For Quick Alerts
ALLOW NOTIFICATIONS  
For Daily Alerts

ಐಟಿಆರ್‌ನ ಹೊಸ ಫಾರ್ಮ್: ನೀವು ತಿಳಿದಿರಬೇಕಾದ 10 ವಿಷಯಗಳು

|

ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಹೊಸ ಫಾರ್ಮ್ ಅನ್ನು ಪ್ರಕಟಿಸಿದೆ. ನವೀಕರಿಸಿದ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಹಲವಾರು ವಿಚಾರಗಳಿವೆ.

ಸಾಮಾನ್ಯವಾಗಿ ಐಟಿಆರ್ ಪೈಲಿಂಗ್ ಫಾರ್ಮ್‌ನಲ್ಲಿ ಹಲವಾರು ಬಾರಿ ಬದಲಾವಣೆಗಳನ್ನು ಮಾಡಲಾಗಿದೆ. ನಾವು ಐಟಿಆರ್ ಸಲ್ಲಿಕೆಗೂ ಮುನ್ನ ಈ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸುವುದು ಅತೀ ಮುಖ್ಯವಾಗಿದೆ. ಇಲ್ಲವಾದರೆ ಐಟಿಆರ್ ಫೈಲಿಂಗ್ ವೇಳೆ ಹಲವಾರು ತಪ್ಪುಗಳು ಆಗುವ ಸಾಧ್ಯತೆ ಇದೆ.

ಐಟಿಆರ್ ಸಲ್ಲಿಸಿಲ್ಲವೇ?, 2022-23 ರಲ್ಲಿ ಅಧಿಕ ಟಿಡಿಎಸ್ ಪಾವತಿಗೆ ಸಿದ್ಧರಾಗಿಐಟಿಆರ್ ಸಲ್ಲಿಸಿಲ್ಲವೇ?, 2022-23 ರಲ್ಲಿ ಅಧಿಕ ಟಿಡಿಎಸ್ ಪಾವತಿಗೆ ಸಿದ್ಧರಾಗಿ

ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಹೊಸ ನಮೂನೆಯನ್ನು ಪ್ರಕಟಿಸಿದೆ. ಈ ಅಪ್‌ಡೇಟೆಡ್ ಐಟಿಆರ್‌ನ ಹೊಸ ಪರಿಕಲ್ಪನೆಯನ್ನು ಬಜೆಟ್ 2022 ರಲ್ಲಿ ಪರಿಚಯಿಸಲಾಯಿತು. ಇದು ತೆರಿಗೆದಾರರಿಗೆ ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಎರಡು ವರ್ಷಗಳೊಳಗೆ ತಮ್ಮ ಐಟಿಆರ್ ಅನ್ನು ತಿದ್ದುಪಡಿ ಮಾಡಲು ಅವಕಾಶ ನೀಡುತ್ತದೆ. ಐಟಿಆರ್ ಸಲ್ಲಿಸುವಾಗ ಸಾಮಾನ್ಯವಾಗಿ ತಪ್ಪುಗಳನ್ನು ಮಾಡುವ ಅಥವಾ ಕೆಲವು ಲೋಪಗಳನ್ನು ಮಾಡುವ ತೆರಿಗೆದಾರರಿಗೆ ಹೊಸ ನಿಬಂಧನೆಯು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಐಟಿಆರ್‌ನ ಹೊಸ ಫಾರ್ಮ್: ನೀವು ತಿಳಿದಿರಬೇಕಾದ 10 ವಿಷಯಗಳು

ಐಟಿಆರ್ ಫೈಲಿಂಗ್ ಬಗ್ಗೆ ನೀವು ತಿಳಿದಿರಬೇಕಾದ ಹತ್ತು ವಿಚಾರ

* ಅಪ್‌ಡೇಟೆಡ್ ಐಟಿಆರ್‌ ಫಾರ್ಮ್‌ನಲ್ಲಿ ತೆರಿಗೆದಾರರು ಸಲ್ಲಿಸುವ ಉದ್ದೇಶವನ್ನು ಮತ್ತು ತೆರಿಗೆ ವಿಧಿಸಬೇಕಾದ ಆದಾಯದ ಮೊತ್ತವನ್ನು ಘೋಷಿಸಬೇಕಾಗುತ್ತದೆ.
* ತೆರಿಗೆದಾರರು ಐಟಿಆರ್‌ನಲ್ಲಿ ಉಲ್ಲೇಖಿತ ಆದಾಯದ ಮಾಹಿತಿ ಒದಗಿಸುವ ಅಗತ್ಯವಿಲ್ಲ
* 2019-20 ಮತ್ತು 2020-21 ರ ಹಣಕಾಸು ವರ್ಷಗಳಿಗೆ ಅಪ್‌ಡೇಟೆಡ್ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ತೆರಿಗೆದಾರರು ಈಗ ಹೊಸ ಫಾರ್ಮ್ ITR-U ಅನ್ನು ಬಳಸಬಹುದು.
* ಕೆಲವು ತೆರಿಗೆದಾರರು ಡಿಜಿಟಲ್ ಸಿಗ್ನೇಚರ್ ಅಥವಾ ಎಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ ಅನ್ನು ಬಳಸಿಕೊಂಡು ಅಪ್‌ಡೇಟೆಡ್ ಐಟಿಆರ್ ಫೈಲ್ ಮಾಡಬೇಕಾಗುತ್ತದೆ. ತೆರಿಗೆದಾರರು ಸಂಬಂಧಿತ ಮೌಲ್ಯಮಾಪನ ವರ್ಷದ ಐಟಿಆರ್ ಫಾರ್ಮ್‌ಗಳನ್ನು, ಹೊಸ ITR-U ಜೊತೆಗೆ ಸಲ್ಲಿಸಬೇಕು.
* ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದ ಎರಡು ವರ್ಷಗಳಲ್ಲಿ ITR-U ಅನ್ನು ಸಲ್ಲಿಸಬೇಕು. ಈ ವೇಳೆ ತೆರಿಗೆದಾರರು ಐಟಿಆರ್ ಅನ್ನು ನವೀಕರಿಸಲು ಕಾರಣಗಳನ್ನು ಒದಗಿಸಬೇಕಾಗುತ್ತದೆ.
* ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಒಂದು ವರ್ಷದೊಳಗೆ (12 ತಿಂಗಳುಗಳು) ಅಪ್‌ಡೇಟೆಡ್ ಐಟಿಆರ್ ಅನ್ನು ಸಲ್ಲಿಸಿದರೆ ತೆರಿಗೆದಾರನು ಹೆಚ್ಚುವರಿ 25 ಪ್ರತಿಶತ ತೆರಿಗೆ ಮತ್ತು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
* ಒಂದು ವರ್ಷದ ನಂತರ (12 ತಿಂಗಳುಗಳು) ಆದರೆ ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ 24 ತಿಂಗಳ ಮೊದಲು ಅಪ್‌ಡೇಟೆಡ್ ಐಟಿಆರ್ ಅನ್ನು ಸಲ್ಲಿಸಿದರೆ ತೆರಿಗೆದಾರನು ಹೆಚ್ಚುವರಿ 50 ಪ್ರತಿಶತ ತೆರಿಗೆ ಮತ್ತು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
* ತೆರಿಗೆದಾರರು ಹೆಚ್ಚುವರಿ ತೆರಿಗೆಗಳನ್ನು ಪಾವತಿಸಲು ವಿಫಲವಾದಲ್ಲಿ ರಿಟರ್ನ್ ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ.
* ಒಟ್ಟಾರೆ ತೆರಿಗೆಯನ್ನು ಕಡಿಮೆ ಮಾಡಲು ಮತ್ತು ಆದಾಯದ ವಿರುದ್ಧ ನಷ್ಟವನ್ನು ಸರಿದೂಗಿಸಲು, ಮರುಪಾವತಿಗಾಗಿ ಅಥವಾ ಮರುಪಾವತಿ ಮೊತ್ತವನ್ನು ಹೆಚ್ಚಿಸಲು ನೀವು ITR-U ಅನ್ನು ಸಲ್ಲಿಸಲಾಗದು
* ತೆರಿಗೆದಾರನು ಆರ್ಥಿಕ ವರ್ಷಕ್ಕೆ ಒಮ್ಮೆ ಮಾತ್ರ ಅಪ್‌ಡೇಟೆಡ್ ಐಟಿಆರ್ ಅನ್ನು ಸಲ್ಲಿಸಬಹುದು. ಆದ್ದರಿಂದ ಎಚ್ಚರಿಕೆಯಿಂದ ಮಾಡಬೇಕು.

English summary

Updated ITR Filing 2022: Things to know about Updated Income Tax Return filing in Kannada

Updated ITR Filing 2022: The Income Tax Department recently announced a new form for filing of Updated Income Tax Returns. Things to know about Updated Income Tax Return filing.
Story first published: Friday, May 20, 2022, 16:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X