For Quick Alerts
ALLOW NOTIFICATIONS  
For Daily Alerts

ಹೂಡಿಕೆದಾರರ ಜಗದ್ಗುರು ವಾರೆನ್ ಬಫೆಟ್ ಹೇಳಿದ ಬದುಕಿನ 4 ಪಾಠ

|

ವಾರೆನ್ ಬಫೆಟ್ ಮಾತನಾಡುತ್ತಿದ್ದಾರೆ ಅಂದರೆ ಲೈಬ್ರರಿಯೊಂದು ಮನುಷ್ಯನ ರೂಪ ಹೊತ್ತುಕೊಂಡು, ಜ್ಞಾನದ ಧಾರೆ ಹರಿಸಿದಂತೆ ಇರುತ್ತದೆ. ಶತಕೋಟ್ಯಧಿಪತಿ, ಜಗತ್ತಿನ ಅತ್ಯಂತ ಯಶಸ್ವಿ ಹೂಡಿಕೆದಾರರಾದ ವಾರೆನ್ ಬಫೆಟ್ ಹೇಳುವ ವ್ಯವಹಾರದ ಪಾಠಗಳು ಎಲ್ಲ ಕಾಲಕ್ಕೂ ಉಪಯೋಗಿ. ತಮ್ಮ 89ನೇ ವಯಸ್ಸಿನಲ್ಲೂ ಬರ್ಕ್ ಶೈರ್ ಕಂಪೆನಿಯ ಸಭೆಯಲ್ಲಿ ನಾಲ್ಕು ಗಂಟೆಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ್ದರು ಬಫೆಟ್.

ಈ ಸಭೆ ನಡೆದಿದ್ದು ಕಳೆದ ತಿಂಗಳು. ಎರಡನೇ ಆಲೋಚನೆ ಮಾಡುವ ಅಗತ್ಯವೇ ಇಲ್ಲದೆ ಅಳವಡಿಕೊಂಡು ಬಿಡುವಷ್ಟು ಸ್ಪಷ್ಟ ಚಿಂತನೆ ಒಳಗೊಂಡ ವಿಚಾರಗಳಿವು. ನಿಮಗೂ ಒಂದಿಷ್ಟು ತಿಳಿದಿರಲಿ; ಸ್ವಲ್ಪ ಸಮಯ ಇದಕ್ಕಾಗಿ ನೀಡಿ. ವಾರೆನ್ ಬಫೆಟ್ ಹೇಳಿದ ನಾಲ್ಕು ಮುಖ್ಯ ಪಾಠಗಳನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.

ನಗದು ಯಾವಾಗಲೂ ಮಹಾರಾಜ

ನಗದು ಯಾವಾಗಲೂ ಮಹಾರಾಜ

ಈ ವರ್ಷದ ಮಾರ್ಚ್ ತಿಂಗಳ ಕೊನೆಗೆ ಬರ್ಕ್ ಶೈರ್ ಹಾಥ್ ವೇ ಬಳಿ ಇದ್ದ ನಗದು ಎಷ್ಟು ಗೊತ್ತಾ? 13,700 ಕೋಟಿ ಅಮೆರಿಕನ್ ಡಾಲರ್ (ಯುಎಸ್ ಡಿ) ಭಾರತದ ರುಪಾಯಿಗಳಲ್ಲಿ ಒಂದು ಲಕ್ಷ ಕೋಟಿ ದಾಟಿಹೋಗುತ್ತದೆ. "ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು ಎಂದು ಬಯಸುತ್ತೇವೆ" ಎನ್ನುತ್ತಾರೆ ಬಫೆಟ್. ನಾವು ಯಾರ ಮೇಲೂ ಅವಲಂಬಿಸಲೂ ಬಯಸಲ್ಲ. ಅಪರಿಚಿತರ ಉದಾರತೆಯೇ ಇರಬಹುದು ಅಥವಾ ಸ್ನೇಹಿತರದೇ ಇರಬಹುದು. ನಗದು ಇರಿಸಿಕೊಂಡಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬಹುದು ಎಂಬ ನಂಬಿಕೆ ಅವರದು. ಒಂದು ರಾಶಿ ನಗದು ಇಟ್ಟುಕೊಂಡಿದ್ದಲ್ಲಿ ಚೆನ್ನಾಗಿ ನಿದ್ದೆ ಬರುತ್ತದೆ ಎನ್ನುತ್ತಾರೆ ಬಫೆಟ್. ಈ ಹಿಂದೆ, ಅಂದರೆ ಹನ್ನೊಂದು ವರ್ಷದ ಹಿಂದೆ ಷೇರುದಾರರ ಸಭೆಯಲ್ಲಿ ವಾರೆನ್ ಬಫೆಟ್ ಹೇಳಿದ್ದರು: ನಿಮಗೆ ನಿಜಕ್ಕೂ ಅಗತ್ಯ ಇಲ್ಲದ್ದನ್ನು ಖರೀದಿ ಮಾಡಬೇಡಿ. ಕೋಟ್ಯಂತರ ಡಾಲರ್ ನಗದು ಇದ್ದರೂ ವಾರೆನ್ ಬಫೆಟ್ ಹೂಡಿಕೆ ಮಾಡುವುದು ಗುಣಮಟ್ಟದ ಹಾಗೂ ಅವರ ಪೋರ್ಟ್ ಫೋಲಿಯೋಗೆ ಸೂಕ್ತವಾಗುವ ಕಂಪೆನಿ ಮೇಲೆ.

ದೀರ್ಘಾವಧಿ ಯೋಜನೆಗಳಿಗೆ ಬದ್ಧವಾಗಿರಿ

ದೀರ್ಘಾವಧಿ ಯೋಜನೆಗಳಿಗೆ ಬದ್ಧವಾಗಿರಿ

ಇವತ್ತಿನ ದಿನ ನೀವು ನೆರಳಲ್ಲಿ ಕೂತಿದ್ದೀರಿ ಅಂದರೆ, ಅದಕ್ಕೆ ಈ ಜಾಗದಲ್ಲಿ ಹಿಂದೆ ಯಾರೋ ನೆಟ್ಟಿದ್ದ ಮರ ಕಾರಣ. ಪ್ರಸ್ತುತ ಸನ್ನಿವೇಶದಲ್ಲಿ ಸಮಸ್ಯೆಯಲ್ಲಿ ಮುಳುಗಿ ಹೋಗಿದ್ದೇನೆ ಅನ್ನುವವರಿಗೆ ಹೇಳುವ ಮಾತಿದು. ತಾತ್ಕಾಲಿಕ ಏರಿಳಿತಗಳು ಮತ್ತು ಅನಿಶ್ಚಿತತೆ ದೀರ್ಘಾವಧಿ ಪರಿಹಾರವನ್ನು ತಡೆಯುವಂತೆ ಆಗಬಾರದು. ಯಾರಾದರೂ ಕೃಷಿ ಜಮೀನು ಖರೀದಿಸುವಾಗ ಮುಂದಿನ ವರ್ಷ ಮಳೆ ಚೆನ್ನಾಗಿ ಆಗುತ್ತದೆ ಅಂತ ಯೋಚಿಸಿ, ಹೂಡಿಕೆ ಮಾಡಲ್ಲ. ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷಕ್ಕೆ ಉತ್ತಮ ಹೂಡಿಕೆ ಅಂತಲೇ ಭಾವಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ಬಫೆಟ್ ಹೇಳಿದ್ದರು. ನಿಮ್ಮ ಸದ್ಯದ ಕೆಲಸಕ್ಕೆ ದೀರ್ಘಾವಧಿ ಪ್ರಭಾವ ಬೀರುವ ಶಕ್ತಿ ಇರಬೇಕು. ಈಗ ಬಹಳ ಚೆನ್ನಾಗಿ ವ್ಯವಹಾರ ನಡೆಯುತ್ತಿದೆ ಅನ್ನೋ ಕಾರಣದಿಂದ ಮಾತ್ರ ಹೂಡಿಕೆ ಮಾಡಬಹುದು ಎಂದು ಆಲೋಚಿಸಬೇಡಿ.

ನಿಮ್ಮ ಮೇಲೆ ಹೂಡಿಕೆ ಮಾಡಿಕೊಳ್ಳಿ

ನಿಮ್ಮ ಮೇಲೆ ಹೂಡಿಕೆ ಮಾಡಿಕೊಳ್ಳಿ

ವಾರೆನ್ ಬಫೆಟ್ ಅವರಿಗೆ ಆರಂಭದಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಅಂದರೆ ಬಹಳ ಭಯ ಆಗುತ್ತಿತ್ತಂತೆ. ಆಗ ಡೇಲ್ ಕಾರ್ನೆಗಿ ಅವರ ಬಳಿ ಕೋರ್ಸ್ ಗೆ ಸೇರಿ, ಆ ಭಯದಿಂದ ಹೊರಬಂದರಂತೆ. ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ, ಕನಿಷ್ಠ ಶೇಕಡಾ ಐವತ್ತರಷ್ಟು ಹೆಚ್ಚಿಸಿಕೊಳ್ಳುವುದಕ್ಕೆ ಸಂವಹನ ಕೌಶಲ ವೃದ್ಧಿಸಿಕೊಳ್ಳಿ ಎನ್ನುತ್ತಾರೆ ಬಫೆಟ್. ಅದು ಮೌಖಿಕ (ವರ್ಬಲ್) ಹಾಗೂ ಲಿಖಿತ (ರಿಟನ್) ಎರಡೂ ಸಂವಹನ ಚೆನ್ನಾಗಿ ಆಗಬೇಕು ಎಂದು 2019ರಲ್ಲಿ ನಡೆದಿದ್ದ 45 ಸೆಕೆಂಡ್ ಕಾರು ಸಂದರ್ಶನದಲ್ಲಿ ಬಫೆಟ್ ಅವರು ಹೇಳಿದ್ದರು. "ನಿಮ್ಮ ಮೇಲೆ ಮಾಡಿಕೊಳ್ಳುವ ಹೂಡಿಕೆಯೇ ಅತ್ಯುತ್ತಮವಾದದ್ದು" ಎಂದು ಹೇಳುತ್ತಾರೆ. ತಮ್ಮ ಯಶಸ್ಸಿನಲ್ಲಿನ ಶ್ರೇಯವನ್ನು ಕೂಡ ತಮ್ಮ ಮೇಲೆ ಮಾಡಿಕೊಂಡ ಹೂಡಿಕೆಗೇ ಅವರು ನೀಡುತ್ತಾರೆ.

ಕ್ರೆಡಿಟ್ ಕಾರ್ಡ್ ಗಳ ಸಾಲ

ಕ್ರೆಡಿಟ್ ಕಾರ್ಡ್ ಗಳ ಸಾಲ

ಕ್ರೆಡಿಟ್ ಕಾರ್ಡ್ ಗಳನ್ನು ತಕ್ಷಣ ಹಣ ತೆಗೆದುಕೊಳ್ಳಬಹುದಾದ ಬ್ಯಾಂಕ್ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಡಿ ಎಂಬುದು ಬಫೆಟ್ ಸಲಹೆ. ಕ್ರೆಡಿಟ್ ಕಾರ್ಡ್ ಗೆ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತದೆ. ನನಗೆ 18% ಹೇಗೆ ಮಾಡುವುದು ಅನ್ನೋದು ಗೊತ್ತಿಲ್ಲ. ನಾನು 18% ಬಡ್ಡಿ ಪಾವತಿಸಬೇಕಿದ್ದರೆ ಅಂಥ ಯಾವುದೇ ಹಣವನ್ನು ಮೊದಲು ಪಾವತಿಸುತ್ತೇನೆ (ಕ್ರೆಡಿಟ್ ಕಾರ್ಡ್ ಬಾಕಿ). ಬೇರೆಲ್ಲ ಹೂಡಿಕೆಗಿಂತ ಈ ದಾರಿ ಉತ್ತಮ ಅಂತ ನನಗೆ ಅನಿಸುತ್ತದೆ ಎಂದಿದ್ದಾರೆ ಬಫೆಟ್. ಈ ಬಡ್ಡಿ ದರ ಕೊಟ್ಟ ಸಾಲ ಪಡೆದು ಜೀವನ ನಡೆಸುವುದಕ್ಕೆ ಆಗಲ್ಲ. ನಾನು ಯಾರಿಗೇ ಆದರೂ ಹೇಳುವುದು ಇದೇ. ಹದಿನೆಂಟಲ್ಲ, ಹನ್ನೆರಡು ಪರ್ಸೆಂಟ್ ಬಡ್ಡಿಯಾದರೂ ಪಾವತಿ ಮಾಡಬೇಡಿ. ಅಂಥ ಸಾಲವನ್ನು ತೀರಿಸಬೇಡಿ. ಏನಾದರೂ ಖರೀದಿ ಮಾಡಬೇಕಿದ್ದಲ್ಲಿ ಹಣ ಕೂಡಿಟ್ಟುಕೊಂಡು ತೆಗೆದುಕೊಳ್ಳಿ ಎಂಬುದು ಬಫೆಟ್ ಮಾತು. ನಿಮಗೆ ಗೊತ್ತಿರಲಿ, ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮೇಲೆ ಬಡ್ಡಿ ದರ 36% ತನಕ ಇದೆ. ಹಾಗಿದ್ದ ಮೇಲೆ ಇನ್ನೆಷ್ಟು ಎಚ್ಚರಿಕೆ ಇರಬೇಕು.

English summary

Warren Buffet 4 Life Lessons Regarding Money And Investment

Successful investor Warren Buffet 4 life lessons about money, investment and credit cards.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X