For Quick Alerts
ALLOW NOTIFICATIONS  
For Daily Alerts

ಎಲೆಕ್ಟ್ರಿಕ್ ವಾಹನ ವ್ಯಾಪಾರ: ವಿಧ, ಹೂಡಿಕೆ, ಏನೆಲ್ಲ ಅಗತ್ಯ?

|

ಇತ್ತೀಚೆಗೆ ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಪರಿಚಯಿಸಲಾಗಿದ್ದು, ಹಲವಾರು ಮಂದಿ ಪ್ರಸ್ತುತ ಎಲೆಕ್ಟ್ರಿಕ್ ವಾಹನವನ್ನೇ ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಭಾರತದಲ್ಲಿ ವ್ಯಾಪಾರ ಕ್ಷೇತ್ರದಲ್ಲೇ ಹಲವಾರು ಬದಲಾವಣೆಗಳು ಆಗುತ್ತಿದೆ. ಪ್ರಸ್ತುತ ಸ್ಥಿತಿಗೆ ತಕ್ಕ ಹೊಂದಿಕೊಂಡು ನೀವು ಎಲೆಕ್ಟ್ರಿಕ್ ವಾಹನ ವ್ಯಾಪಾರವನ್ನು ಆರಂಭ ಮಾಡುವುದು ಉತ್ತಮವಲ್ಲವೇ?

 

ಭಾರತದಲ್ಲಿ ಹವಾಮಾನ ಕಲುಷಿತವಾಗಿದೆ. ಈ ಕಾರಣದಿಂದಾಗಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸಲಾಗಿದೆ. ಸರ್ಕಾರವು ಕೂಡಾ ಜನರು ಎಲೆಕ್ಟ್ರಿಕ್ ವಾಹನವನ್ನು ಬಳಕೆ ಮಾಡುವುದಕ್ಕೆ ಪ್ರೋತ್ಸಾಹವನ್ನು ನೀಡುತ್ತಿದೆ. ಮಹೀಂದ್ರಾ, ಹೊಂಡಾಯಿ, ಟಾಟಾ ಸೇರಿದಂತೆ ಪ್ರಮುಖ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸಿದೆ.

ಜನರು ಎಲೆಕ್ಟ್ರಿಕ್ ವಾಹನವನ್ನು ಅಧಿಕವಾಗಿ ಖರೀದಿ ಮಾಡುತ್ತಿರುವ ನಡುವೆ ದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳ ಬೇಡಿಕೆ ಅಧಿಕವಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳು ಅತೀ ಕಡಿಮೆಯಿದೆ. ಮುಂದಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳು ಅಧಿಕವಾಗಬೇಕಾಗಿದೆ. ಹಾಗಾದರೆ ನೀವು ಈ ಚಾರ್ಜಿಂಗ್ ಸ್ಟೇಷನ್‌ ವ್ಯಾಪಾರವನ್ನು ಹೇಗೆ ಆರಂಭ ಮಾಡುವುದು, ಇದರಲ್ಲಿ ಎಷ್ಟು ವಿಧಗಳು ಇದೆ, ಹೂಡಿಕೆ ಮೊದಲಾದ ಮಾಹಿತಿ ಇಲ್ಲಿದೆ ಮುಂದೆ ಓದಿ...

 ಇವಿ ಚಾರ್ಜಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಇವಿ ಚಾರ್ಜಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಇವಿ ಚಾರ್ಜರ್ ಕನೆಕ್ಟರ್, ಪ್ಲಗ್ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಪವರ್ ಅಥವಾ ಎಲೆಕ್ಟ್ರಿಸಿಟಿಯನ್ನು ಸರಬರಾಜು ಮಾಡುತ್ತದೆ. ನಾವು ಎಲೆಕ್ಟ್ರಿಕ್ ವಾಹನವನ್ನು ಈ ಮೂಲಕ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಎಲೆಕ್ಟ್ರಿಕ್ ವಾಹನಕ್ಕೆ ಚಾರ್ಜಿಂಗ್ ಮಾಡಿದರೆ ಮಾತ್ರ ಚಲಾಯಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಇವಿ ಚಾರ್ಜಿಂಗ್ ಅತೀ ಮುಖ್ಯವಾಗಿದೆ.

 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ನ ವಿಧಗಳು

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ನ ವಿಧಗಳು

ಟ್ರಿಕಲ್ ಚಾರ್ಜ್: ಸ್ಟಾಡರ್ಡ್ 220V ಪ್ಲಗ್ ಮೂಲಕ ಮನೆಯಲ್ಲೇ ಇವಿಯನ್ನು ಚಾರ್ಜ್ ಮಾಡುವ ಅತೀ ನಿಧಾನವಾದ ವಿಧಾನ ಇದಾಗಿದೆ. ವಿದ್ಯುತ್ ಸರಬರಾಜುದಾರರನ್ನು ಭೇಟಿಯಾಗಿ ಮಾಹಿತಿ ನೀಡಿದ ಬಳಿಕ ಮಾತ್ರ ಮನೆಯಲ್ಲಿ ಇವಿ ಚಾರ್ಜ್ ಮಾಡುವುದು ಉತ್ತಮ.
ಎಸಿ ಚಾರ್ಜ್: ವಾಲ್‌ಬಾಕ್ಸ್ ಅನ್ನು ಇನ್‌ಸ್ಟಾಲ್ ಮಾಡುವ ಮೂಲಕ ಎಸಿ ಹೌಸ್‌ಹೋಲ್ಡ್ ಚಾರ್ಜಿಂಗ್ ಅನ್ನು ಮಾಡಬಹುದು. ಇದು ಟ್ರಿಕಲ್ ಚಾರ್ಜ್‌ಗಿಂತ 3-4 ಪಟ್ಟು ವೇಗವಾಗಿರುತ್ತದೆ. ಎಸಿ ಪಬ್ಲಿಕ್ ಚಾರ್ಜಿಂಗ್ ಹೆಚ್ಚಿನ ಆಯ್ಕೆಯಾಗಿದೆ.
ಡಿಸಿ ಚಾರ್ಜ್: ಪಬ್ಲಿಕ್ ಡಿಸಿ ಚಾರ್ಜಿಂಗ್ ವ್ಯವಸ್ಥೆಯು ಅತೀ ಶೀಘ್ರವಾಗಿ ಇವಿ ಚಾರ್ಜಿಂಗ್ ಮಾಡುವ ವ್ಯವಸ್ಥೆಯಾಗಿದೆ. ಇದು ಸುಮಾರು 50kW ಅಥವಾ ಅದಕ್ಕಿಂತ ಅಧಿಕ ವೇಗದ ಚಾರ್ಜಿಂಗ್ ಆಗಿದೆ. ಸುಮಾರು ಶೇಕಡ 20ರಿಂದ ಶೇಕಡ 80ರಷ್ಟು ಚಾರ್ಜ್ ಆಗಲು ಸುಮಾರು 40 ನಿಮಿಷವಾಗುತ್ತದೆ. ಇನ್ನು 150kWಗಿಂತ ಅಧಿಕ ವಿದ್ಯುತ್‌ ಶಕ್ತಿಯ ಚಾರ್ಜಿಂಗ್ ಸ್ಟೇಷನ್‌ಗಳು ಕೂಡಾ ಇದೆ.

 ಯಾವ ಪ್ರದೇಶದಲ್ಲಿ ಚಾರ್ಜಿಂಗ್ ಸ್ಟೇಷನ್ ಉತ್ತಮ?
 

ಯಾವ ಪ್ರದೇಶದಲ್ಲಿ ಚಾರ್ಜಿಂಗ್ ಸ್ಟೇಷನ್ ಉತ್ತಮ?

ಚಾರ್ಜಿಂಗ್ ಸ್ಟೇಷನ್‌ ಅನ್ನು ನಾವು ಎಲ್ಲಿ ತೆರೆಯುತ್ತೇವೆ ಎಂಬುವುದು ಅತೀ ಮುಖ್ಯವಾಗಿದೆ. ಚಾರ್ಜಿಂಗ್ ಸ್ಟೇಷನ್‌ನಲ್ಲಿ ಬೇರೆ ಬೇರೆ ರೀತಿಯ ಇವಿ ಚಾರ್ಜಿಂಗ್ ಕೇಬಲ್ ಇರಬೇಕಾಗುತ್ತದೆ. ಸ್ಥಳವನ್ನು ಅತೀ ಸೂಕ್ಷ್ಮವಾಗಿ ಆಯ್ಕೆ ಮಾಡಬೇಕಾಗುತ್ತದೆ. ಯಾಕೆಂದರೆ ವಿದ್ಯುತ್ ಶಕ್ತಿ ಎಂದಿಗೂ ಕೂಡಾ ಅಪಾಯಕಾರಿ. ಚಾರ್ಜಿಂಗ್ ಸೆಂಟರ್‌ಗೆ 10 ಸ್ಕ್ವಾರ್ ಫೀಟ್‌ಗಿಂತ ಅಧಿಕ ಜಾಗ ಬೇಕಾಗಿಲ್ಲ. ಆದರೆ ವಾಹನ ಪಾರ್ಕಿಂಗ್ ಮಾಡಲು, ಟರ್ನ್ ಮಾಡಲು ಸ್ಥಳ ಅಧಿಕ ಬೇಕಾಗುತ್ತದೆ. ಕನಿಷ್ಠ 100 ಸ್ಕ್ವಾರ್ ಫೀಟ್‌ ಆದರೂ ಸ್ಥಳ ಬೇಕಾಗುತ್ತದೆ.

 ಹೂಡಿಕೆ, ಮಾರುಕಟ್ಟೆ

ಹೂಡಿಕೆ, ಮಾರುಕಟ್ಟೆ

ಭಾರತದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ ಅನ್ನು ತೆರೆಯಲು ಕಡಿಮೆ ಎಂದರೆ 1 ಲಕ್ಷ ರೂಪಾಯಿಯಿಂದ 40 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಇದು ಯಾವ ವಿಧದ ಚಾರ್ಜಿಂಗ್ ಅನ್ನು ಬಳಕೆ ಮಾಡಲಾಗುತ್ತದೆ ಎಂಬುವುದರ ಮೇಲೆ ನಿರ್ಧಾರವಾಗುತ್ತದೆ. ಇನ್ನು ಈ ಹೊಸ ವ್ಯಾಪಾರದ ಮಾರ್ಕೆಟಿಂಗ್‌ ಆನ್‌ಲೈನ್ ಮೂಲಕ ಮಾಡುವುದು ಅತೀ ಉತ್ತಮ. ನೀವು ಸಾಮಾಜಿಕ ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ ಮೂಲಕ ನಿಮ್ಮ ಹೊಸ ವ್ಯಾಪಾರದ ಪ್ರಚಾರ ಮಾಡಬಹುದು. ಇನ್ನು ನಾವು ಅಗತ್ಯವಾದ ವಿದ್ಯುತ್ ಶಕ್ತಿ ಬಗ್ಗೆ ಹೇಳುವುದಾದರೆ, ಒಂದು ಸ್ಟೇಷನ್‌ಗೆ 50KW ವಿದ್ಯುತ್ ಅಗತ್ಯವಿರುತ್ತದೆ.

 ಪರವಾನಗಿ ಪಡೆಯುವುದು ಮರೆಯದಿರಿ

ಪರವಾನಗಿ ಪಡೆಯುವುದು ಮರೆಯದಿರಿ

ನಾವು ಯಾವುದೇ ವ್ಯಾಪಾರವನ್ನು ಅಧಿಕೃತವಾಗಿ ಆರಂಭ ಮಾಡುವಾಗ ಅದಕ್ಕೆ ಪರವಾನಗಿ ಪಡೆಯುವುದು ಅತೀ ಮುಖ್ಯವಾಗಿದೆ. ಪರವಾನಗಿ ಹೊಂದಿರುವುದು ಒಂದು ಸಂಸ್ಥೆಗೆ ಪ್ರಯೋಜನ ಕುಡಾ ಹೌದು. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ ಆರಂಭ ಮಾಡಲು ಪರವಾನಗಿ ಪತ್ರವನ್ನು ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವಾಲಯವೇ ತಿಳಿಸಿದೆ.

 ಎಲೆಕ್ಟ್ರಿಕ್ ಚಾರ್ಜಿಂಗ್ ವ್ಯಾಪಾರ ಹೇಗೆ ಪ್ರಾರಂಭಿಸುವುದು?

ಎಲೆಕ್ಟ್ರಿಕ್ ಚಾರ್ಜಿಂಗ್ ವ್ಯಾಪಾರ ಹೇಗೆ ಪ್ರಾರಂಭಿಸುವುದು?

ನೀವು ಭಾರತದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ವ್ಯಾಪಾರವನ್ನು ಆರಂಭ ಮಾಡಬೇಕಾದರೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಭಾರತದ ವಿದ್ಯುತ್ ಶಕ್ತಿ ಇಲಾಖೆಗೆ ನೀವು ಅರ್ಜಿಯನ್ನು ಸಲ್ಲಿಸುವ ಮೂಲಕ ಎಲೆಕ್ಟ್ರಿಕ್ ಚಾರ್ಜಿಂಗ್ ವ್ಯಾಪಾರವನ್ನು ಪ್ರಾರಂಭಿಸಬಹುದು.

English summary

Start Electric Vehicles Business, Types, Investment Details in Kannada

Electric vehicles are recently being introduced and are rapidly changing the business landscape in India. You can Start Electric Vehicles Business, Types, Investment Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X