For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಖುಷಿ ಹೆಚ್ಚಾಗಲು ಕೋಟಿ ಹಣ ಬೇಕಾಗಿಲ್ಲ, ಹೀಗೆ ಬದುಕಿ ನೋಡಿ ಸಾಕು

|

ಆಧುನಿಕತೆ ಬೆಳೆಯುತ್ತಾ ಹೋದಂತೆ ಜನರು ತಮ್ಮ ಜೀವನ ಶೈಲಿಯನ್ನು ಅದಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾ ಸಾಗಿದ್ದಾರೆ. ಬದಲಾವಣೆಗೆ ಅಂಟಿಕೊಳ್ಳುವ ಆತುರದಲ್ಲಿ ತಮ್ಮನ್ನು ತಾವೇ ಮರೆತು ನಿಜವಾದ ಸಂತೋಷದಿಂದ ದೂರವಾಗುತ್ತಿದ್ದಾರೆ. ಹೆಚ್ಚು ಹಣವಿದ್ದರೆ ಮಾತ್ರ ಎಲ್ಲವನ್ನೂ ಕೊಂಡುಕೊಳ್ಳಲು ಸಾಧ್ಯ. ಎಲ್ಲವೂ ಇದ್ದರೆ ಮಾತ್ರ ಖುಷಿಯ ಜೀವನ ಎಂಬ ಕಟು ವಾಸ್ತವಾಂಶಕ್ಕೆ ಒಗ್ಗಿಕೊಂಡಿದ್ದಾರೆ.

ಜೀವನದಲ್ಲಿ ಖುಷಿಯಾಗಿರಲು ಹಣವೇ ಮುಖ್ಯವೇ? ಎಲ್ಲವೂ ಇದ್ದ ಮಾತ್ರಕ್ಕೆ ಖುಷಿಯಿಂದರಲು ಸಾಧ್ಯವೇ? ಹಾಗಿದ್ದರೆ ಸಂತೋಷದಿಂದ ಬದುಕಲು ಏನೆಲ್ಲಾ ಬೇಕು? ಕನಿಷ್ಠ ಜೀವನ ವಿಧಾನವೂ ಖುಷಿಯಿಂದ ಇರಲು ಸಾಧ್ಯವಿಲ್ಲವೇ? ಈ ರೀತಿಯ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದ ಅನೇಕರಿದ್ದಾರೆ. ಜೀವನದಲ್ಲಿ ಖುಷಿಯಾಗಿರಲು ಎಲ್ಲವೂ ಬೇಕೆನ್ನುವ ಜನರು ಒಮ್ಮೆಯಾದ್ರೂ ಈ ಪ್ರಶ್ನೆಗಳನ್ನು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕು.

ದಿನದಿಂದ ದಿನಕ್ಕೆ ವಸ್ತುಗಳ ದರ ಏರಿಕೆಯು ಒಂದೆಡೆಯಾದ್ರೆ, ಆಧುನಿಕ ಜೀವನ ಶೈಲಿಗೆ ತಕ್ಕಂತೆ ಬದುಕಲು ಆದಾಯಗಳಿಕೆಯ ಹಿಂದೆ ಬೀಳುವುದು ಸಾಮಾನ್ಯ. ಈ ಆಧುನಿಕತೆಯ ಭರದಲ್ಲಿ ಜನರು ಕನಿಷ್ಠ ಜೀವನ ಶೈಲಿಯನ್ನೇ ಮರೆತು ಮುಂದೆ ಸಾಗಿದ್ದಾರೆ. ಇಂದಿನ ಆಧುನಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನೇ ಮರೆಮಾಚುತ್ತಿರುವುದು ನೋವಿನ ಸಂಗತಿ.

ಹಾಗಿದ್ದರೆ ಕೋಟಿ ರುಪಾಯಿ ಇಲ್ಲದಿದ್ದರೂ ಖುಷಿಯಿಂದ ಬದುಕಲು ಹೇಗೆ ಸಾಧ್ಯ? ಖುಷಿಯಿಂದ ಜೀವನ ಸಾಗಿಸಲು ಏನು ಮಾಡಬೇಕು? ಕನಿಷ್ಠ ಜೀವನ ಎಂದರೇನು? ಕನಿಷ್ಠ ಜೀವನದ ಸೂತ್ರಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ವಿವರಣೆ ಈ ಕೆಳಗಿದೆ ಓದಿ

ಕನಿಷ್ಠ ಜೀವನ ಎಂದರೇನು?

ಕನಿಷ್ಠ ಜೀವನ ಎಂದರೇನು?

ನಮಲ್ಲಿ ಕೋಟಿ ರುಪಾಯಿ ಇಲ್ಲದಿದ್ದರೂ ಖುಷಿಯಿಂದರಲು ಸಾಧ್ಯವಿದೆ. ಕನಿಷ್ಠೀಯತಾವಾದವು ಉದ್ದೇಶಪೂರ್ವಕವಾಗಿ ನಿಜವಾಗಿಯೂ ತನಗೆ ಅಗತ್ಯವಿರುವ ಸಂಗತಿಗಳನ್ನು ಬೆಂಬಲಿಸುತ್ತದೆ. ನಮ್ಮ ಜೀವನಕ್ಕೆ ಅಗತ್ಯವಿರುವ ವಸ್ತುಗಳೊಂದಿಗೆ ಮಾತ್ರ ಜೀವನ ಸಾಗಿಸುವುದಾಗಿದೆ.

ನಿಮ್ಮ ಮನೆಯಲ್ಲಿ ಎಲ್ಲವೂ ಇರಬೇಕು ಎಂದು ಬಯಸುವುದು ಸಾಮಾನ್ಯ. ಆದರೆ ಅಗತ್ಯತೆಗೆ ತಕ್ಕಂತೆ ಬದುಕುವುದೇ ಕನಿಷ್ಠ ಜೀವನವಾಗಿದೆ. ಅಂದರೆ ಮುಖ್ಯ ವಿಷಯಗಳತ್ತ ಮಾತ್ರ ಗಮನ ಹರಿಸುವುದು.

ಕನಿಷ್ಠ ಜೀವನವು ದುಂದು ವೆಚ್ಚದಿಂದ ಹೊರಗುಳಿಯುತ್ತದೆ

ಕನಿಷ್ಠ ಜೀವನವು ದುಂದು ವೆಚ್ಚದಿಂದ ಹೊರಗುಳಿಯುತ್ತದೆ

ಆಧುನಿಕತೆಯ ಜೀವನವು ನಿಮ್ಮನ್ನು ಹೆಚ್ಚು ಖರ್ಚು ಮಾಡಲು ಪ್ರೋತ್ಸಾಹಿಸುತ್ತದೆ. ಆದರೆ ಕನಿಷ್ಠ ಸಾಮಾನ್ಯ ಜೀವನವೂ ದುಂದು ವೆಚ್ಚದಿಂದ ದೂರಾಗಿಸುತ್ತದೆ. ಉದಾಹರಣೆಗೆ ನೀವು ಹತ್ತಾರು ಸಾವಿರ, ಲಕ್ಷ ರುಪಾಯಿಯ ಬ್ರ್ಯಾಂಡ್‌ ಕೈ ಗಡಿಯಾರವನ್ನೂ ಖರೀದಿಸಬಹುದು. ಇದರಿಂದ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗುತ್ತದೆ.

ಹೆಚ್ಚು ಮೊತ್ತವನ್ನು ಕೊಟ್ಟು ಖರೀದಿಸಿದ ಕೈ ಗಡಿಯಾರ ಕೈಗೆ ಕಟ್ಟಿಕೊಂಡರೆ ಮಾತ್ರ ಚೆಂದ ಎನ್ನುವವರ ಸಂಖ್ಯೆ ಹೆಚ್ಚು. ಅದೇ ಸಾಮಾನ್ಯ ಜೀವನದಲ್ಲಿ ನಿಮ್ಮ ಅಗತ್ಯತೆಗೆ ಹೆಚ್ಚು ಒತ್ತು ನೀಡಲು ಸಾಧ್ಯ. ಉದಾಹರಣೆಗೆ ಹೆಚ್ಚು ಬೆಲೆಯ ಕೈ ಗಡಿಯಾರ ತೋರಿಸುವ ಸಮಯವನ್ನೇ ಸಾಮಾನ್ಯವಾದ ಗಡಿಯಾರವೂ ತೋರಿಸುತ್ತದೆ.

 

ಇತರರಿಗಿಂತಲೂ ವಿಭಿನ್ನವಾಗಿ ಯೋಚಿಸುವ ಸಾಮರ್ಥ್ಯ ತರುತ್ತದೆ

ಇತರರಿಗಿಂತಲೂ ವಿಭಿನ್ನವಾಗಿ ಯೋಚಿಸುವ ಸಾಮರ್ಥ್ಯ ತರುತ್ತದೆ

ಕನಿಷ್ಠೀಯತವಾದವು ಸ್ಪಷ್ಟವಾದ ಉದ್ದೇಶವನ್ನು ಹೊಂದಿರುತ್ತದೆ. ಅದರ ಅಂತರಂಗದಲ್ಲಿ ಕನಿಷ್ಠವಾದದ್ದು ಎಂದರೆ ಹೆಚ್ಚು ಬೆಲೆಯುಳ್ಳ ವಸ್ತುವನ್ನು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡುವುದು ಮತ್ತು ಅದರಿಂದ ನಮ್ಮನ್ನು ಬೇರೆಡೆಗೆ ಸೆಳೆಯುವ ಎಲ್ಲಾ ವಿಚಾರವನ್ನು ತೆಗೆದು ಹಾಕುತ್ತದೆ. ಅಂದರೆ ನಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ಸುಧಾರಣೆ ತರುವಲ್ಲಿ , ನಮ್ಮಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಲು ನೆರವಾಗುತ್ತದೆ.

ಉದಾಹರಣೆಗೆ ಒಂದು ವಸ್ತುವನ್ನು ಖರೀದಿ ಮಾಡುವ ಮುನ್ನ ಅದರ ಅಗತ್ಯತೆಯು ನಿಮಗೆಷ್ಟಿದೆ ಎಂಬುದನ್ನು ತಿಳಿಸುತ್ತದೆ. ಒಂದು ದ್ವಿಚಕ್ರ ವಾಹನವನ್ನು ಖರೀದಿ ಮಾಡಲು ಮನಸ್ಸು ಮಾಡಿದ್ದೀರಿ ಎಂದುಕೊಳ್ಳೋಣ. ನಿಮ್ಮ ಅಗತ್ಯಕ್ಕೆ ತಕ್ಕಂತಿರುವ ಬೈಕ್ ಹಾಗೂ ಆಕರ್ಷಿಸುವ ದುಬಾರಿ ಬೈಕ್ ಎರಡೂ ಕೂಡ ಮಾರಾಟ ಮಳಿಗೆಗಳಲ್ಲಿ ಇರುತ್ತವೆ. ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ವ್ಯಕ್ತಿಯು ಆಕರ್ಷಿತನಾಗಿ ದುಬಾರಿ ಬೈಕ್ ಖರೀದಿಗೆ ಮುಂದಾದರೆ, ಕನಿಷ್ಠೀಯತವಾದದ ಅರಿವಿದ್ದವರು ತಮ್ಮ ಅಗತ್ಯಕ್ಕೆ ತಕ್ಕಂತೆ, ಹೆಚ್ಚು ಅನುಕೂಲಕವಾಗುವ, ಹೆಚ್ಚು ಮೈಲೇಜ್ ನೀಡುವ ಬೈಕ್ ಖರೀದಿಸುತ್ತಾರೆ. ಇದರಿಂದ ಅನಗತ್ಯ ದುಂದು ವೆಚ್ಚ ತಪ್ಪುತ್ತದೆ.

ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ

ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ

ಆಧುನಿಕತೆಯ ಜೀವನದಲ್ಲಿ ಕೆಲವು ವಸ್ತುವನ್ನು ಕೊಂಡುಕೊಳ್ಳುವುದರಿಂದ ಮಾತ್ರ ಉತ್ತಮ ಜೀವನವು ಕಂಡುಕೊಳ್ಳಲು ಸಾಧ್ಯ ಎಂದು ಹಲವರು ನಂಬುತ್ತಾರೆ. ಇದರರ್ಥ ಜೀವನದಲ್ಲಿ ಉತ್ತಮ ಜೀವನ ಸಾಗಿಸಲು ಸಂತೋಷವನ್ನು ಕೆಲವೊಂದು ಸ್ಟೋರ್‌ಗಳಲ್ಲಿ ಕಾಣಬಯಸುತ್ತಾರೆ. ಆದರೆ ಇದು ತಪ್ಪಾದ ಸಂಗತಿ. ಸಂತೋಷವನ್ನು ಯಾವುದೇ ಅಂಗಡಿ, ಮಾಲ್‌ಗಳಲ್ಲಿ ಖರೀದಿಸಲು ಸಾಧ್ಯವಿಲ್ಲ.

ಕನಿಷ್ಠೀಯತಾವಾದವು ನಿಮ್ಮ ಅಗತ್ಯ ವಸ್ತುಗಳಿಂದಲೇ ಹೆಚ್ಚು ಅನುಭವಿಸುವ ಉತ್ಸಾಹವನ್ನು ತರುತ್ತದೆ. ಉದಾಹರಣೆಗೆ ಈಗಿನ ಜೀವನ ಶೈಲಿಯಲ್ಲಿ ಮನೆಯಲ್ಲಿ ಟ್ರೆಡ್‌ಮಿಲ್ ಇದ್ದರೆ ಹೆಚ್ಚು ಅನುಕೂಲ ಎಂದು ಭಾವಿಸುವವರು ಇದ್ದಾರೆ. ಅದೇ ಕನಿಷ್ಠ ಜೀವನದಲ್ಲಿ ಟ್ರೆಡ್‌ಮಿಲ್‌ನಿಂದ ಸಿಗುವ ಸಂತೋಷವನ್ನು ಬೇರೆಡೆ ಹುಡುಕುವ ಧೈರ್ಯ ನೀಡುತ್ತದೆ. ನಿಮ್ಮ ಅಗತ್ಯಕ್ಕೆ ಹೊರತಾದ ವಸ್ತುಗಳನ್ನು ಖರೀದಿಸುವ ಬದಲು, ಬೇರೆಡೆ ಅದಕ್ಕಿಂತ ಹೆಚ್ಚಿನ ಖುಷಿ ತರುವ ವಿಚಾರದ ಮೇಲೆ ನಿಮ್ಮ ಮನಸನ್ನು ಕರೆದೊಯ್ಯುತ್ತದೆ.

 

ಆಧುನಿಕತೆ ಭರದಿಂದ ಮುಕ್ತಿ

ಆಧುನಿಕತೆ ಭರದಿಂದ ಮುಕ್ತಿ

ಆಧುನಿಕತೆ ಭರದಲ್ಲಿ ಸಾಗುವ ಜನರು ಹೆಚ್ಚು ಆದಾಯ ಗಳಿಸಬೇಕು ಎಂದು ಅವಸರದಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಒತ್ತಡಕ್ಕೆ ಒಳಗಾಗುತ್ತಾರೆ. ಬಿಲ್‌ಗಳನ್ನು ಪಾವತಿಸಲು ಗಂಟೆಗಟ್ಟಲೆ ಕೆಲಸ ಮಾಡುತ್ತಾರೆ. ಆದರೆ ವಿಪರ್ಯಾಸ ಪ್ರತಿದಿನವೂ ಸಾಲದ ಆಳಕ್ಕೆ ಇಳಿಯುತ್ತಲೆ ಸಾಗುತ್ತಾರೆ ಹೊರತು, ಪರಿಹಾರವನ್ನು ಹುಡುಕುವುದಿಲ್ಲ. ಅನೇಕ ಸವಾಲುಗಳನ್ನು ಎದುರಿಸದರೂ ಕೊನೆಗೆ ಏನನ್ನೂ ಸಾಧಿಸಲಾಗುವುದಿಲ್ಲ.

ಕನಿಷ್ಠ ಜೀವನವು ಈ ಆಧುನಿಕತೆ ಭರದಿಂದ ನಿಮ್ಮನ್ನು ನಿಧಾನಗೊಳಿಸುತ್ತದೆ. ವೇಗವಾಗಿ ಬದುಕಬೇಕು ಎಂಬ ಉನ್ಮಾದದಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ಇದು ಅಗತ್ಯ ವಸ್ತುಗಳನ್ನು ಮಾತ್ರ ಹೊಂದಲು ಬಯಸುವುದರ ಜೊತೆಗೆ ಮೌಲ್ಯಯುತ ಜೀವನ ಸಾಗಿಸಲು ನೆರವಾಗುವುದು.

 

ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯ

ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯ

ಹಲವರು ಹೇಳುವ ಮಾತು ಎಂದರೆ ನನ್ನ ಕುಟುಂಬಕ್ಕೆ ಸಮಯವನ್ನೇ ಕೊಡಲು ಸಾಧ್ಯವಾಗುತ್ತಿಲ್ಲ ಎಂಬುದು. ಹೆಚ್ಚಿನ ಜನರು ಕುಟುಂಬದ ಸುತ್ತ ಒಂದು ಜೀವನವನ್ನು, ಸಹೋದ್ಯೋಗಿಗಳ ಸುತ್ತ ಮತ್ತೊಂದು ಜೀವನವನ್ನು, ನೆರೆಹೊರೆಯವರ ಸುತ್ತ ಮತ್ತೊಂದು ಜೀವನವನ್ನು ನಡೆಸುತ್ತಾರೆ. ಅಂದರೆ ನಿಮ್ಮ ಜೀವನ ಶೈಲಿ ಅಂತಹುದು ಎಂದರ್ಥ. ಕಚೇರಿಯಲ್ಲೇ ಹೆಚ್ಚು ಸಮಯ ಕಳೆದು ಹೋದಾಗ ಕುಟುಂಬದೊಂದಿಗಿನ ಸಮಯ ಕಡಿಮೆಯಾಗಿರುತ್ತದೆ.

ಮತ್ತೊಂದೆಡೆ ಸರಳ ಜೀವನವು ಏಕೀಕೃತ ಹಾಗೂ ಸ್ಥಿರವಾಗಿರುತ್ತದೆ. ನಿಮಗೆ ಶುಕ್ರವಾರದ ಜೀವನ ಶೈಲಿಯೇ ಭಾನುವಾರವೂ ಇರುತ್ತದೆ. ಮತ್ತು ಸೋಮವಾರ ಬೆಳಗ್ಗೆಯು ಅದೇ ಆಗಿರುತ್ತದೆ. ಅನಗತ್ಯ ಖರ್ಚುಗಳು, ವಸ್ತುಗಳ ಖರೀದಿಗೆ ಹಣ ಹೂಡಿಕೆ ಕಡಿವಾಣವಾದಾಗ ನಿಮಗೆ ಆಧುನಿಕತೆ ಭರಕ್ಕೆ ಒಗ್ಗಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆ, ಸಮಯ ನೀಡಲು ಸಾಧ್ಯ.

ಹೀಗೆ ಈ ಸಾಮಾನ್ಯ ಜೀವನವು ನಿಮಗೆ ಹಿಂದೆಂದಿಗಿಂತಲೂ ಹೆಚ್ಚಿನ ಸಮಯ ನೀಡುವುದಲ್ಲದೆ, ಹೆಚ್ಚಿನ ಹಣ ಗಳಿಕೆಯ ಆಸೆ, ಖರ್ಚು ಮುಂತಾದವುಗಳಿಂದ ಮುಕ್ತಗೊಳಿಸುತ್ತದೆ.

 

ಹಾಗಿದ್ದರೆ ಕನಿಷ್ಠ ಜೀವನಶೈಲಿ ಎಂದರೇನು?

ಹಾಗಿದ್ದರೆ ಕನಿಷ್ಠ ಜೀವನಶೈಲಿ ಎಂದರೇನು?

ಇದರರ್ಥ ನಿಮಗೆ ನಿಜವಾಗಿಯೂ ಅಗತ್ಯವಿರುವ ವಸ್ತುಗಳೊಂದಿಗೆ ಜೀವನ ನಡೆಸುವುದಾಗಿದೆ. ಅಂದರೆ ದುಂದು ವೆಚ್ಚ ಖರೀದಿಗೆ ಆಕರ್ಷಿಸುವ ಯಾವುದೇ ವಿಚಾರದಿಂದ ನಿಮ್ಮ ಗಮನವನ್ನು ಬೇರೆಡೆಗೆ ವರ್ಗಾಯಿಸುತ್ತದೆ.

ಕನಿಷ್ಠ ಜೀವನಶೈಲಿ ನೀರಸವಾಗಿದೆಯೇ?

ಕನಿಷ್ಠ ಜೀವನಶೈಲಿ ನೀರಸವಾಗಿದೆಯೇ?

ಕನಿಷ್ಠ ಜೀವನಶೈಲಿಯು ನೀರಸಕ್ಕೆ (ಬೋರಿಂಗ್) ವಿರುದ್ಧವಾಗಿದೆ. ಇದು ನಿಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯುವಂತೆ ಮಾಡಿ, ಅನಗತ್ಯ ವಿಚಾರಗಳನ್ನು ನಿಮ್ಮಿಂದ ದೂರ ಮಾಡುತ್ತದೆ. ಜೊತೆಗೆ ನಿಮ್ಮ ನಿಜವಾದ ಜೀವನವು ಏನು ಎಂಬುದನ್ನು ತಿಳಿಯಲು ಇದರಿಂದ ಸಾಧ್ಯವಾಗುತ್ತದೆ.

English summary

What Is Minimalism And How To Achievable

Minimalism is intentionally living with only the things you really need and those items that support your purpose.
Story first published: Thursday, November 28, 2019, 15:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X