For Quick Alerts
ALLOW NOTIFICATIONS  
For Daily Alerts

ಕೋಟ್ಯಾಧಿಪತಿಯಾಗಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

|

ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಅಧಿಕ ಲಾಭವನ್ನು ಎಲ್ಲಿ ಗಳಿಸಲು ಸಾಧ್ಯವೆಂದು ನೋಡುತ್ತೇವೆ. ಅಧಿಕ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ನಾವು ಅಸುರಕ್ಷಿತ ಯೋಜನೆಗಳ ಮೇಲೆ ಹೂಡಿಕೆ ಮಾಡುವುದು ಕೂಡಾ ಇದೆ. ಆದರೆ ನಾವು ಯಾವುದೇ ರಿಸ್ಕ್ ಇಲ್ಲದ ಹೂಡಿಕೆ ಮೂಲಕ ಅದು ಕೂಡಾ ಸರ್ಕಾರಿ ಯೋಜನೆಗೆ ಹೂಡಿಕೆ ಮಾಡಿ ಕೋಟ್ಯಾಂತರ ರೂಪಾಯಿಯನ್ನು ಪಡೆಯಬಹುದು.

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಸರ್ಕಾರದ ಪಿಂಚಣಿ ಯೋಜನೆಯಾಗಿದೆ. ನೀವು ಈ ಹೂಡಿಕೆಯಲ್ಲಿ ಯೋಜನೆ ಮಾಡಿ, ನಿಮ್ಮ ನಿವೃತ್ತಿಗೆ ಉಳಿತಾಯ ಮಾಡಲು ಸಾಧ್ಯವಾಗಲಿದೆ. ಹಾಗೆಯೇ ನಿಮಗೆ 60 ವರ್ಷವಾದಾಗ ಪಿಂಚಣಿಯನ್ನು ಕೂಡಾ ಪಡೆಯಬಹುದು. ಪಿಎಫ್‌ಆರ್‌ಡಿಎ ಈ ಯೋಜನೆಯನ್ನು ನಿರ್ವಹಣೆ ಮಾಡುತ್ತದೆ.

New NPS rules: ರಿಲೀಫ್ ನೀಡಿದ ಎನ್‌ಪಿಎಸ್ ಹೊಸ ನಿಯಮ!New NPS rules: ರಿಲೀಫ್ ನೀಡಿದ ಎನ್‌ಪಿಎಸ್ ಹೊಸ ನಿಯಮ!

ಇನ್ನು ಎನ್‌ಪಿಎಸ್ ಅಡಿಯಲ್ಲಿ ನೀವು ಬೇರೆ ಬೇರೆ ವಿಧದ ಹೂಡಿಕೆಯನ್ನು ಆಯ್ಕೆ ಮಾಡಬಹುದು. ಸರ್ಕಾರಿ ಸೆಕ್ಯೂರಿಟಿಗಳು, ಕಾರ್ಪೋರೇಷನ್ ಬಾಂಡ್‌ಗಳು, ಈಕ್ವಿಟಿ ಫಂಡ್‌ಗಳನ್ನು ಕೂಡಾ ನೀವು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಎರಡು ರೀತಿಯ ವಿಭಾಗಗಳು ಇದೆ. ಒಂದು ಟೈರ್-1, ಇಲ್ಲಿ ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ. ಹಾಗೆಯೇ ಇನ್ನೊಂದು ಟೈರ್-2 ಇಲ್ಲಿ ನಾವು ಕೊಂಚ ಮೊತ್ತ ವಿತ್‌ಡ್ರಾ ಮಾಡಿಕೊಳ್ಳಬಹುದು. ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 ಎನ್‌ಪಿಎಸ್ ಹೇಗೆ ಕಾರ್ಯನಿರ್ವಹಣೆ

ಎನ್‌ಪಿಎಸ್ ಹೇಗೆ ಕಾರ್ಯನಿರ್ವಹಣೆ

ನೀವು 30 ವರ್ಷ ವಯಸ್ಸಿನವರು, ನೀವು 60 ವರ್ಷದಲ್ಲಿ ನಿವೃತ್ತಿ ಹೊಂದಲು ಬಯಸಿದ್ದೀರಿ ಅಂದುಕೊಳ್ಳಿ. ನೀವು ಒಂದು ಲಕ್ಷ ರೂಪಾಯಿಯನ್ನು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ ಪ್ರತಿ ತಿಂಗಳು 5 ಸಾವಿರ ರೂಪಾಯಿಯಂತೆ 30 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ವಾರ್ಷಿಕ ರಿಟರ್ನ್ ಶೇಕಡ 10ರಷ್ಟು ಇರುತ್ತದೆ. ನೀವು ನಿವೃತ್ತಿ ಹೊಂದುವಾಗ ನಿಮ್ಮ ಎನ್‌ಪಿಎಸ್ ಆದಾಯವು 1 ಕೋಟಿ 60 ಲಕ್ಷ ರೂಪಾಯಿಗೆ ತಲುಪುತ್ತದೆ.

 ಎನ್‌ಪಿಎಸ್ ಯೋಜನೆಯ ಪ್ರಯೋಜನಗಳು

ಎನ್‌ಪಿಎಸ್ ಯೋಜನೆಯ ಪ್ರಯೋಜನಗಳು

1. ಫ್ಲೆಕ್ಸಿಬಿಲಿಟಿ ಇರುವ ಯೋಜನೆ: ಯೋಜನೆಯಲ್ಲಿ ಫ್ಲೆಕ್ಸಿಬಿಲಿಟಿ ಇದೆ. ನೀವು ಎಷ್ಟು ಮೊತ್ತವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎಂದು ನೀವೇ ನಿರ್ಧಾರ ಮಾಡಿಕೊಳ್ಳಬಹುದು. ನೀವು ಯಾವುದೇ ಸಂದರ್ಭದಲ್ಲಿ ಹೂಡಿಕೆ ಆಯ್ಕೆಯನ್ನು ಬದಲಾವಣೆ ಮಾಡಬಹುದು.
2. ತೆರಿಗೆ ಪ್ರಯೋಜನ: ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆಯನ್ನು ಮಾಡಿದರೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಆದಾಯ ತೆರೊಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ಈ ಹೂಡಿಕೆಯಲ್ಲಿ ಪಡೆದ ಬಡ್ಡಿದರವು ತೆರಿಗೆ ಮುಕ್ತವಾಗಿರುತ್ತದೆ.
3. ಸರ್ಕಾರದ ಕೊಡುಗೆ: ನಿಮ್ಮ ಎನ್‌ಪಿಎಸ್ ಖಾತೆಗೆ ಸರ್ಕಾರವು ಕೂಡಾ ನಿರ್ದಿಷ್ಟ ಮೊತ್ತವನ್ನು ಕೊಡುಗೆಯಾಗಿ ನೀಡುತ್ತದೆ. ಈ ಮೊತ್ತವು ಸುಮಾರು ಶೇಕಡ 14ರವರೆಗೆ ಇರಲಿದೆ.

 ಎನ್‌ಪಿಎಸ್‌ಗೆ ಯಾರು ಅರ್ಜಿ ಸಲ್ಲಿಸಬಹುದು?

ಎನ್‌ಪಿಎಸ್‌ಗೆ ಯಾರು ಅರ್ಜಿ ಸಲ್ಲಿಸಬಹುದು?

1. 18 ವರ್ಷದಿಂದ 60 ವರ್ಷದವರೆಗಿನ ಭಾರತೀಯ ನಾಗರಿಕರು ಈ ಎನ್‌ಪಿಎಸ್ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿದ್ದಾರೆ.
2. ಸ್ವಯಂ ಉದ್ಯೋಗವನ್ನು ಮಾಡುವವರು, ಉದ್ಯಮವನ್ನು ಹೊಂದಿರುವವರು, ಸಂಬಳವನ್ನು ಪಡೆಯುವ ಉದ್ಯೋಗಿಗಳು, ಎನ್‌ಆರ್‌ಐಗಳು ಎನ್‌ಪಿಎಸ್ ಯೋಜನೆಯಡಿಯಲ್ಲಿ ಖಾತೆಯನ್ನು ತೆರೆಯಬಹುದು.
3. ಸರ್ಕಾರಿ ಉದ್ಯೋಗಿಗಳು ಕೂಡಾ ಎನ್‌ಪಿಎಸ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಆದರೆ ಅವರಿಗೆ ಬೇರೆಯೇ ಪಿಂಚಣಿ ಯೋಜನೆ ಇದೆ. ಅದನ್ನು ಕೇಂದ್ರ ಸರ್ಕಾರ ಉದ್ಯೋಗಿಗಳ ಪಿಂಚಣಿ ಯೋಜನೆ (ಸಿಜಿಇಜಿಐಎಸ್) ಎಂದು ಕರೆಯಲಾಗುತ್ತದೆ.

 ಎನ್‌ಪಿಎಸ್‌ ಖಾತೆ ತೆರೆಯಲು ಏನೆಲ್ಲ ದಾಖಲೆಗಳು ಬೇಕು?

ಎನ್‌ಪಿಎಸ್‌ ಖಾತೆ ತೆರೆಯಲು ಏನೆಲ್ಲ ದಾಖಲೆಗಳು ಬೇಕು?

1. ಪ್ಯಾನ್ ಕಾರ್ಡ್
2. ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ/ಫೋಟೋ
3. ಗುರುತಿನ ಪುರಾವೆ (ವೋಟರ್ ಐಡಿ, ಆಧಾರ್ ಐಡಿ, ಪಾಸ್‌ಪೋರ್ಟ್)
4. ವಿಳಾಸದ ಪುರಾವೆ (ಬಿಲ್, ಬ್ಯಾಂಕ್ ಸ್ಟೇಟ್‌ಮೆಂಟ್, ಬಾಡಿಗೆ ಪತ್ರ)

English summary

NPS Scheme: To Become Crorepati Invest in NPS Scheme, Details in Kannada

NPS Account: The National Pension Scheme (NPS) is a government-sponsored pension scheme. To Become Crorepati Invest in NPS Scheme, Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X