For Quick Alerts
ALLOW NOTIFICATIONS  
For Daily Alerts

ರೆಪೋ ದರ ಎಂದರೇನು? ರಿವರ್ಸ್ ರೆಪೋ ದರಕ್ಕೆ ಏನು ವ್ಯತ್ಯಾಸ? ರೆಪೋ ದರ ಇಳಿಕೆಯಾದರೆ ಏನು ಲಾಭ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್‌ಬಿಐ ಮತ್ತೊಮ್ಮೆ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಹಾಗೆಯೇ ಉಳಿಸಿಕೊಂಡಿದೆ. ಶುಕ್ರವಾರ (ಜೂನ್ 04) ಹಣಕಾಸು ನೀತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ರೆಪೊ ಮತ್ತು ರಿವರ್ಸ್ ರೆಪೊ ಈ ಎರಡೂ ಪದಗಳನ್ನು ನೀವು ಆಗಾಗ ಕೇಳುತ್ತಲೇ ಇರುತ್ತೀರಿ. ಆರ್‌ಬಿಐ ರೆಪೊ ಅಥವಾ ರಿವರ್ಸ್ ಮೇಲಿನ ಬಡ್ಡಿದರ ಕಡಿತ ಮಾಡಿದೆ ಅಥವಾ ಮಾಡಿಲ್ಲವೆಂಬ ವರದಿಗಳು ಆಗಾಗ ಪ್ರಕಟವಾಗುತ್ತಿರುತ್ತವೆ. ಇಂದೂ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಹಾಗೆಯೇ ಉಳಿಸಿಕೊಂಡಿದೆ.

ಹಾಗಿದ್ರೆ ರೆಪೋ ದರ ಎಂದರೇನು? ರಿವರ್ಸ್ ರೆಪೋ ದರಕ್ಕೆ ಏನು ವ್ಯತ್ಯಾಸ ಎಂಬುದನ್ನು ಈ ಕೆಳಗೆ ನೀಡಲಾಗಿದೆ ಓದಿ

ರೆಪೋ ದರ ಎಂದರೇನು?

ರೆಪೋ ದರ ಎಂದರೇನು?

ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.

ರೆಪೋ ದರವನ್ನು ಹೇಗೆ ವಿಧಿಸಲಾಗುತ್ತದೆ?

ರೆಪೋ ದರವನ್ನು ಹೇಗೆ ವಿಧಿಸಲಾಗುತ್ತದೆ?

ತಾತ್ಕಾಲಿಕ ಅವಧಿಯ ಅಗತ್ಯ ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಬ್ಯಾಂಕುಗಳು ಫಂಡ್ ಪಡೆಯುತ್ತವೆ. ಬ್ಯಾಂಕುಗಳು ಪಡೆದ ಸಾಲದ ಮೇಲೆ ಆರ್‌ಬಿಐ ಕೊಂಚ ಬಡ್ಡಿದರ ವಿಧಿಸುತ್ತದೆ. ಈ ಬಡ್ಡಿದರವನ್ನೇ ರೆಪೊ ದರವಾಗಿದೆ. ಬ್ಯಾಂಕುಗಳಿಗೆ ಸಾಲ ಪಡೆಯುವುದು ಹೆಚ್ಚು ಕಠಿಣಗೊಳಿಸಲು ಆರ್‌ಬಿಐ ಇಚ್ಚಿಸಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವೂ ರೆಪೊ ದರಗಳನ್ನು ಹೆಚ್ಚಿಸುತ್ತದೆ.

ರೆಪೊ ದರ ತಗ್ಗಿಸಿದರೆ ಬ್ಯಾಂಕುಗಳು ಆರ್‌ಬಿಐನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದಾಗಿದೆ. ದೇಶದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ಹೃದಯದ ಬಡಿತವು ರೆಪೊ ದರದ ಜೊತೆ ಮಿಡಿಯುತ್ತದೆ.

 

ರೆಪೋ ದರದ ಇಳಿಕೆಯಿಂದ ಲಾಭವೇನು?
 

ರೆಪೋ ದರದ ಇಳಿಕೆಯಿಂದ ಲಾಭವೇನು?

ಹಣದ ಬಿಕ್ಕಟ್ಟು ಅಂದರೆ ಮಾರುಕಟ್ಟೆಯಲ್ಲಿ ಹಣದ ಕೊರತೆ ಎದುರಾದಾಗ ರಿಸರ್ವ್‌ ಬ್ಯಾಂಕ್‌, ರೆಪೋ ದರವನ್ನು ಇಳಿಸುವ ಕ್ರಮ ಕೈಗೊಳ್ಳುತ್ತದೆ. ಆರ್‌ಬಿಐನಿಂದ ಕಡಿಮೆ ಬಡ್ಡಿಗೆ ಹಣ ಸಿಗುವುದರಿಂದ ಅದರ ಲಾಭವನ್ನು ಬ್ಯಾಂಕುಗಳು ತನ್ನ ಗ್ರಾಹಕರಿಗೂ ವರ್ಗಾಯಿಸಬಹುದು. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳು ಲಭ್ಯವಾಗುತ್ತದೆ. ಮಾರುಕಟ್ಟೆಗೆ ಹೆಚ್ಚು ಹಣ ಹರಿಯುತ್ತದೆ. ಇದು ಆರ್ಥಿಕತೆಗೆ ಬಲ ನೀಡುವ ನಿರೀಕ್ಷೆ ಇದೆ. ಜೊತೆಗೆ ಬ್ಯಾಂಕ್‌ಗಳಲ್ಲಿನ ಸಾಲದ ಬಡ್ಡಿ ದರವು ಇಳಿಕೆಯಾಗುತ್ತದೆ.

ರಿವರ್ಸ್ ರೆಪೊ ದರ ಎಂದರೇನು?

ರಿವರ್ಸ್ ರೆಪೊ ದರ ಎಂದರೇನು?

ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎನ್ನಲಾಗುತ್ತದೆ. ಹೀಗಾಗಿ ಇದು ರೆಪೊ ದರಕ್ಕಿಂತ ಸಂಪೂರ್ಣ ವಿಭಿನ್ನ. ಬ್ಯಾಂಕಿಂಗ್ ವಲಯದಲ್ಲಿ ಸಮತೋಲನ ಸಾಧಿಸಲು ರಿವರ್ಸ್ ರೆಪೋ ದರ ಪ್ರಮುಖ ಪಾತ್ರ ವಹಿಸುತ್ತದೆ.

 

 

ರಿವರ್ಸ್ ರೆಪೊ ದರ ಹೇಗೆ ವಿಧಿಸಲಾಗುತ್ತದೆ?

ರಿವರ್ಸ್ ರೆಪೊ ದರ ಹೇಗೆ ವಿಧಿಸಲಾಗುತ್ತದೆ?

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯಧಿಕ ಹಣವು ಚಲಾವಣೆಯಾಗುತ್ತಿದೆ ಎಂದು ಅನಿಸಿದರೆ ಆರ್‌ಬಿಐ ರಿವರ್ಸ್ ರೆಪೊ ಎಂಬ ಆಯುಧವನ್ನು ಬಳಸುತ್ತದೆ. ಎಲ್ಲಾದರೂ ರಿವರ್ಸ್ ರೆಪೊ ದರ ಹೆಚ್ಚಾಗಿದೆಯೆಂದರೆ ಆರ್ ಬಿಐ ಬ್ಯಾಂಕುಗಳಿಂದ ಆಕರ್ಷಕ ಬಡ್ಡಿದರಕ್ಕೆ ಹಣ ಸಾಲ ಪಡೆಯುತ್ತಿದೆ ಎಂದರ್ಥ. ಬ್ಯಾಂಕುಗಳು ಕೂಡ ಆರ್‌ಬಿಐಗೆ ಸಂಪೂರ್ಣ ಖುಷಿಯಿಂದಲೇ ಸಾಲ ನೀಡುತ್ತವೆ.

ಯಾಕೆಂದರೆ ಸುರಕ್ಷಿತ ಕೈಗೆ ಸಾಲ ಹಸ್ತಾಂತರಿಸಲಾಗಿದೆ ಎಂಬ ಸಂತೃಪ್ತಿ ಒಂದೆಡೆ ಮತ್ತು ಸಮರ್ಪಕ ಬಡ್ಡಿದರ ದೊರಕುತ್ತದೆ ಎನ್ನುವ ತೃಪ್ತಿ ಇನ್ನೊಂದೆಡೆ ಬ್ಯಾಂಕುಗಳಿಗಿರುತ್ತವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಹರಿವು ಸಮರ್ಪಕವಾಗಿರಲು ಆರ್‌ಬಿಐ ರೆಪೊ ಮತ್ತು ರಿವರ್ಸ್ ರೆಪೊ ಎಂಬ ಹರಿಗೋಲು ಬಳಕೆ ಮಾಡುತ್ತಿದೆ ಎನ್ನಬಹುದು.

 

English summary

What Is Repo Rate And What Is Reverse Repo Rate

In this article explained Difference between repo rate and reverse repo rate. And also benefits of repo rate cut
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X