For Quick Alerts
ALLOW NOTIFICATIONS  
For Daily Alerts

ಹೋಟೆಲ್‌ನಲ್ಲಿ ನೀಡುವ ಜಿಎಸ್‌ಟಿ ಬಿಲ್ ನಕಲಿಯೇ, ಅಸಲಿಯೇ?, ಹೀಗೆ ಪತ್ತೆ ಹಚ್ಚಿ

|

2017ರ ಜುಲೈ 1ರಂದು ಭಾರತ ಸರ್ಕಾರವು ಸರಕು ಹಾಗೂ ಸೇವೆ ತೆರಿಗೆ (ಜಿಎಸ್‌ಟಿ) ಅನ್ನು ಜಾರಿಗೆ ತಂದಿದೆ. ಭಾರತದಾದ್ಯಂತ ಈ ಏಕರೂಪದ ತೆರಿಗೆ ಆ ದಿನದಂದೇ ಜಾರಿಗೆ ಬಂದಿದೆ. ಆದ್ದರಿಂದಾಗಿ ಭಾರತದ ಎಲ್ಲಾ ರೆಸ್ಟೋರೆಂಟ್‌ಗಳು ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ನಾವು ಈ ಜಿಎಸ್‌ಟಿ ವಿಚಾರದಲ್ಲಿ ಎಡವುವುದು ಕೂಡಾ ಇದೆ. ನಮಗೆ ರೆಸ್ಟೋರೆಂಟ್ ವಿಧಿಸುವ ಜಿಎಸ್‌ಟಿ ಸರಿಯಾಗಿದೆಯೇ ಅಥವಾ ಆ ರೆಸ್ಟೋರೆಂಟ್ ಜಿಎಸ್‌ಟಿ ವಿಧಿಸಬಹುದೇ ಎಂಬುವುದೇ ತಿಳಿದಿರುವುದಿಲ್ಲ.

 

ಸಾಮಾನ್ಯವಾಗಿ ರಿಜಿಸ್ಟಾರ್ ಆಗಿರುವ ರೆಸ್ಟೋರೆಂಟ್‌ನಲ್ಲಿ ಎಸಿ ಇಲ್ಲದಿದ್ದರೆ ಶೇಕಡ 12ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಎಸಿ ಇದ್ದರೆ ಆ ರೆಸ್ಟೋರೆಂಟ್ ಶೇಕಡ 18ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಮದ್ಯವನ್ನು ನೀಡುವ ಅಥವಾ ನೀಡದ ಎಲ್ಲಾ ಫೈವ್ ಸ್ಟಾರ್ ಹೊಟೇಲ್‌ಗಳು ಶೇಕಡ 18ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ.

ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?

ಇನ್ನು ಕೆಲವು ರೆಸ್ಟೋರೆಂಟ್‌ಗಳಲ್ಲಿ ಮಧ್ಯಮ ವರ್ಗದ ಜನರಿಗೆ ಜಿಎಸ್‌ಟಿ ಇರುವುದಿಲ್ಲ. ಇನ್ನು ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಕಡಿಮೆ ವ್ಯವಹಾರ ನಡೆಸುವ ಹೊಟೇಲ್‌ಗಳು ಜಿಎಸ್‌ಟಿ ಅಡಿಯಲ್ಲಿ ರಿಜಿಸ್ಟಾರ್ ಮಾಡಬೇಕಾಗಿಲ್ಲ. ಆದ್ದರಿಂದ ಈ ರೆಸ್ಟೋರೆಂಟ್‌ಗಳು ಜನರಿಂದ ಜಿಎಸ್‌ಟಿ ಪಡೆಯಲು ಅರ್ಹತೆಯನ್ನು ಹೊಂದಿರುವುದಿಲ್ಲ. ಹಾಗೆಯೇ ಜಿಎಸ್‌ಟಿ ರಿಟರ್ನ್ ಫೈಲ್ ಮಾಡಲು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಇದು ಹಲವಾರು ಮಂದಿಗೆ ತಿಳಿದಿಲ್ಲ. ಹಾಗಾದರೆ ನಾವು ನಕಲಿ ಜಿಎಸ್‌ಟಿ ಯಾವುದು ಎಂದು ತಿಳಿಯುವುದು ಹೇಗೆ ಎಂದು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...

ಜಿಎಸ್‌ಟಿ ಸ್ಲ್ಯಾಬ್ ಇಳಿಕೆ ಮಾಡಲು ಬಯಸುತ್ತೇವೆ, ಆದರೆ..

 ಜಿಎಸ್‌ಟಿ ಅಡಿ ರಿಜಿಸ್ಟಾರ್ ಹೊಂದಿಲ್ಲ, ಆದರೂ ಜಿಎಸ್‌ಟಿ!

ಜಿಎಸ್‌ಟಿ ಅಡಿ ರಿಜಿಸ್ಟಾರ್ ಹೊಂದಿಲ್ಲ, ಆದರೂ ಜಿಎಸ್‌ಟಿ!

ಕೆಲವು ರೆಸ್ಟೋರೆಂಟ್ ಮಾಲೀಕರು ತಮ್ಮ ಹೊಟೇಲ್/ರೆಸ್ಟೋರೆಂಟ್ ಅನ್ನು ಜಿಎಸ್‌ಟಿ ಅಡಿಯಲ್ಲಿ ರಿಜಿಸ್ಟಾರ್ ಮಾಡಿಕೊಂಡಿರುವುದಿಲ್ಲ. ಅಲ್ಲಿನ ವಾರ್ಷಿಕ ವಹಿವಾಟು 20 ಲಕ್ಷ ರೂಪಾಯಿಗಿಂತ ಕಡಿಮೆ ಆಗಿರುವ ಕಾರಣದಿಂದಾಗಿ ಜಿಎಸ್‌ಟಿ ಅಡಿಯಲ್ಲಿ ಆ ಹೊಟೇಲ್/ರೆಸ್ಟೋರೆಂಟ್ ಬರುವುದಿಲ್ಲ. ಆದರೂ ಕೂಡಾ ಬಿಲ್‌ನಲ್ಲಿ ಜಿಎಸ್‌ಟಿಯನ್ನು ಸೇರಿಸುತ್ತಾರೆ. ಅಂದರೆ ಈ ಹೊಟೇಲ್/ರೆಸ್ಟೋರೆಂಟ್ ಮಾಲೀಕರು ನಕಲಿ ಜಿಎಸ್‌ಟಿ ಪಡೆಯುತ್ತಿದ್ದಾರೆ ಎಂದು ಅರ್ಥ. 

 ಅಸಲಿ ಜಿಎಸ್‌ಟಿ ಬಿಲ್ ಹೇಗಿರುತ್ತದೆ?

ಅಸಲಿ ಜಿಎಸ್‌ಟಿ ಬಿಲ್ ಹೇಗಿರುತ್ತದೆ?

ಯಾವ ರೆಸ್ಟೋರೆಂಟ್‌ಗಳು ಜಿಎಸ್‌ಟಿಯನ್ನು ಗ್ರಾಹಕರಿಂದ ಪಡೆಯುವ ಅರ್ಹತೆಯನ್ನು ಹೊಂದಿರುತ್ತದೆಯೋ ಆ ರೆಸ್ಟೋರೆಂಟ್‌ಗಳು ಜಿಎಸ್‌ಟಿ ಅಡಿಯಲ್ಲಿ ರಿಜಿಸ್ಟಾರ್ ಮಾಡಿಕೊಂಡಿರುತ್ತದೆ. ಹಾಗೆ ರಿಜಿಸ್ಟಾರ್ ಮಾಡಿಕೊಂಡಾಗ ಆ ರೆಸ್ಟೋರೆಂಟ್‌ನ ಬಿಲ್‌ನಲ್ಲಿ ರಿಜಿಸ್ಟಾರ್ ನಂಬರ್ ಇರಲಿದೆ. ನಾವು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿತ ರೆಸ್ಟೋರೆಂಟ್‌ನಲ್ಲಿ ಯಾವುದೇ ಆಹಾರ ಸೇವನೆ ಮಾಡಿದ ಬಳಿಕ ನಮಗೆ ನೀಡಲಾಗುವ ಬಿಲ್‌ನ ಕೊನೆಯಲ್ಲಿ ಅಥವಾ ಮೇಲ್ಭಾಗದಲ್ಲಿ ರಿಜಿಸ್ಟಾರ್ ನಂಬರ್ ಕೂಡಾ ಇರುತ್ತದೆ.

 ಹಾಗಾದರೆ ನಕಲಿ ಜಿಎಸ್‌ಟಿ ಬಿಲ್ ಯಾವುದು?
 

ಹಾಗಾದರೆ ನಕಲಿ ಜಿಎಸ್‌ಟಿ ಬಿಲ್ ಯಾವುದು?

ಕೆಲವು ರೆಸ್ಟೋರೆಂಟ್‌ಗಳು ಗ್ರಾಹಕರಿಂದ ಜಿಎಸ್‌ಟಿ ಪಡೆಯುವ ಅರ್ಹತೆ ಹೊಂದಿಲ್ಲದಿದ್ದರೂ ಜಿಎಸ್‌ಟಿಯನ್ನು ವಿಧಿಸುತ್ತದೆ. ಈ ಸಂದರ್ಭದಲ್ಲಿ ನಾವು ಹೋಟೆಲ್‌ ಬಿಲ್ ಅನ್ನು ನೋಡಿಯೇ ಈ ಜಿಎಸ್‌ಟಿ ಬಿಲ್ ನಕಲಿಯೇ, ಅಸಲಿಯೇ ಎಂದು ಪತ್ತೆ ಹಚ್ಚಬಹುದು. ನಾವು ರಿಜಿಸ್ಟಾರ್ ನಂಬರ್ ಇದೆಯೇ ಇಲ್ಲವೇ ಎಂದು ನೋಡಿಕೊಂಡು ನಕಲಿ ಬಿಲ್ ಅಥವಾ ಅಸಲಿ ಬಿಲ್ ಎಂದು ಪತ್ತೆ ಹಚ್ಚಬಹುದು. ಆದರೆ ಆ ರಿಜಿಸ್ಟಾರ್ ನಂಬರ್ ಅಸಲಿಯೇ ನಕಲಿಯೇ ಎಂದು ನಮಗೆ ತಿಳಿದಿದೆಯೇ?, ಇದ್ದನ್ನು ಕೂಡಾ ನಾವು ಪತ್ತೆ ಹಚ್ಚಬಹುದು. ನಾವು ರಿಜಿಸ್ಟಾರ್ ನಂಬರ್ ಅಸಲಿಯೇ ನಕಲಿಯೇ ಎಂದು ತಿಳಿಯಲು ಈ ಸೈಟ್‌ಗೆ  ಭೇಟಿ ನೀಡಬೇಕು. ಅಲ್ಲಿ GSTIN/UIN of the Taxpayer ಕೆಳಗೆ ಜಿಎಸ್‌ಟಿ ಸಂಖ್ಯೆಯನ್ನು ಹಾಕಬೇಕು. ಕೆಳಗೆ ನೀಡಿರುವ ಕಾಪ್ಚಾ ನಮೂದಿಸಬೇಕು. ಈ ಸಂದರ್ಭದಲ್ಲಿ ಈ ಜಿಎಸ್‌ಟಿ ಸಂಖ್ಯೆ ನಕಲಿಯೇ ಅಸಲಿಯೇ ತಿಳಿಯುತ್ತದೆ.

 ಯಾವ ರೆಸ್ಟೋರೆಂಟ್‌ನಲ್ಲಿ ಎಷ್ಟು ಜಿಎಸ್‌ಟಿ ವಿಧಿಸಬಹುದು?

ಯಾವ ರೆಸ್ಟೋರೆಂಟ್‌ನಲ್ಲಿ ಎಷ್ಟು ಜಿಎಸ್‌ಟಿ ವಿಧಿಸಬಹುದು?

* ಎಸಿ ಇಲ್ಲದ ರೆಸ್ಟೋರೆಂಟ್ ಶೇಕಡ 12 ಜಿಎಸ್‌ಟಿ
* ಮದ್ಯ ಹೊಂದಿರದ ಬೀದಿ ಬದಿಯ ರೆಸ್ಟೋರೆಂಟ್ ಶೇಕಡ 12 ಜಿಎಸ್‌ಟಿ
* ಸ್ಥಳೀಯವಾಗಿ ಡೆಲಿವರಿ ಮಾಡುವ ರೆಸ್ಟೋರೆಂಟ್ ಶೇಕಡ 12 ಜಿಎಸ್‌ಟಿ
* ಸಂಪೂರ್ಣ ಎಸಿ ಹೊಂದಿರುವ ರೆಸ್ಟೋರೆಂಟ್ (ಮದ್ಯ ಇದ್ದರೂ, ಇಲ್ಲದಿದ್ದರೂ) ಶೇಕಡ 18 ಜಿಎಸ್‌ಟಿ
* ಎಸಿ ಇಲ್ಲದ, ಮದ್ಯ ಹೊಂದಿರುವ ರೆಸ್ಟೋರೆಂಟ್ ಶೇಕಡ 18 ಜಿಎಸ್‌ಟಿ
* ಎಲ್ಲಾ ಫೈವ್ ಸ್ಟಾರ್ ರೆಸ್ಟೋರೆಂಟ್ ಶೇಕಡ 18 ಜಿಎಸ್‌ಟಿ

English summary

What is a Fake GST Bill? Here is How to Verify? Explained in Kannada

What is a Fake GST Bill? How to verify the GSTIN entered on a GST invoice to check whether it is genuine or fake? Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X