For Quick Alerts
ALLOW NOTIFICATIONS  
For Daily Alerts

ಎನ್‌ಎಸ್‌ಸಿ ನೂತನ ಬಡ್ಡಿದರ, ತೆರಿಗೆ ವಿನಾಯಿತಿ ಎಷ್ಟಿದೆ?, ಇಲ್ಲಿದೆ ಪ್ರಮುಖ ಮಾಹಿತಿ

|

ನಿಮ್ಮಲ್ಲಿ ಅಧಿಕ ಆದಾಯವಿದ್ದರೆ ಅದನ್ನು ಬೇರೆಡೆ ಹೂಡಿಕೆ ಮಾಡಲು ಬಯಸುವುದಾದರೆ ನಿಮಗೆ ಹಲವಾರು ಆಯ್ಕೆಗಳು ಇದೆ. ಆದರೆ ನಾವು ಯಾವಾಗಲೂ ಸುಲಭ ಹಾಗೂ ಸುರಕ್ಷಿತ ಹೂಡಿಕೆ ಆಯ್ಕೆಗೆ ಆದ್ಯತೆಯನ್ನು ನೀಡುತ್ತೇವೆ. ಆ ಸಂದರ್ಭದಲ್ಲಿ ನಮಗೆ ಉತ್ತಮ ಆಯ್ಕೆ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್‌ಎಸ್‌ಸಿ) ಆಗಿದೆ.

ಎನ್‌ಎಸ್‌ಸಿ ಎಂದೂ ಕರೆಯಲ್ಪಡುವ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಯ ಭಾಗವಾಗಿದೆ. ವಯಸ್ಕರು, ಅಪ್ರಾಪ್ತರು ಹಾಗೂ ಟ್ರಸ್ಟ್‌ನಿಂದ ಎನ್‌ಎಸ್‌ಸಿ ಖಾತೆಯನ್ನು ತೆರೆಯಬಹುದಾಗಿದೆ. ಹಾಗೆಯೇ ಇಬ್ಬರು ವಯಸ್ಕರು ಜೊತೆಯಾಗಿ ಎನ್‌ಎಸ್‌ಸಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಗಮನಿಸಿ: ಪಿಪಿಎಫ್, ಎನ್‌ಎಸ್‌ಸಿ ಬಡ್ಡಿದರ ಸ್ಥಿರಗಮನಿಸಿ: ಪಿಪಿಎಫ್, ಎನ್‌ಎಸ್‌ಸಿ ಬಡ್ಡಿದರ ಸ್ಥಿರ

ಸಾಮಾನ್ಯವಾಗಿ ಸರ್ಕಾರವು ಎನ್‌ಎಸ್‌ಸಿ ಮೇಲಿನ ಬಡ್ಡಿದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುತ್ತದೆ. ಇತ್ತೀಚೆಗೆ ಸರ್ಕಾರವು ಎನ್‌ಎಸ್‌ಸಿ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವ ಕಾರಣದಿಂದಾಗಿ 2022ರ ಸೆಪ್ಟೆಂಬರ್ 30ರವರೆಗೆ ಬಡ್ಡಿದರವು ಶೇಕಡ 6.8ರಷ್ಟು ಇರಲಿದೆ. ಇದು ಐದು ವರ್ಷದಲ್ಲಿ ಮೆಚ್ಯೂರಿಟಿ ಹೊಂದುವ ಯೋಜನೆಯಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 ಎನ್‌ಎಸ್‌ಸಿ ತೆರಿಗೆ ಪ್ರಯೋಜನವೇನಿದೆ?

ಎನ್‌ಎಸ್‌ಸಿ ತೆರಿಗೆ ಪ್ರಯೋಜನವೇನಿದೆ?

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಯಾರಾದರೂ ತೆರಿಗೆ ಉಳಿತಾಯ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದರೆ ಎನ್‌ಎಸ್‌ಇ ಅಡಿಯಲ್ಲಿ ಹೂಡಿಕೆ ಮಾಡಬೇಕು.

ಸಿಹಿಸುದ್ದಿ: ಪಿಪಿಎಫ್, ಸುಕನ್ಯ ಯೋಜನೆ, ಎನ್‌ಎಸ್‌ಸಿ ಬಡ್ಡಿದರ ಶೀಘ್ರ ಏರಿಕೆಸಿಹಿಸುದ್ದಿ: ಪಿಪಿಎಫ್, ಸುಕನ್ಯ ಯೋಜನೆ, ಎನ್‌ಎಸ್‌ಸಿ ಬಡ್ಡಿದರ ಶೀಘ್ರ ಏರಿಕೆ

 ಎನ್‌ಎಸ್‌ಇ ಬಗ್ಗೆ ಇನ್ನೂ ತಿಳಿಯಿರಿ

ಎನ್‌ಎಸ್‌ಇ ಬಗ್ಗೆ ಇನ್ನೂ ತಿಳಿಯಿರಿ

* ಅಂಚೆ ಕಛೇರಿಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ ಎನ್‌ಎಸ್‌ಸಿಯಲ್ಲಿ ನೀವು ಹೂಡಿಕೆ ಮಾಡಲು ಸಾಧ್ಯವಾಗಲಿದೆ.
* ಕೆಳಗಿನ ಅಧಿಕಾರಿಗಳಿಗೆ ವರ್ಗಾವಣೆ/ಪ್ರತಿಜ್ಷೆ ಮಾಡಬಹುದು
* ಭಾರತದ ರಾಷ್ಟ್ರಪತಿ/ರಾಜ್ಯದ ರಾಜ್ಯಪಾಲರು
* ಆರ್‌ಬಿಐ/ಶೆಡ್ಯೂಲ್ಡ್ ಬ್ಯಾಂಕ್/ಸಹಕಾರಿ ಸೊಸೈಟಿ/ಸಹಕಾರಿ ಬ್ಯಾಂಕ್
* ನಿಗಮ (ಸಾರ್ವಜನಿಕ/ಖಾಸಗಿ)/ಸರ್ಕಾರಿ ಸಂಸ್ಥೆ/ಸ್ಥಳೀಯ ಪ್ರಾಧಿಕಾರ
* ಹೌಸಿಂಗ್ ಫೈನಾನ್ಸ್ ಕಂಪನಿ

 ಮೆಚ್ಯೂರಿಟಿಗೂ ಮುನ್ನ ಮುಚ್ಚಬಹುದೇ?

ಮೆಚ್ಯೂರಿಟಿಗೂ ಮುನ್ನ ಮುಚ್ಚಬಹುದೇ?

ಎನ್‌ಎಸ್‌ಇಯಲ್ಲಿ ನಾವು ಮೆಚ್ಯೂರಿಟಿಗೂ ಮುನ್ನ ಅಕಾಲಿಕವಾಗಿ ಮುಚ್ಚಬಹುದು. ಆದರೆ ಇದಕ್ಕೆ ಕೆಲವು ಷರತ್ತುಗಳು ಕೂಡಾ ಇದೆ. ಯಾವೆಲ್ಲಾ ಸಂದರ್ಭದಲ್ಲಿ ಅಕಾಲಿಕವಾಗಿ ಮುಚ್ಚಬಹುದು ಎಂಬುವುದು ಇಲ್ಲಿದೆ
* ಎನ್‌ಎಸ್‌ಇ ಖಾತೆದಾರರು ಸಾವನ್ನಪ್ಪಿದರೆ ಅಥವಾ ಜಂಟಿ ಖಾತೆಯಲ್ಲಿ ಯಾವುದೇ ಓರ್ವ ವ್ಯಕ್ತಿ ಸಾವನ್ನಪ್ಪಿದರೆ
* ನ್ಯಾಯಾಲಯದ ಆದೇಶದ ಮೇರೆಗೆ

 

 ಒಬ್ಬರಿಂದ ಇನ್ನೊಬ್ಬರಿಗೆ ಯಾವಾಗ ವರ್ಗಾವಣೆ?

ಒಬ್ಬರಿಂದ ಇನ್ನೊಬ್ಬರಿಗೆ ಯಾವಾಗ ವರ್ಗಾವಣೆ?

ಎನ್‌ಎಸ್‌ಇಯನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾವಣೆ ಮಾಡಿಕೊಳ್ಳಬಹುದು. ಖಾತೆದಾರರ ಮರಣದ ಸಂದರ್ಭದಲ್ಲಿ ಅಥವಾ ಜಂಟಿ ಖಾತೆಯಲ್ಲಿ ಒಬ್ಬರ ಮರಣದ ಸಂದರ್ಭದಲ್ಲಿ ಈ ಖಾತೆಯ ಮೊತ್ತವನ್ನು ಕಾನೂನು ಉತ್ತರಾಧಿಕಾರಿಗಳು ಅಥವಾ ನಾಮಿನಿಗಳಿಗೆ ವರ್ಗಾವಣೆ ಮಾಡಬಹುದು. ನ್ಯಾಯಾಲಯದ ಆದೇಶಗಳ ಪ್ರಕಾರ, ಖಾತೆಯನ್ನು ಖಾತೆದಾರರಿಂದ ನ್ಯಾಯಾಲಯಕ್ಕೆ ಅಥವಾ ಯಾವುದೇ ವ್ಯಕ್ತಿಗೆ ವರ್ಗಾಯಿಸಬಹುದು. ಖಾತೆದಾರರಲ್ಲಿ ಒಬ್ಬರು ನಿಧನರಾದ ಸಂದರ್ಭದಲ್ಲಿ, ಜಂಟಿ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಬಹುದು.

 ಮೆಚ್ಯೂರಿಟಿ ಬಡ್ಡಿ ಪಾವತಿ

ಮೆಚ್ಯೂರಿಟಿ ಬಡ್ಡಿ ಪಾವತಿ

ಒಂದು ಸಾವಿರ ರೂಪಾಯಿಯ ಖಾತೆಯ ಮೆಚ್ಯೂರಿಟಿ ಮೌಲ್ಯವು ಒಂದು ಸಾವಿರದ ನಾನೂರ ಅರವತ್ತೆರಡು ರೂಪಾಯಿಗಳು ಮತ್ತು ಐವತ್ನಾಲ್ಕು ಪೈಸೆ ಆಗಿದೆ. ಮೆಚ್ಯೂರಿಟಿ ಮೌಲ್ಯವನ್ನು ನಿರ್ಧರಿಸುವಾಗ ರೌಂಡ್ ಫಿಗರ್ ಮಾಡಿಕೊಳ್ಳಬೇಕಾಗುತ್ತದೆ. ಐವತ್ತು ಪೈಸಾ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದು ರೂಪಾಯಿ ಎಂದು ಎಣಿಕೆ ಮಾಡಲಾಗುತ್ತದೆ. ಅದಕ್ಕಿಂತ ಕಡಿಮೆ ಇದ್ದರೆ ಅದನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ.

English summary

National Savings Certificate: What is the Latest NSC Interest Rate, Tax Benefits?

National Savings Certificates, also referred to as NSC, are savings bonds offered under the India Post's small saving schemes. Here's tax, interest rates details in Kannada Read on...
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X