ನವದೆಹಲಿ, ನ. 21: ಪೇಟಿಎಂ ಬಳಕೆದಾರರಿಗೆ ಖುಷಿಯ ಸುದ್ದಿ. ಪೇಟಿಎಂ ಆ್ಯಪ್‌ನಿಂದ ಈಗ ಬೇರೆ ಪೇಮೆಂಟ್ ಆ್ಯಪ್ ಬಳಕೆದಾರರಿಗೆ ಹಣ ಕಳುಹಿಸಬಹುದು. ಪೇಟಿಎಂನಲ್ಲಿ ನೊಂದಾಯಿತರಾಗದಿರುವ, ಆದರೆ, ಫೋನ್ ಪೇ ಅಥವಾ ಗೂಗಲ್ ಪೇ ಬಳಸುವ ಜನರಿಗೂ ಹಣ ಕಳುಹಿಸಬಹುದಾಗಿದೆ. ಪೇಟಿಎಂ ಆ್ಯಪ್‌ನಲ್ಲಿ ಈ ಹೊಸ ಫೀಚರ್ ಲಭ್ಯವಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಈ ಹೊಸ ಫೀಚರ್ ಅನ್ನು ಪ್ರಕಟಿಸಿದೆ.
ಪೇಟಿಎಂನಿಂದ ಬೇರೆ ಆ್ಯಪ್ ಬಳಕೆದಾರರಿಗೆ ಹಣ ಕಳುಹಿಸುವುದು ಮಾತ್ರವಲ್ಲ, ಬೇರೆ ಆ್ಯಪ್ ಬಳಕೆದಾರರಿಂದ ಹಣ ಕೂಡ ಸ್ವೀಕರಿಸಬಹುದು. ಯುಪಿಐಗೆ ನೊಂದಾಯಿತವಾದ ಮೊಬೈಲ್ ನಂಬರ್ ಇದ್ದರೆ ಸಾಕು.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ತನ್ನ ಸಾರ್ವತ್ರಿಕ ಡಾಟಾಬೇಸ್ ಅನ್ನು ಬಳಸಿಕೊಳ್ಳಲು ಎಲ್ಲಾ ಪೇಮೆಂಟ್ ಸರ್ವಿಸ್ ನೀಡುಗರಿಗೆ ಅವಕಾಶ ಕೊಟ್ಟಿದೆ. ಇದರಿಂದ ಪೇಮೆಂಟ್ ಸರ್ವಿಸ್ ನೀಡುಗರು ಪರಸ್ಪರ ಪ್ಲಾಟ್‌ಫಾರ್ಮ್‌ಗಳ ಮಧ್ಯೆ ಹಣಕಾಸು ವಹಿವಾಟು ನಡೆಸಲು ಅನುವು ಮಾಡಿಕೊಟ್ಟಂತಾಗಿದೆ.

ಎನ್‌ಪಿಸಿಐನ ವರದಿ ಪ್ರಕಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥೆಯ ಪ್ಲಾಟ್‌ಫಾರ್ಮ್‌ಗೆ ಈ ಅಕ್ಟೋಬರ್ ತಿಂಗಳಲ್ಲಿ 161 ಕೋಟಿ ವಹಿವಾಟುಗಳ ಮೂಲಕ ಹಣ ಬಂದಿದೆ. ಇನ್ನು, 36 ಕೋಟಿ ವಹಿವಾಟುಗಳಲ್ಲಿ ಹಣವನ್ನು ಕಳುಹಿಸಿದೆ ಎನ್ನಲಾಗಿದೆ.
ಈ ಮುಂಚೆ ಪೇಟಿಎಂನಲ್ಲಿ ನೊಂದಾಯಿತವಾದ ಜನರಿಗೆ ಮಾತ್ರ ಪೇಟಿಎಂ ಪ್ಲಾಟ್‌ಫಾರ್ಮ್‌ನಿಂದ ಹಣ ಕಳುಹಿಸಲು ಸಾಧ್ಯವಾಗಿತ್ತು. ಫೋನ್ ಪೇ, ಗೂಗಲ್ ಪೇ ಇತ್ಯಾದಿ ಇತರ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳಲ್ಲೂ ಇದೇ ಕ್ರಮ ಇದೆ. ಆದರೆ, ಯಾವುದೇ ಪೇಮೆಂಟ್ ಆ್ಯಪ್‌ನಿಂದಲೂ ಯುಪಿಐಗೆ ನೊಂದಾಯಿತವಲ್ಲದ ಖಾತೆಗೆ ಹಣ ವರ್ಗಾಯಿಸಬಹುದು. ಅದಕ್ಕೆ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್ ಇದ್ದರೆ ಸಾಕು.
ಇನ್ನು ಯಾವುದೇ ಪ್ಲಾಟ್‌ಫಾರ್ಮ್‌ನಿಂದಲೂ ಯುಪಿಐಗೆ ನೊಂದಾಯಿತವಾದ ಮೊಬೈಲ್ ನಂಬರ್ ಮೂಲಕ ಪೇಟಿಎಂನಿಂದ ಈಗ ಹಣ ವರ್ಗಾಯಿಸಲು ಅವಕಾಶ ಇರುವುದು ಹೊಸ ಫೀಚರ್ ಆಗಿದೆ. ಈ ಮುಂಚೆ ಬೇರೆ ಪೇಮೆಂಟ್ ಪ್ಲಾಟ್‌ಫಾರ್ಮ್‌ಗೆ ಹಣ ಕಳುಹಿಸಬೇಕಾದರೆ ಯುಪಿಐ ನಂಬರ್ ಅಥವಾ ಯುಪಿಐ ಐಡಿ ಇರಬೇಕಿತ್ತು. ಈಗ ನೊಂದಾಯಿತ ಮೊಬೈಲ್ ನಂಬರ್ ಇದ್ದರೆ ಸಾಕು. ಈ ಹೊಸ ಫೀಚರ್ ಬಳಸುವುದು ಹೇಗೆ ಎಂಬ ವಿವರ ಇಲ್ಲಿದೆ:

1) ಪೇಟಿಎಂ ಆ್ಯಪ್ ಓಪನ್ ಮಾಡಿ. ಅಲ್ಲಿ 'ಮನಿ ಟ್ರಾನ್ಸ್‌ಫರ್' ಮೇಲೆ ಕ್ಲಿಕ್ ಮಾಡಿ.
2) ಒಂದ ವೇಳೆ ಅಪ್ಲಿಕೇಶನ್‌ನ ಮುಖ್ಯಪುಟದಲ್ಲಿ 'ಮನಿ ಟ್ರಾನ್ಸ್‌ಫರ್' ಕಾಣಿಸದಿದ್ದರೆ ಸರ್ಚ್‌ನಲ್ಲಿ ಅದನ್ನು ಟೈಪಿಸಿ ಹುಡುಕಿದಾಗ 'ಮನಿ ಟ್ರಾನ್ಸ್‌ಫರ್' ಸಿಗುತ್ತದೆ.
3) ಮನಿ ಟ್ರಾನ್ಸ್‌ಫರ್ ಮೇಲೆ ಕ್ಲಿಕ್ ಮಾಡಿದ ಬಳಿಕ 'ಎಂಟರ್ ಮೊಬೈಲ್ ನಂಬರ್ ಆಫ್ ಎನಿ ಯುಪಿಐ ಆ್ಯಪ್' ಸಿಗುತ್ತದೆ. ಅದರಲ್ಲಿ ನೀವು ಹಣ ಕಳುಹಿಸಬೇಕಾದವರ ಮೊಬೈಲ್ ನಂಬರ್ ನಮೂದಿಸಬೇಕು.
4) ಇದಾದ ಬಳಿಕ ಹಣದ ಮೊತ್ತವನ್ನು ನಮೂದಿಸಿ, 'ಪೇ ನೌ' ಮೇಲೆ ಕ್ಲಿಕ್ ಮಾಡಿದರೆ ಹಣ ತತ್‌ಕ್ಷಣವೇ ಹಣ ವರ್ಗಾವಣೆ ಆಗುತ್ತದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೇಳಿಕೆ
ಯಾವುದೇ ಪೇಮೆಂಟ್ ಆ್ಯಪ್ ಬಳಕೆದಾರರಿಗೆ ಪೇಟಿಎಂನಿಂದ ಹಣ ಕಳುಹಿಸಲು ಸಾಧ್ಯವಾಗಿಸುವ ಹೊಸ ಫೀಚರ್ ಬಗ್ಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿ, ಇದು ಯುಪಿಐ ಇಕೋ ಸಿಸ್ಟಂಗೆ ಒಳ್ಳೆಯ ಪುಷ್ಟಿ ಸಿಗುತ್ತದೆ ಎಂದಿದ್ದಾರೆ.
"ಯಾವುದೇ ಯುಪಿಐ ಆ್ಯಪ್‌ಗೆ ಹಣ ಕಳುಹಿಸಲು ಜನರಿಗೆ ಸಾಧ್ಯವಾಗುತ್ತದೆ. ಇದರಿಂದ ಹೆಚ್ಚು ಜನರು ಆನ್‌ಲೈನ್ ವಹಿವಾಟು ನಡೆಸಲು ಅನುವಾಗುತ್ತದೆ. ಯುಪಿಐ ಪೇಮೆಂಟ್ ವಿಚಾರದಲ್ಲಿ ನಾವು ಮುಂಚೂಣಿಯಲ್ಲಿ ಮುಂದುವರಿಯುತ್ತೇವೆ" ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ವಕ್ತಾರರು ಹೇಳಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications