For Quick Alerts
ALLOW NOTIFICATIONS  
For Daily Alerts

ಈ ಖಾಸಗಿ ಬ್ಯಾಂಕ್ ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ನೀಡುತ್ತೆ 7.50% ಬಡ್ಡಿ!

|

ಸಾಮಾನ್ಯವಾಗಿ ನಮ್ಮಲ್ಲಿ ಕೊಂಚ ಅಧಿಕ ಮೊತ್ತ ಇರುವ ಸಂದರ್ಭದಲ್ಲಿ ನಾವು ಎಲ್ಲಿ ಹೂಡಿಕೆ ಮಾಡುವುದು ಎಂಬ ಪ್ರಶ್ನೆ ಎದುರಾಗುತ್ತದೆ. ಹೆಚ್ಚು ಹಣ ಕೈಯಲ್ಲಿ ಇದ್ದಾಗ ಹಲವಾರು ಮಂದಿ ಸುರಕ್ಷಿತ ಹೂಡಿಕೆಯನ್ನು ಮಾಡಲು ಬಯಸುತ್ತಾರೆ. ಆ ಸುರಕ್ಷಿತ ಹೂಡಿಕೆಗಳ ಪೈಕಿ ಫಿಕ್ಸಿಡ್ ಡೆಪಾಸಿಟ್ ಕೂಡಾ ಒಂದಾಗಿದೆ.

 

ಫಿಕ್ಸಿಡ್ ಡೆಪಾಸಿಟ್ ಸುರಕ್ಷಿತ ಹೂಡಿಕೆಯಾಗಿದ್ದು, ನಿಗದಿತ ರಿಟರ್ನ್ ಅನ್ನು ನೀಡುತ್ತದೆ. ಲಭ್ಯವಾಗುವ ರಿಟರ್ನ್‌ನಲ್ಲಿಯೂ ಯಾವುದೇ ಮೋಸ ಇರುವುದಿಲ್ಲ. ಈ ಹೂಡಿಕೆ ಯೋಜನೆಯಲ್ಲಿ ನಾವು ಹೆಚ್ಚು ಅಥವಾ ಕಡಿಮೆ ಮೊತ್ತವನ್ನು ಹೂಡಿಕೆ ಮಾಡುವ ಆಯ್ಕೆ ಇದೆ. ಹಾಗೆಯೇ ಇದಕ್ಕೆ ಬಡ್ಡಿದರವು ಕೂಡಾ ಲಭ್ಯವಾಗುತ್ತದೆ.

ಸಾಮಾನ್ಯವಾಗಿ ಫಿಕ್ಸಿಡ್ ಡೆಪಾಸಿಟ್ ಆಗಲಿ ಅಥವಾ ಬೇರೆ ಯೋಜನೆಯಾಗಲಿ ಹಿರಿಯ ನಾಗರಿಕರಿಗೆ ಕೊಂಚ ಅಧಿಕ ಬಡ್ಡಿದರವನ್ನೇ ಬ್ಯಾಂಕುಗಳು ನೀಡುತ್ತದೆ. ಫಿಕ್ಸಿಡ್ ಡೆಪಾಸಿಟ್ ಮೇಲೆಯೂ ಹಿರಿಯ ನಾಗರಿಕರಿಗೆ ಕೊಂಚ ಅಧಿಕ ಬಡ್ಡಿದರವನ್ನು ನೀಡುತ್ತದೆ. ಈ ಒಂದು ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ 15 ತಿಂಗಳುಗಳ ಎಫ್‌ಡಿ ಮೇಲೆ ಶೇಕಡ 7.50ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಆ ಬ್ಯಾಂಕ್ ಯಾವುದು, ವಿವಿಧ ಅವಧಿಗಳ ಎಫ್‌ಡಿ ಮೇಲೆ ಎಷ್ಟು ಬಡ್ಡಿದರ ನೀಡುತ್ತದೆ. ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ರೆಪೋ ದರವನ್ನು ಏರಿಸಿದ ಆರ್‌ಬಿಐ

ರೆಪೋ ದರವನ್ನು ಏರಿಸಿದ ಆರ್‌ಬಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷ 3 ಬಾರಿ ರೆಪೊ ದರವನ್ನು ಹೆಚ್ಚಳ ಮಾಡಿದೆ. ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಪರಿಷ್ಕರಣೆ ಮಾಡಿದಾಗ ಅದರ ಪರಿಣಾಮ ಎಫ್‌ಡಿ ಹಾಗೂ ಸಾಲದ ಬಡ್ಡಿದರದ ಮೇಲೆ ಬೀಳುತ್ತದೆ. ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದ ಕಾರಣದಿಂದಾಗಿ ಹಲವಾರು ಬ್ಯಾಂಕ್‌ಗಳು ಎಫ್‌ಡಿ ಹಾಗೂ ಸಾಲದ ಬಡ್ಡಿದರವನ್ನು ಅಧಿಕ ಮಾಡಿದೆ. ಆರ್‌ಬಿಎಲ್‌ ಬ್ಯಾಂಕ್‌ ಕೂಡಾ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದ ಬೆನ್ನಲ್ಲೇ ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಿದೆ.

 ಆರ್‌ಬಿಎಲ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್
 

ಆರ್‌ಬಿಎಲ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್

ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಹಲವಾರು ಎಫ್‌ಡಿ ಹೂಡಿಕೆ ಆಯ್ಕೆಗಳು ಇದೆ. ಈ ಖಾಸಗಿ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕ ಯೋಜನೆಯ ಅಡಿಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತದೆ. ಈ ಬಗ್ಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಪ್ರಕಾರ, "ಹಿರಿಯ ನಾಗರಿಕರು (60 ವರ್ಷದಿಂದ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಶೇಕಡ 0.50 ಹೆಚ್ಚುವರಿ ಬಡ್ಡಿ ದರಕ್ಕೆ ಅರ್ಹರಾಗಿದ್ದಾರೆ. ಸೂಪರ್ ಹಿರಿಯ ನಾಗರಿಕರು (80 ವರ್ಷ ಮತ್ತು ಮೇಲ್ಪಟ್ಟವರು) ಶೇಕಡ 0.75ರಷ್ಟು ಹೆಚ್ಚುವರಿ ಬಡ್ಡಿ ದರಕ್ಕೆ ಅರ್ಹರಾಗಿದ್ದಾರೆ. ಇನ್ನು NRE/NRO ಗಳಿಗೆ ಈ ಬಡ್ಡಿದರ ಅನ್ವಯವಾಗುವುದಿಲ್ಲ." 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ, ಹಿರಿಯ ನಾಗರಿಕರು 15 ತಿಂಗಳ ಕೆಳಗಿನ ಮೆಚುರಿಟಿ ಅವಧಿಯಲ್ಲಿ ಶೇಕಡ 7.50ರಷ್ಟು ಬಡ್ಡಿದರ ಪಡೆಯುತ್ತಾರೆ. ಆದರೆ, ಬ್ಯಾಂಕ್ ಅದೇ ಅವಧಿಗೆ ಸಾಮಾನ್ಯ ಗ್ರಾಹಕರಿಗೆ ಅತ್ಯಧಿಕ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ.

 ಆರ್‌ಬಿಎಲ್ ಎಫ್‌ಡಿ ಬಡ್ಡಿದರ

ಆರ್‌ಬಿಎಲ್ ಎಫ್‌ಡಿ ಬಡ್ಡಿದರ

7-14 ದಿನ: ಸಾಮಾನ್ಯ ನಾಗರಿಕರಿಗೆ ಶೇಕಡ 3.25, ಹಿರಿಯ ನಾಗರಿಕರಿಗೆ ಶೇಕಡ 3.75
15-45 ದಿನ: ಸಾಮಾನ್ಯ ನಾಗರಿಕರಿಗೆ ಶೇಕಡ 3.75, ಹಿರಿಯ ನಾಗರಿಕರಿಗೆ ಶೇಕಡ 4.25
46-90 ದಿನ: ಸಾಮಾನ್ಯ ನಾಗರಿಕರಿಗೆ ಶೇಕಡ 4.00, ಹಿರಿಯ ನಾಗರಿಕರಿಗೆ ಶೇಕಡ 4.50
91-180 ದಿನ: ಸಾಮಾನ್ಯ ನಾಗರಿಕರಿಗೆ ಶೇಕಡ 4.50, ಹಿರಿಯ ನಾಗರಿಕರಿಗೆ ಶೇಕಡ 5.00
181-240 ದಿನ: ಸಾಮಾನ್ಯ ನಾಗರಿಕರಿಗೆ ಶೇಕಡ 5.00, ಹಿರಿಯ ನಾಗರಿಕರಿಗೆ ಶೇಕಡ 5.50
241-364 ದಿನ: ಸಾಮಾನ್ಯ ನಾಗರಿಕರಿಗೆ ಶೇಕಡ 5.25, ಹಿರಿಯ ನಾಗರಿಕರಿಗೆ ಶೇಕಡ 5.75
12 ತಿಂಗಳಿನಿಂದ -15 ತಿಂಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರಿಗೆ ಶೇಕಡ 6.50, ಹಿರಿಯ ನಾಗರಿಕರಿಗೆ ಶೇಕಡ 7.00
15 ತಿಂಗಳು: ಸಾಮಾನ್ಯ ನಾಗರಿಕರಿಗೆ ಶೇಕಡ 7.00, ಹಿರಿಯ ನಾಗರಿಕರಿಗೆ ಶೇಕಡ 7.50
15 ತಿಂಗಳು 1 ದಿನ 24 ತಿಂಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರಿಗೆ ಶೇಕಡ 6.50, ಹಿರಿಯ ನಾಗರಿಕರಿಗೆ ಶೇಕಡ 7.00
24 ತಿಂಗಳಿನಿಂದ 36 ತಿಂಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರಿಗೆ ಶೇಕಡ 6.75, ಹಿರಿಯ ನಾಗರಿಕರಿಗೆ ಶೇಕಡ 7.25
36 ತಿಂಗಳಿನಿಂದ 60 ತಿಂಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರಿಗೆ ಶೇಕಡ 6.55, ಹಿರಿಯ ನಾಗರಿಕರಿಗೆ ಶೇಕಡ 7.05
60 ತಿಂಗಳಿನಿಂದ 60 ತಿಂಗಳು 1 ದಿನ: ಸಾಮಾನ್ಯ ನಾಗರಿಕರಿಗೆ ಶೇಕಡ 6.55, ಹಿರಿಯ ನಾಗರಿಕರಿಗೆ ಶೇಕಡ 7.05
60 ತಿಂಗಳು 2 ದಿನದಿಂದ 120 ತಿಂಗಳು: ಸಾಮಾನ್ಯ ನಾಗರಿಕರಿಗೆ ಶೇಕಡ 5.75, ಹಿರಿಯ ನಾಗರಿಕರಿಗೆ ಶೇಕಡ 6.25
120-240 ತಿಂಗಳು: ಸಾಮಾನ್ಯ ನಾಗರಿಕರಿಗೆ ಶೇಕಡ 5.75 , ಹಿರಿಯ ನಾಗರಿಕರಿಗೆ ಶೇಕಡ 6.25
ತೆರಿಗೆ ವಿನಾಯಿತಿ ಎಫ್‌ಡಿ (60 ತಿಂಗಳು): ಸಾಮಾನ್ಯ ನಾಗರಿಕರಿಗೆ ಶೇಕಡ 6.55 , ಹಿರಿಯ ನಾಗರಿಕರಿಗೆ ಶೇಕಡ 7.05

English summary

This Private Bank Offers 7.50 Percent Interest To Senior Citizens, Check Rates

This Private Sector Bank Is Offering 7.50 percent Interest To Senior Citizens On 15 Months FD; Check Out Other Rates.
Story first published: Saturday, September 17, 2022, 11:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X