For Quick Alerts
ALLOW NOTIFICATIONS  
For Daily Alerts

ಹೆಲ್ತ್ ಲಾಕರ್ ಆಗಿಸಿ ನಿಮ್ಮ ಡಿಜಿಲಾಕರ್; ಏನಿದು ಸ್ಕೀಮ್?

|

ಬೆಂಗಳೂರು, ನ. 10: ಸರ್ಕಾರಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲು ರೂಪಿಸಲಾಗಿರುವ ಡಿಜಿಲಾಕರ್ ಪ್ಲಾಟ್‌ಫಾರ್ಮ್ ಅನ್ನು ಈಗ ಹೆಲ್ತ್ ಲಾಕರ್ ಆಗಿ ಬಳಸಬಹುದು. ಕ್ಲೌಡ್ ತಂತ್ರಜ್ಞಾನದಲ್ಲಿ ಕಡತಗಳನ್ನು ಸಂಗ್ರಹಿಸುವ ಡಿಜಿಲಾಕರ್ ಜೊತೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಎರಡನೇ ಹಂತದ ಜೋಡಿಕೆ ಯಶಸ್ವಿಯಾಗಿ ಆಗಿದೆ. ಇದರೊಂದಿಗೆ ವೈದ್ಯರ ಪ್ರಿಸ್‌ಕ್ರಿಪ್ಷನ್ಸ್, ಲ್ಯಾಬ್ ರಿಪೋರ್ಟ್‌ಗಳು, ಆಸ್ಪತ್ರೆ ಡಿಸ್‌ಚಾರ್ಜ್ ಸಮ್ಮರಿ, ವ್ಯಾಕ್ಸಿನೇಶನ್ ಇತ್ಯಾದಿ ದಾಖಲೆಗಳನ್ನು ಡಿಜಿಲಾಕರ್‌ನಲ್ಲಿ ಇರಿಸಬಹುದು.

ಇದಕ್ಕೆ ಮುನ್ನ ಡಿಜಿಲಾಕರ್ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಮೊದಲ ಹಂತದ ಜೋಡಿಕೆ ಇತ್ತೀಚೆಗೆ ಯಶಸ್ವಿಯಾಗಿ ನಡೆದಿತ್ತು. ಆಯುಷ್ಮಾನ್ ಭಾರತ್ ಯೋಜನೆಯ ಆರೋಗ್ಯ ಖಾತೆಯನ್ನು (ಆಭಾ) ಡಿಜಿಲಾಕರ್‌ನಲ್ಲಿ ಸೇರಿಸುವ ಅವಕಾಶ ಕೊಡಲಾಗಿದೆ. ದೇಶದ 13 ಕೋಟಿ ಜನರಿಗೆ ಈ ಸೌಲಭ್ಯದ ಅವಕಾಶ ಇದೆ. ಈಗ ಎರಡನೇ ಹಂತದ ಜೋಡಿಕೆ ಬಳಿಕ ಡಿಜಿಲಾಕರ್ ಅನ್ನು ವೈಯಕ್ತಿಕ ಆರೋಗ್ಯ ದಾಖಲೆಗಳ ಅಪ್ಲಿಕೇಶನ್ ಆಗಿಯೂ ಬಳಕೆ ಮಾಡಬಹುದು. ಈ ಆ್ಯಪ್‌ನಲ್ಲಿ ನಮ್ಮ ಹಳೆಯ ಹೆಲ್ತ್ ಫೈಲ್‌ಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬಹುದು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಲ್ಲಿ ನೊಂದಾಯಿತವಾದ ವೈದ್ಯರಿಗೆ ಈ ದಾಖಲೆಗಳನ್ನು ತೋರಿಸಿ ಸಲಹೆ ಪಡೆಯಬಹುದು.

ಅಂಚೆಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?ಅಂಚೆಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಏನು ಅನುಕೂಲ?

ಏನು ಅನುಕೂಲ?

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಅಡಿಯಲ್ಲಿ ವಿಶೇಷವಾದ ಹೆಲ್ತ್ ಇಕೋಸಿಸ್ಟಂ ನಿರ್ಮಿಸುತ್ತಿದ್ದೇವೆ. ಎಬಿಡಿಎಂ ಜೊತೆ ಏಕೀಕೃತವಾಗಿರುವ ಸರ್ಕಾರೀ ಮತ್ತು ಖಾಸಗಿ ವಲಯಗಳ ವಿವಿಧ ಅಪ್ಲಿಕೇಶನ್‌ಗಳು ಈ ಯೋಜನೆಯನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ಮತ್ತು ಕಾರ್ಯವ್ಯಾಪ್ತಿ ಹೆಚ್ಚಿಸಲು ಅನುಕೂಲವಾಗುತ್ತದೆ ಎಂಬುದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಸಿಇಒ ಡಾ. ಆರ್. ಎಸ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

"ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಅನುಕೂಲಗಳನ್ನು 13 ಕೋಟಿ ನೊಂದಾಯಿತ ಜನರಿಗೆ ವಿಸ್ತರಿಸುತ್ತಿದ್ದೇವೆ. ಈ ಪ್ಲಾಟ್‌ಫಾರ್ಮ್‌ನಿಂದ 85 ಸಾವಿರ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್‌ಗಳನ್ನು ರಚಿಸಲು ಸಾಧ್ಯವಾಗಿದೆ. ಹೆಲ್ತ್ ಲಾಕರ್ ಅನುಕೂಲದಿಂದಾಗಿ ಹೆಚ್ಚೆಚ್ಚು ಜನರು ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ಆಗಿ ನಿರ್ವಹಿಸುವುದು ಸುಲಭವಾಗಬಹುದು. ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ಬಳಕೆದಾರರು ತಮ್ಮ ಹೆಲ್ತ್ ಲಾಕರ್ ಆಗಿ ಡಿಜಿಲಾಕರ್ ಅನ್ನು ಬಳಸುವಂತಾಗಬೇಕೆಂಬುದು ಗುರಿ" ಎಂದು ಡಿಜಿಟಲ್ ಇಂಡಿಯಾ ನಿಗಮದ ಸಿಇಒ ಮತ್ತು ಎಂಡಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.

 

ಏನಿದು ಡಿಜಿಲಾಕರ್?

ಏನಿದು ಡಿಜಿಲಾಕರ್?

ಡಿಜಿಲಾಕರ್ ಸರ್ಕಾರ ರೂಪಿಸಿರುವ ಒಂದು ಆ್ಯಪ್ ಆಗಿದ್ದು, ಇದರಲ್ಲಿ ನಾವು ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ಸರ್ಕಾರದಿಂದ ಸಿಗುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಬಹುದು. ಒಂದು ರೀತಿಯಲ್ಲಿ ಆನ್‌ಲೈನ್ ಕಡತ ಎನ್ನಬಹುದು. ಕ್ಲೌಡ್ ತಂತ್ರಜ್ಞಾನ ಅಳವಡಿಸಿರುವುದರಿಂದ ನಿರ್ದಿಷ್ಟ ಮಿತಿ ಇರುವುದಿಲ್ಲ.

ಏನಿದು ಆಯುಷ್ಮಾನ್ ಯೋಜನೆ?

ಏನಿದು ಆಯುಷ್ಮಾನ್ ಯೋಜನೆ?

2018ರಲ್ಲಿ ದುರ್ಬಲ ಸಮುದಾಯದ ಆರೋಗ್ಯಪಾಲನೆಗೆಂದು ಸರ್ಕಾರ ರೂಪಿಸಿರುವ ಯೋಜನೆ. ಬಡವರು, ಗ್ರಾಮೀಣ ಭಾಗದವರು, ನಗರವಾಸಿ ಕಾರ್ಮಿಕರು, ಹಿರಿಯ ನಾಗರಿಕರು ಹೀಗೆ 13 ಕೋಟಿ ಜನರನ್ನು ಫಲಾನುಭವಿಗಳೆಂದು ಗುರುತಿಸಲಾಗಿದ್ದು, ಅವರಿಗೆ ಸರ್ಕಾರ ವೈದ್ಯಕೀಯ ನೆರವು ಒದಗಿಸುತ್ತದೆ. ಆಧಾರ್ ಬಳಸಿಕೊಂಡು ಸುಲಭವಾಗಿ ಆಭಾ ನಂಬರ್ ರಚಿಸಬಹುದು. ಡ್ರೈವೆಂಬ್ ಲೈಸೆನ್ಸ್ ಮೂಲಕವೂ ನಂಬರ್ ಪಡೆಯಬಹುದು.

ಹಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಈ ಯೋಜನೆಯಲ್ಲಿ ಕೈಜೋಡಿಸಿವೆ. ಫಲಾನುಭವಿಗಳಿಗೆ ಈ ಯೋಜನೆ ಅಡಿ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗೆ ಸರ್ಕಾರ ಚಿಕಿತ್ಸಾ ವೆಚ್ಚ ಭರಿಸುತ್ತದೆ. ಒಂದು ಫಲಾನುಭವಿ ಕುಟುಂಬಕ್ಕೆ ಸರ್ಕಾರ ವರ್ಷಕ್ಕೆ ನಿರ್ದಿಷ್ಟ ಮೊತ್ತದಷ್ಟು ಹೆಲ್ತ್ ಕವರ್ ಮಾಡುತ್ತದೆ.

 

ಆನ್‌ಲೈನ್‌ನಲ್ಲಿ ಎಲೆಕ್ಟ್ರಿಸಿಟಿ ಬಿಲ್ ಹಣ ಪಾವತಿಸುವ ಸುಲಭ ವಿಧಾನಗಳುಆನ್‌ಲೈನ್‌ನಲ್ಲಿ ಎಲೆಕ್ಟ್ರಿಸಿಟಿ ಬಿಲ್ ಹಣ ಪಾವತಿಸುವ ಸುಲಭ ವಿಧಾನಗಳು

English summary

Use Digilocker as Health Locker By Integration With Ayushman Bharat Scheme

DigiLocker has successfully completed its second-level of integration with Ayushman Bharat Digital Mission. It can be used now as a health locker for storing and accessing health records such as vaccination records, doctor prescriptions, lab reports, hospital discharge summaries etc.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X