For Quick Alerts
ALLOW NOTIFICATIONS  
For Daily Alerts

ಪಿಎಂ ವಯವಂದನ ಯೋಜನೆ: ಅರ್ಹತೆ, ಲಾಭ ಏನಿದೆ, ಅರ್ಜಿ ಸಲ್ಲಿಕೆ ಹೇಗೆ?

|

ಸಾಮಾನ್ಯವಾಗಿ ನಾವು ಜೀವ ವಿಮೆಗೆ ಹಾಗೂ ವಯಸ್ಸಾದ ಬಳಿಕ ಪಿಂಚಣಿ ಪಡೆಯುವುದಕ್ಕೆ ಅಧಿಕ ಆದ್ಯತೆ ನೀಡುತ್ತೇವೆ. ನಮ್ಮ ನಿವೃತ್ತಿ ಜೀವನ ಆರಾಮವಾಗಿರಲು ನಾವು ಈಗಲೇ ಉಳಿತಾಯ ಮಾಡುವುದು ಉತ್ತಮ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿರುವಾಗ ನಮಗೆ ಉತ್ತಮ ಆಯ್ಕೆ ಪ್ರಧಾನ ಮಂತ್ರಿ ವಯವಂದನ ಯೋಜನೆಯಾಗಿದೆ. ಈ ಯೋಜನೆ ವಿಮೆ ಹಾಗೂ ಪಿಂಚಣಿ ಯೋಜನೆಯಾಗಿದೆ.

 

ಈ ಯೋಜನೆಯು ಹಿರಿಯ ನಾಗರಿಕರಿಗೆ ಆದಾಯವನ್ನು ನೀಡುವ ಯೋಜನೆಯಾಗಿದೆ. ಈ ಯೋಜನೆಯು ಭಾರತದ ಸರ್ಕಾರದ ಯೋಜನೆಯಾಗಿದ್ದು, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಈ ಯೋಜನೆ ಮೂಲಕ ವಿಮಾ ರಕ್ಷಣೆಯನ್ನು ನೀಡುತ್ತದೆ. ನಿವೃತ್ತಿ ಬಳಿಕ ಹಿರಿಯ ನಾಗರಿಕರಿಗೆ ಆರ್ಥಿಕ ಹಾಗೂ ವಿಮಾ ಸುರಕ್ಷತೆಗಾಗಿ ಈ ಯೋಜನೆಯನ್ನು ಭಾರತ ಸರ್ಕಾರ ಆರಂಭ ಮಾಡಿದೆ.

ಪಿಎಂ ರೋಜ್‌ಗಾರ್ ಯೋಜನೆ 2022: ಅರ್ಹತೆ, ಲಾಭ ಇತರೆ ಮಾಹಿತಿ ಇಲ್ಲಿದೆ

ಸುಮಾರು 60 ವರ್ಷಕ್ಕಿಂತ ಅಧಿಕ ವಯಸ್ಸಿನವರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯು 2017 ಮೇ 4ರಿಂದ 2020ರ ಮಾರ್ಚ್ 31ರವರೆಗೆ ಇತ್ತು. ಆದರೆ ಬಳಿಕ ಮೂರು ವರ್ಷಗಳ ಕಾಲ ಅಂದರೆ 2023 ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಯೋಜನೆಯು ಸುಮಾರು ಹತ್ತು ವರ್ಷಗಳ ಕಾಲ ಪಿಂಚಣಿಯನ್ನು ನೀಡುತ್ತದೆ. ಸುಮಾರು ವಾರ್ಷಿಕ ಶೇಕಡ 7.4ರವರೆಗೆ ರಿಟರ್ನ್ ನೀಡುತ್ತದೆ. ಇದನ್ನು ಮಾಸಿಕವಾಗಿ ಹತ್ತು ವರ್ಷಗಳ ಕಾಲ ಪಾವತಿ ಮಾಡಲಾಗುತ್ತದೆ. ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು, ಇಷ್ಟು ವರ್ಷಗಳಲ್ಲಿ ಈ ಯೋಜನೆಯಲ್ಲಿ ಏನೆಲ್ಲ ಬದಲಾವಣೆಯಾಗಿದೆ, ಅರ್ಹತೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

 ಲಕ್ಷಣ, ಪ್ರಯೋಜನ ಏನಿದೆ?
 

ಲಕ್ಷಣ, ಪ್ರಯೋಜನ ಏನಿದೆ?


ಪಿಂಚಣಿ ಮೂಲಕ ನಿವೃತ್ತಿ ರಕ್ಷಣೆ: ಈ ಯೋಜನೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಪಿಂಚಣಿಯನ್ನು ಪಡೆಯಲು ಸಾಧ್ಯವಾಗಲಿದೆ.
ಅವಧಿ: ಈ ಯೋಜನೆಯು 2022-21ನೇ ವರ್ಷದಲ್ಲಿ ವಾರ್ಷಿಕವಾಗಿ ಶೇಕಡ 7.40ರಷ್ಟು ಬಡ್ಡಿದರವನ್ನು ನೀಡುತ್ತದೆ. ಏಪ್ರಿಲ್ ಒಂದರಿಂದ ಹಣಕಾಸು ವರ್ಷಕ್ಕೆ ಬಡ್ಡಿದರವನ್ನು ಪರಿಷ್ಕರಣೆ ಮಾಡಲಾಗಿದೆ. ಪ್ರಸ್ತುತ ಹೊಸ ಅರ್ಜಿದಾರರಿಗೆ ಶೇಕಡ 7.75ರಷ್ಟು ಬಡ್ಡಿದರ ನೀಡಲಾಗುತ್ತದೆ.
ಪಾವತಿ ಆಯ್ಕೆ: ನಾವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕವಾಗಿ ಪಾವತಿಯನ್ನು ಆಯ್ಕೆ ಮಾಡಬಹುದು. ಈ ಯೋಜನೆಯನ್ನು ಖರೀದಿ ಮಾಡಿದ ಕೂಡಲೇ ಮೊದಲ ಪಾವತಿ ಮಾಡಬೇಕಾಗುತ್ತದೆ. ಇದು ನಾವು ಆಯ್ಕೆ ಮಾಡಿದ ಪಾವತಿ ವಿಧಾನದ ಮೇಲೆ ನಿರ್ಧರಿತವಾಗುತ್ತದೆ. ಪಿಂಚಣಿದಾರರು ತ್ರೈಮಾಸಿಕ ವಿಧಾನ ಆಯ್ಕೆ ಮಾಡಿಕೊಂಡಿದ್ದರೆ, ಮೊದಲ ಪಾವತಿಯು ಮೂರು ತಿಂಗಳಲ್ಲಿ ಲಭ್ಯವಾಗಲಿದೆ.
ಮೆಚ್ಯೂರಿಟಿ ಬೆನಿಫಿಟ್: ಈ ಯೋಜನೆಯಲ್ಲಿ ಮೆಚ್ಯೂರಿಟಿ ಬೆನಿಫಿಟ್ ಕೂಡಾ ಇದೆ. ಇದರಲ್ಲಿ ಹೆಚ್ಚು ಹಣವು ಒಂದೇ ಬಾರಿಗೆ ಲಭ್ಯವಾಗಲಿದೆ. ಈ ಪಾಲಿಸಿ ಅವಧಿ ಮುಗಿಯುವವರೆಗೂ ಪಾಲಿಸಿದಾರರು ಬದುಕಿದ್ದರೆ ಈ ಮೆಚ್ಯೂರಿಟಿ ಬೆನಿಫಿಟ್ ಲಭ್ಯವಾಗಲಿದೆ.
ಡೆತ್ ಬೆನೆಫಿಟ್: ಪಾಲಿಸಿದಾರರು ಪಾಲಿಸಿ ಅವಧಿಯಲ್ಲಿ ಸಾವನ್ನಪ್ಪಿದರೆ, ವಿಮೆ ಖರೀದಿ ಮಾಡಿದ ಸಂಪೂರ್ಣ ಮೊತ್ತವು ಪಾಲಿಸಿದಾರರ ನಾಮಿನಿಗೆ ಲಭ್ಯವಾಗಲಿದೆ. ಇದಕ್ಕಾಗಿ ಕೆಲವು ದಾಖಲೆಗಳ ಅಗತ್ಯವಿದೆ.
ಸರೆಂಡರ್ ವ್ಯಾಲ್ಯೂ: ಇನ್ನು ತೀರಾ ಹಣಕಾಸಿನ ಅಗತ್ಯ ಇದ್ದ ಸಂದರ್ಭದಲ್ಲಿ, ವೈದ್ಯಕೀಯ ತುರ್ತು ಇದ್ದ ಸಂದರ್ಭದಲ್ಲಿ ಈ ಪಾಲಿಸಿಯನ್ನು ಹಿಂದಕ್ಕೆ ಪಡೆಯುವ ಅಥವಾ ಸರೆಂಡರ್ ಮಾಡುವ ಆಯ್ಕೆಯನ್ನು ಕೂಡಾ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಪಾಲಿಸಿಯ ಶೇಕಡ 98ರಷ್ಟು ಹಣ ಮಾತ್ರ ಲಭ್ಯವಾಗಲಿದೆ
ಫ್ರೀ ಲಾಕ್‌ಇನ್ ಪಿರೆಯಡ್: ಪಾಲಿಸಿಯನ್ನು ಖರೀದಿ ಮಾಡಿದ ಬಳಿಕ ಪಾಲಿಸಿ ಅವಧಿ ಹಾಗೂ ಷರತ್ತಿನ ವಿಚಾರದಲ್ಲಿ ನಮಗೆ ಅಸಮಾಧಾನ ಇರಬಹುದು. ಈ ಸಂದರ್ಭದಲ್ಲಿ ನಾವು ಆನ್‌ಲೈನ್‌ನಲ್ಲಿ ಪಾಲಿಸಿ ಖರೀದಿ ಮಾಡಿದ ಮೂವತ್ತು ದಿನದೊಳಗೆ ಪಾಲಿಸಿಯನ್ನು ಕೈಬಿಡಬಹುದು. ನಾವು ಆಫ್‌ಲೈನ್‌ನಲ್ಲಿ ಪಾಲಿಸಿ ಖರೀದಿ ಮಾಡಿದ್ದರೆ ಪಾಲಿಸಿ ಖರೀದಿ ಮಾಡಿದ ಹದಿನೈದು ದಿನದ ಒಳಗೆ ಪಾಲಿಸಿ ಕೈಬಿಡಬಹುದು. ಇನ್ನು ಪಾಲಿಸಿ ರಿಟರ್ನ್ ಮಾಡುವುದಕ್ಕೆ ಕಾರಣ ಕೂಡಾ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಪೂರ್ಣ ಮೊತ್ತೆ ಲಭ್ಯವಾಗಲಿದೆ
ಸಾಲ ಕೂಡಾ ಲಭ್ಯ: ನೀವು ಪಾಲಿಸಿ ಪಡೆದು ಮೂರು ವರ್ಷ ಆದ ಬಳಿಕ ನಿಮಗೆ ಸಾಲವನ್ನು ಪಡೆಯುವ ಅವಕಾಶ ಕೂಡಾ ಲಭ್ಯವಿದೆ. ಪಾಲಿಸಿಯ ಶೇಕಡ 75ರಷ್ಟನ್ನು ಸಾಲವಾಗಿ ಪಡೆಯಬಹುದು. ಸಾಲದ ಮೇಲಿನ ಬಡ್ಡಿದರವು ಪಿಂಚಣಿಯಿಂದ ಕಡಿತ ಮಾಡಲಾಗುತ್ತದೆ. ಬಳಿಕ ಮೆಚ್ಯೂರಿಟಿ ಅಥವಾ ಸರೆಂಡರ್ ವೇಳೆ ಸಾಲದ ಮೊತ್ತವನ್ನು ಕ್ಲೈಮ್‌ನ ಹಣದಿಂದ ಕಡಿತ ಮಾಡಲಾಗುತ್ತದೆ.

ಪಿಎಂ ಉಜ್ವಲ ಯೋಜನೆ: ಪ್ರಯೋಜನ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?

 

 ಪಿಎಂ ವಯವಂದನ ಯೋಜನೆಗೆ ಅರ್ಹತೆ

ಪಿಎಂ ವಯವಂದನ ಯೋಜನೆಗೆ ಅರ್ಹತೆ

ನೀವು ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ 60 ವರ್ಷಕ್ಕಿಂತ ಅಧಿಕ ವಯಸ್ಸು ಆಗಿರಬೇಕು. ಗರಿಷ್ಠ ವಯೋಮಿತಿ ಇಲ್ಲ. ಹತ್ತು ವರ್ಷಗಳ ಅವಧಿಯ ಪಾಲಿಸಿ ಇದಾಗಿದೆ. ಕನಿಷ್ಠ ಪಿಂಚಣಿ ಮಾಸಿಕ ಒಂದು ಸಾವಿರವಾಗಿದೆ. ಗರಿಷ್ಠ ಪಿಂಚಣಿ ಮಾಸಿಕ ಹತ್ತು ಸಾವಿರ ರೂಪಾಯಿ ಆಗಿದೆ. ಕನಿಷ್ಠ ಪಿಂಚಣಿ ತ್ರೈಮಾಸಿಕ ಮೂರು ಸಾವಿರ ರೂಪಾಯಿ ಆಗಿದೆ. ಗರಿಷ್ಠ ಪಿಂಚಣಿ ತ್ರೈಮಾಸಿಕ ಮೂವತ್ತು ಸಾವಿರ ರೂಪಾಯಿ ಆಗಿದೆ. ಅರ್ಧ ವಾರ್ಷಿಕ ಪಿಂಚಣಿ ಕನಿಷ್ಠ ಆರು ಸಾವಿರ ರೂಪಾಯಿ ಆಗಿದೆ. ಅರ್ಧ ವಾರ್ಷಿಕ ಪಿಂಚಣಿ ಗರಿಷ್ಠ ಪಿಂಚಣಿ 60 ಸಾವಿರ ರೂಪಾಯಿ ಆಗಿದೆ. ವಾರ್ಷಿಕ ಪಿಂಚಣಿ ಕನಿಷ್ಠ ಹನ್ನೆರಡು ಸಾವಿರವಾದರೆ, ವಾರ್ಷಿಕ ಪಿಂಚಣಿ ಗರಿಷ್ಠ 1,20,000 ರೂಪಾಯಿ ಆಗಿದೆ.

ಗರಿಷ್ಠ ಮೊತ್ತ
ವಾರ್ಷಿಕ: 14,49,086 ರೂಪಾಯಿ, ಪಿಂಚಣಿ 1,11,000 ರೂಪಾಯಿ
ಅರ್ಧ ವಾರ್ಷಿಕ: 14,76,064 ರೂಪಾಯಿ, ಪಿಂಚಣಿ 55,500 ರೂಪಾಯಿ
ತ್ರೈಮಾಸಿಕ: 14,89,933 ರೂಪಾಯಿ, ಪಿಂಚಣಿ 27,750 ರೂಪಾಯಿ
ಮಾಸಿಕ: 15,00,000 ರೂಪಾಯಿ, ಪಿಂಚಣಿ 9250 ರೂಪಾಯಿ

ಕನಿಷ್ಠ ಮೊತ್ತ
ವಾರ್ಷಿಕ: 1,56,658 ರೂಪಾಯಿ, ಪಿಂಚಣಿ 12,000 ರೂಪಾಯಿ
ಅರ್ಧ ವಾರ್ಷಿಕ: 1,59,574 ರೂಪಾಯಿ, ಪಿಂಚಣಿ 6,000 ರೂಪಾಯಿ
ತ್ರೈಮಾಸಿಕ: 1,61,074 ರೂಪಾಯಿ, ಪಿಂಚಣಿ 3,000 ರೂಪಾಯಿ
ಮಾಸಿಕ: 1,62,162 ರೂಪಾಯಿ, ಪಿಂಚಣಿ 1,000 ರೂಪಾಯಿ

 

 ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಆಫ್‌ಲೈನ್‌ ಮೂಲಕ ಈ ಯೋಜನೆಯನ್ನು ಖರೀದಿ ಮಾಡಬೇಕಾದರೆ ನೀವು ಎಲ್‌ಐಸಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ನೀಡುವ ಅರ್ಜಿಯನ್ನು ಭರ್ತಿ ಮಾಡಿ ಅದನ್ನು ಅಲ್ಲಿಯೇ ಸಲ್ಲಿಕೆ ಮಾಡಬೇಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡುವುದಾದರೆ ಕೆಲವು ಹಂತಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಹಂತ 1: ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: buy policy online ನಲ್ಲಿ pradhan mantri vaya vandana yojana ಮೇಲೆ ಕ್ಲಿಕ್ ಮಾಡಿ
ಹಂತ 3: ಅದರಲ್ಲಿ ನಿಮಗೆ ನಾಲ್ಕು ಆಯ್ಕೆ ಲಭ್ಯವಾಗಲಿದೆ. buy online ಆಯ್ಕೆಗಾಗಿ 842 ಮೇಲೆ ಕ್ಲಿಕ್ ಮಾಡಿ
ಹಂತ 4: Click to Buy Online ಮೇಲೆ ಕ್ಲಿಕ್ ಮಾಡಿ,ಇಮೇಲ್, ಮೊದಲಾದ ಮಾಹಿತಿಯನ್ನು ನೀಡಿ ಆಕ್ಸಸ್ ಐಡಿಯನ್ನು ಕ್ರಿಯೆಟ್ ಮಾಡಿ
ಹಂತ 5: ನಿಮಗೆ ಎಸ್‌ಎಂಎಸ್ ಮೂಲಕ ಒಂಬತ್ತು ಡಿಜಿಟ್ ಐಡಿ ಲಭ್ಯವಾಗಲಿದೆ.
ಹಂತ 6: ಆಕ್ಸಸ್ ಐಡಿ ಹಾಕಿ Proceed ಮೇಲೆ ಕ್ಲಿಕ್ ಮಾಡಿ, pradhan mantri vaya vandana yojanaಯ ಅರ್ಜಿ ಭರ್ತಿ ಮಾಡಿ
ಹಂತ 7: ಅರ್ಜಿ ಸಲ್ಲಿಕೆ ಮಾಡಿದರೆ ನಿಮಗೆ ಪಾಲಿಸಿ ನಂಬರ್ ಹಾಗೂ ಅಕ್ನಾಲಜ್‌ಮೆಂಟ್ ಲಭ್ಯವಾಗಲಿದೆ.

 ಯಾವೆಲ್ಲಾ ದಾಖಲೆಗಳು ಬೇಕು?

ಯಾವೆಲ್ಲಾ ದಾಖಲೆಗಳು ಬೇಕು?

* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಯಾವ ಬ್ಯಾಂಕ್‌ನಲ್ಲಿ ಪಿಂಚಣಿ ಪಡೆಯಲು ಬಯಸುತ್ತೀರೋ ಆ ಬ್ಯಾಂಕ್‌ ಖಾತೆ ಸಂಖ್ಯೆ
* ನಿಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ

English summary

Pradhan Mantri Vaya Vandana Yojana- Features, Benefits, Eligibility and How to Apply in kannada

PMVVY - Pradhan Mantri Vaya Vandana Yojana is an insurance policy-cum- pension scheme that provides alternative avenues of income to senior citizens of the country. Know features, benefits, eligibility criteria and application process in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X