For Quick Alerts
ALLOW NOTIFICATIONS  
For Daily Alerts

30ನೇ ವಯಸ್ಸಿನಲ್ಲಿ ಈ ಐದು ಹಣಕಾಸಿನ ತಪ್ಪುಗಳನ್ನು ಮಾಡದಿರಿ!

|

ಆಧುನಿಕ ಜೀವನದಲ್ಲಿ ಎಷ್ಟು ಹಣವಿದ್ದರೂ ಸಾಲದ ಎಂದು ನಿಮ್ಮ ಸುತ್ತಮುತ್ತಲಿನ ಜನರು ಹೇಳುವುದನ್ನು ನೀವು ಕೇಳಿರಬಹುದು. ತಂತ್ರಜ್ಞಾನ ಬೆಳೆದಂತೆ ಸೌಲಭ್ಯಗಳು ಕೆಲಸವನ್ನು ಸುಲಭಗೊಳಿಸಿಬಿಡುತ್ತವೆ. ಹಾಗೆಯೇ ಖರ್ಚು ಹೆಚ್ಚಾಗುವುದು ಸಾಮಾನ್ಯ. ಹರೆಯದ ವಯಸ್ಸಿನಲ್ಲಿ ಎಷ್ಟು ಹಣ ಇದ್ದರೂ ನೀರಿನಂತೆ ಖರ್ಚಾಗಿಬಿಡುತ್ತದೆ. ಆದರೆ 30ನೇ ವಯಸ್ಸಿನಲ್ಲಿ ಹಣದ ವಿಚಾರದಲ್ಲಿ ಸ್ವಲ್ಪ ಪ್ರಬುದ್ಧರಾಗಿರುತ್ತಾರೆ.

20ರ ಹರೆಯದಲ್ಲಿ ಹಣದ ಬಗ್ಗೆ ಅಸಡ್ಡೆ ಹೊಂದಿರುವವರು ಹೆಚ್ಚು ಎಂದು ಅಧ್ಯಯನಗಳು ಹೇಳುತ್ತವೆ. ಅಂದರೆ ಹಣದ ಮೌಲ್ಯವನ್ನು ಅರಿಯದೆ ಹೇಗೆಂದರೆ ಹಾಗೆ ಖರ್ಚು ಮಾಡುವುದಾಗಿದೆ. ಆದರೆ 30ರ ವಯಸ್ಸಿನಲ್ಲಿ ಹಣ ಖರ್ಚು ಮಾಡುವುದರ ಕುರಿತು ಯೋಜಿಸಿ ನಿರ್ಧಾರ ಕೈಗೊಳ್ಳುವವರು ಹೆಚ್ಚು. ಇಷ್ಟಾದರೂ ಕೆಲವು ಹಣಕಾಸಿನ ತಪ್ಪುಗಳು ಮಾಡುವುದು ಸಹಜ.

ಹಾಗಿದ್ದರೆ, 30ರ ವಯಸ್ಸಿನಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಾಮಾನ್ಯವಾಗಿ ಮಾಡುವ ತಪ್ಪುಗಳು ಯಾವುವು ಎಂಬುದು ಈ ಕೆಳಕಂಡತಿದೆ.

ಸಂಘಟಿತವಾಗಿ ಉಳಿತಾಯ ಮಾಡದೇ ಇರುವುದು

ಸಂಘಟಿತವಾಗಿ ಉಳಿತಾಯ ಮಾಡದೇ ಇರುವುದು

ಬರುವ ಆದಾಯದಲ್ಲಿ ಉಳಿತಾಯ ಮಾಡುವುದು ಒಳ್ಳಯದು. ಆದರೆ ನಿಮ್ಮ ಉಳಿತಾಯಕ್ಕೆ ಒಂದು ಗುರಿ ಇರಬೇಕು. ಅಂದರೆ ನಿಮ್ಮ ಪ್ರತಿಯೊಂದು ವರ್ಗದ ಉಳಿತಾಯಕ್ಕೂ ಒಂದು ಉಳಿತಾಯ ಖಾತೆಯನ್ನು ಗೊತ್ತುಪಡಿಸಿದರೆ ನೀವು ಹೆಚ್ಚು ಯಶಸ್ವಿಯಾಗುತ್ತೀರಿ. ಉದಾಹರಣೆಗೆ ನಿಮ್ಮ ತುರ್ತು ನಿಧಿ ಒಂದು ಖಾತೆಯಲ್ಲಿದ್ದರೆ, ನಿಮ್ಮ ರಜೆಯ ದಿನಗಳಿಗೆಂದು ಖರ್ಚು ಮಾಡುವ ನಿಧಿಯು ಮತ್ತೊಂದು ಖಾತೆಯಲ್ಲಿರುತ್ತದೆ. ಇನ್ನು ನಿಮ್ಮ ಇತರೆ ಖರ್ಚುಗಳು ಮತ್ತು ದೀರ್ಘಾವಧಿ ಬಯಕೆ ಈಡೇರಿಕೆಗೆ ಇನ್ನೊಂದು ಖಾತೆಯನ್ನು ಹೊಂದಿದ್ದಾರೆ ಉಳಿತಾಯವು ಅಸಂಘಟಿತವಾಗುವುದಿಲ್ಲ.

ಅಲ್ಪಾವಧಿ ಹಣಕಾಸು ಯೋಜನೆ

ಅಲ್ಪಾವಧಿ ಹಣಕಾಸು ಯೋಜನೆ

ಈ ವಿಚಾರವನ್ನು ನಂಬಲು ನೀವು ತಯಾರಿಲ್ಲದೇ ಇರಬಹುದು. ಆದರೆ ಭವಿಷ್ಯದ ದೃಷ್ಟಿಯಲ್ಲಿ ದೀರ್ಘಾವಧಿ ಹಣಕಾಸು ಯೋಜನೆಗಳು ಬಹುಮುಖ್ಯ. ನಿಮ್ಮ ಮುಂದಿನ ಐದು, ಹತ್ತು ಮತ್ತು ಇಪ್ಪತ್ತನೇ ವರ್ಷಗಳವರೆಗೆ ಆರ್ಥಿಕ ಗುರಿಗಳನ್ನು ನಿಗದಿಪಡಿಸುವುದು ಅತ್ಯಗತ್ಯ. ನಿಮ್ಮ ಹುಟ್ಟಲಿರುವ ಮಗುವಿನ ವಿದ್ಯಾಭ್ಯಾಸ ಖರ್ಚುಗಳು ದೂರದಲ್ಲಿದೆ ಎಂದು ನಿಮಗೆ ಅನ್ನಿಸಬಹುದು. ಆದರೆ ಈಗಿನಿಂದಲೇ ಅದಕ್ಕೆಂದೇ ಹಣ ಉಳಿಸುವ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.

ನಿಮ್ಮ ಅಗತ್ಯಕ್ಕಿಂತ ಹೆಚ್ಚಿನ ಖರೀದಿ

ನಿಮ್ಮ ಅಗತ್ಯಕ್ಕಿಂತ ಹೆಚ್ಚಿನ ಖರೀದಿ

ಮೂವತ್ತಿನ ವಯಸ್ಸಿನ ಆಸುಪಾಸಿನಲ್ಲಿ ದೊಡ್ಡ ಕನಸಿನ ಯೋಜನೆಗಳಿರುತ್ತವೆ. ಹೊಸ ಮನೆ ಖರೀದಿ ಮಾಡಬೇಕು ಅಥವಾ ಮನೆ ಕಟ್ಟಬೇಕು ಎಂದು ಗುರಿಯನ್ನಿಟ್ಟುಕೊಂಡಿರುತ್ತಾರೆ. ಆದರೆ ಅನೇಕ ಜನರು ತಮ್ಮ ಅಗತ್ಯಗಳು ಮತ್ತು ಬಜೆಟ್‌ಗಿಂತ ತುಂಬಾ ದೊಡ್ಡ ಮನೆಯನ್ನು ಖರೀದಿಸುವ ಇಲ್ಲವೆ ಕಟ್ಟಿಸಲು ಹೋಗಿ ತಮ್ಮನ್ನು ಆರ್ಥಿಕ ಸಮಾಧಿ ಮಾಡಿಕೊಳ್ಳುತ್ತಾರೆ. ದೊಡ್ಡ ಮನೆ ಎಂದರೆ ದೊಡ್ಡ ಸಾಲ ಮಾತ್ರವಲ್ಲ, ಹೆಚ್ಚಿನ ತೆರಿಗೆಗಳು, ಬಿಲ್‌ಗಳು ಹೆಚ್ಚಿರುತ್ತದೆ. ಆದರೆ ಆದಾಯ ಕಡಿಮೆ ಇದ್ದಾಗ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಅನುಸರಿಸುವುದು ಉತ್ತಮ.

 

20ನೇ ವಯಸ್ಸಿನಲ್ಲಿ ಈ ಐದು ಆರ್ಥಿಕ ತಪ್ಪುಗಳನ್ನು ಮಾಡದಿರಿ! ಭವಿಷ್ಯದ ದೃಷ್ಟಿಯಿಂದ ಒಳಿತು20ನೇ ವಯಸ್ಸಿನಲ್ಲಿ ಈ ಐದು ಆರ್ಥಿಕ ತಪ್ಪುಗಳನ್ನು ಮಾಡದಿರಿ! ಭವಿಷ್ಯದ ದೃಷ್ಟಿಯಿಂದ ಒಳಿತು

ಸ್ನೇಹಿತರು, ಸಂಬಂಧಿಕರನ್ನು ಹಿಂಬಾಲಿಸುವುದು

ಸ್ನೇಹಿತರು, ಸಂಬಂಧಿಕರನ್ನು ಹಿಂಬಾಲಿಸುವುದು

ಈ ವಯಸ್ಸಿನಲ್ಲಿ ಲೈಫ್‌ನಲ್ಲಿ ಸೆಟಲ್ ಆಗ್ಬೇಕು, ಸಮಾಜದ ದೃಷ್ಟಿಯಲ್ಲಿ ತನ್ನ ಸ್ಟೇಟಸ್ ತೋರಿಸಿಕೊಳ್ಳಬೇಕು ಎಂದು ಜನರು ಬಯಸುತ್ತಾರೆ. ಈ ವೇಳೆ ಗೆಳೆಯರು ಮತ್ತು ಕುಟುಂಬದ ಸದಸ್ಯರೊಂದಿಗೆ ಸ್ಪರ್ಧಿಸಲು ಇದು ಪ್ರಚೋದಿಸುತ್ತದೆ.

ನಿಮ್ಮ ಸ್ನೇಹಿತ ಅಥವಾ ನೆರೆಹೊರೆಯವರು ಹೊಸ ಕಾರನ್ನು ಖರೀದಿಸಲು ಹೊರಟಾಗ, ಅಥವಾ ಮನೆಗೆ ಏನಾದರೂ ಆಕರ್ಷಕ ವಸ್ತುಗವನ್ನು ತಂದಾಗ ಆತ ಮತ್ತೊಂದು ಸಾಲಕ್ಕೆ ಸೈನ್ ಅಪ್ ಆಗಿರಬಹುದು ಎಂದು ನೀವು ನೆನಪಿಟ್ಟುಕೊಂಡಿರಬೇಕು. ಆದರೆ ಅದನ್ನು ಮರೆತು ಅವರೊಂದಿಗೆ ಸ್ಪರ್ಧೆಗೆ ಇಳಿದು ಖರೀದಿಗೆ ಮುಂದಾದರೆ ಆರ್ಥಿಕ ಹೊರೆಯಾಗಬಹುದು. ಇದರ ಬದಲಾಗಿ ನಿಮ್ಮ ಉಳಿತಾಯ ಖಾತೆ ಬಾಕಿ ಬಗ್ಗೆ ಹೆಮ್ಮೆ ಪಡುವುದು ಜಾಣತನ.

 

ಹೆಚ್ಚು ಓದಿದರೆ ಹೆಚ್ಚು ಸಂಬಳ ಸಿಗುವುದು

ಹೆಚ್ಚು ಓದಿದರೆ ಹೆಚ್ಚು ಸಂಬಳ ಸಿಗುವುದು

ನಿಮ್ಮ ಪದವಿಯನ್ನು ಮುಂದುವರಿಸುವುದು ಕೆಲವು ಸಂದರ್ಭಗಳಲ್ಲಿ ಉತ್ತಮ ನಿರ್ಧಾರ. ಆದಾಗ್ಯೂ, ಅನೇಕ ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಕೆಲಸ ಪಡೆಯಲು ಕಷ್ಟಪಡುತ್ತಾರೆ ಮತ್ತು ಅದನ್ನು ಸರಿಪಡಿಸಲು ಓದಲು ಮರಳಲು ನಿರ್ಧರಿಸುತ್ತಾರೆ. ಇದು ನಿಮ್ಮ ವಿದ್ಯಾರ್ಥಿ ಸಾಲವನ್ನು ಮಾತ್ರ ಹೆಚ್ಚಿಸುತ್ತದೆ ಹೊರತು ನಿಮ್ಮ ಹೊಸ ಪದವಿ ನಿಮ್ಮ ಸಂಬಳವನ್ನು ಹೆಚ್ಚಿಸದಿರಬಹುದು.

English summary

Top 5 Financial Mistakes People Make In 30s

These are the top 5 Financial Mistakes People Make In 30 age. And Given tips for that
Story first published: Tuesday, January 28, 2020, 17:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X