For Quick Alerts
ALLOW NOTIFICATIONS  
For Daily Alerts

ಪಿಎಂ ರೋಜ್‌ಗಾರ್ ಯೋಜನೆ 2022: ಅರ್ಹತೆ, ಲಾಭ ಇತರೆ ಮಾಹಿತಿ ಇಲ್ಲಿದೆ

|

ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆಯು ಯುವಕರಿಗೆ ಹಾಗೂ ಮಹಿಳೆಯರಿಗ, ಒಟ್ಟಾಗಿ ಸುಮಾರು ಹತ್ತು ಲಕ್ಷ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ. ಭಾರತ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು 1993ರಲ್ಲಿ ಆರಂಭ ಮಾಡಲಾಗಿದೆ.

ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಹೊಂದಿದ್ದರೂ ಉದ್ಯೋಗವಿಲ್ಲದ ಯುವಕರನ್ನು ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಲು ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಬಳಿಕ ಮಹಿಳೆಯರಿಗೂ ಈ ಪ್ರಯೋಜನ ವಿಸ್ತರಣೆ ಮಾಡಲಾಗಿದೆ. ಈ ಯೋಜನೆಯಲ್ಲಿ ಸ್ವ ಉದ್ಯೋಗ ಮಾಡಲು ಬಯಸುವ ಯುವಕರು, ಮಹಿಳೆಯರು ಸಾಲ ಸೌಲಭ್ಯವನ್ನು ಪಡೆಯಬಹುದು.

ಪಿಎಂ ಉಜ್ವಲ ಯೋಜನೆ: ಪ್ರಯೋಜನ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?ಪಿಎಂ ಉಜ್ವಲ ಯೋಜನೆ: ಪ್ರಯೋಜನ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?

ಪ್ರಮುಖವಾಗಿ ಯುವಕರು ಸ್ವ ಉದ್ಯೋಗ ಮಾಡಲು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಸರ್ಕಾರವು ಪ್ರೋತ್ಸಾಹಧನವನ್ನು ಕೂಡಾ ನೀಡುತ್ತದೆ. ದೇಶದಲ್ಲಿ ನಿರರುದ್ಯೋಗ ಭಾರೀ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಅಂದಿನ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿದೆ. ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಈ ಯೋಜನೆಯನ್ನು ಮುಂದುವರಿಸಿಕೊಂಡು ಬಂದಿದೆ. ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು, ಇಷ್ಟು ವರ್ಷಗಳಲ್ಲಿ ಈ ಯೋಜನೆಯಲ್ಲಿ ಏನೆಲ್ಲ ಬದಲಾವಣೆಯಾಗಿದೆ, ಅರ್ಹತೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

 ಪಿಎಂಆರ್‌ವೈ ಗುರಿಯೇನು?

ಪಿಎಂಆರ್‌ವೈ ಗುರಿಯೇನು?

ಸುಮಾರು ಏಳು ಲಕ್ಷ ಸಣ್ಣ ಉದ್ಯಮಿಗಳು ಹಾಗೂ ವ್ಯಾಪಾರಿಗಳನ್ನು ಎರಡು ವರ್ಷ ಆರು ತಿಂಗಳಿನಲ್ಲಿ ಸೃಷ್ಟಿ ಮಾಡುವ ಗುರಿಯನ್ನು ಈ ಯೋಜನೆಯು ಹೊಂದಿದೆ. ಸಣ್ಣ ಕಾರ್ಖಾನೆಗಳ ಮೂಲಕ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆಗೆ ಕೂಡಾ ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಸುಮಾರು ಒಂದು ಲಕ್ಷದವರೆಗಿನ ಸಾಲ ಸೌಲಭ್ಯಕ್ಕೆ ಯುವಕರು ಯಾವುದೇ ಮೇಲಾಧಾರವನ್ನು ನೀಡಬೇಕಾಗಿಲ್ಲ. ಸಾಮಾನ್ಯವಾಗಿ ಸಾಲಕ್ಕೆ ಮೇಲಾಧಾರ ನೀಡಬೇಕಾಗುತ್ತದೆ. ಆದರೆ ಇದಕ್ಕೆ ಮೇಲಾಧಾರ ಬೇಕಾಗಿಲ್ಲ.

 ಪಿಎಂ ಯೋಜ್‌ಗಾರ್ ಯೋಜನೆಯ ಪ್ರಮುಖ ಅಂಶಗಳು
 

ಪಿಎಂ ಯೋಜ್‌ಗಾರ್ ಯೋಜನೆಯ ಪ್ರಮುಖ ಅಂಶಗಳು

* ಶಿಕ್ಷಣ ಪಡೆದ, ಉದ್ಯೋಗವಿಲ್ಲದ 18-35 ವರ್ಷದವರು ಈ ಯೋಜನೆಯ ಪ್ರಯೋಜನ ಪಡೆಯಬಹುದು
* ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಅರ್ಜಿದಾರರು ಎಂಟನೇ ತರಗತಿ ಉತ್ತೀರ್ಣರಾಗಿರಬೇಕು
* ಆಯಾ ಸಮಯಕ್ಕೆ ಸಂದರ್ಭದಂತೆ ಸಾಲದ ಮೇಲಿನ ಬಡ್ಡಿದರವು ಬದಲಾವಣೆಯಾಗಲಿದೆ
* ಸುಮಾರು ಮೂರರಿಂದ ಏಳು ವರ್ಷದವರೆಗೆ ಮರುಪಾವತಿ ಕಾಲವಾಗಿದೆ.
* ಈ ಯೋಜನೆಯ ಪ್ರಯೋಜನ ಪಡೆಯುವವರ ಕುಟುಂಬ 40 ಸಾವಿರಕ್ಕಿಂತ ಅಧಿಕ ಮಾಸಿಕ ಆದಾಯ ಹೊಂದಿರಬಾರದು
* ಯೋಜನೆಯ ಪ್ರಯೋಜನ ಪಡೆಯುವವರು ಪ್ರಸ್ತುತ ವಾಸವಿರುವ ಮನೆಯಲ್ಲಿ ಮೂರು ವರ್ಷವಾದರೂ ವಾಸವಿದ್ದರಬೇಕು. ಮೂರು ವರ್ಷದಿಂದ ಹೆಚ್ಚಿನ ಕಾಲ ಆ ಮನೆಯಲ್ಲೇ ವಾಸಿವಿದ್ದರೆ ಮಾತ್ರ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ.
* ಯೋಜನೆಯ ಪ್ರಯೋಜನ ಪಡೆಯುವವರು ಯಾವುದೇ ಬ್ಯಾಂಕ್, ಹಣಕಾಸು ಸಂಸ್ಥೆಯಲ್ಲಿ ಸಾಲವನ್ನು ಮರುಪಾವತಿ ಮಾಡದೆ ಡಿಫಾಲ್ಟರ್ ಪಟ್ಟಿಗೆ ಸೇರಿರಬಾರದು
* ಫಲಾನುಭವಿಗಳಿಗೆ ಶೇಕಡ 15ರಷ್ಟು ಸಬ್ಸಿಡಿ ಲಭ್ಯವಾಗಲಿದೆ. ಸುಮಾರು 7500 ಸಬ್ಸಿಡಿ ಲಭ್ಯವಾಗಬಹುದು.
* ಎಸ್‌ಸಿ, ಎಸ್‌ಟಿ ಸೇರಿದಂತೆ ಮಹಿಳೆಯರಿಗೆ ಮೀಸಲಾತಿ ಇದೆ. ಈ ಸಮುದಾಯದ ಬೆಳವಣಿಗೆಗಾಗಿ ಈ ಯೋಜನೆಯಲ್ಲಿ ಮೀಸಲಾತಿ ಇಡಲಾಗಿದೆ.

 ಯೋಜನೆಯ ವೆಚ್ಚವೆಷ್ಟು, ಜಾರಿ ಹೇಗೆ?

ಯೋಜನೆಯ ವೆಚ್ಚವೆಷ್ಟು, ಜಾರಿ ಹೇಗೆ?

ಉದ್ಯಮಕ್ಕೆ ಎರಡು ಲಕ್ಷ ಹಾಗೂ ಇಂಡಸ್ಟ್ರಿ, ಸೇವಾ ವಲಯಕ್ಕೆ ಐದು ಲಕ್ಷದ ಯೋಜನೆ ಇದಾಗಿದೆ. ಸ್ವ ಉದ್ಯೋಗವನ್ನು ನಿರ್ವಹಣೆ ಮಾಡಲು ಸಾಧ್ಯವಾಗಲಿ ಎಂಬ ನಿಟ್ಟಿನಲ್ಲಿ ಸುಮಾರು 15-20 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ನಿರ್ವಹಣೆ ಮಾಡುತ್ತದೆ. ಈ ಯೋಜನೆಯ ಜಾರಿಯ ಜವಾಬ್ದಾರಿಯು ರಾಜ್ಯ ಮಟ್ಟದಲ್ಲಿ ಕಮಿಷನರ್ ಅಥವಾ ನಿರ್ದೇಶಕರಿಗೆ ಇರಲಿದೆ. ಎಲ್ಲಾ ರಾಜ್ಯದಲ್ಲಿ ಈ ಯೋಜನೆ ನಿರ್ವಹಣೆಗಾಗಿ ಸಮಿತಿ ಇರಲಿದೆ. ಈ ಯೋಜನೆಯಲ್ಲಿ ಟೀ ಗಾರ್ಡನ್, ಪ್ರಾಣಿ ಸಾಕಣೆ, ಮೀನುಗಾರಿಕೆ, ತೋಟಗಾರಿಕೆ, ಹಂದಿ ಸಾಕಣೆಯು ಒಳಗೊಂಡಿದೆ. ಸುಮಾರು 5-12ರಷ್ಟು ಸಾಲ ಸೌಲಭ್ಯ ಲಭ್ಯವಾಗಲಿದೆ.

 ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಕೆ ಮಾಡುವುದು?

ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಕೆ ಮಾಡುವುದು?

* ಅಧಿಕೃತ ಸೈಟ್ https://pmrpy.gov.in/ ಗೆ ಭೇಟಿ ನೀಡಿ
* ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ
* ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ
* ಭರ್ತಿ ಮಾಡಿದ ಅರ್ಜಿಯನ್ನು ನೀವು ಸಾಲ ಪಡೆಯಲು ಬಯಸುವ ಬ್ಯಾಂಕ್‌ಗೆ ಸಲ್ಲಿಕೆ ಮಾಡಿ
* ಬಳಿಕ ಬ್ಯಾಂಕ್ ಈ ಅರ್ಜಿ ಪರಿಶೀಲನೆ ಮಾಡಿ ನಿಮ್ಮನ್ನು ಸಂಪರ್ಕ ಮಾಡಲಿದೆ

 ಯಾವೆಲ್ಲ ದಾಖಲೆ ಬೇಕು?

ಯಾವೆಲ್ಲ ದಾಖಲೆ ಬೇಕು?

* ಇಡಿಪಿ ತರಬೇತಿ ಪ್ರಮಾಣಪತ್ರ
* ಡ್ರೈವಿಂಗ್ ಲೈಸೆನ್ಸ್
* ನೀವು ಯಾವ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೀರಿ ಎಂಬ ಮಾಹಿತಿ
* ವಿದ್ಯಾಭ್ಯಾಸ ಅರ್ಹತೆ, ಅನುಭವ ಮೊದಲಾದ ಪ್ರಮಾಣಪತ್ರ
* ನಿಮ್ಮ ಜನನ ದಿನಾಂಕ ಪ್ರಮಾಣೀಕರಿಸುವ ದಾಖಲೆ (ಜನನ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ)
* ನೀವು ಮೂರು ವರ್ಷ ಒಂದು ಮನೆಯಲ್ಲಿ ವಾಸವಿದ್ದೀರಿ ಎಂಬ ದಾಖಲೆ (ರೇಷನ್ ಕಾರ್ಡ್, ಬಿಲ್ ಮೊದಲಾದ ದಾಖಲೆ)
* ಕಂದಾಯ ಅಧಿಕಾರಿಗಳು ನೀಡಿದ ಆದಾಯ ಪ್ರಮಾಣಪತ್ರ
* ಜಾತಿ ಪ್ರಮಾಣಪತ್ರ (ನೀವು ಎಸ್‌ಟಿ/ಎಸ್‌ಇ ಆದ್ದಲ್ಲಿ ಮಾತ್ರ)

ನೀವು ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡುವ ಮುನ್ನ ಈ ಎಲ್ಲಾ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಸಾಲ ಲಭ್ಯವಾಗುವ ಸಂದರ್ಭದಲ್ಲಿ ಯಾವುದೇ ತೊಂದರೆ ಉಂಟಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ದಾಖಲೆಯನ್ನು ಸರಿಯಾಗಿ ಅಪ್‌ಲೋಡ್ ಮಾಡಲಾಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ.

 

 ಹೊಸ ಬದಲಾವಣೆಗಳು ಏನಿದೆ?

ಹೊಸ ಬದಲಾವಣೆಗಳು ಏನಿದೆ?

ಈ ಯೋಜನೆಯಲ್ಲಿ ಈಗ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಮಹಿಳೆ, ಎಸ್‌ಸಿ, ಎಸ್‌ಟಿ ವಿಭಾಗಕ್ಕೆ ಈ ಯೋಜನೆಯಲ್ಲಿ ಸಾಲ ಪಡೆಯುವ ವಯಸ್ಸಿನ ಮಿತಿಯನ್ನು ಇನ್ನೂ ಹತ್ತು ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ. 35 ವರ್ಷಕ್ಕಿಂತ ಅಧಿಕ ವಯಸ್ಸಿನ ಮಹಿಳೆ, ಎಸ್‌ಸಿ, ಎಸ್‌ಟಿ ವಿಭಾಗದವರು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

* ಈ ಹಿಂದೆ ಈ ಯೋಜನೆಯ ಫಲಾನುಭವಿಗಳಾಗಬೇಕಾದರೆ ಮಹಿಳೆಯರು ಹತ್ತನೇ ತರಗತಿ ಉತ್ತೀರ್ಣರಾಗಬೇಕಾಗಿತ್ತು. ಆದರೆ ಈಗ ಈ ವಯಸ್ಸಿನ ಮಿತಿಯನ್ನು ಎಂಟನೇ ತರಗತಿಗೆ ಇಳಿಕೆ ಮಾಡಲಾಗಿದೆ.
* ಯೋಜನೆಯ ಸಾಲ ಮಿತಿಯನ್ನು ಒಂದು ಲಕ್ಷದಿಂದ ಎರಡು ಲಕ್ಷಕ್ಕೆ ಏರಿಕೆ ಮಾಡಲಾಗಿದೆ
* ಈ ಯೋಜನೆಯಲ್ಲಿ ಕೃಷಿಗೆ ಸಂಬಂಧಿಸಿದ ಸಾಲ ಲಭ್ಯವಾಗಲಿದೆ. ಆದರೆ ಕೃಷಿಗಾಗಿ ವಸ್ತು ಖರೀದಿ, ಕೃಷಿ ವೆಚ್ಚ, ಇತರೆ ವೆಚ್ಚ ಸೇರ್ಪಡೆಯಾಗಲಾರದು.
* ಇಬ್ಬರು ಮೂವರು ಹೊಸ ಸ್ವ ಉದ್ಯೋಗ ಮಾಡುವುದಾದರೆ ಐದು ಲಕ್ಷದವರೆಗೆ ಸಾಲ ಲಭ್ಯವಾಗಲಿದೆ.
* ಏಳು ಉತ್ತರದ ರಾಜ್ಯಗಳಲ್ಲಿ ಯೋಜನೆಯ ಗರಿಷ್ಠ ವಯೋಮಿತಿ 40 ವರ್ಷವಾಗಿದೆ
* ಈಶಾನ್ಯ ಭಾಗದ ಜನರಿಗೆ ಕನಿಷ್ಠ ವಯೋಮಿತಿ 18 ಆಗಿದ್ದು, ಗರಿಷ್ಠ ವಯೋಮಿತಿ 35 ಆಗಿದೆ.
* ಎಸ್‌ಸಿ, ಎಸ್‌ಟಿ ಸಮುದಾಯವರಿಗೆ ಗರಿಷ್ಠ ವಯೋಮಿತಿ 45 ವರ್ಷವಾಗಿದೆ
* ಅರ್ಜಿದಾರರು ಎಂಟನೇ ತರಗತಿ ಉತ್ತೀರ್ಣರಾಗಿರಬೇಕು
* ಫಲಾನುಭವಿಗಳಿಗೆ ಶೇಕಡ 15ರಷ್ಟು ಸಬ್ಸಿಡಿ ಲಭ್ಯವಾಗಲಿದೆ. ಸುಮಾರು 7500 ಸಬ್ಸಿಡಿ ಲಭ್ಯವಾಗಬಹುದು.

 

English summary

Pradhan Mantri Rozgar Yojana - PMRY Loan, Scheme, Documents Required and How to Apply Online in Kannada

Pradhan Mantri Rozgar Yojana (PMRY) is initiated to provide sustainable self-employment opportunities to 10 lakh educated unemployed youth and women in India. Know Loan, Scheme, Documents Required and How to Apply Online in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X