For Quick Alerts
ALLOW NOTIFICATIONS  
For Daily Alerts

ಆನ್ ಲೈನ್ ನಲ್ಲಿ ಅರ್ಡರ್ ಮಾಡಿದ 15 ನಿಮಿಷದೊಳಗೆ ಮನೆ ಬಾಗಿಲಿಗೆ ದಿನಸಿ

|

ಮನೆಗೆ ದಿನಸಿ ಬೇಕು. ಅದಕ್ಕಾಗಿ ಅಂಗಡಿಗೆ ಹೋಗಿ, ಖರೀದಿ ಮಾಡಿ ಬರಬೇಕು ಅಂದರೆ ಎಷ್ಟು ಸಮಯ ಹಿಡಿಸುತ್ತದೆ? ಅಥವಾ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಎಷ್ಟು ಸಮಯ ತೆಗೆದುಕೊಳ್ಳಬಹುದು? ಇದನ್ನು ನೀವೇ ಲೆಕ್ಕ ಹಾಕಿಕೊಳ್ಳಿ. ಆದರೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಹದಿನೈದು ನಿಮಿಷದೊಳಗೆ ಮನೆಗೆ ದಿನಸಿ ಪದಾರ್ಥ ಬರುವುದಾದರೆ...

ಹೌದು, ಕೇವಲ ಹದಿನೈದು ನಿಮಿಷದಲ್ಲಿ ಬೈಸಿಕಲ್ ನಲ್ಲಿ ದಿನಸಿ ಪದಾರ್ಥಗಳನ್ನು ತಂದು ಮನೆ ಬಾಗಿಲಿಗೆ ಮುಟ್ಟಿಸಲಾಗುತ್ತದೆ. ಆದರೆ ಇದು ಭಾರತದಲ್ಲಿ ಅಲ್ಲ, ರಷ್ಯಾದ ಮಾಸ್ಕೋದಲ್ಲಿ. ಯಾಂಡೆಕ್ಸ್ ಎನ್ ವಿ ಎಂಬ ರಷ್ಯಾದ ಅತಿ ದೊಡ್ಡ ಟೆಕ್ನಾಲಜಿ ಕಂಪೆನಿ ಮಾಸ್ಕೋದಲ್ಲಿ ಮನೆಗಳಿಗೆ ದಿನಸಿ ಪದಾರ್ಥಗಳನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಹದಿನೈದು ನಿಮಿಷದೊಳಗೆ, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ತಲುಪಿಸುತ್ತಿದೆ.

ಇದು ಹೊಸ ಆನ್ ಲೈನ್ ಸೇವೆಯಾಗಿದ್ದು, ಲವ್ಕಾ ಎಂದು ಹೆಸರಿಸಲಾಗಿದೆ. ಮಾಸ್ಕೋದಲ್ಲಿ ಅಲ್ಲಲ್ಲಿ ಸಣ್ಣ- ಸಣ್ಣ ಗೋದಾಮುಗಳನ್ನು ಮಾಡಿಕೊಂಡು, ಅಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಇಡಲಾಗಿದೆ. ಮನೆಗಳಿಗೆ ದಿನಸಿ ಪದಾರ್ಥಗಳನ್ನು ತಲುಪಿಸಲು ಬೈಕ್ ಗಳನ್ನು ಬಳಸಲಾಗುತ್ತದೆ.

ಟೂಥ್ ಪೇಸ್ಟ್ ನಿಂದ ಕಾಂಡೋಮ್ ತನಕ

ಟೂಥ್ ಪೇಸ್ಟ್ ನಿಂದ ಕಾಂಡೋಮ್ ತನಕ

ಡಿಜಿಟಲ್ ವ್ಯವಹಾರ ಸಲೀಸು ಮಾಡುವ ಮೂಲಕ ಈ ಸ್ಟೋರ್ ಅನ್ನು ಜನಸ್ನೇಹಿಯನ್ನಾಗಿ ಮಾಡಬೇಕು ಎಂಬುದು ಉದ್ದೇಶ. ಗ್ರಾಹಕರು ತಮಗೆ ಬೇಕಾದ ವಸ್ತುಗಳು, ಟೂಥ್ ಪೇಸ್ಟ್ ನಿಂದ ಒಂದು ಪಾಕೆಟ್ ಕಾಂಡೋಮ್ ತನಕ ಯಾವುದನ್ನಾದರೂ ಆರ್ಡರ್ ಮಾಡಬಹುದು. ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಅಂದ ಹಾಗೆ, ಯಾಂಡೆಕ್ಸ್ ನಿಂದ ಇನ್ನೂ ಹಲವು ಡಿಜಿಟಲ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಅದರಲ್ಲಿ ರೆಸ್ಟೋರೆಂಟ್ ಡೆಲಿವರಿ ವ್ಯವಹಾರ ಈಗಾಗಲೇ ಎರಡು ಬಿಲಿಯನ್ ಅಮೆರಿಕನ್ ಡಾಲರ್ ಮಾರಾಟವನ್ನು ಮೀರಿದೆ. ರಷ್ಯಾದಲ್ಲಿ ಇ ಕಾಮರ್ಸ್ ಇಲ್ಲ್ ಅಂತಲ್ಲ್. ಆದರೆ ಇಷ್ಟು ವೇಗವಾಗಿ ಸೇವೆ ಒದಗಿಸಬಲ್ಲಂಥದ್ದು ಇಲ್ಲ.

ಸಣ್ಣ ಗೋದಾಮುಗಳನ್ನು ತೆರೆದಿದ್ದಾರೆ

ಸಣ್ಣ ಗೋದಾಮುಗಳನ್ನು ತೆರೆದಿದ್ದಾರೆ

ಈ ಕಂಪೆನಿಯವರ ಆಲೋಚನೆ ಕೂಡ ಎಷ್ಟು ತೀಕ್ಷ್ಣ ಮತ್ತು ಪರಿಣಾಮಕಾರಿಯಾಗಿದೆ ಅಂದರೆ, ಯಾವುದಾದರೂ ರೀಟೇಲರ್ ಗಳ ಜತೆ ಸಹಭಾಗಿತ್ವ ಮಾಡಿಕೊಂಡು ಈ ವ್ಯವಹಾರದಲ್ಲಿ ತೊಡಗುವ ಅವಕಾಶ ಇದ್ದರೂ ತಾವೇ ಸಣ್ಣ ಸಣ್ಣ ಗೋದಾಮು ತೆರೆದಿದ್ದಾರೆ. ಅದಕ್ಕೆ ಅವರು ನೀಡುವ ಕಾರಣ ಏನೆಂದರೆ, ಆರ್ಡರ್ ನೀಡಿದ ಹದಿನೈದು ನಿಮಿಷದಲ್ಲಿ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವುದಕ್ಕೆ ವೇಗ ಮುಖ್ಯ. ಆದರ್ ರೀಟೇಲರ್ ಗಳು ನಿಧಾನ ಮಾಡುತ್ತಾರೆ ಎನ್ನುತ್ತಾರೆ. ಯಾಂಡೆಕ್ಸ್ ಕಳೆದ ವರ್ಷ ರಷ್ಯಾದ ಆನ್ ಲೈನ್ ಬಿಜಿನೆಸ್ ಗೆ ಇಳಿದಿದೆ. ಮುಂದಿನ ಮೂರು ವರ್ಷದಲ್ಲಿ ಈಗಿನ ವ್ಯವಹಾರದ ಮೂರು ಪಟ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಆನ್ ಲೈನ್ ನಲ್ಲಿ ಇತರ ವಸ್ತುಗಳನ್ನು ಮಾರಾಟ ಮಾಡುವುದು ಈಗಾಗಲೇ ಸಾಕಷ್ಟಿವೆ. ಆದರೆ ದಿನಸಿ ಹಾಗೂ ದಿನ ಬಳಕೆ ಪದಾರ್ಥಗಳನ್ನು ಆನ್ ಲೈನ್ ನಲ್ಲಿ ಆರ್ಡರ್ ತೆಗೆದುಕೊಂಡು, ವೇಗವಾಗಿ ಗ್ರಾಹಕರಿಗೆ ತಲುಪಿಸುವುದು ಹೊಸ ವಿಧಾನ ಎನ್ನುತ್ತಾರೆ ಕಂಪೆನಿ ಸಿಇಒ.

ಏಳರಿಂದ ಹನ್ನೆರಡು ನಿಮಿಷದೊಳಗೆ ಮನೆ ಬಾಗಿಲಿಗೆ ಆರ್ಡರ್

ಏಳರಿಂದ ಹನ್ನೆರಡು ನಿಮಿಷದೊಳಗೆ ಮನೆ ಬಾಗಿಲಿಗೆ ಆರ್ಡರ್

ಆದರೆ, ಈ ಆನ್ ಲೈನ್ ವ್ಯವಹಾರ ಇನ್ನೂ ಲಾಭ ಕಾಣಬೇಕಿದೆ. ಸದ್ಯಕ್ಕೆ ಕಂಪೆನಿಯ ವಿಸ್ತರಣೆಗಾಗಿಯೇ ಎಲ್ಲ ಬಳಕೆ ಆಗುತ್ತಿದೆ. ಹೆಚ್ಚು ಮಂದಿ ಈ ಆನ್ ಲೈನ್ ಸೇವೆಯನ್ನು ಬಳಸಿಕೊಳ್ಳುವಂತಾಗಬೇಕು ಎಂಬುದು ಸದ್ಯದ ಗುರಿಯಾಗಿದೆ. ಕೆಲವು ಯೂನಿಟ್ ಗಳಿಗೆ ಗ್ರಾಹಕರು ಸಿಕ್ಕಿಹೋಗಿದ್ದು, ನಿರಂತರವಾಗಿ ಆರ್ಡರ್ ಮಾಡುತ್ತಿದ್ದಾರೆ. ಇನ್ನು ಆನ್ ಲೈನ್ ಸೇವೆ ಪಡೆಯುವ ಗ್ರಾಹಕರ ಅಭಿಪ್ರಾಯವನ್ನೇ ಕೇಳುವುದಾದರೆ, ಆರ್ಡರ್ ಮಾಡಿದ ಏಳರಿಂದ ಹನ್ನೆರಡು ನಿಮಿಷದೊಳಗೆ ವಸ್ತುಗಳ ಡೆಲಿವರಿ ಆಗುತ್ತದೆ. ಅಂದ ಹಾಗೆ, ಗೋದಾಮಿನ ಅಳತೆ ಸಾವಿರದ ಆರುನೂರು ಅಡಿಯಷ್ಟಿದೆ. ಒಂದೂವರೆ ಕಿ.ಮೀ. ವ್ಯಾಪ್ತಿಯೊಳಗಿನ ಮನೆಗಳಿಗೆ ಅವುಗಳಿಂದ ದಿನಸಿ ಒದಗಿಸಲಾಗುತ್ತದೆ.

ನೀರು, ಮೊಟ್ಟೆ, ಹಾಲು, ಬಾಳೆಹಣ್ಣು, ನಿಂಬೆಹಣ್ಣಿಗೆ ಬೇಡಿಕೆ

ನೀರು, ಮೊಟ್ಟೆ, ಹಾಲು, ಬಾಳೆಹಣ್ಣು, ನಿಂಬೆಹಣ್ಣಿಗೆ ಬೇಡಿಕೆ

ಇನ್ನು ಆರ್ಡರ್ ನ ಸರಾಸರಿ ಮೊತ್ತ ಆರುನೂರರಿಂದ ಸಾವಿರ ರುಬೆಲ್ಸ್ (ರಷ್ಯಾದ ಕರೆನ್ಸಿ). ಪೀಕ್ ಅವರ್ ನಲ್ಲಿ ತುಂಬ ಸಣ್ಣ ಪ್ರಮಾಣದ ಆರ್ಡರ್ ಬಂದರೆ ತಿರಸ್ಕರಿಸಲಾಗುತ್ತದೆ. ನೀರು, ಮೊಟ್ಟೆ, ಹಾಲು, ಬಾಳೆಹಣ್ಣು ಮತ್ತು ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚು. ಆರ್ಡರ್ ಬರುತ್ತಿದ್ದ ಹಾಗೆ ಗೋದಾಮಿನಲ್ಲಿರುವ ಸಿಬ್ಬಂದಿಯ ಮೊಬೈಲ್ ಫೋನ್ ನಲ್ಲಿ ಕಾಣಿಸುತ್ತದೆ. ಆ ವಸ್ತುಗಳನ್ನು ತೆಗೆದುಕೊಂಡು ಹತ್ತು ನಿಮಿಷದೊಳಗೆ ಡೆಲಿವರಿ ಮಾಡಲಾಗುತ್ತದೆ. ಈಗ ಬಳಕೆ ಮಾಡುತ್ತಿರುವುದರಲ್ಲಿ ಶೇಕಡಾ ಇಪ್ಪತ್ತರಷ್ಟು ಎಲೆಕ್ಟ್ರಿಕ್ ಬೈಕ್ ಗಳು. ವಿದಿಧ ಆನ್ ಲೈನ್ ಕಂಪೆನಿಗಳು ಸಹ ದಿನಬಳಕೆ ವಸ್ತುಗಳನ್ನು ಡೆಲಿವರಿ ಮಾಡುತ್ತಿವೆ. ಆದರೆ ಹದಿನೈದು ನಿಮಿಷದೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಆಲೋಚನೆ ಹೊಸದು.

English summary

Order Online, Get Groceries Delivered In 15 Minutes: Know Where It Is?

Order through online and get groceries in 15 minutes. Know where?
Story first published: Tuesday, January 28, 2020, 14:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X