For Quick Alerts
ALLOW NOTIFICATIONS  
For Daily Alerts

Janani Suraksha Yojana : ಈ ಯೋಜನೆಯಡಿ ಗರ್ಭಿಣಿಯರು 6 ಸಾವಿರ ಪಡೆಯಿರಿ, ಹೇಗೆ ನೋಡಿ

|

ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಒಂದು ಯೋಜನೆಯು ನಿರ್ದಿಷ್ಟವಾಗಿ ಒಂದು ಸಮುದಾಯಕ್ಕಾಗಿ ಕೇಂದ್ರ ಸರ್ಕಾರವು ಜಾರಿ ಮಾಡಿರುತ್ತದೆ. ಶಿಶುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೂ ಕೇಂದ್ರ ಸರ್ಕಾರದ ಯೋಜನೆಯಿದೆ. ಅದರಂತೆಯೇ ಗರ್ಭಿಣಿಯರಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಯೋಜನೆಯೊಂದನ್ನು ಜಾರಿ ಮಾಡಿದೆ.

 

ಈ ಯೋಜನೆ ಮೂಲಕ ಜನರು ಹಣಕಾಸು ಸಹಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ನೇರವಾಗಿ ಅಥವಾ ಸಾಲದ ಮೂಲಕ ನೀವು ಯೋಜನೆಯ ಮೊತ್ತವನ್ನು ಪಡೆಯಬಹುದು. ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಜಾರಿ ಮಾಡಿರುವ ಈ ಯೋಜನೆಯಲ್ಲಿ ಗರ್ಭಿಣಿಯರು ಆರು ಸಾವಿರ ರೂಪಾಯಿಯನ್ನು ಪಡೆಯಬಹುದು.

ಪ್ರಮುಖವಾಗಿ ಶಿಶುವಿನ ಆರೋಗ್ಯಕ್ಕಾಗಿ, ಗರ್ಭಿಣಿಯರ ಚಿಕಿತ್ಸೆಗಾಗಿ ಈ ಆರು ಸಾವಿರ ರೂಪಾಯಿಯನ್ನು ಸರ್ಕಾರವು ನೀಡುತ್ತದೆ. ಈ ಯೋಜನೆಯನ್ನು ಶಿಶುವಿನ ಆರ್ಥಿಕ ಸುರಕ್ಷತೆಗಾಗಿ ಆರಂಭ ಮಾಡಲಾಗಿದೆ. ಆರು ಸಾವಿರ ರೂಪಾಯಿಯನ್ನು ಪಡೆಯುವುದು ಹೇಗೆ, ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 ಅರ್ಹತೆ ಏನು, ಯೋಜನೆ ಬಗ್ಗೆ ಮಾಹಿತಿ

ಅರ್ಹತೆ ಏನು, ಯೋಜನೆ ಬಗ್ಗೆ ಮಾಹಿತಿ

ಪ್ರಮುಖವಾಗಿ ಕಡಿಮೆ ಆದಾಯವಿರುವ ಕುಟುಂಬಕ್ಕೆ ಸೇರಿದ ಮಹಿಳೆಯರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯ. ಜನನಿ ಸುರಕ್ಷ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗರ್ಭಿಣಿ ಮಹಿಳೆಯರು ಆರ್ಥಿಕ ಸಹಾಯವನ್ನು ಪಡೆಯಬಹುದು. ಸರ್ಕಾರದಿಂದ ಪರವಾನಗಿ ಪಡೆದಿರುವ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆಯಿದೆ. ಬೇರೆ ಆಸ್ಪತ್ರೆಗಳಲ್ಲಿ ಶಿಶುವಿಗೆ ಜನನ ನೀಡಿದರೆ ಈ ಯೋಜನೆಯು ಅನ್ವಯವಾಗುವುದಿಲ್ಲ. ಇದನ್ನು ಹೊರತುಪಡಿಸಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿಯಲ್ಲಿ 1ನೇ ತಿಂಗಳಿನಿಂದ 9ನೇ ತಿಂಗಳವರೆಗೆ ಚಿಕಿತ್ಸೆಯನ್ನು ಪಡೆಯಬಹುದು.

 ಬೇಕಾದ ದಾಖಲೆಗಳು ಯಾವುದು?

ಬೇಕಾದ ದಾಖಲೆಗಳು ಯಾವುದು?

ಜನನಿ ಸುರಕ್ಷ ಯೋಜನೆಯ ಫಲಾನುಭವಿಗಳು ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಹಾಗೆಯೇ ಆಧಾರ್ ಕಾರ್ಡ್, ವೋಟರ್ ಐಡಿ, ಶಿಶುವಿನ ಜನನ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆ. ಈ ಯೋಜನೆಯ ಅರ್ಜಿಯೊಂದಿಗೆ ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಈ ಅರ್ಜಿ ಅನುಮೋದನೆಯಾದ ಬಳಿಕವೇ ಯೋಜನೆಯ ಫಲಾನುಭವ ನಿಮಗೆ ಲಭ್ಯವಾಗಲಿದೆ.

 ಅರ್ಜಿ ಸಲ್ಲಿಸುವುದು ಹೇಗೆ?
 

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಆಶಾಗಳ ಸಹಾಯದ ಮೂಲಕ ಈ ಯೋಜನೆಯ ಫಲಾನುಭವವನ್ನು ಪಡೆಯಬಹುದು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ಲಭ್ಯವಾಗುವಂತೆ ಮಾಡುವುದು ಆಶಾ ಕಾರ್ಯಕರ್ತರ ಜವಾಬ್ದಾರಿಯಾಗಿರುತ್ತದೆ. ಡೇಟ್ ಅಪ್‌ಡೇಟ್ ಮಾಡುವುದು, ಗರ್ಭಿಣಿಯರಿಗೆ ಅಥವಾ ಬಾಣಂತಿಯರಿಗೆ ಈ ಬಗ್ಗೆ ಮಾಹಿತಿ ನೀಡುವುದು ಆಶಾ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಯಾರಿಗೆ ಈ ಯೋಜನೆಯ ಲಾಭವನ್ನು ಪಡೆಯಬೇಕೋ ಅವರು ಗ್ರಾಮ ಪಂಚಾಯತ್‌ ಮೂಲಕ ಆಶಾ ಕಾರ್ಯಕರ್ತೆಯರನ್ನು ಸಂಪರ್ಕ ಮಾಡಬಹುದು. ಹಾಗೆಯೇ ಗ್ರಾಮದ ಮುಖ್ಯಸ್ಥರು ಕೂಡಾ ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ಮಾಹಿತಿ ನೀಡಬಹುದು.

English summary

Pregnant Women to Get Rs 6,000 Under Janani Suraksha Yojana Scheme, Know How, Explained in Kannada

Several schemes are being implemented by the central government with the interests of all groups in mind. Pregnant Women to Get Rs 6,000 Under THIS Scheme, Know How, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X