For Quick Alerts
ALLOW NOTIFICATIONS  
For Daily Alerts

ಗಮನಿಸಿ: ಕಾರಿನ ಬಳಕೆ ಆಧಾರದಲ್ಲಿ ಪ್ರೀಮಿಯಂ ವಿಧಿಸುತ್ತೆ ಈ ವಿಮಾ ಪಾಲಿಸಿ

|

ಮೋಟಾರು ವಿಮೆಯಲ್ಲಿ ಬದಲಾವಣೆ, ಹೊಸ ವಿಧಾನವನ್ನು ಜಾರಿಗೆ ತರಲು ಇನ್ಶೂರೆನ್ಸ್ ರೆಗ್ಯೂಲೇಟರ್ ಆಂಡ್ ಡೆವಲಪಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್‌ಡಿಎಐ) ಅವಕಾಶ ನೀಡಿದ ಕೆಲವು ಸಂಸ್ಥೆಗಳು ಹೊಸ ಮೋಟಾರು ವಿಮಾ ಪಾಲಿಸಿಯನ್ನು ಜಾರಿಗೆ ತಂದಿದೆ.

ಗೋ ಡಿಜಿಟ್ ಜೆನರಲ್ ಇನ್ಶೂರೆನ್ಸ್ "ಪೇ ಆಸ್ ಯೂ ಡ್ರೈವ್" (ಪಿಎವೈಡಿ) ಎಂಬ ಮೋಟಾರು ವಿಮಾ ಪಾಲಿಸಿಯನ್ನು ಜಾರಿಗೆ ತಂದಿದೆ. ಈ ಪಾಲಿಸಿಯು ನೀವು ಕಾರನ್ನು ಎಷ್ಟು ಬಳಕೆ ಮಾಡಿದ್ದೀರಿ ಎಂಬ ಆಧಾರದಲ್ಲಿ ಇರುತ್ತದೆ.

ಕಾರಿನ ವಿಮೆ ನವೀಕರಿಸೋದು ಹೇಗೆ?, ನೀವು ಮಾಡಬೇಕಿರೋದು ಇಷ್ಟೇ..ಕಾರಿನ ವಿಮೆ ನವೀಕರಿಸೋದು ಹೇಗೆ?, ನೀವು ಮಾಡಬೇಕಿರೋದು ಇಷ್ಟೇ..

ನೀವು ಕಾರನ್ನು ಕಡಿಮೆ ಬಳಕೆ ಮಾಡಿದ್ದರೆ ಕಡಿಮೆ ಪ್ರೀಮಿಯಂ, ಹೆಚ್ಚು ಬಳಕೆ ಮಾಡಿದ್ದರೆ ಹೆಚ್ಚು ಪ್ರೀಮಿಯಂ ವಿಧಿಸಲಾಗುತ್ತದೆ. ಇಲ್ಲಿ ಎಷ್ಟು ದೂರ ಸಂಚಾರ ಮಾಡಲಾಗಿದೆ ಎಂಬ ಆಧಾರದಲ್ಲಿ ಪ್ರೀಮಿಯಂ ಇರಲಿದೆ.

ಗಮನಿಸಿ: ಕಾರಿನ ಬಳಕೆ ಆಧಾರ ಪ್ರೀಮಿಯಂ ವಿಧಿಸುತ್ತೆ ಈ ವಿಮಾ ಪಾಲಿಸಿ

ನಿಮಗೆ ವಿನಾಯಿತಿಯೂ ಇದೆ ನೋಡಿ

ಒಂದು ವೇಳೆ ನೀವು ಕಾರು ಖರೀದಿ ಮಾಡಿದ ಬಳಿಕ ವರ್ಷಕ್ಕೆ 10,000 ಕಿಲೋ ಮೀಟರ್‌ಗಿಂತ ಕಡಿಮೆ ಅವಧಿ ಕಾರಿನಲ್ಲಿ ಸಂಚಾರ ಮಾಡಿದ್ದರೆ, ನಿಮಗೆ ಮೋಟಾರು ವಿಮೆಯಲ್ಲಿ ವಿನಾಯಿತಿ ಕೂಡಾ ಲಭ್ಯವಾಗಲಿದೆ. ಇದಕ್ಕಾಗಿ ಡಿಜಿಟ್ ಆಡೋಮೀಟರ್ ರೀಡಿಂಡ್, ಟೆಲಿಮಾಟಿಕ್ಸ್ ಡೇಟಾ, ಮೊದಲಾದವುಗಳನ್ನು ಪರಿಷ್ಕರಣೆ ಮಾಡುತ್ತದೆ. ಈ ರಿಯಾಯಿತಿಯು ಸುಮಾರು ಶೇಕಡ 25ರಷ್ಟು ಲಭ್ಯವಾಗಬಹುದು.

ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ

ಕೆಲವರು ಕಾರನ್ನು ಅಧಿಕ ಬಳಕೆ ಮಾಡುವುದಿಲ್ಲ. ಹೆಚ್ಚಾಗಿ ದ್ವಿಚಕ್ರ ವಾಹನ ಬಳಕೆ ಮಾಡಿ, ಕಾರನ್ನು ಕೆಲವೊಂದು ಸಮಾರಂಭ, ದೂರ ಸಂಚಾರದ ವೇಳೆ ಮಾತ್ರ ಬಳಕೆ ಮಾಡುತ್ತಾರೆ. ಆದರೆ ವಿಮೆ ಮಾತ್ರ ತೀವ್ರ ಅಧಿಕ ಪಾವತಿ ಮಾಡಬೇಕಾಗುತ್ತದೆ. ಈ ವಿಮೆಯಿಂದಾಗಿ ಯಾರು ಕಾರನ್ನು ಅಧಿಕ ಬಳಕೆ ಮಾಡುವುದಿಲ್ಲವೋ ಆದರೂ ಅಧಿಕ ವಿಮೆ ಪಾವತಿ ಮಾಡುತ್ತಾರೋ ಅವರಿಗೆ ಸಹಕಾರಿಯಾಗಲಿದೆ.

ಡಿಜಿಟ್ ಇನ್ಶೂರೆನ್ಸ್‌ನ ಮೋಟಾರ್ ಪ್ರಾಡಕ್ಟ್ಸ್ ಮತ್ತು ಆಕ್ಚುರಿಯಲ್ ಮುಖ್ಯಸ್ಥ ಕುನಾಲ್ ಝಾ ಈ ಬಗ್ಗೆ ಮಾತನಾಡಿ, "ಕಂಪನಿಯ ಗ್ರಾಹಕರೇ ಮೊದಲು ಎಂಬ ವಿಧಾನ ಮತ್ತು ತಂತ್ರಜ್ಞಾನದ ವೇಗವು ಅತೀ ಬೇಗನೇ ಹೊಸ ಪಾಲಿಸಿಯನ್ನು ಪ್ರಾರಂಭ ಮಾಡಲು ನಮಗೆ ಅನುವು ಮಾಡಿಕೊಟ್ಟಿದೆ. ಇದನ್ನು ನಾವು ಮೊದಲು ತಮ್ಮ ಕಾರಿನಲ್ಲಿ 10,000 ಕಿಲೋ ಮೀಟರ್‌ಗಿಂತ ಕಡಿಮೆ ಸಂಚಾರ ಮಾಡಿದ ಕಾರು ಮಾಲೀಕರಿಗೆ ಪ್ರೀಮಿಯಂನಲ್ಲಿ ರಿಯಾಯಿತಿ ನೀಡುವ ಮೂಲಕ ಆರಂಭ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಎಡೆಲ್‌ವೀಸ್ ಜನರ್ ಇನ್ಶೂರೆನ್ಸ್ ಸಹ ಮೋಟಾರು ವಿಮೆ SWITCH ಅನ್ನು ಪ್ರಾರಂಭಿಸಿತು. ಇತ್ತೀಚೆಗೆ, IRDAI ವಿಮಾ ಕಂಪನಿಗಳು ಟೆಲ್ಮ್ಯಾಟಿಕ್ಸ್ ಆಧಾರಿತ ಮೋಟಾರು ವಿಮಾ ಪಾಲಿಸಿಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುವ ಮಾರ್ಗಸೂಚಿ ನೀಡಿದೆ. ಇದಾದ ಬೆನ್ನಲ್ಲೇ ಈ ವಿಮಾ ಕಂಪನಿಗಳು ಹೊಸ ಪಾಲಿಸಿಗಳನ್ನು ಜಾರಿಗೆ ತರಲು ಆರಂಭ ಮಾಡಿದೆ.

ಅಪಘಾತವಿಲ್ಲದೆ ಚಾಲನೆ ಮಾಡಿದರೆ ಬಹುಮಾನ!

ಈ ಹೊಸ ಪಾಲಿಸಿಯ ಅಡಿಯಲ್ಲಿ ಅಪ್ಲಿಕೇಶನ್‌ಗಳು ಕಾರು ಎಷ್ಟು ಚಲಿಸಿದೆ ಎಂಬುವುದನ್ನು ಪತ್ತೆ ಮಾಡುತ್ತದೆ. ವಾಹನವನ್ನು ಚಾಲನೆ ಮಾಡುವಾಗ ಸ್ವಯಂಚಾಲಿತವಾಗಿ ವಿಮೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಇದು ಗ್ರಾಹಕರಿಗೆ ಅನುಕೂಲಕರವಾಗಿರುತ್ತದೆ. ಇನ್ನು ಅಪಘಾತವಿಲ್ಲದೆ ಚೆನ್ನಾಗಿ ಚಾಲನೆ ಮಾಡಿದರೆ ಪಾಲಿಸಿದಾರರಿಗೆ ಬಹುಮಾನ ನೀಡಲಾಗುತ್ತದೆ. ಚಾಲನೆ ಪ್ರಮಾಣ ಹಾಗೂ ಗುಣಮಟ್ಟ ಎರಡನ್ನೂ ಕೂಡಾ ಅಳೆಯಲಾಗುತ್ತದೆ. ಅದಕ್ಕೆ ಅನುಗುಣವಾಗಿ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲಾಗುತ್ತದೆ.

English summary

This Motor Insurance Policy Charges a Premium Based on Car's Usage

‘Pay as you Drive' policies charge a lower premium when the vehicle is driven less and charge higher when driven more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X