For Quick Alerts
ALLOW NOTIFICATIONS  
For Daily Alerts

40 ವಯಸ್ಸಿನೊಳಗೆ ಲೈಫ್‌ನಲ್ಲಿ ಸೆಟಲ್ ಆಗಲು ಇಷ್ಟು ಮಾಡಿ ಸಾಕು!

|

ಜೀವನದಲ್ಲಿ ಪ್ರತಿಯೊಬ್ಬರು ಮನೆ, ಹಣ ಮಾಡಿ ಸೆಟಲ್ ಆಗಬೇಕು ಎಂದು ಬಯಸುವುದು ಸಹಜ. ಆದಷ್ಟು ಬೇಗ ಹಣ ಮಾಡಿ, ಮನೆ ಕಟ್ಟೋದು, ಕಾರು ಖರೀದಿಸುವುದರ ಜೊತೆಗೆ ನಂತರ ಮದುವೆ ಆಗಬೇಕು ಎಂದು ಹಲವರ ಬಯಕೆಯಾಗಿರುತ್ತದೆ. ಹೇಗಾದರೂ ಮಾಡಿ 40 ವರ್ಷದೊಳಗೆ ಸೆಟಲ್ ಆಗ್ಬೇಕಪ್ಪಾ ಅಂತಾ ಹೇಳುವುದನ್ನು ನೀವು ಕೇಳಿರುತ್ತೀರಿ.

40 ವಯಸ್ಸಿನೊಳಗೆ ಹಣ ಮಾಡಿ ಲೈಫ್‌ನಲ್ಲಿ ಸೆಟಲ್ ಆಗೋದು ಕಷ್ಟದ ಕೆಲಸವೇ? ಖಂಡಿತಾ ಇಲ್ಲ. ಒಮ್ಮೆ ನೀವು ಸಾಧಿಸಿ ತೋರಿಸಿದರೆ ನಿಮ್ಮ ಮಾರ್ಗವನ್ನೇ ಬೇರೆಯವರು ಅನುಸರಿಸುವವರು ಇರುತ್ತಾರೆ. ಹಾಗಿದ್ದರೆ 40 ವಯಸ್ಸಿನೊಳಗೆ ಚೆನ್ನಾಗಿ ಹಣ ಮಾಡಿ ಸೆಟಲ್ ಆಗೋಕೆ ಏನು ಮಾಡಬೇಕು ಎಂಬುದಕ್ಕೆ ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ ಓದಿ.

1. ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿ

1. ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿ

ಸದ್ಯ ನಿಮಗೆ ಬರುತ್ತಿರುವ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವತ್ತ ಮೊದಲು ನೀವು ಗಮನ ನೀಡಬೇಕು. ಕೇವಲ ಒಂದು ಕೆಲಸಕ್ಕೆ ಅಂಟಿಕೊಂಡಿದ್ದರೆ ಆದಾಯದ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಮೆಟ್ಟಿಲುಗಳನ್ನು ಏರಲು ಕಷ್ಟಪಟ್ಟು ಕೆಲಸಮಾಡಿ.

ನೀವು ಮಾಡುತ್ತಿರುವ ಕೆಲಸವನ್ನು ಕಠಿಣ ಪರಿಶ್ರಮದಿಂದ ಮಾಡುವುದರ ಜೊತೆಗೆ ಬದಲಿ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಿ. ಸ್ಥಿರವಾಗಿ ಆದಾಯ ಬರುವುದರ ಕಡೆಗೆ ಹೆಚ್ಚು ಗಮನ ನೀಡುವುದಕ್ಕಿಂತ ನಿಮ್ಮ ಹವ್ಯಾಸ ಹಾಗೂ ಉತ್ಸಾಹ ಯಾವುದರ ಕಡೆ ಇದೆಯೋ ಆ ಕುರಿತಾಗಿ ಸ್ವಲ್ಪ ಶ್ರಮವಹಿಸಿದರೆ ಅಥವಾ ಚಿಕ್ಕ ಬಿಜಿನೆಸ್ ಆರಂಭಿಸಿದರೆ ಆದಾಯ ಮೂಲವನ್ನು ಹೆಚ್ಚಿಸಬಹುದು. ನೀವು ಕೇವಲ ಒಂದು ಕೆಲಸದಿಂದಲೇ ಆದಾಯ ಪಡೆದುಕೊಳ್ಳುತ್ತಿದ್ದರೆ ಮೂರ್ಖರಾಗುತ್ತೀರ. ಏಕೆಂದರೆ ಒಂದು ವೇಳೆ ಏನಾದರೂ ನಿಮ್ಮ ಕೆಲಸವನ್ನು ಕಳೆದುಕೊಂಡರೆ ನೀವು ಸಂಕಷ್ಟಕ್ಕೆ ಸಿಲುಕುತ್ತೀರಿ.

 

2. ಮಿತವ್ಯಯದ ಜೀವನವನ್ನು ಅಭ್ಯಾಸ ಮಾಡಿ

2. ಮಿತವ್ಯಯದ ಜೀವನವನ್ನು ಅಭ್ಯಾಸ ಮಾಡಿ

ಯಾವಾಗಲೂ ನಿಮ್ಮ ಬಯಕೆ ಮತ್ತು ಅಗತ್ಯತೆ ನಡುವೆ ಜಗತ್ತೇ ಇರುತ್ತದೆ. ನಿಮ್ಮ ಜೀವನಕ್ಕೆ ಅಗತ್ಯವಾದ ಯಾವುದಾದರೂ ಇದ್ದರೆ ಅದು ಅವಶ್ಯಕತೆಯೆಯಾದರೆ, ಅದನ್ನು ಮೀರಿದ ಎಲ್ಲವೂ ಬಯಕೆಯಾಗಿದೆ. ಪ್ರತಿಬಾರಿಯು ಯಾವುದೇ ಶಾಪಿಂಗ್ ಮಾಲ್‌ಗೆ ಸುಮ್ಮನೆ ತೆರಳಿದರೂ ಏನನ್ನಾದರೂ ಖರೀದಿಸಬೇಕು ಎಂದು ಮನಸ್ಸು ತುಡಿಯುತ್ತಿರುತ್ತದೆ. ಈ ವೇಳೆ ಏನನ್ನಾದರೂ ಖರೀದಿಸದೇ ಮನೆಗೆ ಹಿಂದಿರುಗುವುದಿಲ್ಲ.

ಆದರೆ ಮಿತವ್ಯಯದ ಜೀವನವು ನಿಮ್ಮ ಹಣ ಉಳಿತಾಯ ಮಾಡುವುದಷ್ಟೇ ಅಲ್ಲದೆ ಒಬ್ಬರ ಜೀವನ ಮತ್ತು ಮನಸ್ಸಿನಿಂದ ಗೊಂದಲವನ್ನು ಹೊರಹಾಕುತ್ತದೆ. ಇದು ನಿಮ್ಮ ಜೀವನದಲ್ಲಿ ಅಗತ್ಯತೆ ಕುರಿತು ಹೆಚ್ಚು ಗಮನ ಹರಿಸಲು ಸಹಾಯ ಮಾಡುತ್ತದೆ.

 

3. ಕೇವಲ ಉಳಿತಾಯ ಮಾಡಬೇಡಿ, ಹೂಡಿಕೆಯು ಮಾಡಿ

3. ಕೇವಲ ಉಳಿತಾಯ ಮಾಡಬೇಡಿ, ಹೂಡಿಕೆಯು ಮಾಡಿ

ಸಾಮಾನ್ಯವಾಗಿ ಎಲ್ಲರು ಮಾಡುವ ತಪ್ಪು ಎಂದರೆ ಕೇವಲ ಉಳಿತಾಯದ ಕಡೆಯೇ ಹೆಚ್ಚು ಗಮನ ಹರಿಸಿ ಹೂಡಿಕೆಯನ್ನು ಮರೆತು ಬಿಡುತ್ತಾರೆ. ಉಳಿತಾಯ ಮಾಡುವುದರಿಂದ ಹೆಚ್ಚು ಹಣ ಮಾಡಿ ಶ್ರೀಮಂತರಾಗಬಹುದು ಎಂಬುದು ಮೂರ್ಖ ನಂಬಿಕೆ.

ಕೇವಲ ಕಠಿಣ ಕೆಲಸ ಮಾಡಿ ಹಣ ಗಳಿಸುವುದರ ಜೊತೆಗೆ, ನಿಮ್ಮ ಹಣವು ಕಠಿಣ ಕೆಲಸ ಮಾಡಿ ನಿಮಗೆ ಆದಾಯ ತಂದುಕೊಡಬೇಕು. ಅಂದರೆ ನಿಮ್ಮ ಹಣವನ್ನು ಬೆಳೆಸಲು ಆ ಹಣವನ್ನೇ ಬಳಸಿ. ಅಂದರೆ ನಿಮ್ಮ ಹಣವನ್ನು ಉಳಿತಾಯ ಮಾಡಿ ಅದರಿಂದ ಬಡ್ಡಿ ಪಡೆಯುವುದಕ್ಕಿಂತ ಅದನ್ನು ಹೂಡಿಕೆ ಮಾಡಿ ಉತ್ತಮ ಆದಾಯ ಪಡೆಯುವಂತೆ ನೋಡಿಕೊಳ್ಳಿ. ಆದರೆ ಇದು ನೀವು ತೆಗೆದುಕೊಳ್ಳುವ ರಿಸ್ಕ್ ಮೇಲೆ ಅವಲಂಭಿತವಾಗಿದೆ.

 

4. ನಿಮ್ಮ ಸಾಲವನ್ನು ಕಡಿಮೆ ಮಾಡಿ

4. ನಿಮ್ಮ ಸಾಲವನ್ನು ಕಡಿಮೆ ಮಾಡಿ

ಸಾಲವನ್ನೇ ಮಾಡದಿದ್ರೆ ಎಂದಿಗೂ ಉತ್ತಮ. ಸಾಲವಿಲ್ಲದೆ ಬದುಕುವುದು ನಿಮ್ಮ ಹಣಕಾಸಿನ ಮುಗ್ಗಟ್ಟನ್ನು ಹೋಗಲಾಡಿಸುತ್ತದೆ. ಒಂದು ವೇಳೆ ನೀವು ಸಾಲ ತೆಗೆದುಕೊಳ್ಳಬೇಕು ಎಂದು ಮನಸ್ಸು ಮಾಡಿದ್ದರೆ, ನೀವು ತೆಗೆದುಕೊಳ್ಳುತ್ತಿರುವ ಸಾಲ ಯಾವ ಉದ್ದೇಶಕ್ಕೆ ಮತ್ತು ಅದರ ಅವಶ್ಯಕತೆ ಎಷ್ಟು ಎಂದು ಅರಿಯಿರಿ. ಕೆಲವರು ಸಮಾಜದ ಬೇಡಿಕೆಗಳಿಗಾಗಿ, ಪ್ರತಿಷ್ಠೆಗಾಗಿ ಅನಾವಶ್ಯಕ ಸಾಲ ಮಾಡಿ ಹಣ ಖರ್ಚು ಮಾಡುತ್ತಾರೆ. ಈ ಮೂಲಕ ಸಮಾಜದಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ ಎಂದು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಆದರೆ ಈ ರೀತಿಯ ಅನಾವಶ್ಯಕ ಸಾಲಗಳು ನಿಮಗೆ ಹೆಚ್ಚು ಪ್ರತಿಷ್ಠೆ ತರುವುದಕ್ಕಿಂತ ಹೆಚ್ಚಾಗಿ ಹಣಕಾಸಿನ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಆದರೆ ಜೀವನದ ಓಟದಲ್ಲಿ ನೀವು ಅಂದುಕೊಂಡಿದ್ದನ್ನು ಕೊನೆಗೆ ತಲುಪಲಾಗದ ಹೆಜ್ಜೆಗಳತ್ತ ನಿಮ್ಮ ಗಮನ ಇರದೇ ಹೋದರೆ ಒಳಿತು.

 

5. ಹಣದ ಹರಿವನ್ನು ಅರಿಯಿರಿ

5. ಹಣದ ಹರಿವನ್ನು ಅರಿಯಿರಿ

ನೀವು ಪ್ರತಿದಿನ ಎಲ್ಲಿ ಮತ್ತು ಹೇಗೆ ಖರ್ಚು ಮಾಡುತ್ತೀರಿ ಎಂದು ಹಣದ ಹರಿವನ್ನು ತಿಳಿಯುವುದು ಮುಖ್ಯ. ನಿಮ್ಮ ವೈಯಕ್ತಿಕ ಹಣಕಾಸು ಉತ್ತಮವಾಗಿರಬೇಕಾದರೆ ನಿಮ್ಮ ಖರ್ಚಿನ ಬಗ್ಗೆ ತಿಳಿದಿರಬೇಕು ಹಾಗೂ ಅದನ್ನು ಉತ್ತಮವಾಗಿ ನಿರ್ವಹಿಸಬೇಕು.

ಇತ್ತೀಚಿನ ಆಧುನಿಕ ಯುಗದಲ್ಲಿ ಸ್ಮಾರ್ಟ್ ಫೋನ್‌ಗಳಲ್ಲೇ ನಿಮ್ಮ ಖರ್ಚುಗಳನ್ನು ಲೆಕ್ಕ ಮಾಡಿ ಗಮನವಹಿಸಬಹುದು. ನೀವು ಯಾವ ವಲಯಕ್ಕೆ ಖರ್ಚು ಮಾಡುತ್ತಿದ್ದೀರಿ ಎಂದು ತಿಳಿಸಲು ಆ್ಯಪ್‌ಗಳೇ ಇವೆ. ಈ ಮೂಲಕ ನಿಮ್ಮ ಖರ್ಚುಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.

 

6. ನೀವು ಮೆಚ್ಚುವ ಜನರೊಂದಿಗೆ ಸಮಯ ಕಳೆಯಿರಿ

6. ನೀವು ಮೆಚ್ಚುವ ಜನರೊಂದಿಗೆ ಸಮಯ ಕಳೆಯಿರಿ

ಕನಸು ಕಂಡರೆ ಅದು ದೊಡ್ಡದಾಗಿರಬೇಕು, ಆಲೋಚನೆಯು ದೊಡ್ಡದಾಗಿರಬೇಕು ಎಂಬ ಮಾತುಗಳನ್ನು ನೀವು ಕೇಳಿರಬಹುದು. ನಿಮ್ಮ ಸುತ್ತಲೂ ಬುದ್ದಿವಂತ ಜನರೇ ಇದ್ದಾಗ ನಿಮ್ಮ ಆಲೋಚನೆಗಳು ಕೂಡ ಸಹಜವಾಗಿಯೇ ಉತ್ತಮವಾಗಿರುತ್ತದೆ. ಹೀಗಾಗಿ ನೀವು ಸ್ನೇಹ ಬೆಳೆಸುವ ಜನರು ನೀವು ಮೆಚ್ಚುವಂತಿರಬೇಕು. ಹೀಗೆ ಮಾಡಿದ್ದಲ್ಲಿ ನಿಮ್ಮ ಆಲೋಚನೆ ವಿಸ್ತರಿಸುವುದರ ಜೊತೆಗೆ ನಿಮ್ಮ ಒಲವಿನ ಕ್ಷೇತ್ರದವರು ಯಾರೆಂದು ತಿಳಿಯಲು ಸಾಧ್ಯ.

ಇಂದಿನ ಕಠಿಣ ಪರಿಶ್ರಮವೇ ಮುಂದಿನ ದಿನಗಳಲ್ಲಿ ಉತ್ತಮ ಹಣಕಾಸಿನ ಬೆಳವಣಿಗೆಗೆ ದಾರಿಯಾಗಲಿದೆ. ಅದಕ್ಕೆಲ್ಲದಕ್ಕಿಂತ ಹೆಚ್ಚಾಗಿ ತಿಳಿದುಕೊಳ್ಳಬೇಕಾದ ವಿಚಾರ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾಗಲು ಸಾಧ್ಯವಿಲ್ಲ. ನಿಮ್ಮ ಕೆಲಸವನ್ನು ಕಠಿಣವಾಗಿ ಆರಂಭಿಸಿ, ದಿಢೀರ್ ಎಂದು ಶ್ರೀಮಂತರಾಗುವ ಮಾರ್ಗಗಳಿಂದ ದೂರವಿರಿ. ನಿಮ್ಮ ಹಣವನ್ನು ಜವಾಬ್ದಾರಿಯುತವಾಗಿ, ನೈತಿಕವಾಗಿ ಮತ್ತು ಕಾನೂನುಬದ್ಧವಾಗಿ ಬೆಳೆಸಿಕೊಳ್ಳಿ ನಾಳೆ ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಿ.

 

English summary

Want To Be A Settle In Life Before Hit 40, Here Are the Tips

If you want to be a settle in life before reach your age 40. Here's What you need to do
Story first published: Thursday, January 9, 2020, 16:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X