For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಕ್ರೆಡಿಟ್ ಕಾರ್ಡ್‌: ರಿವಾರ್ಡ್ ಪಾಯಿಂಟ್ ಪಡೆಯುವುದು, ರಿಡೀಮ್ ಮಾಡುವುದು ಹೇಗೆ?

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಲವಾರು ರೀತಿಯ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದೆ. ಈ ಕ್ರೆಡಿಟ್ ಕಾರ್ಡ್‌ಗಳಲ್ಲಿ ನಾವು ನಡೆಸುವ ಎಲ್ಲ ವಹಿವಾಟಿಗೂ ರಿವಾರ್ಡ್ ಪಾಯಿಂಟ್‌ಗಳು ಲಭ್ಯವಾಗುತ್ತದೆ. ಆದರೆ ಹಲವಾರು ಮಂದಿಗೆ ಈ ರಿವಾರ್ಡ್‌ ಪಾಯಿಂಟ್‌ಗಳ ಬಗ್ಗೆ ಅರಿವೇ ಇಲ್ಲ. ಇನ್ನು ಕೆಲವರಿಗೆ ರಿವಾರ್ಡ್ ಪಾಯಿಂಟ್‌ಗಳ ಬಗ್ಗೆ ತಿಳಿದಿದ್ದರೂ ಅದನ್ನು ಹೇಗೆ ರಿಡೀಮ್ ಮಾಡುವುದು ತಿಳಿದಿಲ್ಲ, ಹಾಗೆಯೆ ರಿವಾರ್ಡ್ ಪಾಯಿಂಟ್ ಪಡೆಯುವುದು ಹೇಗೆಂದು ಕೂಡಾ ಗೊತ್ತಿರುವುದಿಲ್ಲ.

ಈ ರಿವಾರ್ಡ್ ಪಾಯಿಂಟ್ ನೀವು ಉಳಿತಾಯವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮಗೆ ಸಹಾಯ, ಜೀವನಶೈಲಿ, ಶಾಪಿಂಗ್ ಮೊದಲಾದವುಗಳಿಗೆ ಈ ರಿವಾರ್ಡ್ ಪಾಯಿಂಟ್ ಮೂಲಕ ಪ್ರಯೋಜನ ಲಭ್ಯವಾಗಲಿದೆ. ಎಸ್‌ಬಿಐನ ರಿವಾರ್ಡ್ ಪಾಯಿಂಟ್ ಅನ್ನು ನೀವು ಹಲವಾರು ರೀತಿಯಲ್ಲಿ ಬಳಕೆ ಮಾಡಬಹುದು. ಎಲೆಕ್ಟ್ರಾನಿಕ್ಸ್, ಮನರಂಜನೆ, ಡೈನಿಂಗ್, ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತದೆ.

SBI ಯೋನೋ ಆಪ್ ಮೂಲಕ 35 ಲಕ್ಷ ರೂ ಸಾಲ ಪಡೆಯಿರಿ!SBI ಯೋನೋ ಆಪ್ ಮೂಲಕ 35 ಲಕ್ಷ ರೂ ಸಾಲ ಪಡೆಯಿರಿ!

ಎಲ್ಲ ಕ್ರೆಡಿಟ್ ಕಾರ್ಡ್‌ಗೆ ರಿವಾರ್ಡ್ ಲಭ್ಯವಾಗಲಿದೆ, ಆದರೆ ವಿವಿಧ ಕಾರ್ಡ್‌ಗೆ ಬೇರೆ ಬೇರೆ ರೀತಿಯ ರಿವಾರ್ಡ್ ಲಭ್ಯವಾಗುತ್ತದೆ. ಹೋಟೆಲ್ ಬುಕ್ಕಿಂಗ್ಸ್, ಏರ್‌ಲೈನ್ ಟಿಕೆಟ್ಸ್, ಗಿಫ್ಟ್ ವೋಚರ್ಸ್ ಮೊದಲಾದವುಗಳ ರೂಪದಲ್ಲಿ ಲಭ್ಯವಾಗಲಿದೆ. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ರಿವಾರ್ಡ್ ಅನ್ನು ಹೇಗೆ ಪಡೆಯುವುದು, ರಿಡೀಮ್ ಮಾಡುವುದು ಹೇಗೆ ಎಂದು ಇಲ್ಲಿದೆ ವಿವರ ಮುಂದೆ ಓದಿ...

 ಎಸ್‌ಬಿಐ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಡೆಯುವುದು ಹೇಗೆ?

ಎಸ್‌ಬಿಐ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಡೆಯುವುದು ಹೇಗೆ?

ಹಂತ 1: ಎಸ್‌ಬಿಐ ಆಪ್‌ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ವಿಧವನ್ನು ಆಯ್ಕೆ ಮಾಡಿಕೊಳ್ಳಿ
ಹಂತ 2: ಎಡ ಭಾಗದಲ್ಲಿರುವ "Terms & Conditions" ಎಂದು ಕಾಣಲಿದೆ, ಕ್ಲಿಕ್ ಮಾಡಿ ಅದನ್ನು ಓದಿಕೊಳ್ಳಿ
ಹಂತ 3: ಬಲಭಾಗದಲ್ಲಿರುವ "Shop-and-Smile" ರಿವಾರ್ಡ್ ಮೇಲೆ ಕ್ಲಿಕ್ ಮಾಡಿ

 ಕಾರ್ಡ್ ರಿವಾರ್ಡ್ ಸಮ್ಮರಿ ಚೆಕ್ ಮಾಡಿ

ಕಾರ್ಡ್ ರಿವಾರ್ಡ್ ಸಮ್ಮರಿ ಚೆಕ್ ಮಾಡಿ

ನೀವು ಕ್ರೆಡಿಟ್ ಕಾರ್ಡ್‌ನಲ್ಲಿರುವ ರಿವಾರ್ಡ್ ಪಾಯಿಂಟ್ ಸಮ್ಮರಿಯನ್ನು ಚೆಕ್ ಮಾಡಿಕೊಳ್ಳಬಹುದು. ಹಾಗೆಯೇ ಎಸ್‌ಎಂಎಸ್ ಮೂಲಕವೂ ಈ ಕಾರ್ಯವನ್ನು ನೀವು ಮಾಡಬಹುದು. sbicard.comಗೆ ಲಾಗಿನ್ ಆಗಿಯೂ ಪರಿಶೀಲನೆ ಮಾಡಬಹುದು.

* ಅದಕ್ಕಾಗಿ ನೀವು ನಿಮ್ಮ ಚಾಟ್‌ಬಾಟ್ ಐಎಲ್‌ಎಗೆ ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ. ನಿಮ್ಮ ರಿವಾರ್ಡ್ ಪಾಯಿಂಟ್ ಬಗ್ಗೆ ನೀವು ಪರಿಶೀಲನೆ ಮಾಡಲು ಇಲ್ಲಿ ಸಾಧ್ಯವಾಗಲಿದೆ.
* ನಿಮ್ಮ ರಿಜಿಸ್ಟರ್ ಆದ ಮೊಬೈಲ್‌ನಿಂದ 5676791ಗೆ ಎಸ್‌ಎಂಎಸ್‌ ಕಳುಹಿಸಬೇಕಾಗುತ್ತದೆ. REWARDS XXXX (ಇಲ್ಲಿ XXXX ಎಂದರೆ ನಿಮ್ಮ ಕಾರ್ಡ್‌ನ 4 ಡಿಜಿಟ್ ಸಂಖ್ಯೆಯಾಗಿದೆ). ಎಂದು ಟೈಪ್ ಮಾಡಿ 5676791ಗೆ ಎಸ್‌ಎಂಎಸ್‌ ಮಾಡಿದರೆ ಮಾಹಿತಿ ಲಭ್ಯವಾಗಲಿದೆ.
* sbicard.comಗೆ ಲಾಗಿನ್ ಆಗಿ, Dashboardನಲ್ಲಿ ರಿವಾರ್ಡ್‌ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
* ಎಸ್‌ಬಿಐ ಕಾರ್ಡ್ ಮೊಬೈಲ್ ಆಪ್‌ನಲ್ಲಿ ಸುಲಭವಾಗಿ ರಿವಾರ್ಡ್ ಪಾಯಿಂಟ್ಸ್ ಮಾಹಿತಿ ದೊರೆಯಲಿದೆ.

ರಿವಾರ್ಡ್ ಪಾಯಿಂಟ್ಸ್ ರಿಡೀಮ್ ಮಾಡುವ ಆಯ್ಕೆಗಳು
 

ರಿವಾರ್ಡ್ ಪಾಯಿಂಟ್ಸ್ ರಿಡೀಮ್ ಮಾಡುವ ಆಯ್ಕೆಗಳು

ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಿಂದ ಪಡೆಯುವ ರಿವಾರ್ಡ್ ಪಾಯಿಂಟ್ ಅನ್ನು ಹಲವಾರು ರೀತಿಯಲ್ಲಿ ರಿಡೀಮ್ ಮಾಡಲು ಸಾಧ್ಯವಾಗುತ್ತದೆ. sbicard.com ಅಥವಾ ಎಸ್‌ಬಿಐ ಕಾರ್ಡ್ ಮೊಬೈಲ್ ಆಪ್ ಮೂಲಕ ನೀವು ಗಿಫ್ಟ್ ವೋಚರ್ ಅನ್ನು ರಿಡೀಮ್ ಮಾಡಿಕೊಳ್ಳಬಹುದು. sbicard.com/ಇಮೇಲ್‌ ಮೂಲಕ ಮನವಿ ಸಲ್ಲಿಕೆ ಮೂಲಕ ಅಥವಾ ಸಹಾಯವಾಣಿಗೆ ಕರೆ ಮಾಡುವ ಮೂಲಕ ನೀವು ನಗದು ರಿಡೀಮ್ ಮಾಡಿಕೊಳ್ಳಬಹುದು.

ವೆಬ್‌ಸೈಟ್ ಮೂಲಕ ರಿವಾರ್ಡ್ ರಿಡೀಮ್ ಮಾಡುವುದು ಹೇಗೆ?

ವೆಬ್‌ಸೈಟ್ ಮೂಲಕ ರಿವಾರ್ಡ್ ರಿಡೀಮ್ ಮಾಡುವುದು ಹೇಗೆ?

ಹಂತ 1: sbicard.comಗೆ ಭೇಟಿ ನೀಡಿ, ಸೈನ್‌ ಇನ್ ಆಗಿ
ಹಂತ 2: "Rewards" ಆಯ್ಕೆಮಾಡಿಕೊಳ್ಳಿ, "Redeem Rewards." ಮೇಲೆ ಕ್ಲಿಕ್ ಮಾಡಿ
ಹಂತ 3: ಯಾವೆಲ್ಲ ರಿವಾರ್ಡ್‌ಗಳು ಇದೆ ನೋಡಿಕೊಳ್ಳಿ, ನಿಮ್ಮ ಆಯ್ಕೆಯ ರಿವಾರ್ಡ್ ಆಯ್ಕೆ ಮಾಡಿಕೊಳ್ಳಿ
ಹಂತ 4: "Redeem now." ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರಿವಾರ್ಡ್ ರಿಡೀಮ್ ಆಗಲಿದೆ.

  ಮೊಬೈಲ್ ಆಪ್ ಬಳಸಿ ರಿವಾರ್ಡ್ ರಿಡೀಮ್

ಮೊಬೈಲ್ ಆಪ್ ಬಳಸಿ ರಿವಾರ್ಡ್ ರಿಡೀಮ್

ಹಂತ 1: ಎಸ್‌ಬಿಐ ಕಾರ್ಡ್ ಮೊಬೈಲ್ ಆಪ್‌ನ ಆಕ್ಸಸ್ ಪಡೆಯಿರಿ
ಹಂತ 2: "Rewards" ಆಯ್ಕೆಮಾಡಿಕೊಳ್ಳಿ, "Redeem Rewards." ಮೇಲೆ ಕ್ಲಿಕ್ ಮಾಡಿ
ಹಂತ 3: ಯಾವೆಲ್ಲ ರಿವಾರ್ಡ್‌ಗಳು ಇದೆ ನೋಡಿಕೊಳ್ಳಿ, ನಿಮಗೆ ಬೇಕಾದ ರಿವಾರ್ಡ್ ಮೇಲೆ "select" ಒತ್ತಿ
ಹಂತ 4: "Redeem." ಕ್ಲಿಕ್ ಮಾಡುವ ಮೂಲಕ ನಿಮ್ಮ ರಿಡೀಮ್ ಅನ್ನು ಖಚಿತಪಡಿಸಿಕೊಳ್ಳಿ

ಎಲ್ಲ ವಹಿವಾಟಿನ ಮೇಲೆ ರಿವಾರ್ಡ್ ಪಾಯಿಂಟ್ ಪಡೆಯಬಹುದೇ?

ಎಲ್ಲ ವಹಿವಾಟಿನ ಮೇಲೆ ರಿವಾರ್ಡ್ ಪಾಯಿಂಟ್ ಪಡೆಯಬಹುದೇ?


ನೀವು ಈ ಕೆಳಗಿನ ವಹಿವಾಟಿಗಳಿಗೆ ಅಥವಾ ಚಟುವಟಿಕೆಗಳಿಗೆ ರಿವಾರ್ಡ್ ಪಾಯಿಂಟ್ ಅನ್ನು ಪಡೆಯಲು ಸಾಧ್ಯವಿಲ್ಲ.

* ಹಣ ವರ್ಗಾವಣೆ, ಇಎಂಐಗೆ ಹಣ ವರ್ಗಾವಣೆ
* ಅಡ್ವಾನ್ಸ್ ನೀಡುವುದು
* Easymoney
* ನಗದು ಪರಿವರ್ತನೆ
* ಎಟಿಎಂ ವಿತ್‌ಡ್ರಾ
* ಹಣಕಾಸು ಶುಲ್ಕ
* ಇ-ವ್ಯಾಲೆಟ್ ವಹಿವಾಟು
* ಗ್ಯಾಸ್ ಸ್ಟೇಷನ್/ಗ್ಯಾಸ್ ಸೇವೆ ಸ್ಟೇಷನ್‌ನಲ್ಲಿ ಮಾಡಿದ ಖರೀದಿ
* ಕೊನೆ ದಿನಾಂಕ ಮುಗಿದ ಬಳಿಕ ಬೀಳುವ ದಂಡ ಪಾವತಿ

 

 ರಿವಾರ್ಡ್ ಪಾಯಿಂಟ್ ರಿಡೀಮ್ ಶುಲ್ಕ?

ರಿವಾರ್ಡ್ ಪಾಯಿಂಟ್ ರಿಡೀಮ್ ಶುಲ್ಕ?

ಇನ್ನು ನೀವು ರಿವಾರ್ಡ್ ಪಾಯಿಂಟ್ ಅನ್ನು ರಿಡೀಮ್ ಮಾಡುವುದಕ್ಕೆ ಶುಲ್ಕವನ್ನು ಕೂಡಾ ಪಾವತಿಸಬೇಕಾಗುತ್ತದೆ. ರಿವಾರ್ಡ್ ಪಾಯಿಂಟ್ ರಿಡೀಮ್ ಮಾಡಿದರೆ 99 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು ನೀವು ಎಸ್‌ಬಿಐ ಕಾರ್ಡ್‌ನ ರಿವಾರ್ಡ್ ಅನ್ನು ಬೇರೆ ಕಾರ್ಡ್‌ಗೆ ವರ್ಗಾವಣೆ ಅಥವಾ ಸೇರ್ಪಡೆ ಮಾಡಲು ಸಾಧ್ಯವಿಲ್ಲ. ನೀವು ರಿವಾರ್ಡ್ ಪಡೆದ ಕಾರ್ಡ್ ಮೂಲಕ ಮಾತ್ರ ರಿವಾರ್ಡ್ ರಿಡೀಮ್ ಮಾಡಲು ಸಾಧ್ಯವಾಗುತ್ತದೆ.

English summary

SBI Credit Card: How to Earn and Redeem Credit Card Reward Points, Details in Kannada

SBI credit cards provide reward points on all purchases and expenditures made with your card. How to Earn and Redeem Credit Card Reward Points, Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X