For Quick Alerts
ALLOW NOTIFICATIONS  
For Daily Alerts

GPay : ಗೂಗಲ್ ಪೇ ವಿರುದ್ಧ ನೆಟ್ಟಿಗರ ಆಕ್ರೋಶ, ಯಾಕಾಗಿ?

|

ದೇಶದ ಪ್ರಮುಖ ವಹಿವಾಟು ವಿಧಾನವಾದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟು ನಡೆಸಲು ಸಾಧ್ಯವಾಗುವ ಆಪ್ ಆದ ಗೂಗಲ್ ಪೇ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ಗೂಗಲ್ ಪೇ ಅನ್ನು ಸಂಪೂರ್ಣವಾಗಿ ಕೆಲಸಕ್ಕೆ ಬಾರದ್ದು ಎಂದು ಕರೆದಿದ್ದಾರೆ.

ಜನರ ವಹಿವಾಟನ್ನು ಅತೀ ಸರಳವಾಗಿಸುವ ನಿಟ್ಟಿನಲ್ಲಿ ಗೂಗಲ್ ಈ ಹಣಕಾಸು ವಹಿವಾಟು ಮಾಡಲು ಸಾಧ್ಯವಾಗುವ ಗೂಗಲ್ ಪೇ ಅನ್ನು ಜಾರಿಗೆ ತಂದಿದೆ. ಭಾರತದಲ್ಲಿ ಪ್ರತಿ ನಿತ್ಯದ ಸಣ್ಣ ಸಣ್ಣ ವಹಿವಾಟಿಗೂ ಕೂಡಾ ಗೂಗಲ್ ಪೇ ಅನ್ನು ಬಳಕೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಈ ಹಿಂದೆ ಗೂಗಲ್ ಪೇ ಸ್ಕ್ರಾಚ್‌ ಕಾರ್ಡ್‌ಗಳು ನೀಡುವ ಆಫರ್‌ಗಳ ಮೂಲಕ ಜನರನ್ನು ತನ್ನೆಡೆ ಸೆಳೆದುಕೊಂದಿದೆ ಎಂಬುವುದನ್ನು ನಾವು ಮರೆಯುವಂತಿಲ್ಲ.

ಗೂಗಲ್‌ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡ ವಿಧಿಸಿದ ಸಿಸಿಐಗೂಗಲ್‌ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡ ವಿಧಿಸಿದ ಸಿಸಿಐ

ಈ ಸ್ಕ್ರಾಚ್‌ ಕಾರ್ಡ್‌ಗಳಲ್ಲಿ ಕ್ಯಾಷ್‌ಬ್ಯಾಕ್ ನೀಡಲಾಗುತ್ತಿತ್ತು. ಹಾಗೆಯೇ ಜ್ಯೊಮ್ಯಾಟೋ, ಸ್ವಿಗ್ಗಿ ಮೊದಲಾದವುಗಳಲ್ಲಿ ಆಫರ್‌ಗಳನ್ನು ನೀಡಲಾಗುತ್ತಿತ್ತು. ಈ ಸ್ಕ್ರಾಚ್‌ ಕಾರ್ಡ್‌ಗಳಿಂದಾಗಿ ಜನರಿಗೆ ಹೆಚ್ಚು ಹಣಕಾಸು ಸಹಾಯ ಉಂಟಾಗಿದೆ. ನಾವು ಮಾಡುವ ಆನ್‌ಲೈನ್ ಆರ್ಡರ್‌ಗಳಿಗೆ ರಿಯಾಯಿತಿಯೂ ಲಭ್ಯವಾಗಿದೆ. ಇವೆಲ್ಲದವರ ನಡುವೆ ಈಗ ನೆಟ್ಟಿಗರು ಗೂಗಲ್ ಪೇ ವಿರುದ್ಧ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನೆಟ್ಟಿಗರು ಇಷ್ಟೊಂದು ಆಕ್ರೋಶ ವ್ಯಕ್ತಪಡಿಸಿರುವುದು ಯಾಕೆ, ಏನು ಕಾರಣ ಎಡಂದು ತಿಳಿಯೋಣ ಮುಂದೆ ಓದಿ...

 ಗೂಗಲ್ ಪೇ ಮೇಲೆ ನೆಟ್ಟಿಗರ ಯಾವ ವಿಚಾರದಲ್ಲಿ ಆಕ್ರೋಶ?

ಗೂಗಲ್ ಪೇ ಮೇಲೆ ನೆಟ್ಟಿಗರ ಯಾವ ವಿಚಾರದಲ್ಲಿ ಆಕ್ರೋಶ?

ಪ್ರಮುಖವಾಗಿ ಗೂಗಲ್ ಪೇ ಜನರನ್ನು ತಲುಪುವ ವಿಧಾನದಲ್ಲಾದ ಬದಲಾವಣೆಯೇ ಈ ಆಕ್ರೋಶಕ್ಕೆ ಕಾರಣವಾಗಿದೆ. ಗೂಗಲ್ ಪೇ ಹೆಚ್ಚಿನ ಗ್ರಾಹಕರಿಗೆ ಹಣಕಾಸು ಪ್ರಯೋಜನವನ್ನು ನೀಡುತ್ತದೆ. ಅದಕ್ಕಾಗಿ ಕ್ಯಾಷ್‌ಬ್ಯಾಕ್ ಕೂಡಾ ನೀಡುತ್ತದೆ ಎಂಬುವುದನ್ನು ನಾವು ಈ ಮೇಲೆಯೇ ತಿಳಿಸಿದ್ದೇವೆ. ಪ್ರಸ್ತುತ ಈ ಸ್ಕ್ರಾಚ್ ಕಾರ್ಡ್ ವಿಚಾರದಲ್ಲಿಯೇ ನೆಟ್ಟಿಗರು ಗೂಗಲ್ ಪೇ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದೆ.

 ಬಳಕೆ ಮಾಡಲಾಗದ ಸ್ಕ್ರಾಚ್ ಕಾರ್ಡ್

ಬಳಕೆ ಮಾಡಲಾಗದ ಸ್ಕ್ರಾಚ್ ಕಾರ್ಡ್

ಗೂಗಲ್ ಪೇ ಇತ್ತೀಚೆಗೆ ಈ ಸ್ಕ್ರಾಚ್‌ ಕಾರ್ಡ್ ವಿಚಾರದಲ್ಲಿ ಬೇರೆಯೇ ಹಾದಿಯನ್ನು ಹಿಡಿದಿದೆ. ಗೂಗಲ್ ಪೇ ತನ್ನ ಬಳಕೆದಾರರಿಗೆ ಸ್ಕ್ರಾಚ್‌ ಕಾರ್ಡ್ ಅನ್ನು ನೀಡುತ್ತದೆ. ಆದರೆ ಗೂಗಲ್ ಪೇ ಈಗ ನೀಡುತ್ತಿರುವ ಸ್ಕ್ರಾಚ್‌ ಕಾರ್ಡ್‌ ಯಾವುದೇ ಪ್ರಯೋಜನಕ್ಕೆ ಬಾರದ್ದು ಎಂಬುವುದು ನೆಟ್ಟಿಗರ ಆರೋಪವಾಗಿದೆ. ಗೂಗಲ್ ಪೇ ಸದ್ಯ ನೀಡುವ ಸ್ಕ್ರಾಚ್ ಕಾರ್ಡ್ ನಮಗೆ ಸದುಪಯೋಗ ಮಾಡಲು ಸಾಧ್ಯವಾದಂತಹ ಸ್ಕ್ರಾಚ್ ಕಾರ್ಡ್. ನಾವು ಬಳಕೆ ಮಾಡುವುದಕ್ಕೂ ಮುನ್ನವೇ ಆಫರ್ ಕೊನೆ ದಿನಾಂಕ ಅಂತ್ಯವಾಗಿರುತ್ತದೆ.

 ಗೂಗಲ್ ಪೇ ಬಗ್ಗೆ ನೆಟ್ಟಿಗರು ಹೇಳುವುದೇನು?
 

ಗೂಗಲ್ ಪೇ ಬಗ್ಗೆ ನೆಟ್ಟಿಗರು ಹೇಳುವುದೇನು?

"ಗೂಗಲ್ ಪೇ ಜನರನ್ನು ಮಂಗ ಮಾಡುವ ತಂತ್ರ ಮಾಡುತ್ತಿದೆ. ಬರೀ ನಮ್ಮ ಪ್ರಯೋಜನವನ್ನು ಪಡೆಯಲಾಗುತ್ತಿದೆ," ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದರೆ, "ಗೂಗಲ್ ಪೇ ಇಷ್ಟು ಕೆಟ್ಟದಾಗಿದೆ. ಯಾವುದೇ ಪ್ರಯೋಜನಕ್ಕೆ ಬಾರದ ಆಫರ್ ನೀಡುತ್ತದೆ," ಎಂದು ಮತ್ತೋರ್ವ ನೆಟ್ಟಿಗರು ಹೇಳಿಕೊಂಡಿದ್ದಾರೆ. "ಗೂಗಲ್ ಪೇನಲ್ಲಿ ನೀಡಲಾಗುವ ರಿವಾರ್ಡ್‌ಗಳನ್ನು ಪ್ರಯೋಜನಕ್ಕೆ ಬಾರದು ಎಂದು ಕರೆಯಲಾಗುತ್ತದೆ," ಎಂದು ಇನ್ನೋರ್ವ ನೆಟ್ಟಿಗರು ತಿಳಿಸಿದ್ದಾರೆ. "ನಾನು ಕೊನೆಯ ದಿನ ಮುಗಿದು ಬಳಕೆ ಮಾಡಲಾಗದ ರಿವಾರ್ಡ್‌ಗಳನ್ನು ನೋಡಿ ಬೇಸರ ಪಡುತ್ತಿದ್ದೇವೆ. ಈ ಕಾರ್ಡ್‌ಗಳನ್ನು ಯಾರೂ ಕೂಡಾ ರಿಡೀಮ್ ಮಾಡಲು ಬಯಸುವುದಿಲ್," ಎಂದು ತಿಳಿಸಿದ್ದಾರೆ.

<strong> ಯುಪಿಐ ವಹಿವಾಟಿಗೆ ಸೇವಾ ಶುಲ್ಕ ವಿಧಿಸಲ್ಲ: ಸರ್ಕಾರ ಸ್ಪಷ್ಟಣೆ</strong> ಯುಪಿಐ ವಹಿವಾಟಿಗೆ ಸೇವಾ ಶುಲ್ಕ ವಿಧಿಸಲ್ಲ: ಸರ್ಕಾರ ಸ್ಪಷ್ಟಣೆ

English summary

Netizens call Google Pay Totally Useless, Why Explained in Kannada

Leading Unified Payments Interface (UPI) application Google Pay has been facing a lot of flak on Twitter. Netizens call Google Pay Totally Useless, Why Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X