For Quick Alerts
ALLOW NOTIFICATIONS  
For Daily Alerts

ಪ್ಯಾನ್ ಕಾರ್ಡ್ ಕಳೆದುಹೋದರೆ ಮಾಡುವುದು ಏನು?, ಇಲ್ಲಿದೆ ವಿವರ

|

ಪ್ರಸ್ತುತ ಎಲ್ಲಾ ಕಾರ್ಯಗಳಿಗೆ ಪ್ಯಾನ್ ಕಾರ್ಡ್ ಅತೀ ಮುಖ್ಯವಾಗಿದೆ. ಬ್ಯಾಂಕಿಂಗ್ ಸಂಬಂಧಿತ ಎಲ್ಲಾ ಕಾರ್ಯದಲ್ಲಿ ನಮ್ಮ ಪ್ಯಾನ್ ಸಂಖ್ಯೆಯನ್ನು ಕೇಳಲಾಗುತ್ತದೆ. ಜನರ ಎಲ್ಲಾ ವ್ಯವಹಾರವನ್ನು ನಿಗದಲ್ಲಿ ಇರಿಸುವ ನಿಟ್ಟಿನಲ್ಲಿ ಈ ಪ್ಯಾನ್ ಕಡ್ಡಾಯ ಮಾಡಲಾಗಿದೆ. ಆದರೆ ಈ ಪ್ಯಾನ್ ಕಾರ್ಡ್ ಕಳೆದು ಹೋದರೆ ನಾವು ಮಾಡುವುದು ಏನು?

 

ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ ನೀವು ನಕಲಿ ಪ್ಯಾನ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು. ಅದು ಕೂಡಾ ಯಾವುದೇ ತೊಂದರೆ ಇಲ್ಲದೆಯೇ ಈ ಕಾರ್ಯವನ್ನು ಮಾಡಬಹುದು. ಆದರೆ ನೀವು ಕೆಲವು ಮೂಲಭೂತ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ. ನೀವು ಪ್ಯಾನ್ ಕಾರ್ಡ್ ಕಳೆದುಹೋದ ಸಂದರ್ಭದಲ್ಲಿ ಶೀಘ್ರವೇ ಈ ಬಗ್ಗೆ ವರದಿ ಮಾಡುವುದು ಒಳ್ಳೆಯದು.

ಎಚ್‌ಡಿಎಫ್‌ಸಿ ಗ್ರಾಹಕರೇ ಎಚ್ಚರ: ಈ ಲಿಂಕ್ ಕ್ಲಿಕ್ ಮಾಡಿದ್ರೆ ತಪ್ಪದು ಗ್ರಾಚಾರಎಚ್‌ಡಿಎಫ್‌ಸಿ ಗ್ರಾಹಕರೇ ಎಚ್ಚರ: ಈ ಲಿಂಕ್ ಕ್ಲಿಕ್ ಮಾಡಿದ್ರೆ ತಪ್ಪದು ಗ್ರಾಚಾರ

ನೀವು ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡಿದ್ದರೆ ಆನ್‌ಲೈನ್ ಮೂಲಕ ಸುಲಭವಾಗಿ, ಶೀಘ್ರವಾಗಿ ಪ್ಯಾನ್ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ ಈ ಸಂದರ್ಭದಲ್ಲಿ ನೀಡಲಾಗುವ ಎಲ್ಲಾ ಮಾಹಿತಿಗಳು ಸರಿಯಾಗಿರಬೇಕು. ನೀವು ಈ ಮಾಹಿತಿಯಲ್ಲಿ ತಪ್ಪು ಮಾಡಿದ್ದರೆ ನಿಮ್ಮ ಪ್ಯಾನ್ ಸಂಖ್ಯೆ ನಿಮಗೆ ಶೀಘ್ರವಾಗಿ ಲಭ್ಯವಾಗಲಾರದು. ನೀವು ಅಕ್ಷರ ಕೂಡಾ ತಪ್ಪಾಗದಂತೆ ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ, ಅದಕ್ಕೆ ಬೇಕಾದ ದಾಖಲೆಗಳು ಯಾವುದು ಎಂದು ತಿಳಿಯಲು ಮುಂದೆ ಓದಿ...

 ಆನ್‌ಲೈನ್ ಮೂಲಕ ಪ್ಯಾನ್ ಕಾರ್ಡ್‌ಗೆ ಹೀಗೆ ಅರ್ಜಿ ಸಲ್ಲಿಸಿ

ಆನ್‌ಲೈನ್ ಮೂಲಕ ಪ್ಯಾನ್ ಕಾರ್ಡ್‌ಗೆ ಹೀಗೆ ಅರ್ಜಿ ಸಲ್ಲಿಸಿ

* ಈ ಲಿಂಕ್‌ಗೆ ಕ್ಲಿಕ್ ಮಾಡಿ, ಆನ್‌ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ
* Reprint PAN Card ಮೇಲೆ ಕ್ಲಿಕ್ ಮಾಡಿದರೆ ಬೇರೆ ಸೈಟ್‌ಗೆ ರೀಡೈರೆಕ್ಟ್ ಆಗಲಿದೆ
* Online Application for changes/correction in PAN data ಮೇಲೆ ಕ್ಲಿಕ್ ಮಾಡಿ
* ಎಲ್ಲಾ ಮಾಹಿತಿ ಓದಿ, ಪ್ಯಾನ್ ಮಾದರಿ ಆಯ್ಕೆ ಮಾಡಿ, ಆನ್‌ಲೈನ್ ಅರ್ಜಿ ಭರ್ತಿ ಮಾಡಿ
* ನಿಮ್ಮ ಪಾಸ್‌ಪೋರ್ಟ್ ಭಾವಷಿತ್ರ, ಮೊದಲಾದ ದಾಖಲೆಗಳನ್ನು ಅಟಚ್ ಮಾಡಿ ಸಲ್ಲಿಕೆ ಮಾಡಿ ರೂ
* 107 ರೂಪಾಯಿ ಭಾರತದ ಪ್ರಜೆಗಳಿಗೆ, 989 ರೂಪಾಯಿ ಎನ್‌ಆರ್‌ಸಿಗಳಿಗೆ ಶುಲ್ಕ, ಆನ್‌ಲೈನ್ ಪಾವತಿ
* ಪಾವತಿ ಬಳಿಕ acknowledgement ಸಂಖ್ಯೆ ಲಭ್ಯವಾಗಲಿದೆ. ಪ್ಯಾನ್ ನಂಬರ್ ಮಾಹಿತಿ ಪೋಸ್ಟ್ ಮೂಲಕ ಮನೆಗೆ ತಲುಪಲಿದೆ

 ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ?
 

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ?

* 'Request for New PAN Changes or Correction in PAN Data' ಅರ್ಜಿ ಭರ್ತಿ ಮಾಡಬೇಕು
* ಈ ಅರ್ಜಿಯು ಪ್ಯಾನ್ ಸೆಂಟರ್, ಐಟಿ ಪ್ಯಾನ್ ಸೇವಾ ಕೇಂದ್ರದಲ್ಲಿ ಲಭ್ಯವಾಗಲಿದೆ
* www.incometaxindia.gov.in // UTIITSL website: www.utiitsl.com // NSDL website: www.tin-nsdl.com ಮೂಲಕ ಡೌನ್‌ಲೋಡ್ ಮಾಡಿ
* ಬ್ಲಾಕ್ ಲೆಟರ್‌ನಲ್ಲಿ, ಕಪ್ಪು ಶಾಹಿಯಲ್ಲಿ, ಆಂಗ್ಲ ಭಾಷೆಯಲ್ಲೇ ಫಾರ್ಮ್ ಭರ್ತಿ ಮಾಡಬೇಕು,
* ಪ್ಯಾನ್ ಸಂಖ್ಯೆ ಹಾಕಬೇಕು, ಇತ್ತೀಚಿನ ಛಾಯಾಚಿತ್ರ, ಸಹಿ ಬೇಕಾಗಲಿದೆ
* 105 ರೂಪಾಯಿ ಭಾರತದ ಪ್ರಜೆಗಳಿಗೆ, 866 ರೂಪಾಯಿ ಎನ್‌ಆರ್‌ಸಿಗಳಿಗೆ ಶುಲ್ಕ,
* ಆನ್‌ಲೈನ್/ನಗದು ಪಾವತಿ ಮಾಡಿ ಅರ್ಜಿ ಸಲ್ಲಿಕೆ ಮಾಡಿ

 ಬೇಕಾದ ದಾಖಲೆಗಳು ಯಾವುದು?

ಬೇಕಾದ ದಾಖಲೆಗಳು ಯಾವುದು?

ಐಡಿ ಪುರಾವೆ: ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಶಸ್ರಾಸ್ತ್ರ ಲೈಸೆನ್ಸ್
ವಯಸ್ಸು ಪುರಾವೆ: ಜನನ ಪ್ರಮಾಣ ಪತ್ರ, ಪಿಂಚಣಿ ಪತ್ರ, ವಿವಾಹ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಅಫಿಡವೀತ್
ವಿಳಾಸ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಪಿಂಚಣಿ ಪತ್ರ

English summary

PAN Card Lost – Know How to Apply for Lost PAN Card in Kannada

PAN Card Lost: Here are the step by step guide on how to reapply for lost pan card in kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X