For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ 10 ಯಶಸ್ವಿ ಬಿಸಿನೆಸ್ ಐಡಿಯಾ ಇಲ್ಲಿದೆ ನೋಡಿ

|

ನಾವು ಯಾವುದೇ ವ್ಯಾಪಾರವನ್ನು ಆರಂಭ ಮಾಡುವ ಮುನ್ನ ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಅತೀ ಮುಖ್ಯವಾಗಿದೆ. ಹಾಗೆಯೇ ಈ ವ್ಯಾಪಾರದಿಂದ ನಮಗೆ ಲಾಭ ಬರಬೇಕಾದರೆ ಸುತ್ತಲಿನ ಜನರಿಗೆ ಎಷ್ಟು ಲಾಭವಿದೆ ಎಂಬುವುದು ಕೂಡಾ ಪ್ರಮುಖವಾಗಿದೆ.

ಭಾರತದಲ್ಲಿ ಪ್ರಸ್ತುತ ಹಲವು ವರ್ಷಗಳಿಂದ ಮಹಿಳಾ ವ್ಯಾಪಾರಿಗಳ ಸಂಖ್ಯೆ ಅಧಿಕವಾಗಿದೆ. ಎಲ್ಲ ವಲಯದಲ್ಲಿ ಮಹಿಳೆಯರು ತನ್ನ ಛಾಪನ್ನು ಮೂಡಿಸಿದ್ದಾರೆ. ಪ್ರತಿ ವಲಯಕ್ಕೂ ಮಹಿಳೆಯರ ಕೊಡುಗೆ ಅತ್ಯಮೂಲ್ಯವಾಗಿದೆ. ಅದರಲ್ಲೂ ಅದೆಷ್ಟೋ ಮಹಿಳೆಯರು ವಿಶ್ವದ ಅತೀ ಶ್ರೀಮಂತ ಮಹಿಳಾ ವ್ಯಾಪಾರಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ನೀವು ಕೂಡಾ ಈ ಮಹಿಳೆಯರ ಪಟ್ಟಿಗೆ ಸೇರಬೇಕಾದರೆ ಯಶಸ್ವಿ ವ್ಯಾಪಾರವನ್ನು ನಡೆಸುವುದು ಅತೀ ಮುಖ್ಯವಾಗಿದೆ.

ಭಾರತದಲ್ಲಿ ಯಶಸ್ವಿಯಾದ ಸಣ್ಣ ಪ್ರಮಾಣದ ಉದ್ದಿಮೆಗಳು: ಹೀಗಿವೆ ಐಡಿಯಾ!ಭಾರತದಲ್ಲಿ ಯಶಸ್ವಿಯಾದ ಸಣ್ಣ ಪ್ರಮಾಣದ ಉದ್ದಿಮೆಗಳು: ಹೀಗಿವೆ ಐಡಿಯಾ!

ನೀವು ವ್ಯಾಪಾರ ಮಾಡಲು ಸಾಲವನ್ನು ನೀಡುವ ಹಲವಾರು ಸರ್ಕಾರಿ ಯೋಜನೆಗಳು ಇದೆ. ಮುದ್ರಾ ಯೋಜನೆ ಸೇರಿದಂತೆ ಕೆಲವು ಬ್ಯಾಂಕುಗಳು ಕೂಡಾ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನಾವಿಲ್ಲಿ ಮಹಿಳೆಯರು ಮಾಡಬಹುದಾದ, ಈಗಾಗಲೇ ಹಲವಾರು ಮಹಿಳೆಯರು ಯಶಸ್ವಿಯಾಗಿ ನಡೆಸಿರುವ ಬಿಜೆನೆಸ್ ಐಡಿಯಾಗಳ ಬಗ್ಗೆ ವಿವರಣೆಯನ್ನು ನೀಡಿದ್ದೇವೆ. ಈ ಹತ್ತು ಪ್ರಮುಖ ಟಿಪ್ಸ್ ಯಶಸ್ವಿ ವ್ಯಾಪಾರಿಗಳಾಗಲು ಸಹಾಯಕವಾಗಿದೆ. ಮುಂದೆ ಓದಿ....

 1. ಹೆಲ್ತ್‌ಕೇರ್/ಫಿಟ್‌ನೆಸ್ ವೃತ್ತಿಪರರು

1. ಹೆಲ್ತ್‌ಕೇರ್/ಫಿಟ್‌ನೆಸ್ ವೃತ್ತಿಪರರು

ಪ್ರಸ್ತುತ ಹೆಚ್ಚಿನ ಜನರು ಆರೋಗ್ಯಕ್ಕೆ ಹಾಗೂ ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ. ಹೀಗಿರುವಾಗ ನೀವು ಆರೋಗ್ಯ ಸಂಬಂಧಿತ ವೃತ್ತಿಪರ ತರಗತಿಯನ್ನು ಆರಂಭ ಮಾಡಿದರೆ ಯಶಸ್ವಿ ಖಂಡಿತವಾಗಿ ನಿಮ್ಮದಾಗಲಿದೆ. ನೀವು ಯೋಗ ಅಥವಾ ಜುಂಬಾದಲ್ಲಿ ಪ್ರವೀಣರಾಗಿದ್ದರೆ, ನೀವು ಯೋಗ ಸೆಂಟರ್ ಅಥವಾ ಜುಂಬಾ ಕ್ಲಾಸ್‌ಗಳನ್ನು ಆರಂಭ ಮಾಡಬಹುದು. ಇದರಿಂದಾಗಿ ನೀವು ಹೆಸರು ಗಳಿಸುವ ಜೊತೆಗೆ ಸಂಪಾದನೆ ಕೂಡಾ ಮಾಡಬಹುದು.

 2. ಆಹಾರವೇ ದೊಡ್ಡ ವ್ಯಾಪಾರ ಗುರು!

2. ಆಹಾರವೇ ದೊಡ್ಡ ವ್ಯಾಪಾರ ಗುರು!

ಪ್ರಸ್ತುತ ರೆಸ್ಟೋರೆಂಟ್, ಕೆಫೆ ಮೊದಲಾದವುಗಳನ್ನು ಆರಂಭ ಮಾಡಿ ಯಶಸ್ವಿ ವ್ಯಾಪಾರಿ ಆಗಬಹುದು. ಆದರೆ ನೀವು ಯಾವ ಪ್ರದೇಶದಲ್ಲಿ ಕೆಫೆ, ರೆಸ್ಟೋರೆಂಟ್ ಆರಂಭ ಮಾಡುತ್ತಿದ್ದೀರಿ ಎಂಬುವುದು ಮುಖ್ಯವಾಗಿದೆ. ನೀವು ಕೆಫೆ ತೆರೆಯುವ ಪ್ರದೇಶಕ್ಕೆ ಅದು ಅಗತ್ಯವಾಗಿದೆಯೇ ಎಂಬುವುದನ್ನು ನೋಡಿಕೊಳ್ಳಿ. ಇಲ್ಲವಾದರೆ ನಿಮಗೆ ನಷ್ಟ ಉಂಟಾಗಬಹುದು. ಜನ ಸಂಖ್ಯೆ ಅಧಿಕವಾಗಿರುವ ಪ್ರದೇಶದಲ್ಲಿ ಈ ವ್ಯಾಪಾರ ಆರಂಭ ಮಾಡಬಹುದು. ಹಾಗೆಯೇ ನೀವು ಕ್ಯಾಟೆರಿಂಗ್ ಅನ್ನು ಕೂಡಾ ಆರಂಭ ಮಾಡಬಹುದು. ಯಾವುದಾದರೂ ಪಾರ್ಟಿ, ಸಮಾರಂಭಗಳಿಗೆ ಕ್ಯಾಟರಿಂಗ್ ಆಹಾರ ಸರಬರಾಜು ಮಾಡುವ ಮೂಲಕ ಸಂಪಾದನೆ ಮಾಡಬಹುದು.

 3. ಬ್ಯೂಟಿ ಕೇರ್ ಸೆಂಟರ್

3. ಬ್ಯೂಟಿ ಕೇರ್ ಸೆಂಟರ್

ಯುವಜನರು ಹೆಚ್ಚಾಗಿ ತಮ್ಮ ತ್ವಚ್ಛೆ, ಸೌಂದರ್ಯಕ್ಕೆ ಆದ್ಯತೆ ನೀಡುತ್ತಾರೆ. ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಫೆಶಿಯಲ್, ಕ್ಲಿನಪ್ ಹೀಗೆ ಹಲವನ್ನು ಮಾಡಿಸಿಕೊಳ್ಳುತ್ತಾರೆ. ಹಾಗಿರುವಾಗಿ ನೀವು ಬ್ಯೂಟಿ ಪಾರ್ಲರ್ ಅನ್ನು ತೆರೆದರೆ ನಿಮಗೆ ಖಂಡಿತವಾಗಿಯೂ ಸಹಾಯವಾಗಲಿದೆ. ಸ್ಪಾ, ಸಲೂನ್ ಅನ್ನು ತೆರೆಯಬಹುದು, ನೇಲ್ ಆರ್ಟ್ ಸ್ಟುಡಿಯೋವನ್ನು ತೆರೆಯಬಹುದು, ಮದುಮಕ್ಕಳಿಗೆ ಮೇಕಪ್ ಮಾಡುವ ಪಾರ್ಲರ್ ಅನ್ನು ತೆರೆಯಬಹುದು. ಆದರೆ ಇದಕ್ಕೆ ನೀವು ನುರಿತರಾಗಿರುವುದು ಅತೀ ಮುಖ್ಯವಾಗಿದೆ.

 4. ಬರೆಯುವುದು ಕೂಡಾ ಉದ್ಯೋಗ

4. ಬರೆಯುವುದು ಕೂಡಾ ಉದ್ಯೋಗ

ನೀವು ಉತ್ತಮ ಬರಹಗಾರರಾಗಿದ್ದರೆ ಇದರಿಂದಾಗಿಯೂ ಸಂಪಾದನೆಯನ್ನು ಮಾಡಲು ಸಾಧ್ಯವಾಗಲಿದೆ. ಮನೆಯಲ್ಲಿಯೇ ಕೂತು ಫ್ರೀಲಾನ್ಸಿಂಗ್ ಮಾಡಿ. ತಾಂತ್ರಿಕ, ಸೃಜನಾತ್ಮಕ ಬರಹಗಳನ್ನು ಬರೆದು ಅದನ್ನು ಮಾರಾಟ ಮಾಡಬಹುದು. ಬ್ಲಾಂಗಿಂಗ್ ಮಾಡಬಹುದು.

 5. ಐಟಿ ಅಥವಾ ಸಾಫ್ಟ್‌ವೇರ್ ವೃತ್ತಿಪರರಾದರೆ...

5. ಐಟಿ ಅಥವಾ ಸಾಫ್ಟ್‌ವೇರ್ ವೃತ್ತಿಪರರಾದರೆ...

ನೀವು ಐಟಿ ಅಥವಾ ಸಾಫ್ಟ್‌ವೇರ್ ವೃತ್ತಿಪರರಾದರೆ ವೆಬ್‌ ಡೆವಲಪ್‌ಮೆಂಟ್ ಕಾರ್ಯವನ್ನು ಮಾಡಬಹುದು. ಪ್ರಸ್ತುತ ಎಲ್ಲ ವಲಯವು ಡಿಜಿಟಲ್ ಆಗಿರುವಾಗ ಐಟಿ ತಂತ್ರಜ್ಞರು ಬೇಡಿಕೆ ಹೆಚ್ಚಿದೆ. ಅದರ ಸದುಪಯೋಗ ಪಡಿಸಿಕೊಳ್ಳಬಹುದು. ಆಪ್‌ಗಳನ್ನು ಡೆವಲಪ್‌ ಮಾಡಬಹುದು. ಇದರಿಂದಾಗಿ ಸಂಪಾದನೆ ಮಾಡಲು ಸಾಧ್ಯವಾಗಲಿದೆ.

 6. ಗ್ರಾಫಿಕ್ ಡಿಸೈನರ್‌ಗೂ ಬೇಡಿಕೆ ಅಷ್ಟಿಷ್ಟಲ್ಲ

6. ಗ್ರಾಫಿಕ್ ಡಿಸೈನರ್‌ಗೂ ಬೇಡಿಕೆ ಅಷ್ಟಿಷ್ಟಲ್ಲ

ಪ್ರಸ್ತುತ ಮಹಿಳೆಯರು ಎಲ್ಲ ಕಾರ್ಯವನ್ನು ಮಾಡಲು ಸಾಧ್ಯವಿದೆ. ಐಟಿಯಿಂದ ಹಿಡಿದು ಟೈಲರಿಂಗ್‌ವರೆಗೂ ಮಹಿಳೆಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಗ್ರಾಫಿಕ್ ಡಿಸೈನಿಂಗ್ ಪ್ರಸ್ತುತ ಬೇಡಿಕೆ ಹೊಂದಿರುವ ವಲಯವಾಗಿದೆ. ಪರಿಣತಿ ಹೊಂದಿರುವವರು ಗ್ರಾಫಿಕ್ ಡಿಸೈನ್ ಮಾಡುವ ಮೂಲಕ ಹಣ ಸಂಪಾದನೆ ಮಾಡಲು ಸಾಧ್ಯವಾಗಲಿದೆ. ಇದನ್ನೇ ದೊಡ್ಡ ಬಿಜೆನೆಸ್ ಆಗಿ ಮಾರ್ಪಾಡು ಮಾಡಲು ಸಾಧ್ಯವಾಗಲಿದೆ.

 7. ಅಕೌಂಟೆನ್ಸಿ ಸೇವೆ: ಲೆಕ್ಕಾಚಾರ ಚೊಕ್ಕ

7. ಅಕೌಂಟೆನ್ಸಿ ಸೇವೆ: ಲೆಕ್ಕಾಚಾರ ಚೊಕ್ಕ

ಹಣಕಾಸು ವಲಯದಲ್ಲಿಯೂ ನೀವು ಬಿಸಿನೆಸ್ ಮಾಡಲು ಅಥವಾ ಹಣ ಸಂಪಾದನೆ ಮಾಡಲು ಸಾಧ್ಯವಾಗಲಿದೆ. ನೀವು ಅಕೌಂಟೆನ್ಸಿ ಸೇವೆ ಮೂಲಕ ವೇತನ ಪಡೆಯಬಹುದು. ಹಲವಾರು ಹೊಟೇಲ್, ರೆಸ್ಟೋರೆಂಟ್‌ಗಳು ಅಕೌಂಟೆನ್ಸಿ ನಿಯಂತ್ರಣಕ್ಕಾಗಿ ಸಿಎಗಳನ್ನು ನೇಮಕ ಮಾಡುತ್ತಾರೆ. ನೀವು ಚಾರ್ಟೆಡ್ ಅಕೌಟೆಂಟ್ ಆಗಿದ್ದರೆ ಈ ಕಾರ್ಯವನ್ನು ಮಾಡಬಹುದು. ಇದು ಮಹಿಳೆಯರಿಗೆ ಸಣ್ಣ ಬಿಸಿನೆಸ್ ಐಡಿಯಾ ಆಗಿದೆ.

 8. ಮಹಿಳೆಯಿಂದ ಮಹಿಳೆಗಾಗಿ: ಇದೊಂದು ಬಿಜೆನೆಸ್ ಐಡಿಯಾ

8. ಮಹಿಳೆಯಿಂದ ಮಹಿಳೆಗಾಗಿ: ಇದೊಂದು ಬಿಜೆನೆಸ್ ಐಡಿಯಾ

ನೀವು ಮಹಿಳೆಯರಿಗೆ ತೀರಾ ಅಗತ್ಯವಾಗಿರುವ ನ್ಯಾಪ್‌ಕಿನ್‌ನಂತಹ ವಸ್ತುಗಳ ಮಾರಾಟವನ್ನು ಕೂಡಾ ಆರಂಭ ಮಾಡಬಹುದು. ಇದು ಕೂಡಾ ಒಂದು ಉತ್ತಮ ಬಿಜೆನೆಸ್‌ ಐಡಿಯಾ ಆಗಿದೆ. ನೀವು ಹತ್ತಿ ಮೂಲಕ ನೈಸರ್ಗಿಕವಾಗಿ ನ್ಯಾಪ್ಕಿನ್ ಮಾಡಿ ಅದರ ಮಾರಾಟವನ್ನು ಮಾಡಬಹುದು. ಹಾಗೆಯೇ ಮೆನ್ಸ್ಟ್ರುವಲ್ ಕಪ್ ಅನ್ನು ಕೂಡಾ ನೀವು ಮಾರಾಟ ಮಾಡಬಹುದು. ಮಹಿಳೆಯರಲ್ಲಿ ಸಾಮಾಜಿಕ ಅರಿವು ಮೂಡಿಸುವ ಕಾರ್ಯ ಇದರೊಂದಿಗೆ ಮಾಡಬಹುದು. ಹಾಗೆಯೇ ಮುಟ್ಟಾದಾಗ ಹೊಟ್ಟೆ ನೋವು ಸಹಿಸಲು ಬಳಕೆ ಮಾಡಲಾಗುವ ಹಾಟ್ ವಾಟರ್ ಬ್ಯಾಗ್, ನೋವಿನ ಎಣ್ಣೆ ಮೊದಲಾದವುಗಳನ್ನು ಮಾರಾಟ ಮಾಡಬಹುದು.

 9. ಕರಕುಶಲ ವಸ್ತುಗಳ ಮಾರಾಟ

9. ಕರಕುಶಲ ವಸ್ತುಗಳ ಮಾರಾಟ

ನೀವಾಗಿಯೇ ಮಾಡಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವುದು ಕೂಡಾ ಒಂದು ಉತ್ತಮ ಬಿಜೆನೆಸ್ ಐಡಿಯಾ ಆಗಿದೆ. ಅದಕ್ಕಾಗಿ ಪ್ರಸ್ತುತ ಹಲವಾರು ವೇದಿಕೆಗಳು ಇದೆ. ನೀವು ತಯಾರಿಸಿದ ಆಭರಣ, ಉಡುಗೊರೆ ವಸ್ತುಗಳು, ಉಲಾನ್ ಬಟ್ಟೆ, ಕಸೂತಿ ಬಟ್ಟೆಗಳನ್ನು ಮಾರಾಟ ಮಾಡಬಹುದು.

 10. ಬಟ್ಟೆ ಅಂಗಡಿ/Boutique/ಬುಟಿಕ್

10. ಬಟ್ಟೆ ಅಂಗಡಿ/Boutique/ಬುಟಿಕ್

ಇದು ದೇಶದ ಸಾಂಪ್ರದಾಯಿಕ ಸಣ್ಣ-ಪ್ರಮಾಣದ ವ್ಯವಹಾರಗಳಲ್ಲಿ ಒಂದಾಗಿದೆ. ಬಟ್ಟೆಗಳನ್ನು ಹೊಲಿಯಲು ಇಷ್ಟಪಡುವ ಮತ್ತು ಇತ್ತೀಚಿನ ಫ್ಯಾಷನ್ ಟ್ರೆಂಡ್‌ಗಳೊಂದಿಗೆ ಅಪ್‌ಡೇಟ್ ಆಗಿರುವ ಮಹಿಳೆಯರು ಎಲ್ಲಿ ಬೇಕಾದರೂ ಬಟ್ಟೆ ಅಂಗಡಿಯನ್ನು ತೆರೆದು ನಡೆಸಲು ಸಾಧ್ಯವಾಗಲಿದೆ. ಮನೆಯಿಂದಲೇ ಈ ವ್ಯಾಪಾರವನ್ನು ನಡೆಸಲು ಸಾಧ್ಯವಾಗಲಿದೆ. ಹೊಲಿಗೆ ಯಂತ್ರ, ದಾರಕ್ಕೆ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ಹಾಗೆಯೇ ಬ್ಯಾಗ್, ಮೊದಲಾದ ವಸ್ತುಗಳ ಫಾನ್ಸಿ ವಸ್ತುಗಳ ಅಂಗಡಿಯನ್ನು ತೆರೆಯಬಹುದು. ಈ ಸಣ್ಣ ವ್ಯಾಪಾರವೇ ಮುಂದೊಂದು ದಿನ ದೊಡ್ಡ ವ್ಯಾಪಾರವಾಗಬಹುದು.

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ...ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ...

English summary

Successful Business Ideas for Women Entrepreneurs; Here is the List in Kannada

Here is the list of Successful Business Ideas for Women Entrepreneurs in India. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X