For Quick Alerts
ALLOW NOTIFICATIONS  
For Daily Alerts

ಸಣ್ಣ ಬಿಜಿನೆಸ್ ಐಡಿಯಾ: ಪ್ರತಿ ತಿಂಗಳು ಲಕ್ಷಗಟ್ಟಲೇ ಹಣ ಸಂಪಾದಿಸಿ!

|

ನೀವು ಸ್ವಂತ ವ್ಯವಹಾರವನ್ನು ಪ್ರಾರಂಭಿಸಿಲು ಯೋಜಿಸಿದ್ದರೆ, ಒಳ್ಳೆಯ ಯೋಜನೆಯ ಜೊತೆಗೆ ಹಣವು ಬೇಕಾಗುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದರೂ, ಉತ್ತಮ ಆಲೋಚನೆಯ ಕೊರತೆಯಿಂದಾಗಿ ಅವರು ತಮ್ಮ ಗುರಿಯನ್ನ ಸಾಧಿಸಲು ಸಾಧ್ಯವಾಗುವುದಿಲ್ಲ.

ಹೌದು, ಉತ್ತಮ ಯೋಜನೆಗಳಿದ್ದರೆ ನೀವು ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಯೋಜನೆಯನ್ನು ಆರಂಭಿಸುವ ನೀವು ಆರಂಭದಲ್ಲಿ ಎಷ್ಟು ಹಣವನ್ನು ಖರ್ಚು ಮಾಡಬಹುದು ಅಥವಾ ಎಷ್ಟು ದೊಡ್ಡದನ್ನು ಪ್ರಾರಂಭಿಸಲು ಬಯಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಆದರೆ ಅಂತಹ ಯೋಜನೆಯೊಂದರ ಕುರಿತು ಸಲಹೆ ಈ ಕೆಳಗಿದೆ.

ಫಾಸ್ಟ್‌ಫುಡ್ ರೆಸ್ಟೋರೆಂಟ್‌

ಫಾಸ್ಟ್‌ಫುಡ್ ರೆಸ್ಟೋರೆಂಟ್‌

ರೆಸ್ಟೋರೆಂಟ್ ವ್ಯವಹಾರದಲ್ಲಿ ಸಾಕಷ್ಟು ಗಳಿಕೆ ಇದೆ. ಇದೊಂದು ಅದ್ಭುತ ವ್ಯವಹಾರವಾಗಿದ್ದು, ಸದ್ಯ ಕೋವಿಡ್ ಪರಿಸ್ಥಿತಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಆದರೆ ಭಾರತದಲ್ಲಿ ಫಾಸ್ಟ್‌ಫುಡ್‌ ಮತ್ತು ವಿವಿಧ ರೀತಿಯ ತಿನಿಸುಗಳಿಗೆ ಭಾರೀ ಬೇಡಿಕೆ ಇದೆ. ನೀವು ಪ್ರಾರಂಭಿಸುವ ರೆಸ್ಟೋರೆಂಟ್ ಒಮ್ಮೆ ಕ್ಲಿಕ್‌ ಆದರೆ, ನಿಮ್ಮ ಗಳಿಕೆಗಳು ಲಕ್ಷಾಂತರ ರೂಪಾಯಿಗಳನ್ನು ತಲುಪಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ನಿಮ್ಮ ಒಂದೇ ರೆಸ್ಟೋರೆಂಟ್‌ನಿಂದ ನೀವು ಮೂರು ರೀತಿಯಲ್ಲಿ ಹಣವನ್ನು ಸಂಪಾದಿಸಲು ಸಾಧ್ಯವಾಗುತ್ತದೆ.

ಹಣ ಸಂಪಾದಿಸಲು 3 ಮಾರ್ಗಗಳು

ಹಣ ಸಂಪಾದಿಸಲು 3 ಮಾರ್ಗಗಳು

ನಿಮ್ಮ ಸ್ವಂತ ರೆಸ್ಟೋರೆಂಟ್ ಅನ್ನು ನೀವು ತೆರೆದರೆ, ಮೊದಲು ಅಲ್ಲಿ ಆಹಾರವನ್ನು ಗ್ರಾಹಕರಿಗೆ ನೀಡುವ ಮೂಲಕ ನೀವು ಹಣವನ್ನು ಸಂಪಾದಿಸಬಹುದು. ಇನ್ನೊಂದು ಮಾರ್ಗವೆಂದರೆ ಪಾರ್ಸೆಲ್. ನೀವು ಆರ್ಡರ್ ಪಡೆದು ಪಾರ್ಸೆಲ್ ಮೂಲಕವೇ ಸಾಕಷ್ಟು ಹಣಗಳಿಸಬಹುದು.

ಇನ್ನು ಮೂರನೇ ವಿಧಾನವೆಂದರೆ ಆನ್‌ಲೈನ್ ವಿತರಣೆ. ಇಂದಿನ ಸಮಯದಲ್ಲಿ, ಆನ್‌ಲೈನ್ ಆಹಾರ ವಿತರಣೆಯ ವಿಸ್ತರಣೆ ಬಹಳಷ್ಟು ಹೆಚ್ಚಾಗಿದೆ. ನೀವು 4 ರಿಂದ 5 ಸವಾರರನ್ನು ಡೆಲಿವರಿಗಾಗಿ ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು ಮತ್ತು 5 ರಿಂದ 7 ಕಿ.ಮೀ ವ್ಯಾಪ್ತಿಯಲ್ಲಿ ಆಹಾರ ತಲುಪಿಸಬಹುದು.

 

ದೊಡ್ಡ ಬ್ರಾಂಡ್‌ಗಳೊಂದಿಗೆ ಸಹಭಾಗಿತ್ವ

ದೊಡ್ಡ ಬ್ರಾಂಡ್‌ಗಳೊಂದಿಗೆ ಸಹಭಾಗಿತ್ವ

ವ್ಯವಹಾರವನ್ನು ಪ್ರಾರಂಭಿಸಿದ ನಂತರ, ನೀವು ಮೊದಲ ತಿಂಗಳಿನಿಂದಲೇ ಲಕ್ಷಗಳನ್ನು ಗಳಿಸಲು ಸಾಧ್ಯವಿಲ್ಲ ಹಾಗೂ ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ನಿಮ್ಮ ಗಳಿಕೆ ಕ್ರಮೇಣ ಹೆಚ್ಚಾಗುತ್ತದೆ. ಆದ್ದರಿಂದ ಸವಾಲುಗಳಿಗೂ ಸಿದ್ಧರಾಗಿರಿ. ಎರಡನೆಯದಾಗಿ, ಇಂದಿನ ಸಮಯದಲ್ಲಿ, ಸ್ವಿಗ್ಗಿ ಮತ್ತು ಜೊಮ್ಯಾಟೊದಂತಹ ದೊಡ್ಡ ಬ್ರಾಂಡ್‌ಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ನೀವು ದೊಡ್ಡ ಲಾಭವನ್ನು ಗಳಿಸಬಹುದು. ಅವರ ಜೊತೆಗೆ ಟೈ ಅಪ್‌ ಆಗುವ ಮೂಲಕ, ನೀವು ದೊಡ್ಡ ಮಟ್ಟಿಗೆ ಗ್ರಾಹಕರನ್ನು ಪಡೆಯುತ್ತೀರಿ.

ಎಷ್ಟು ಹಣ ಖರ್ಚಾಗುತ್ತದೆ?

ಎಷ್ಟು ಹಣ ಖರ್ಚಾಗುತ್ತದೆ?

ಹೋಟೆಲ್ ತಜ್ಞರ ಪ್ರಕಾರ, ಈ ವ್ಯವಹಾರವನ್ನು ಪ್ರಾರಂಭಿಸಲು 6 ರಿಂದ 11 ಲಕ್ಷ ರೂ. ಆಗಬಹುದು ಆದರೆ ಇದು ಫಿಕ್ಸ್ ಅಲ್ಲ. ನಿಮ್ಮ ಸ್ವಂತ ಸ್ಥಳವಿದ್ದರೆ , ನಿಮ್ಮ ವೆಚ್ಚಗಳು ಬಹಳಷ್ಟು ಕಡಿಮೆಯಾಗುತ್ತವೆ. ನೀವು ಬಾಡಿಗೆ ಇತ್ಯಾದಿಗಳನ್ನು ಸಹ ತಪ್ಪಿಸುವಿರಿ. ಸ್ಥಳಾವಕಾಶದ ಹೊರತಾಗಿ, ನೀವು ರೆಸ್ಟೋರೆಂಟ್ ತೆರೆಯಲು ಅಗತ್ಯವಾದ ವಸ್ತುಗಳು ಮೂಲಸೌಕರ್ಯ ಮತ್ತು ಸರಕುಗಳನ್ನು ಒಳಗೊಂಡಿವೆ. ಇನ್ನೊಂದು ವಿಷಯವೆಂದರೆ ನೀವು ಉತ್ತಮ ಆಹಾರವನ್ನು ನೀಡಿ ಗ್ರಾಹರಕನ್ನು ಆಕರ್ಷಿಸಲು, ಉತ್ತಮ ಅಡುಗೆ ಭಟ್ಟರನ್ನ ನೇಮಿಸಿಕೊಳ್ಳಬೇಕಾಗುತ್ತದೆ.

ಯಾವ ರೀತಿ ಪ್ರಾರಂಭಿಸಬೇಕು?

ಯಾವ ರೀತಿ ಪ್ರಾರಂಭಿಸಬೇಕು?

ಇದು ಬಹಳ ಮುಖ್ಯವಾದ ಪ್ರಶ್ನೆಯಾಗಿದ್ದು, ರೆಸ್ಟೋರೆಂಟ್‌ಗೆ ಬೇಕಾಗಿರುವ ಮುಖ್ಯವಾದ ವಿಷಯ ಉತ್ತಮ ಸ್ಥಳದ ಆಯ್ಕೆ. ಉದಾಹರಣೆಗೆ, ಕಚೇರಿ ಪ್ರದೇಶದಲ್ಲಿ, ನೀವು ಲಘು ಊಟ ಮತ್ತು ತಿಂಡಿಗಳೊಂದಿಗೆ ಪ್ರಾರಂಭಿಸಬಹುದು. ವಸತಿ ಪ್ರದೇಶದಲ್ಲಿ, ರೆಸ್ಟೋರೆಂಟ್ ಅನ್ನು ನೀವು ತೆರೆಯಬಹುದು ಮತ್ತು ಅದಕ್ಕೆ ತಕ್ಕಂತೆ ಭಕ್ಷ್ಯಗಳನ್ನು ಇಡಬಹುದು. ಇದು ಎಲ್ಲೆಡೆ ಸಾಮಾನ್ಯವಾಗಿ ಕಂಡುಬಂದರೂ, ಉತ್ತಮ ರುಚಿ ಹಾಗೂ ಶುಚಿತ್ವ ಕಾಪಾಡಿಕೊಳ್ಳುವ ಮೂಲಕ ಗ್ರಾಹಕರನ್ನ ಆಕರ್ಷಿಸಬಹುದು.

English summary

Small Business Idea: Earn Lakhs In Every Month

Here the business idea you can earn lakhs in every month
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X