ಸೇರಿಸಿರಬೇಕು.

 ಈ ಯೋಜನೆಯ ಪ್ರಯೋಜನಗಳು

ಈ ಯೋಜನೆಯ ಪ್ರಯೋಜನಗಳು

ಲಾಡ್ಲಿ ಲಕ್ಮ್ಮೀ ಯೋಜನೆಯಡಿಯಲ್ಲಿ ಹಲವಾರು ಪ್ರಯೋಜನಗಳು ಇದೆ. ಈ ಯೋಜನೆಯು ಹೆಣ್ಣು ಮಕ್ಕಳಿರುವ ಕುಟುಂಬಕ್ಕೆ ಹಣಕಾಸು ಸಹಾಯವನ್ನು ನೀಡುತ್ತದೆ. ಇದನ್ನು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಅವರಿಗೆ ಬೇಕಾದ ಇತರೆ ಖರ್ಚಿಗಾಗಿ ಬಳಕೆ ಮಾಡಿಕೊಳ್ಳಬಹುದು. ಇದು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವುದು ಮಾತ್ರವಲ್ಲದೆ, ಕುಟುಂಬವು ಹೆಣ್ಣು ಮಗುವಿಗಾಗಿ ವೆಚ್ಚ ಮಾಡಲು ಆರ್ಥಿಕ ಸಹಾಯವನ್ನು ನೀಡುತ್ತದೆ. ಹಾಗೆಯೇ ಮಕ್ಕಳಿಗೆ ಲಸಿಕೆಯನ್ನು ನೀಡಬೇಕಾದ ಪ್ರಾಮುಖ್ಯತೆಯನ್ನು ಕೂಡಾ ಸಾರುತ್ತದೆ. ಹಾಗೆಯೇ ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ತರುತ್ತದೆ.

 ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
 

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಲಾಡ್ಲಿ ಲಕ್ಮ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಸಮೀಪದ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಅಥವಾ ಬ್ಯಾಂಕ್‌ನ ಬ್ರಾಂಚ್‌ಗೆ ಭೇಟಿ ನೀಡಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಕಚೇರಿ ಅಥವಾ ಬ್ಯಾಂಕ್‌ನಲ್ಲಿ ನೀಡಲಾಗುವ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅಲ್ಲಿನ ಸಿಬ್ಬಂದಿಗಳ ಸಹಾಯವನ್ನು ಕೂಡ ಪಡೆಯಬಹುದು. ನಿಮ್ಮ ವಿಳಾಸ ಪುರಾವೆ, ಆದಾಯ ಪುರಾವೆ, ಮಗುವಿನ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್‌ನಂತಹ ದಾಖಲೆಗಳು ಬೇಕಾಗುತ್ತದೆ. ಸಂಬಂಧಪಟ್ಟ ಇಲಾಖೆಯು ಈ ಅರ್ಜಿಯನ್ನು ಪರಿಶೀಲನೆ ಮಾಡಿ, ಹೆಣ್ಣು ಮಗುವಿನ ಹೆಸರಲ್ಲಿ ಫಿಕ್ಸಿಡ್ ಡೆಪಾಸಿಟ್ ಅನ್ನು ಇರಿಸುತ್ತದೆ. ಈ ಮೊತ್ತವನ್ನು ಹೆಣ್ಣು ಮಗುವಿಗೆ 18 ವರ್ಷವಾದಾಗ ವಿತ್‌ಡ್ರಾ ಮಾಡಿಕೊಂಡು ಹೆಣ್ಣು ಮಕ್ಕಳ ಶಿಕ್ಷಣ ಅಥವಾ ಆರೋಗ್ಯಕ್ಕಾಗಿ ಬಳಕೆ ಮಾಡಬಹುದು.

English summary

Ladli Laxmi Yojana: Know Eligibility, Features, Benefits and Other Details in Kannada

Ladli Laxmi Yojana: Get Rs. 1 lakh Under this Government Scheme, Know Eligibility, Features, Benefits, How to apply and Other Details in Kannada, here in Kannada, read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X