For Quick Alerts
ALLOW NOTIFICATIONS  
For Daily Alerts

PM Kisan 13th Instalment : ಪಿಎಂ ಕಿಸಾನ್ 13ನೇ ಕಂತು ಪಡೆಯಬೇಕಾದರೆ ಹೀಗೆ ಮಾಡಿ

|

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತು ಈಗಾಗಲೇ ಬಿಡುಗಡೆಯಾಗಿದೆ. ಫಲಾನುಭವಿ ರೈತರುಗಳ ಖಾತೆಗೂ ಜಮೆಯಾಗಿದೆ. ಈಗ ರೈತರುಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಮೊತ್ತ ಬಿಡುಗಡೆಯಾಗಲು ಕಾಯುತ್ತಿದ್ದಾರೆ. ಆದರೆ ಈ ಕಂತು ಲಭ್ಯವಾಗಬೇಕಾದರೆ ನೀವು ಈ ಒಂದು ಕಾರ್ಯವನ್ನು ಕಡ್ಡಾಯವಾಗಿ ಮಾಡಿರಬೇಕಾಗುತ್ತದೆ.

 

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆ ಮೂಲಕ ರೈತರಿಗೆ ವಾರ್ಷಿಕವಾಗಿ ಆರು ಸಾವಿರ ರೂಪಾಯಿ ನೀಡುತ್ತದೆ. ಅರ್ಹ ರೈತರುಗಳಿಗೆ ಮೂರು ಕಂತಿನಲ್ಲಿ ಈ ಮೊತ್ತವನ್ನು ನೀಡಲಾಗುತ್ತದೆ. ಒಂದು ಕಂತಿನಲ್ಲಿ 2 ಸಾವಿರ ರೂಪಾಯಿಯಂತೆ 3 ಕಂತಿನಲ್ಲಿ ಒಟ್ಟು ಆರು ಸಾವಿರ ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

ದೀಪಾವಳಿಗೂ ಮುನ್ನ ಅಕ್ಟೋಬರ್ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 12ನೇ ಕಂತಿನ ಪಿಎಂ ಕಿಸಾನ್ ನಿಧಿ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ. 16,000 ಕೋಟಿ ರೂಪಾಯಿಯನ್ನು ಪ್ರಧಾನಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಎರಡು ದಿನಗಳ ಪಿಎಂ ಕಿಸಾನ್ ಸಮ್ಮಾನ ಸಮ್ಮೇಳನ 2022 ಕಾರ್ಯಕ್ರಮದಲ್ಲಿ ಈ ಕಂತು ಬಿಡುಗಡೆ ಮಾಡಿದ್ದಾರೆ. ಆದರೆ ನಿಮಗೆ ಇನ್ನು ಬಿಡುಗಡೆಯಾಗಲಿರುವ 13ನೇ ಕಂತು ಲಭ್ಯವಾಗಬೇಕಾದರೆ ಏನು ಮಾಡಬೇಕು? ಇಲ್ಲಿದೆ ವಿವರ ಮುಂದೆ ಓದಿ...

 13ನೇ ಕಂತಿಗೂ ಮುನ್ನ ಈ ಕಾರ್ಯ ಮಾಡಿ

13ನೇ ಕಂತಿಗೂ ಮುನ್ನ ಈ ಕಾರ್ಯ ಮಾಡಿ

ಫಲಾನುಭವಿ ರೈತರುಗಳು 13ನೇ ಕಂತಿನ ಮೊತ್ತವನ್ನು ಪಡೆಯಬೇಕಾದರೆ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರವು ಹಲವಾರು ಬಾರಿ ಗಡುವು ವಿಸ್ತರಣೆ ಮಾಡುತ್ತಾ ರೈತರುಗಳಿಗೆ ಇಕೆವೈಸಿ ಮಾಡಿಸಿಕೊಳ್ಳಲು ಅವಕಾಶ ನೀಡಿದೆ. ಈವರೆಗೂ ನೀವು ಮಾಡದಿದ್ದರೆ ನಿಮಗೆ ಮೊತ್ತ ಲಭ್ಯವಾಗದು. ಸುತ್ತೋಲೆ ಪ್ರಕಾರ ರೈತರು ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಕೆವೈಸಿ ಮಾಡಿಲ್ಲದಿದ್ದರೆ ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ನಿಮ್ಮ ಹೆಸರು ತೆಗೆಯಲಾಗುತ್ತದೆ.

 ಇಕೆವೈಸಿ ಮಾಡುವುದು ಹೇಗೆ?

ಇಕೆವೈಸಿ ಮಾಡುವುದು ಹೇಗೆ?

ಹಂತ 1: ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ, ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
ಹಂತ 2: ಫಾರ್ಮರ್ಸ್ ಕಾರ್ನರ್‌ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ, ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ
ಹಂತ 3: ಆಧಾರ್ Ekyc ಯ ಪುಟ ತೆರೆಯಲಿದೆ, ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 4: ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ಬಳಿಕ search ಬಟನ್ ಕ್ಲಿಕ್‌ ಮಾಡಿ
ಹಂತ 5: ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಿ
ಹಂತ 6: Get OTP ಅನ್ನು ಕ್ಲಿಕ್‌ ಮಾಡಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ನಮೂದಿಸಿ
ಹಂತ 7: ನೀವು Submit ಬಟನ್ ಕ್ಲಿಕ್‌ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ

 ಇಕೆವೈಸಿ ಮಾಡಿದರೂ ಹಣ ಬಂದಿಲ್ಲವೇ?
 

ಇಕೆವೈಸಿ ಮಾಡಿದರೂ ಹಣ ಬಂದಿಲ್ಲವೇ?

ಒಂದು ವೇಳೆ ನೀವು ಇಕೆವೈಸಿ ಮಾಡಿದ್ದರೂ ಕೂಡಾ ನಿಮಗೆ ಯೋಜನೆಯ ಹಣ ಲಭ್ಯವಾಗಿಲ್ಲವಾದರೆ, ನೀವು ಅದಕ್ಕೆ ದೂರು ಸಲ್ಲಿಸುವ ಆಯ್ಕೆಯಿದೆ. ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಹಾಗೆಯೇ ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ ಇಮೇಲ್ ಕೂಡಾ ಮಾಡಬಹುದು. PMkisan-ict@gov.in ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ ಯಾಕೆ ಜಮೆಯಾಗಿಲ್ಲ ಎಂದು ಪ್ರಶ್ನಿಸಬಹುದು.

ಇಮೇಲ್ ಐಡಿ: pmkisan-ict@gov.in. ಮತ್ತು pmkisan-funds@gov.in ಸಹಾಯವಾಣಿ ಸಂಖ್ಯೆ: 011-24300606,155261, 011-23381092, ಟೋಲ್-ಫ್ರೀ ಸಂಖ್ಯೆ: 1800-115-526

English summary

What Farmers Must Do To Receive 13th Instalment of PM Kisan Yojana, Explained in Kannada

Ahead of the disbursal of PM Kisan's 13th instalment, What Farmers Must Do To Receive 13th Instalment of PM Kisan Yojana, Here's Details in Kannada...
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X