For Quick Alerts
ALLOW NOTIFICATIONS  
For Daily Alerts

Richest Women in India 2022: ಭಾರತದಲ್ಲಿ ಅತೀ ಶ್ರೀಮಂತ ಮಹಿಳೆ ಯಾರು?

|

ಕೋಟಕ್ ಪ್ರೈವೆಟ್ ಬ್ಯಾಂಕಿಂಗ್ ಹಾಗೂ ಹುರುನ್ ಇಂಡಿಯಾ ಭಾರತದ ಅತೀ ಶ್ರೀಮಂತ ಮಹಿಳೆಯರ ಪಟ್ಟಿಯನ್ನು 2022ರ ಜುಲೈ 27ರಂದು ಬಿಡುಗಡೆ ಮಾಡಿದೆ. 2021ರ ಡಿಸೆಂಬರ್ 31ರವರೆಗೆ ಸಂಪತ್ತಿನ ಆಧಾರದಲ್ಲಿ ಈ ಪಟ್ಟಿಯನ್ನು ಮಾಡಲಾಗಿದೆ. ಈ ಪಟ್ಟಿಯ ಪ್ರಕಾರ 84,330 ಕೋಟಿ ನಿವ್ವಳ ಆದಾಯದೊಂದಿಗೆ ಎಚ್‌ಸಿಎಲ್ ಟೆಕ್ನಾಲಜೀಸ್ ಮುಖ್ಯಸ್ಥೆ ರೋಶಿನಿ ನಾಡಾರ್ ಮಲ್ಹೋತ್ರಾ ಭಾರತದ ಅತೀ ಶ್ರೀಮಂತ ಮಹಿಳೆಯಾಗಿದ್ದಾರೆ. ಎರಡನೇ ಬಾರಿಗೆ ತನ್ನ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ.

 

ರೋಶಿನಿ ನಾಡಾರ್ ಮಲ್ಹೋತ್ರಾರ ಬಳಿಕ ಫಲ್ಗುಣಿ ನಾಯರ್ ಎರಡನೇ ಅತೀ ದೊಡ್ಡ ಶ್ರೀಮಂತ ಮಹಿಳೆಯಾಗಿದ್ದಾರೆ. ಮೂರನೇ ಅತೀ ಶ್ರೀಮಂತ ಮಹಿಳೆ ಕಿರಣ್ ಮಂಜುದರ್ ಶಾ ಆಗಿದ್ದಾರೆ. Nykaa ಸಂಸ್ಥೆಯ ಸಿಇಒ ಫಲ್ಗುಣಿ ನಾಯರ್ ಕೂಡಾ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಇದ್ದಾರೆ.

ಭಾರತದಲ್ಲಿನ 100 ಶ್ರೀಮಂತ ಮಹಿಳೆಯರ ಪಟ್ಟಿಯು ಭಾರತೀಯ ಮಹಿಳೆಯರನ್ನು ಮಾತ್ರ ಹೊಂದಿದೆ. ಇದರಲ್ಲಿ ದೇಶದಲ್ಲಿ ಹುಟ್ಟಿ ಅಥವಾ ಬೆಳೆದವರು ಎಂದು ವ್ಯಾಖ್ಯಾನಿಸಲಾಗಿದೆ. ಹಾಗೆಯೇ ಪ್ರಸ್ತುತವೂ ವ್ಯಾಪಾರವನ್ನು ಸಕ್ರಿಯವಾಗಿ ನಿರ್ವಹಣೆ ಮಾಡುವವರು ಎಂದು ಉಲ್ಲೇಖ ಮಾಡಲಾಗಿದೆ. ಗಮನಾರ್ಹವಾಗಿ, ಈ 100 ಮಹಿಳೆಯರ ಸಂಚಿತ ಸಂಪತ್ತು ಒಂದು ವರ್ಷದಲ್ಲಿ 53 ಪ್ರತಿಶತದಷ್ಟು ಹೆಚ್ಚಾಗಿದೆ. 2020 ರಲ್ಲಿ 2.72 ಲಕ್ಷ ಕೋಟಿ ರೂಪಾಯಿ ಇದ್ದ ಸಂಪತ್ತು. 2021 ರಲ್ಲಿ 4.16 ಲಕ್ಷ ಕೋಟಿ ರೂಪಾಯಿ ಆಗಿದೆ. ಗಮನಾರ್ಹವಾಗಿ, 2022 ರ ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ, ರಾಷ್ಟ್ರೀಯ ರಾಜಧಾನಿ ದೆಹಲಿ ಪ್ರದೇಶದವರು ಅತೀ ಹೆಚ್ಚು ಮಂದಿ ಇದ್ದಾರೆ. ಟಾಪ್ ಐದು ಶ್ರೀಮಂತ ಮಹಿಳೆಯರ ಬಗ್ಗೆ ತಿಳಿಯಲು ಮುಂದೆ ಓದಿ...

 ಟಾಪ್ 1: ರೋಶಿನಿ ನಾಡಾರ್ ಮಲ್ಹೋತ್ರಾ

ಟಾಪ್ 1: ರೋಶಿನಿ ನಾಡಾರ್ ಮಲ್ಹೋತ್ರಾ

ಎಚ್‌ಸಿಎಲ್ ಟೆಕ್ನಾಲಜೀಸ್ ಮುಖ್ಯಸ್ಥೆ ರೋಶಿನಿ ನಾಡಾರ್ ಮಲ್ಹೋತ್ರಾ ಭಾರತದ ಅತೀ ಶ್ರೀಮಂತ ಮಹಿಳೆಯಾಗಿದ್ದಾರೆ. ಸತತ ಎರಡನೇ ಬಾರಿಗೆ ಅಗ್ರಸ್ಥಾನದಲ್ಲಿದ್ದಾರೆ. ಮಲ್ಹೋತ್ರಾ ನಾಯಕತ್ವದಲ್ಲಿ, ಎಚ್‌ಸಿಎಲ್ ರೂ. 13,740 ಕೋಟಿ ಮೌಲ್ಯದ ಏಳು ಐಬಿಎಂ ಉತ್ಪನ್ನಗಳನ್ನು ಖರೀದಿಸಿದೆ. ಭಾರತದಲ್ಲಿ ಐಟಿ ಕಂಪನಿಯನ್ನು ಮುನ್ನಡೆಸುವ ಮೊದಲ ಮಹಿಳೆ ಆಗಿದ್ದಾರೆ. 2020 ರಲ್ಲಿ ಫೋರ್ಬ್ಸ್‌ನ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 55 ನೇ ಸ್ಥಾನದಲ್ಲಿದ್ದರು.

 ಟಾಪ್ 2: ಫಲ್ಗುಣಿ ನಾಯರ್

ಟಾಪ್ 2: ಫಲ್ಗುಣಿ ನಾಯರ್

ಫಲ್ಗುಣಿ ನಾಯರ್ ಭಾರತದ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವಿಶ್ವದ ಹತ್ತನೇ ಶ್ರೀಮಂತ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿ ಆಗಿದ್ದಾರೆ. Nykaa ದ ಸ್ಥಾಪಕಿ, ಸಂಸ್ಥೆಯ ಸಿಇಒ ಫಲ್ಗುಣಿ ನಾಯರ್ ಸಂಪತ್ತು ಕೇವಲ ಒಂದು ವರ್ಷದ ಅವಧಿಯಲ್ಲಿ ಶೇಕಡಾ 963 ಹೆಚ್ಚಾಗಿದೆ. ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾರಗಿಂತ ಆಸ್ತಿ ಹೆಚ್ಚಿಸಿಕೊಳ್ಳುವ ಮೂಲಕ ಫಲ್ಗುಣಿ ನಾಯರ್ ಭಾರತದ ಎರಡನೇ ಶ್ರೀಮಂತ ಮಹಿಳೆಯಾಗಿದ್ದಾರೆ.

 ಟಾಪ್ 3: ಕಿರಣ್ ಮಜುಂದಾರ್-ಶಾ
 

ಟಾಪ್ 3: ಕಿರಣ್ ಮಜುಂದಾರ್-ಶಾ

ಬಯೋಕಾನ್‌ನ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಿರಣ್ ಮಜುಂದಾರ್ ಶಾ ಕೂಡಾ ಸ್ವಯಂ ನಿರ್ಮಿತ ಅಂದರೆ ತಾವಾಗಿಯೇ ಉದ್ಯಮ ಆರಂಭ ಮಾಡಿ ಶ್ರೀಮಂತರಾಗಿರುವ ಮಹಿಳೆಯಾಗಿದ್ದಾರೆ. ಅಭಿವೃದ್ಧಿಯಾಗದ ದೇಶಗಳಿಗೆ ಔಷಧಿಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 68 ವರ್ಷ ಪ್ರಾಯದ ಕಿರಣ್ ಮಜುಂದಾರ್-ಶಾ ಭಾರತದ ಔಷಧೀಯ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. 1978 ರಲ್ಲಿ ಬೆಂಗಳೂರು ಮೂಲದ ಬಯೋಕಾನ್ ಲಿಮಿಟೆಡ್ ಅನ್ನು ಕೇವಲ ಇಬ್ಬರು ಉದ್ಯೋಗಿಗಳೊಂದಿಗೆ ಸ್ಥಾಪಿಸಿದರು. ಪ್ರಸ್ತುತ ಕಂಪನಿಯು ಮಾರುಕಟ್ಟೆಯ ವಲಯದಲ್ಲಿ 50,000 ಕೋಟಿ ರೂಪಾಯಿಗೂ ಅಧಿಕ ಆದಾಯ ಹೊಂದಿದೆ.

 ಟಾಪ್ 4-5: ನಿಲಿಮಾ ಮೋಟಪರ್ತಿ, ರಾಧಾ ವೆಂಬು

ಟಾಪ್ 4-5: ನಿಲಿಮಾ ಮೋಟಪರ್ತಿ, ರಾಧಾ ವೆಂಬು

ಕಳೆದ ಐದು ವರ್ಷಗಳಿಂದ ದಿವಿಸ್ ಲ್ಯಾಬೋರೇಟರೀಸ್‌ನ ನಿರ್ದೇಶಕಿ ನಿಲಿಮಾ ಮೋಟಪರ್ತಿ ಸಂಸ್ಥೆಯ ಎಲ್ಲಾ ಚಟುವಟಿಕೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ವರ್ಷದಲ್ಲಿ ನಿಲಿಮಾ ಮೋಟಪರ್ತಿ ಸಂಪತ್ತು ಶೇಕಡಾ 50 ಕ್ಕಿಂತ ಹೆಚ್ಚಾಯಿತು. ಇನ್ನು ಭಾರತದ ಐದನೇ ಅತೀ ಶ್ರೀಮಂತ ಮಹಿಳೆ ರಾಧಾ ವೆಂಬು ಆಗಿದ್ದಾರೆ. ರಾಧಾ ವೆಂಬು ಅವರು ತಮ್ಮ ಸಹೋದರ ಶ್ರೀಧರ್ ವೆಂಬು ಅವರೊಂದಿಗೆ ಟೆಕ್ ಕಂಪನಿಯನ್ನು ಸ್ಥಾಪಿಸಿದರು. 2007 ರಿಂದ ಸಹ ನಿರ್ವಾಹಕರಾಗಿದ್ದಾರೆ. Zoho ನಿರ್ವಾಹಕರಾಗಿ ಒಂದು ವರ್ಷದಲ್ಲಿ ರಾಧಾ ವೆಂಬು ಸಂಪತ್ತು ಶೇಕಡ 127ರಷ್ಟು ಏರಿಕೆಯಾಗಿದೆ.

 ಭಾರತದ ಟಾಪ್-20 ಶ್ರೀಮಂತ ಮಹಿಳೆಯರು

ಭಾರತದ ಟಾಪ್-20 ಶ್ರೀಮಂತ ಮಹಿಳೆಯರು

1. ರೋಶಿನಿ ನಾಡಾರ್ ಮಲ್ಹೋತ್ರಾ, ಸಂಸ್ಥೆ ಹೆಚ್.ಸಿ.ಎಲ್, 84,330 ಕೋಟಿ ರೂಪಾಯಿ ಆದಾಯ
2. ಫಲ್ಗುಣಿ ನಾಯರ್, Nykaa, 57,520 ಕೋಟಿ ರೂಪಾಯಿ ಆದಾಯ
3. ಕಿರಣ್ ಮಜುಂದಾರ್ ಶಾ, ಬಯೋಕಾನ್, 29,030 ಕೋಟಿ ರೂಪಾಯಿ ಆದಾಯ
4. ನಿಲಿಮಾ ಮೋಟಪರ್ತಿ, ದಿವಿ ಲ್ಯಾಬೋರಟೀಸ್, 28,180 ಕೋಟಿ ರೂಪಾಯಿ ಆದಾಯ
5. ರಾಧಾ ವೆಂಬು, Zoho, 26,260 ಕೋಟಿ ರೂಪಾಯಿ ಆದಾಯ
6. ಲೀನಾ ಗಾಂಧಿ ತಿವಾರಿ, USV, 24,280 ಕೋಟಿ ರೂಪಾಯಿ ಆದಾಯ
7. ಅನು ಅಗಾ ಮತ್ತು ಮೆಹರ್ ಪುದುಮ್ಜೀ, ಥರ್ಮ್ಯಾಕ್ಸ್, 14,530 ಕೋಟಿ
8. ನೇಹಾ ನಾರ್ಖೆಡೆ, ಸಂಗಮ, 13, 380 ಕೋಟಿ
9. ವಂದನಾ ಲಾಲ್, ಡಾ ಲಾಲ್ ಪಾಥ್‌ಲ್ಯಾಬ್ಸ್, 6,810 ಕೋಟಿ
10. ರೇಣು ಮುಂಜಾಲ್, ಹೀರೋ ಫಿನ್‌ಕಾರ್ಪ್, 6,620 ಕೋಟಿ
11. ಅಮೀರ ಶಾ, ಮೆಟ್ರೊಪೊಲಿಸ್ ಹೆಲ್ತ್‌ಕೇರ್, 5,950 ಕೋಟಿ
12. ನೀರ್ಜಾ ಸೇಥಿ, Syntel, 5,750 ಕೋಟಿ
13. ಮಹಿಮಾ ದಾತ್ಲಾ, Biological E, 5,530 ಕೋಟಿ
14. ಇಂದ್ರ ನೂಯಿ, ಪೆಪ್ಸಿಕೋ, 5,040 ಕೋಟಿ
15. ಸುನೀತಾ ರೆಡ್ಡಿ, ಅಪೋಲೋ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್, 4,760 ಕೋಟಿ
16. ದಿವ್ಯಾ ಗೋಕುಲನಾಥ್, BYJU's, 4,550 ಕೋಟಿ
17. ಜಾಗೃತಿ ಸಂದೀಪ್ ಇಂಜಿನಿಯರ್, Astral, 3,830 ಕೋಟಿ
18. ಸುಚರಿತ ರೆಡ್ಡಿ, ಅಪೋಲೋ ಸಿಂಧೂರಿ ಹೋಟೆಲ್ಸ್, 3,700 ಕೋಟಿ
19. ವಿನಿತಾ ಗುಪ್ತಾ, ಲುಪಿನ್, 3,640 ಕೋಟಿ
20. ಮಲ್ಲಿಕಾ ಶ್ರೀನಿವಾಸನ್, TAFE, 3,110 ಕೋಟಿ

English summary

List of Richest Women in India 2022: Top Wealthiest Indian Business women

List of Richest Women in India 2022: Kotak Private Banking and Hurun India launched the third edition of the Leading Wealthy Women List on July 27, 2022, Here;s List, Read on.
Story first published: Thursday, July 28, 2022, 18:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X