For Quick Alerts
ALLOW NOTIFICATIONS  
For Daily Alerts

PAN Card Application : ಪ್ಯಾನ್ ಕಾರ್ಡ್‌ ಅರ್ಜಿ: 19 ದಾಖಲೆಗಳನ್ನು ವಿಳಾಸ ಪುರಾವೆಯಾಗಿ ಬಳಸಿ

|

ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಹತ್ತು ಡಿಜಿಟ್‌ನ ಅಂಕಿ ಸಂಖ್ಯೆಯಾಗಿದ್ದು ಭಾರತದಲ್ಲಿ ಆಧಾರ್ ಕಾರ್ಡ್‌ನಂತೆಯೇ ಅತೀ ಪ್ರಮುಖವಾದ ದಾಖಲೆ ಇದಾಗಿದೆ. ಆದಾಯ ತೆರಿಗೆ ಇಲಾಖೆಯು ಈ ಪ್ಯಾನ್ ಕಾರ್ಡ್ ಅನ್ನು ನೀಡುತ್ತದೆ. ನಮ್ಮ ಎಲ್ಲ ಹಣಕಾಸು ವಹಿವಾಟುಗಳ ಪರಿಶೀಲನೆ ಸರಳ ಹಾಗೂ ಸುಲಭವಾಗುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಅನ್ನು ಜಾರಿ ಮಾಡಿದೆ.

 

ಪ್ರಸ್ತುತ ಎಲ್ಲ ಹಣಕಾಸು ವಹಿವಾಟಿಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ ತೆರೆಯಬೇಕಾದರೂ, ಸಾಲವನ್ನು ಪಡೆಯಬೇಕಾದರೂ, ವಿಮೆಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಹಾಗಿರುವಾಗ ಭಾರತದ ನಾಗರೀಕರಾದ ನಮ್ಮಲ್ಲಿ ಪ್ಯಾನ್ ಕಾರ್ಡ್ ಇರುವುದು ಮುಖ್ಯ.

ಆದರೆ ನಿಮ್ಮಲ್ಲಿ ಪ್ಯಾನ್ ಕಾರ್ಡ್ ಇಲ್ಲವೆ. ಅದಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು. ನೀವು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಹಾಗೂ ಪ್ಯಾನ್ ಕಾರ್ಡ್ ಕಚೇರಿಗೆ ಭೇಟಿ ನೀಡಿಯೂ ಅರ್ಜಿ ಸಲ್ಲಿಸಬಹುದು. ನೀವು ಎನ್‌ಎಸ್‌ಡಿಎಲ್‌ ಹಾಗೂ ಯುಟಿಐಐಟಿಎಸ್‌ಎಲ್‌ ವೆಬ್‌ಸೈಟ್ ಮೂಲಕ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ. ಅದಕ್ಕಾಗಿ ಬೇಕಾದ ದಾಖಲೆಗಳ ಬಗ್ಗೆ ಹಾಗೂ ನೀವು ಸಲ್ಲಿಸಬಹುದಾದ 19 ವಿಳಾಸ ಪುರಾವೆಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ... ಮುಂದೆ ಓದಿ...

ಪ್ಯಾನ್ ಕಾರ್ಡ್‌ ಅರ್ಜಿ: 19 ದಾಖಲೆಗಳನ್ನು ವಿಳಾಸ ಪುರಾವೆಯಾಗಿ ಬಳಸಿ

ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು

ನಾವು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವು ದಾಖಲೆಗಳನ್ನು ಹೊಂದಿರಬೇಕು. ನಮ್ಮ ಗುರುತಿನ ಪುರಾವೆ ಹಾಗೂ ವಿಳಾಸ ಪುರಾವೆಯನ್ನು ನೀಡಬೇಕು. ಹಾಗೆಯೇ ನಮ್ಮ ಜನನ ದಿನಾಂಕವನ್ನು ಖಚಿತ ಪಡಿಸುವ ದಾಖಲೆಯನ್ನು ಕೂಡಾ ನೀಡಬೇಕಾಗುತ್ತದೆ. ಹಾಗೆಯೇ ಅರ್ಜಿದಾರರು ಭಾರತದ ನಾಗರಿಕರು ಆಗಿರಬೇಕು.

19 ದಾಖಲೆಗಳನ್ನು ವಿಳಾಸ ಪುರಾವೆಯಾಗಿ ಬಳಸಿ

1.ಯುಐಡಿಎಐ ನೀಡಿದ ಆಧಾರ್ ಕಾರ್ಡ್
2. ಗುರುತಿನ ಚೀಟಿಯ ಪ್ರತಿ
3. ಡ್ರೈವಿಂಗ್ ಲೈಸೆನ್ಸ್
4. ಪಾಸ್‌ಪೋರ್ಟ್
5. ಸಂಗಾತಿಯ ಪಾಸ್‌ಪೋರ್ಟ್
6. ವಿಳಾಸವಿರುವ ಅಂಚೆ ಕಚೇರಿ ಪಾಸ್‌ಬುಕ್
7. ಆಸ್ತಿ ತೆರಿಗೆಯ ಪ್ರತಿ
8. ಸರ್ಕಾರ ಜಾರಿ ಮಾಡಿದ ಡೊಮಿಸೈಲ್ ಸರ್ಟಿಫಿಕೇಟ್ (Domicile certificate)
9. ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಲೋಟ್‌ಮೆಂಟ್ ಲೆಟರ್ (ಮೂರು ವರ್ಷಕ್ಕಿಂತ ಹಳೆಯದಾಗಿರಬಾರದು)
10. ಆಸ್ತಿ ರಿಜಿಸ್ಟ್ರೇಷನ್ ದಾಖಲೆ (ಮೂರು ತಿಂಗಳಿಗಿಂತ ಹಳೆಯದಾಗಿರಬಾರದು)
11. ವಿದ್ಯುತ್ ಬಿಲ್
12. ಲ್ಯಾಂಡ್‌ಲೈನ್ ಟೆಲಿಫೋನ್ ಅಥವಾ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಬಿಲ್
13. ನೀರಿನ ಬಿಲ್
14. ಗ್ಯಾಸ್ ಬಿಲ್
15. ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್
16. ಡೆಪಾಸಿಟರಿ ಅಕೌಂಟ್ ಸ್ಟೇಟ್‌ಮೆಂಟ್
17. ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್
18. ಎಂಪಿ ಅಥವಾ ಎಂಎಲ್‌ಎ ಸಹಿ ಮಾಡಿದ ಪ್ರಮಾಣಪತ್ರ
19. ಉದ್ಯೋಗಿಗಳ ಪ್ರಮಾಣಪತ್ರ

English summary

PAN card application: 19 Documents Can be Used as Proof of Address, Here's List

PAN card application: A Permanent Account Number (PAN) is a 10-digit alphanumeric number. 19 Documents Can be Used as Proof of Address, Here's List. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X